ರಾಜಕೀಯದಲ್ಲಿ ಧರ್ಮ ಬಳಸುವುದನ್ನು ನಿಲ್ಲಿಸಿದಾಗ ದ್ವೇಷದ ಮಾತು ಕೊನೆಗೊಳ್ಳುತ್ತದೆ – ಸುಪ್ರೀಂ ಕೋರ್ಟ್

ರಾಜಕೀಯದಲ್ಲಿ ಧರ್ಮ ಬಳಸುವುದನ್ನು ನಿಲ್ಲಿಸಿದಾಗ ದ್ವೇಷದ ಮಾತು ಕೊನೆಗೊಳ್ಳುತ್ತದೆ – ಸುಪ್ರೀಂ ಕೋರ್ಟ್

ದೇಶದಲ್ಲಿ ಯಾವುದೇ ಚುನಾವಣೆ ನಡೆಯಲಿ. ರಾಜಕಾರಣಿಗಳು ಮಾತ್ರ ಜನರ ಮನಸನ್ನು ಒಡೆದೇ ಮತಬುಟ್ಟಿಗೆ ಕೈ ಹಾಕುತ್ತಾರೆ. ಜಾತಿ, ಧರ್ಮದ ಆಧಾರದಲ್ಲೇ ಮತ ಬೇಟೆಯಾಡುತ್ತಾರೆ. ಜಾತಿ, ಧರ್ಮ ಅನ್ನೋದು ರಾಜಕಾರಣಿಗಳ ಪಾಲಿಗೆ ವೋಟ್​ಬ್ಯಾಂಕ್​​ ಆಗಿ ಹಲವು ದಶಕಗಳೇ ಕಳೆದಿವೆ. ಜನಸಾಮಾನ್ಯರ ತಲೆಗೆ ವಿಷ ಬೀಜ ಬಿತ್ತಿ ರಾಜಕಾರಣಿಗಳು ಮಾತ್ರ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಲೇ ಇದ್ದಾರೆ. ಚುನಾವಣಾ ಅಖಾಡದಲ್ಲಿ ಓಪನ್ ಆಗಿಯೇ ದ್ವೇಷ ಭಾಷಣ ಮಾಡ್ತಾರೆ. ಈ ಬಗ್ಗೆ ದೇಶದ ಸರ್ವೋಚ್ಛ ನ್ಯಾಯಾಲಯ ಗಂಭೀರವಾಗಿ ಪ್ರತಿಕ್ರಿಯಿಸಿದೆ.

ಇದನ್ನೂ ಓದಿ: ನಂದಿನಿ ಮೊಸರಿನ ಪ್ಯಾಕೆಟ್ ಮೇಲೆ ಹಿಂದಿ ಪದ – ಕೇಂದ್ರದ ‘ದಹಿ’ ವಿರುದ್ದ ಸಿಡಿದೆದ್ದ ಹೆಚ್ ಡಿಕೆ

ರಾಜಕಾರಣಿಗಳು ಧರ್ಮವನ್ನ ಬಳಕೆ ಮಾಡೋದನ್ನ ನಿಲ್ಲಿಸಿದಾಗ ದೇಶದಲ್ಲಿ ದ್ವೇಷದ ಮಾತುಗಳು ಅಂತ್ಯವಾಗಲಿದೆ ಅಂತಾ ಸುಪ್ರೀಂಕೋರ್ಟ್ ಹೇಳಿದೆ. ಮೊದಲು ಧರ್ಮವನ್ನು ರಾಜಕಾರಣದಿಂದ ದೂರ ಮಾಡಬೇಕು. ಹಾಗೆಯೇ ರಾಜಕಾರಣಿಗಳು ಧರ್ಮವನ್ನು ಬಳಸೋದನ್ನು ನಿಲ್ಲಿಸಬೇಕು ಅಂತಾ ಸುಪ್ರೀಂಕೋರ್ಟ್ ಹೇಳಿದೆ.

ಅಷ್ಟೇ ಅಲ್ಲದೇ ಮತಾಂಧ ವ್ಯಕ್ತಿಗಳು ಟಿವಿ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ನಿತ್ಯವೂ ದ್ವೇಷದ ಮಾತುಗಳನ್ನ ಆದುತ್ತಿದ್ದು, ಅಂಥವರ ವಿರುದ್ಧ ಯಾವುದೇ ಕಠಿಣ ಕ್ರಮಗಳನ್ನ ಕೈಗೊಳ್ಳುತ್ತಿಲ್ಲ. ಕೇಸ್​ ಕೂಡ ದಾಖಲಾಗುತ್ತಿಲ್ಲ ಅಂತಾ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ.

suddiyaana