2ನೇ ಟೆಸ್ಟ್ ಪಂದ್ಯ ಗೆಲ್ಲಲು ಲಂಕಾ ಪ್ಲ್ಯಾನ್ – ತಂಡಕ್ಕೆ ಹೊಸ ಬ್ಯಾಟಿಂಗ್ ಕೋಚ್ ನೇಮಕ

ಭಾರತ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಸೋತಿರುವ ಶ್ರೀಲಂಕಾ ಎರಡನೇ ಟೆಸ್ಟ್ ಸಿದ್ಧತೆ ಮಾಡಿಕೊಳ್ಳುತ್ತಿದೆ. 2ನೇ ಟೆಸ್ಟ ಪಂದ್ಯ ನಾಳೆಯಿಂದ ( ಆಗಸ್ಟ್ 23 ) ಆರಂಭವಾಗಲಿದ್ದು, ಮೊದಲ ಟೆಸ್ಟ್ ಸೋತಿರುವ ಆತಿಥೇಯ ಶ್ರೀಲಂಕಾ ಇದೀಗ ಎರಡನೇ ಪಂದ್ಯವನ್ನು ಗೆದ್ದು ಸರಣಿ ಸೋಲಿನಿಂದ ಪಾರಾಗಲು ನೋಡುತ್ತಿದೆ. ಈ ನಡುವೆ ಶ್ರೀಲಂಕಾ ತಂಡದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ತಂಡಕ್ಕೆ ಹೊಸ ಬ್ಯಾಟಿಂಗ್ ಕೋಚ್ ನೇಮಕವಾಗಿದೆ.
ಇದನ್ನೂ ಓದಿ: ಕುಲ್ದೀಪ್ ಔಟ್.. ಸರಾಂಶ್ ಗೆ ಚಾನ್ಸ್ – ಬ್ಯಾಟಿಂಗ್ ನಲ್ಲಿ ಬದಲಾವಣೆ ಬೇಕಿತ್ತಾ?
ಶ್ರೀಲಂಕಾ ತಂಡ ತನ್ನ ಮಾಜಿ ಆಟಗಾರ ಹಸನ್ ತಿಲಕರತ್ನೆ ಅವರನ್ನು ಹಿರಿಯ ಪುರುಷರ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿದೆ. ಆಗಸ್ಟ್ 20 ರಂದು ಈ ಹುದ್ದೆಗೇರಿರುವ ಹಸನ್ ತಿಲಕರತ್ನೆ ಅವರ ಅಧಿಕಾರಾವಧಿ ಡಿಸೆಂಬರ್ 31, 2027 ರವರೆಗೆ ಇರಲಿದೆ. ಇದರರ್ಥ ಅವರು ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲೂ ತಂಡದ ಬ್ಯಾಟಿಂಗ್ ಕೋಚ್ ಆಗಿರಲಿದ್ದಾರೆ.
ಹಸನ್ ತಿಲಕರತ್ನೆ 1996 ರ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ತಂಡದ ಪರ 250 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ತಿಲಕರತ್ನೆ ವ್ಯಾಪಕ ತರಬೇತಿ ಅನುಭವವನ್ನು ಹೊಂದಿದ್ದಾರೆ. ಅವರು ಈ ಹಿಂದೆ ಶ್ರೀಲಂಕಾ ಪುರುಷರ ರಾಷ್ಟ್ರೀಯ ತಂಡದ ಬ್ಯಾಟಿಂಗ್ ತರಬೇತುದಾರರಾಗಿ ಮತ್ತು ಮಹಿಳಾ ರಾಷ್ಟ್ರೀಯ ತಂಡದ ಮುಖ್ಯ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ಬಾಂಗ್ಲಾದೇಶ ಮಹಿಳಾ ರಾಷ್ಟ್ರೀಯ ತಂಡದ ಮುಖ್ಯ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.

ನೋಡಿರಿ

