ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇವಣ್ಣ – ಫಸ್ಟ್ ಡೇ ದಿನಚರಿ ಹೇಗಿತ್ತು..?

ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇವಣ್ಣ – ಫಸ್ಟ್ ಡೇ ದಿನಚರಿ ಹೇಗಿತ್ತು..?

ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತೆಯನ್ನ ಕಿಡ್ನಾಪ್ ಮಾಡಿದ  ಪ್ರಕರಣದಲ್ಲಿ ಹೆಚ್‌.ಡಿ. ರೇವಣ್ಣ ಸೆರೆವಾಸಕ್ಕೆ ಗುರಿಯಾಗಿದ್ದಾರೆ. 7 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದ ಹಿನ್ನೆಲೆ ಜೈಲುವಾಸಕ್ಕೆ ಹೋಗಿದ್ದಾರೆ.

ಇದನ್ನೂ ಓದಿ: ಹೆಚ್ ಡಿ ರೇವಣ್ಣ ಅಮಾನತಿಗೆ ಪಕ್ಷದಲ್ಲಿ ಹೆಚ್ಚಾಯ್ತು ಒತ್ತಡ –  ಗುರುವಾರ ನಿರ್ಧಾರವಾಗಲಿದೆ ರೇವಣ್ಣ ಭವಿಷ್ಯ! 

ಬುಧವಾರ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್‌ ಮಾಡಲಾಗಿದ್ದು, ಜೈಲಿನಲ್ಲಿ ರೇವಣ್ಣಗೆ ‘4567’ ಎಂಬ ಕೈದಿ ನಂಬರ್​ ನೀಡಲಾಗಿದೆ. ಕ್ವಾರೆಂಟೈನ್ ಜೈಲಿನ ಪ್ರತ್ಯೇಕ ಕೊಠಡಿಯಲ್ಲಿ ರೇವಣ್ಣ ಒಂದು ದಿನ ಕಳೆದಿರುವ ರೇವಣ್ಣಗೆ ಕೈದಿಗಳಿಗೆ ನೀಡುವ ಊಟವನ್ನೇ ನೀಡಲಾಗಿದೆ.  ಇದರಿಂದಾಗಿ ರೇವಣ್ಣ ಬೇಸರಗೊಂಡು ಮೌನಕ್ಕೆ ಜಾರಿದ್ದರು ಅಂತ ತಿಳಿದುಬಂದಿದೆ. ರಾಜಕಾರಣಿಯಾಗಿ ರೇವಣ್ಣ ಐಷಾರಾಮಿ ಜೀವನ ನಡೆಸಿದವರು. ಆದ್ರೀಗ ಕಿಡ್ನ್ಯಾಪ್​ ಪ್ರಕರಣದಲ್ಲಿ ರಾತ್ರಿ ಕಳೆಯಬೇಕಾದ ಪರಿಸ್ಥಿತಿ ಎದುರಾಯ್ತಲ್ಲ ಅಂತ ಬೇಸರಗೊಂಡಿದ್ರಂತೆ.

ಇನ್ನು ಬುಧವಾರ ಬೆಳಗ್ಗೆ 5.30ಕ್ಕೆ ಎದ್ದು ಕಾಫಿ ಟೀ ಸೇವಿಸಿದ್ದಾರೆ. ಹೊರಗಿನ ವಿದ್ಯಮಾನ ತಿಳಿಯಲು ನ್ಯೂಸ್ ಪೇಪರ್ ವ್ಯವಸ್ಥೆ ಮಾಡಲಾಗಿದ್ದು, ರೇವಣ್ಣ ದಿನಪತ್ರಿಕೆ ಓದಿದ್ದಾರೆ.  ಜೈಲಿನ ಮೆನುವಿನಂತೆ ರೇವಣ್ಣಗೆ ಪುಳಿಯೊಗರೆ ನೀಡಲಾಗಿದ್ದು, ಸಮಾನ್ಯ ಕೈದಿಯಂತೆ ದಿನ ದೂಡುತ್ತಿದ್ದಾರೆ. ಈ ಮಧ್ಯೆ ರೇವಣ್ಣಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಜೈಲಿನ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಆಸ್ಪತ್ರೆಗೆ ರವಾನಿಸುವ ಸಾಧ್ಯತೆ ಇದೆ.

ಮಾಜಿ ಸಚಿವ ಹೆಚ್​.ಡಿ.ರೇವಣ್ಣ ವಿರುದ್ಧ ಅಪಹರಣದ ಕೇಸ್ ದಾಖಲಾಗಿತ್ತು. ಹೊಳೆನರಸೀಪುರದಲ್ಲಿ ದಾಖಲಾಗಿರೋ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹೆಚ್​.ಡಿ.ರೇವಣ್ಣ ಮೊದಲೇ ಆರೋಪಿಯಾಗಿದ್ದಾರೆ. ಇನ್ನು ಕೆ.ಆರ್​.ನಗರ ಠಾಣೆಯಲ್ಲಿ ಮಹಿಳೆಯ ಅಪಹರಣ ಪ್ರಕರಣ ದಾಖಲಾಗಿದ್ದು ಮೊದಲನೇ ಆರೋಪಿಯಾಗಿದ್ದಾರೆ. ಕಳೆದ ಮೇ 4ರಂದು ಜನಪ್ರತಿನಿಧಿಗಳ ಕೋರ್ಟ್ ರೇವಣ್ಣ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಎಸ್​ಐಟಿ ಕಸ್ಟಡಿಗೆ ವಹಿಸಿತ್ತು. ಈ ನಡುವೆ ಕಿಡ್ನಾಪ್ ಕೇಸ್​​ ವಿಚಾರಣೆ ನಡೆಸಿದ 17ನೇ ಎಸಿಎಂಎಂ ನ್ಯಾಯಾಲಯ​​​ ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ. ಬೆನ್ನಲ್ಲೇ ಹೆಚ್‌.ಡಿ. ರೇವಣ್ಣರನ್ನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.

Shwetha M