ದೊಡ್ಡವ್ವ ಚಿಕ್ಕವ್ವ ದೂರ ದೂರ – ಜಾಹ್ನವಿ, ಅಶ್ವಿನಿ ಗೌಡಗೆ ಪಾಠ ಕಲಿಸಿದ ಬಿಗ್ ಬಾಸ್
ಜಾಹ್ನವಿ, ಅಶ್ವಿನಿ ಗೌಡ ಗೆಳೆತನ ಕಟ್ ಆಯ್ತಾ?

ಬಿಗ್ಬಾಸ್ ಆಟ ಯಾವತ್ತೂ ಒಬ್ಬರದ್ದೇ. ಇಲ್ಲಿ ಗೆಲ್ಲೋದು ಕೂಡಾ ಒಬ್ಬರೇ. ಸ್ನೇಹ, ಪ್ರೀತಿಯೆಲ್ಲಾ ಬಿಗ್ಬಾಸ್ ಮನೆಯಲ್ಲಿ ತೋರಿಸುವುದು ಟಾಸ್ಕ್ ದೃಷ್ಟಿಯಿಂದ ಒಳ್ಳೆಯದೂ ಅಲ್ಲ. ಆದರೂ, ಕೆಲವರಿದ್ದಾರೆ. ನಾವ್ ಆಡಿದ್ದೇ ಆಟ, ನಮ್ಮದೇ ರೂಲ್ಸ್ ಅಂತಾ ಹೇಳಿಕೊಂಡವರು. ಈ ಬಾರಿ ಈ ರೀತಿ ಬಿಗ್ಬಾಸ್ ಪದೇ ಪದೇ ಹೇಳಿದರೂ ತಮ್ಮದೇ ಗುಂಗಲ್ಲಿ ಮೆರೆಯುತ್ತಿರುವ ಜಾಹ್ನವಿ ಮತ್ತು ಅಶ್ವಿನಿ ಗೌಡಗೆ ಬಿಗ್ ಬಾಸ್ ಸರಿಯಾಗಿಯೇ ಪಾಠ ಕಲಿಸಿದ್ದಾರೆ.
ಇದನ್ನೂ ಓದಿ:ಅಶ್ವಿನಿ ಗೌಡ, ಜಾಹ್ನವಿ ಫ್ರೆಂಡ್ಶಿಪ್ ಕಟ್! – ಜೋಡೆತ್ತುಗಳು ದೂರ ಆಗಿದ್ದು ಗೇಮ್ ಸ್ಟ್ರಾಟರ್ಜಿ?
ಬಿಗ್ಬಾಸ್ ಕೊಟ್ಟ ಟಾಸ್ಕ್ ನಡುವೆಯೂ ಸ್ನೇಹ ಮುಂದುವರಿಸಿಕೊಂಡ ಹೋಗಲು ಜಾಹ್ನವಿ ಮತ್ತು ಅಶ್ವಿನಿ ಗೌಡ ಒಳಗೊಳಗೇ ಪ್ರಯತ್ನಿಸಿದರು. ಟಾಸ್ಕ್ ಗೆ ಹೋಗುವ ಮುನ್ನ ಇಬ್ಬರೂ ಒಬ್ಬರನೊಬ್ಬರು ಅಪ್ಪಿಕೊಂಡು ಹೋಗಿದ್ದರು. ಆದರೆ, ಇವರು ಸೇರಾದರೆ ಬಿಗ್ ಬಾಸ್ ಸವ್ವಾಸೇರು ಅನ್ನೋದು ಮತ್ತೆ ಸಾಬೀತಾಗಿದೆ.
ಈ ವಾರ ಎರಡು ತಂಡಗಳಾಗಿ ಸ್ಪರ್ಧಿಗಳನ್ನು ವಿಂಗಡಿಸಲಾಗಿದೆ. ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರು ಎದುರುಬದರು ಟೀಮ್ನಲ್ಲಿ ಇದ್ದಾರೆ. ಇಬ್ಬರಲ್ಲಿ ಯಾರಿಗೆ ಅರ್ಹತೆ ಇಲ್ಲ ಎಂಬುದನ್ನು ಚರ್ಚೆ ಮಾಡಲು ಬಿಗ್ ಬಾಸ್ ವೇದಿಕೆ ನಿರ್ಮಿಸಿಕೊಟ್ಟರು. ಆದರೆ ಜಾಹ್ನವಿ ಮತ್ತು ಅಶ್ವಿನಿ ಒಬ್ಬರನ್ನೊಬ್ಬರು ಬಿಟ್ಟಕೊಡಲಿಲ್ಲ. ಬಿಗ್ಬಾಸ್ ಕೊಟ್ಟ ಟಾಸ್ಕ್ ನಿಭಾಯಿಸುವ ವೇಳೆ ಜಾಹ್ನವಿ ಮತ್ತು ಅಶ್ವಿನಿ ಗೌಡ ಅತಿ ಬುದ್ಧಿವಂತಿಕೆ ತೋರಿಸಲು ಪ್ರಯತ್ನಿಸಿದರು. ಆದರೆ ಅದಕ್ಕೆ ಬಿಗ್ ಬಾಸ್ ಅವಕಾಶ ಕೊಡಲಿಲ್ಲ. ‘ಜಾನ್ವಿ ಸ್ನೇಹದ ತೆಕ್ಕೆಯಲ್ಲಿ ಸಿಕ್ಕಿಕೊಂಡಿದ್ದಾರೆ. ಅವರು ತಮ್ಮದಲ್ಲದ ವ್ಯಕ್ತಿತ್ವನ್ನು ತೋರಿಸುತ್ತಿದ್ದಾರೆ. ಅವರಿಗೆ ಇಲ್ಲಿ ಇರಲು ಅರ್ಹತೆ ಇಲ್ಲದಂತಹ ವ್ಯಕ್ತಿತ್ವವನ್ನು ತೋರಿಸುತ್ತಿದ್ದಾರೆ. ನಾನು ಅವರನ್ನು ಡಾಮಿನೇಟ್ ಮಾಡುತ್ತೇನೆ ಎಂಬುದು ಕೆಲವರ ಅಭಿಪ್ರಾಯ. ಆ ಮಾತನ್ನು ತೆಗೆದುಕೊಂಡು ಹೋಗಲು ನಾನು ತಯಾರಿಲ್ಲ. ಸ್ನೇಹದಿಂದ ನನಗೆ ಕಳಂಕ ಬಂದಿದೆ. ನೀವು ಉತ್ತರ ಕೊಡದೇ ಮೌನ ವಹಿಸಿದ್ದೀರಿ’ ಎಂದು ತುಂಬ ನಯವಾಗಿ ಮಾತನಾಡಿಕೊಂಡು ಜಾರಿಕೊಳ್ಳಲು ಅಶ್ವಿನಿ ಗೌಡ ಪ್ರಯತ್ನಿಸಿದರು. ‘ನಾನು ಫೇಕ್ ಮಾಡುವ ವ್ಯಕ್ತಿ ಅಲ್ಲ. ಅದಕ್ಕೆ ಕಾರಣ ಕೂಡ ನಿಮಗೆ ಗೊತ್ತಿದೆ. ಫೇಕ್ ಆಗಿದ್ದರೆ ಎಂದೂ ಆ ಸ್ನೇಹ ಹೋಗುತ್ತಿತ್ತು’ ಎಂದು ಭಾರಿ ನಾಜೂಕಾಗಿ ಮಾತನಾಡಿ ಜಾರಿಕೊಳ್ಳಲು ಜಾಹ್ನವಿ ಪ್ರಯತ್ನಿಸಿದರು. ಅವರಿಬ್ಬರಿಗೂ ಬಿಗ್ ಬಾಸ್ ಚಾಟಿ ಬೀಸಿದರು. ಈ ರೀತಿ ಹುರುಳಿಲ್ಲದೇ ವಾದ-ಪ್ರತಿವಾದ ಮಾಡಿ ಇಡೀ ಪ್ರಕ್ರಿಯೆಯನ್ನು ತಮಾಷೆಯಾಗಿ ಪರಿವರ್ತಿಸಿದ್ದಕ್ಕೆ ಬಿಗ್ ಬಾಸ್ ಎಚ್ಚರಿಕೆ ನೀಡಿದರು. ಆಗ ಅವರಿಬ್ಬರು ಎಚ್ಚೆತ್ತುಕೊಂಡು ಅಸಲಿ ಮುಖ ತೋರಿಸಿದರು. ‘ಜಾಹ್ನವಿ ನನ್ನ ಜೊತೆಗೆ ಇದ್ದುಕೊಂಡು ನನಗೇ ಬಾವಿ ತೋಡುತ್ತಿದ್ದಾರೆ ಅಂತ ನನಗೆ ಈಗ ಗೊತ್ತಾಯಿತು’ ಎಂದು ಅಶ್ವಿನಿ ಗೌಡ ಅವರು ಹೇಳಿದರು. ‘ಮೊಲ ಮತ್ತು ಆಮೆ ಕಥೆ ನಿಮಗೆ ಗೊತ್ತಿದೆ ಅಲ್ವಾ? ತುಂಬಾ ಮಾತನಾಡಿದರೆ ಗೆಲ್ಲೋಕೆ ಆಗುತ್ತೆ ಅಂತ ಭಾವಿಸಬೇಡಿ’ ಎಂದು ಜಾಹ್ನವಿ ಹೇಳಿದರು. ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳ ಶುರುವಾಯಿತು. ಇವು ಟಾಸ್ಕ್ ಸಲುವಾಗಿ ಆಡಿದ ಮಾತುಗಳು ಆದರೂ ಕೂಡ ಅಶ್ವಿನಿ ಗೌಡ ಮತ್ತು ಜಾಹ್ನವಿ ನಡುವೆ ಮನಸ್ತಾಪ ಉಂಟಾಗಿದೆ. ಜಾಹ್ನವಿ ಹೇಳಿದ್ದು ಅಶ್ವಿನಿ ಗೌಡ ಅವರಿಗೆ ಬೇಸರ ಉಂಟುಮಾಡಿದೆ. ಅಲ್ಲದೇ, ಅಶ್ವಿನಿ ಗೌಡ ಅವರು ಖಾರವಾಗಿ ಮಾತನಾಡಿದ್ದರಿಂದ ಜಾಹ್ನವಿ ಅವರಿಗೆ ನೋವಾಗಿದೆ. ಇದರಿಂದಾಗಿ ಬಿಗ್ ಬಾಸ್ ಮನೆಯಲ್ಲಿ ಅವರಿಬ್ಬರ ನಡುವೆ ಕಿರಿಕ್ ಹೆಚ್ಚಾಗಿದೆ.
ಇನ್ನು ಜಾಹ್ನವಿ ಮಾತಿನಿಂದ ಅಶ್ವಿನಿ ಗೌಡ ಕಣ್ಣೀರು ಹಾಕಿದ್ದಾರೆ. ಗೆಳತಿಯ ಖಾರದ ಮಾತಿಗೆ ಜಾಹ್ನವಿ ಮುನಿಸುಕೊಂಡಿದ್ದಾರೆ. ಹೀಗಾಗಿ ದೊಡ್ಡವ್ವ ಮತ್ತು ಚಿಕ್ಕವ್ವ ದೂರ ದೂರ ಆಗಿದ್ದಾರೆ.

ನೋಡಿರಿ

