ಹಾಸನಾಂಬೆ ದರ್ಶನಕ್ಕೆ ಕ್ಯೂನಲ್ಲಿ ನಿಂತಿದ್ದ ಭಕ್ತರಿಗೆ ಕರೆಂಟ್​ ಶಾಕ್ – ಹಲವರಿಗೆ ಗಾಯ, ಬಾಲಕಿ ಸ್ಥಿತಿ ಗಂಭೀರ

ಹಾಸನಾಂಬೆ ದರ್ಶನಕ್ಕೆ ಕ್ಯೂನಲ್ಲಿ ನಿಂತಿದ್ದ ಭಕ್ತರಿಗೆ ಕರೆಂಟ್​ ಶಾಕ್ – ಹಲವರಿಗೆ ಗಾಯ, ಬಾಲಕಿ ಸ್ಥಿತಿ ಗಂಭೀರ

ವರ್ಷಕ್ಕೆ ಒಂದು ಬಾರಿಯಷ್ಟೇ ದರ್ಶನ ಭಾಗ್ಯ ಕರುಣಿಸಲಿರುವ ಹಾಸನದ ಅಧಿದೇವತೆ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ತೆರೆದು 9 ದಿನಗಳಾಗಿವೆ. ದೇವಿ ದರ್ಶನಕ್ಕೆ ನಿತ್ಯ ಸಾವಿರಾರು ಮಂದಿ ಭಕ್ತ ಆಗಮಿಸುತ್ತಿದ್ದಾರೆ. ಶುಕ್ರವಾರ ಸರತಿ ಸಾಲಿನಲ್ಲಿ ನಿಂತಿದ್ದ ಕೆಲವು ಭಕ್ತರಿಗೆ ಕರೆಂಟ್‌ ಶಾಕ್‌ ಹೊಡೆದಿದ್ದು, ಕೆಲಕಾಲ ಗೊಂದಲದ ವಾತಾವಣ ಉಂಟಾಗಿಯಿತು.

ಸಾಮಾನ್ಯ ಭಕ್ತರು ಧರ್ಮ ದರ್ಶನ ಸರತಿ ಸಾಲಿನಲ್ಲಿ ನಿಂತಿದ್ದಾಗ ಕರೆಂಟ್‌ ಶಾಕ್‌ ಹೊಡೆದಿದೆ. ಬ್ಯಾರಿಕೇಡ್​ ಕಂಬಿಯಲ್ಲಿ ಎರಡು-ಮೂರು ಬಾರಿ ಸುಮಾರು 20ಕ್ಕೂ ಹೆಚ್ಚು ಜನರಿಗೆ ಕರೆಂಟ್ ಶಾಕ್ ಹೊಡೆದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಸರದಿಯಲ್ಲಿ ನಿಂತಿದ್ದ ಭಕ್ತರು ಭಯಭೀತರಾಗಿ ಎದ್ನೋ-ಬಿದ್ನೋ ಅಂತಾ ಓಡಾಡಿದ್ದಾರೆ. ಈ ವೇಳೆ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿದ್ದು, ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ. ಒಂದೆಡೆ ಕರೆಂಟ್​ ಶಾಕ್​ನಿಂದ ಹಲವು ಮಂದಿ ಅಸ್ವಸ್ತರಾಗಿದ್ದರೆ, ಮತ್ತೊಂದೆಡೆ ಕಾಲ್ತುಳಿತದಿಂದ ಕೆಲ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಂಬ್ಯುಲೆನ್ಸ್​ ಸಹಾಯದಿಂದ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವ ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ – ಮರುಪರೀಕ್ಷೆಗೆ ಹೈಕೋರ್ಟ್ ಆದೇಶ

ಈ ಘಟನೆಯ ಬೆನ್ನಲ್ಲೇ ಭಕ್ತರು ಹಾಸನ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಹಾಸನಾಂಬೆ ದರ್ಶನಕ್ಕೆ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ. ಈ ವೇಳೆ ಸ್ವಯಂ ಸೇವಕರು ಭಕ್ತರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದಾದರೂ ಯಾರೂ ಕೂಡ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ. ಈಗಲೂ ಭಕ್ತರಲ್ಲಿ ಆತಂಕ ಮುಂದುವರಿದಿದೆ.

ಹಾಸನಾಂಬೆ ಗರ್ಭಗುಡಿ ಬಾಗಿಲು ತೆರೆದು 9 ದಿನಕ್ಕೆ ಕಾಲಿಟ್ಟಿದ್ದು, ಇಂದು ಭಕ್ತರ ಸಂಖ್ಯೆ ಹೆಚ್ಚಾಗಿಯೇ ಇದೆ. ಕೇವಲ 7 ದಿನಕ್ಕೆ ಕೋಟಿಗಟ್ಟಲೆ ಆದಾಯವೂ ಸಹ ಸಂಗ್ರಹವಾಗಿದೆ. ನವೆಂಬರ್​ 2ರಂದು ಬಾಗಿಲನ್ನು ತೆರೆಯಲಾಯಿತು. ಮೊದಲ ದಿನ ಭಕ್ತರ ದರ್ಶನಕ್ಕೆ ಅವಕಾಶ ಇರಲಿಲ್ಲ. ನ.3ರಿಂದ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಸಾವಿರ ಸಂಖ್ಯೆಯಲ್ಲಿ ಭಕ್ತರು ಪ್ರತಿದಿನ ದರ್ಶನ ಪಡೆಯುತ್ತಿದ್ದಾರೆ.

Shwetha M