ರಿಷಭ್ ಪಂತ್ ಬಿಟ್ಟು ಪಾಕ್ ವೇಗಿಗೆ ಬಾಲಿವುಡ್ ನಟಿಯ ಗಾಳ – ನಸೀಂ ಶಾ ಪ್ರೀತಿಯಲ್ಲಿ ಬಿದ್ದಳಾ ಊರ್ವಶಿ ರೌಟೇಲಾ?

ರಿಷಭ್ ಪಂತ್ ಬಿಟ್ಟು ಪಾಕ್ ವೇಗಿಗೆ ಬಾಲಿವುಡ್ ನಟಿಯ ಗಾಳ – ನಸೀಂ ಶಾ ಪ್ರೀತಿಯಲ್ಲಿ ಬಿದ್ದಳಾ ಊರ್ವಶಿ ರೌಟೇಲಾ?

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಮೊದಲೆಲ್ಲಾ ರಿಷಭ್ ಪಂತ್ ಧ್ಯಾನದಲ್ಲೇ ಇರುತ್ತಿದ್ದಳು. ಆದರೆ, ಈಗ ರಿಷಭ್ ಪಂತ್ ತಂಡದಲ್ಲಿಲ್ಲ. ಹೀಗಾಗಿಯೋ ಏನೋ, ನಟಿ ಊರ್ವಶಿ ರೌಟೇಲಾ ಕಣ್ಣು ಪಾಕಿಸ್ತಾನದ ಯುವ ವೇಗಿಯ ಮೇಲೆ ಬಿದ್ದಿದೆ. ಕುಂತಲ್ಲಿ ನಿಂತಲ್ಲಿ ಊರ್ವಶಿಗೆ ಈಗ ಪಾಕ್ ಆಟಗಾರನದ್ದೇ ಕನವರಿಕೆ. ಹೀಗಾಗಿ ಊರ್ವಶಿ ಪಾಕ್ ವೇಗಿ ನಸೀಂ ಶಾ ಫೋಟೋ ಶೇರ್ ಮಾಡುತ್ತಿದ್ದಾಳೆ.

ಇದನ್ನೂ ಓದಿ: ರಿಷಬ್ ಪಂತ್ ಮತ್ತು ಊರ್ವಶಿ ರೌಟೇಲಾ ನಡುವೆ ಸಮ್‌ಥಿಂಗ್ ಸಮ್‌ಥಿಂಗ್‌ ?

ಟೀಮ್ ಇಂಡಿಯಾ ಕ್ರಿಕೆಟಿಗ ರಿಷಭ್ ಪಂತ್ ಜೊತೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹೆಸರು ಥಳುಕು ಹಾಕಿಕೊಂಡಿತ್ತು. ಜೊತೆಗೆ ಇವರಿಬ್ಬರ ಜಗಳ ಕೂಡಾ ಗಾಸಿಪ್ ಪ್ರಿಯರಿಗೆ ಆಹಾರವಾಗಿತ್ತು. ನಂತರ ರಿಷಭ್ ಪಂತ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬಗ್ಗೆಯೂ ಊರ್ವಶಿ ಆತಂಕ ವ್ಯಕ್ತಪಡಿಸಿದ್ದು ಕೂಡಾ ದೊಡ್ಡ ಸುದ್ದಿಯಾಗಿತ್ತು. ಇವರಿಬ್ಬರ ನಡುವೆ ಕುಚ್ ಕುಚ್ ಹೋತಾ ಹೈ ಇದೆ ಅನ್ನೋ ಮಾತು ಕೇಳಿಬಂದಿತ್ತು. ಆದರೆ, ಇಬ್ಬರ ಕಡೆಯಿಂದಲೂ ಬರೀ ಗಾಸಿಪ್ ಸುದ್ದಿ ಹರಡಿದ್ದು ಬಿಟ್ಟರೆ ಬೇರೇನೂ ಇರಲಿಲ್ಲ. ಇದೀಗ ಮತ್ತೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸುದ್ದಿಯಲ್ಲಿದ್ದಾರೆ. ಅದು ಕೂಡಾ ಪಾಕ್ ಕ್ರಿಕೆಟಿಗನ ಕನವರಿಕೆಯಲ್ಲಿ ಇರುವ ಮೂಲಕ ಯಾಕಮ್ಮಾ ಊರ್ವಶಿ ಮತ್ತೆ ಪ್ರೀತಿ ಗೀತಿ ಏನಾದರೂ ಇದೆಯಾ ಅಂತಾ ಅಭಿಮಾನಿಗಳು ಕೇಳುತ್ತಿದ್ದಾರೆ.

ಊರ್ವಶಿ ರೌಟೇಲಾ, ಏಷ್ಯಾಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ಮನೆಯ ಟಿವಿಯಲ್ಲಿ ವೀಕ್ಷಿಸುತ್ತಾ, ಪಾಕಿಸ್ತಾನದ ಕ್ರಿಕೆಟಿಗ ನಸೀಂ ಶಾ ಅವರಿರುವ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರಿಷಭ್ ಪಂತ್ ಅವರನ್ನು ಕೈಬಿಟ್ಟು ಇದೀಗ ಪಾಕಿಸ್ತಾನದ ವೇಗಿಗೆ ಗಾಳ ಹಾಕಿದ್ದಾಳೆ ಎಂದು ನೆಟ್ಟಿಗರು ಊರ್ವಶಿಯನ್ನು ಟ್ರೋಲ್ ಮಾಡಿದ್ದಾರೆ. ಅಂದಹಾಗೆ ಊರ್ವಶಿ ರೌಟೇಲಾ, ನಸೀಂ ಶಾ ಅವರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಕಳೆದ ವರ್ಷ ನಸೀಂ ಶಾ ಅವರ ರೊಮ್ಯಾಂಟಿಕ್ ಇನ್ಸ್ಟಾಗ್ರಾಂ ರೀಲ್ ಶೇರ್ ಮಾಡಿದ್ದರು. ಅದು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಅಗಿತ್ತು.

suddiyaana