ಹಾಸನಾಂಬೆ ದೇವಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯ – ಇತಿಹಾಸದಲ್ಲೇ ಈ ಬಾರಿ ಗರಿಷ್ಠ ಆದಾಯ!

ಹಾಸನಾಂಬೆ ದೇವಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯ – ಇತಿಹಾಸದಲ್ಲೇ ಈ ಬಾರಿ ಗರಿಷ್ಠ ಆದಾಯ!

ರಾಜ್ಯದ ಪವಾಡ ಸದೃಶ ದೇವರು ಎಂದೇ ಹೇಳುವ ಹಾಸನದ ಹಾಸನಾಂಬೆ ದೇವರ 2023ರ ಜಾತ್ರಾ ಮಹೋತ್ಸವಕ್ಕೆ ತೆರೆಬಿದ್ದಿದೆ. ಬುಧವಾರ ದೇವರ ಗರ್ಭಗುಡಿ ಬಾಗಿಲನ್ನು ಶಾಸ್ತ್ರೋಕ್ತವಾಗಿ ಮುಚ್ಚಲಾಗಿದ್ದು, ಮುಂದಿನ ವರ್ಷ ಮತ್ತೆ ದೇಗುಲದ ಬಾಗಿಲು ತೆರೆಯಲಾಗುತ್ತದೆ. ನ.2 ರಿಂದ ಶುರುವಾಗಿ ಬರೊಬ್ಬರಿ 14 ದಿನಗಳವರೆಗೆ ನಡೆದ ಉತ್ಸವದಲ್ಲಿ ಈ ಬಾರಿ ದಾಖಲೆ ಪ್ರಮಾಣದಲ್ಲಿ ಭಕ್ತಾಧಿಗಳು ಆಗಮಿಸಿದ್ದರು. ಇದೀಗ ದೇಗುಲದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದೆ. ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಈ ಬಾರಿ ಗರಿಷ್ಠ ಆದಾಯ ಸಂಗ್ರಹವಾಗಿದೆ.

ಈ ವರ್ಷದ ಜಾತ್ರಾ ಮಹೋತ್ಸವಕ್ಕೆ ದೇಶ-ವಿದೇಶಗಳಿಂದ ಸಾಗರೋಪಾದಿಯಲ್ಲಿ ಭಕ್ತರ ದಂಡು ಹರಿದು ಬಂದಿದೆ. ಲಕ್ಷಾಂತರ ಮಂದಿ ಭಕ್ತರು ದೇವರ ದರ್ಶನ ಪಡೆದು ದೇವಿಯ ಕೃಪೆಗೆ ಪಾತ್ರರಾದರು. ಕೇವಲ 12 ದಿನಗಳಲ್ಲಿಯೇ 13 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿ,  5.80 ಕೋಟಿ ರೂ ಆದಾಯ ಹರಿದು ಬಂದಿತ್ತು. ಬುಧವಾರ ಉತ್ಸವ ತೆರೆ ಕಂಡಿದ್ದು, ಗುರುವಾರ ಬೀಗಿ ಪೊಲೀಸ್​ ಬಂದೋಬಸ್ತ್​ನಲ್ಲಿ ಹುಂಡಿ ಎಣಿಕೆ ಕಾರ್ಯ ಇದೀಗ ಮುಕ್ತಾಯವಾಗಿದ್ದು, ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಈ ಬಾರಿ ಗರಿಷ್ಠ ಆದಾಯದ ಮೂಲಕ ದಾಖಲೆ ನಿರ್ಮಾಣವಾಗಿದೆ.

ಇದನ್ನೂ ಓದಿ: ಹೆಣ್ಣು ಮಗು ಹುಟ್ಟಿದ್ರೆ 2 ಲಕ್ಷ ರೂ. ಉಳಿತಾಯದ ಬಾಂಡ್! – ಮಹತ್ವದ ಯೋಜನೆ ಘೋಷಿಸಿದ ಬಿಜೆಪಿ

ಈ ವರ್ಷ ಒಟ್ಟು 8,72,41,531 ರೂ. ದಾಖಲೆಯ ಹಣ ಸಂಗ್ರಹವಾಗಿದೆ. ಅದರಲ್ಲಿ ಕಾಣಿಕೆ ರೂಪದಲ್ಲಿ 62 ಗ್ರಾಂ ಚಿನ್ನ, 161 ಗ್ರಾಂ‌ ಬೆಳ್ಳಿ ಸಂಗ್ರಹವಾದರೆ, ವಿಶೇಷ ದರ್ಶನದ ಸಾವಿರ, ಮುನ್ನೂರು ರೂ. ಟಿಕೆ‌ಟ್, ಲಾಡು ಮಾರಾಟದಿಂದಲೇ ಬರೊಬ್ಬರಿ 6,17,00,034 ರೂ ಸಂಗ್ರಹವಾಗಿದೆ. ಇನ್ನು ಹುಂಡಿಯಲ್ಲಿ 2,50,77,497 ರೂಪಾಯಿ ಸಂಗ್ರಹದ ಮೂಲಕ ಒಟ್ಟು 8,72,41,531 ಕೋಟಿ ರೂ. ದಾಖಲೆ ಆದಾಯ ಗಳಿಕೆಯಾಗಿದೆ.

ಮುಂದಿನ ವರ್ಷ ಹಾಸನಾಂಬೆಯ ದರ್ಶನಕ್ಕೆ ದಿನಾಂಕ ಫಿಕ್ಸ್!

ಈ ವರ್ಷ ಹಾಸನ ಜಿಲ್ಲಾಡಳಿ ಹಾಸನಾಂಬೆ ಉತ್ಸವನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದು, ಪ್ರಸಕ್ತ ವರ್ಷದ ಹಾಸನಬಾಂಬೆ ಉತ್ಸವ ತೆರೆ ಕಂಡಿದೆ. ಈ ಬಾರಿ ಒಟ್ಟು 14 ಲಕ್ಷ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿದ್ದು, ಒಟ್ಟು 8 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ. ಇನ್ನು ಮುಂದಿನ ವರ್ಷದ ಹಾಸನಾಂಬೆ ದರ್ಶನೋತ್ಸವಕ್ಕೂ ದಿನಾಂಕವನ್ನು ನಿಗದಿ ಮಾಡಲಾಗಿದ್ದು, 2024ರ ಅಕ್ಟೋಬರ್ 24ರಿಂದ ನವೆಂಬರ್ 3ರ ವರೆಗೆ ಹಾಸನಾಂಬೆ ದರ್ಶನ ಇರಲಿದೆ. ಇದರೊಂದಿಗೆ ಒಟ್ಟು 9 ದಿನಗಳ ಕಾಲ ಹಾಸನಾಂಬೆ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗುತ್ತದೆ.

Shwetha M