ಬಿಜೆಪಿಗೆ ಗುಡ್ ಬೈ.. ಬೊಮ್ಮಾಯಿ ವಿರುದ್ಧ ಬಾಂಬ್ – ಸಿಡಿದೆದ್ದ ಸವದಿ ಬಗ್ಗೆ ಸಿಎಂ ಹೇಳಿದ್ದೇನು..!?

ಬಿಜೆಪಿಗೆ ಗುಡ್ ಬೈ.. ಬೊಮ್ಮಾಯಿ ವಿರುದ್ಧ ಬಾಂಬ್ – ಸಿಡಿದೆದ್ದ ಸವದಿ ಬಗ್ಗೆ ಸಿಎಂ ಹೇಳಿದ್ದೇನು..!?

ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದೆ. ಅದ್ರಲ್ಲೂ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಅಥಣಿ ಕ್ಷೇತ್ರದ ಟಿಕೆಟ್ ಮಹೇಶ್ ಕುಮಟಳ್ಳಿ ಪಾಲಾಗಿದೆ. ಮಹೇಶ್ ಕುಮಟಳ್ಳಿಗೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಅಥಣಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಬಿಜೆಪಿಗೆ ರಾಜೀನಾಮೆ ಘೋಷಣೆ ಮಾಡಿದ್ದು, ರಾಜಕೀಯ ಸಂಚಲನ ಮೂಡಿಸಿದೆ.

ಇದನ್ನೂ ಓದಿ : ಸಿದ್ದು v/s ಸೋಮಣ್ಣ, ಡಿಕೆಶಿ v/s ಅಶೋಕ್ – ಕಾಂಗ್ರೆಸ್ ಕಲಿಗಳನ್ನು ಕಟ್ಟಿಹಾಕಲು ಬಿಜೆಪಿ ಪ್ಲಾನ್

ಅಥಣಿ ಕ್ಷೇತ್ರದ ಟಿಕೆಟ್ ಮಿಸ್ ಆದ ಬೆನ್ನಲ್ಲೇ ಭಿನ್ನಮತ ಸ್ಫೋಟವಾಗಿದೆ. ಅಥಣಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ವಿರುದ್ಧ ಬೆಂಕಿ ಉಗುಳಿದ್ದಾರೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದು, ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಅನ್ನೋ ಚರ್ಚೆ ಶುರುವಾಗಿದೆ. ಇದೇ ವೇಳೆ ಮಾತನಾಡಿದ ಸವದಿ ನಾಳೆ ಸಂಜೆಯೇ ನಾನು ಗಟ್ಟಿ ನಿರ್ಧಾರ ಕೈಗೊಳ್ಳುವೆ. 20 ವರ್ಷಗಳಲ್ಲಿ ನನ್ನಿಂದ ತಪ್ಪಾಗಿದ್ರೆ ಕ್ಷಮಿಸಿ. ನನಗೆ ಟಿಕೆಟ್ ನೀಡದ ಹೈಕಮಾಂಡ್ ತೀರ್ಮಾನ ನೋವು ತಂದಿದೆ. ಟಿಕೆಟ್ ಸಿಗದೇ ನಾನು ಬಿಜೆಪಿಯಲ್ಲಿರುವ ಸಾಧ್ಯವೇ. ಟಿಕೆಟ್ ಕೊಡದಿದ್ದ ಮೇಲೆ ಎಂಎಲ್​ಸಿ ಸ್ಥಾನ ಯಾಕೆ ಬೇಕು. ಟಿಕೆಟ್ ನೀಡುತ್ತಿಲ್ಲ ಎಂದು ಹೈಕಮಾಂಡ್ ನನಗೆ ಹೇಳಬೇಕಿತ್ತು. ಆದರೆ ಸೌಜನ್ಯಕ್ಕಾದರೂ ವರಿಷ್ಠರು ನನ್ನೊಂದಿಗೆ ಚರ್ಚೆ ಮಾಡಲಿಲ್ಲ. ಟಿಕೆಟ್ ಗಾಗಿ ನಾನು ಹೈಕಮಾಂಡ್ ಬಳಿ ಭಿಕ್ಷೆ ಬೇಡಬೇಕಾ, ಅಧಿಕಾರ ಯಾವತ್ತೂ ಶಾಶ್ವತ ಅಲ್ಲ. ಅಥಣಿ ಕ್ಷೇತ್ರದ ಜನತೆಯೇ ನನ್ನ ಹೈಕಮಾಂಡ್. ನಾಳೆ ಬೆಂಬಲಿಗರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ.  ಬಿಜೆಪಿ ಪಕ್ಷ ತತ್ವ, ಸಿದ್ಧಾಂತ ಬಿಟ್ಟು ಬೇರೆ ದಾರಿಯಲ್ಲಿ ಹೋಗ್ತಿದೆ ಎಂದು ಬಿಜೆಪಿ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರ ಹಾಕಿದೆ.

ಇನ್ನು ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಲಕ್ಷ್ಮಣ ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ.  ಬೊಮ್ಮಾಯಿ ಕಾಂಗ್ರೆಸ್ ಪಕ್ಷ ಸೇರಲು ಸಿದ್ಧರಾಗಿದ್ದರು. ಆಗ ನಾನು ಮತ್ತು ಸಿ.ಸಿ ಪಾಟೀಲ್ ಅವರಿಗೆ ಬುದ್ಧಿ ಹೇಳಿದ್ದೆವು. ಬೊಮ್ಮಾಯಿ ಅವ್ರನ್ನ ಬಿಎಸ್​ವೈ ಬಳಿ ಕರೆದುಕೊಂಡು ಹೋಗಿ ಬಿಜೆಪಿಯಲ್ಲೇ ಉಳಿಯುವಂತೆ ಮಾಡಿದೆವು. ನಮ್ಮಿಂದಾಗಿ ಬೊಮ್ಮಾಯಿ ಸಿಎಂ ಆದರು ಎಂದ ಸವದಿ ಹೇಳಿದ್ದಾರೆ.

ಇನ್ನು ಸವದಿ ರಾಜೀನಾಮೆ ಮತ್ತು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.  ಈಗಾಗಲೇ ಲಕ್ಷ್ಮಣ ಸವದಿ ಜೊತೆ ಮಾತಾಡಿದ್ದೇನೆ. ಲಕ್ಷ್ಮಣ ಸವದಿ ಮೇಲೆ ವಿಶ್ವಾಸ ಇದೆ, ದುಡುಕಿನ ನಿರ್ಧಾರ ಕೈಗೊಳ್ಳೋದು ಬೇಡ. ಸವದಿ ಮತ್ತು ಬಿಜೆಪಿ ನಡುವೆ ಸವದಿಗೆ ಹಳೇ ನಂಟಿದೆ, ಭಾವನಾತ್ಮಕ ಸಂಬಂಧ ಇದೆ. ಅವ್ರಿಗೆ ಟಿಕೆಟ್ ಸಿಗದೆ ಇರುವ ಬಗ್ಗೆ ಬೇಜಾಗಿದೆ ಅದು ನನ್ನ ಗಮನಕ್ಕೂ ಬಂದಿದೆ. ನಾನು ನಿರಂತರವಾಗಿ ಸವದಿ ಜೊತೆಗೆ ಮಾತಾಡುತ್ತಿದ್ದೇನೆ, ಹೈಕಮಾಂಡ್ ಕೂಡ ಮಾತಾಡುತ್ತೆ. ನೋವಿನಲ್ಲಿ ಕೆಲ ವಿಚಾರ ಹೇಳಿರಬಹುದು. ಶಾಂತವಾಗಿ ಯೋಚನೆ ಮಾಡಿದ್ರೆ ಅವ್ರಿಗೆ ಇದೇ ಪಕ್ಷದಲ್ಲಿ ಒಳ್ಳೆಯ ಭವಿಷ್ಯ ಇದೆ. ಪಕ್ಷ ಅವರು ಸೋತಾಗ ಕೈ ಹಿಡಿದಿದೆ ಮುಂದೆ ಕೂಡ ಹಿಡಿಯುತ್ತೆ. ಸರ್ಕಾರ ರಚನೆಗೆ ಬಂದಾಗ ನಾವು ಮಾತು ಕೊಟ್ಟಂತೆ ಮಹೇಶ್ ಕುಮಟಳ್ಳಿಗೆ ಟಿಕೆಟ್ ಕೊಟ್ಟಿದ್ದೇವೆ. ಹೈಕಮಾಂಡ್ ಜೊತೆ ಮಾತಾಡಿದ್ದೇನೆ, ಇದೆಲ್ಲಾ ಸರಿ ಹೋಗುತ್ತೆ ಅನ್ನೋ ವಿಶ್ವಾಸ ಇದೆ ಎಂದಿದ್ದಾರೆ.

ಹಾಗೇ ಕಾಂಗ್ರೆಸ್ ಸೇರ್ಪಡೆ ವಿಚಾರವನ್ನ ಸಿಎಂ ಬೊಮ್ಮಾಯಿ ತಳ್ಳಿ ಹಾಕಿದ್ದಾರೆ. ಇದೆಲ್ಲಾ ಅಪ್ರಸ್ತುತ, ಯಾರ್ಯಾರು ಎಲ್ಲೆಲ್ಲಿ ಸೇರಿದ್ರು ಅನ್ನೋದೆಲ್ಲಾ ಗೊತ್ತಿರುವ ವಿಚಾರ. ನಾನು ಮನೆಯಲ್ಲಿ ಕೂತಿದ್ದೆ ಯಾವ ಪಕ್ಷಕ್ಕೂ ಹೋಗಿರಲಿಲ್ಲ. ಆಗ ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ನನ್ನ ಜೊತೆ ಮಾತನಾಡಿದ್ರು. ಲಕ್ಷ್ಮಣ ಸವದಿ ಸಿಸಿ ಪಾಟೀಲ್ ನನ್ನ ಜೊತೆ ಮಾತನಾಡಿರುವುದು ನಿಜ. ಅಶೋಕ್, ಸುಬ್ರಮಣ್ಯನಾಯ್ಡು ಕೂಡ ಬಂದಿದ್ರು. ಎಲ್ರೂ ನನ್ನ ಫ್ರೆಂಡ್ಸೇ ಅಲ್ವಾ, ಎಲ್ಲಾ ಒಟ್ಟಿಗೆ ಬೆಳೆದಿದ್ದೇವೆ. ಮುಂದೆ ನಾನೇನು ಆಗ್ತೇನೆ ಅನ್ನೋ ಭವಿಷ್ಯ ಯಾರ ಕೈಯಲ್ಲೂ ಇಲ್ಲ. ನನಗೆ ಅಂಥಾ ದೊಡ್ಡ ಮಹಾತ್ವಾಕಾಂಕ್ಷೆಯ ಆಶಯಗಳೂ ಇಲ್ಲ ಎಂದಿದ್ದಾರೆ.

suddiyaana