ಮೊಟ್ಟೆ ಮೊದಲಾ.. ಕೋಳಿ ಮೊದಲಾ..? – ವೈಜ್ಞಾನಿಕ ಅಧ್ಯಯನ ಏನು ಹೇಳುತ್ತೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ಮೊಟ್ಟೆ ಮೊದಲಾ.. ಕೋಳಿ ಮೊದಲಾ..? – ವೈಜ್ಞಾನಿಕ ಅಧ್ಯಯನ ಏನು ಹೇಳುತ್ತೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಬಹಳ ಕಷ್ಟವೇ. ಅದ್ರಲ್ಲೂ ಅದೂ ವೈಜ್ಞಾನಿಕ ಪ್ರಶ್ನೆಗಳೇ ಆಗಿದ್ದಲ್ಲಿ ಉತ್ತರದ ಹುಡುಕಾಟವೂ ನಿರಂತರವಾಗಿಯೇ ಇರುತ್ತದೆ.  ಯಾಕಂದ್ರೆ ವೈಜ್ಞಾನಿಕ ಸಿದ್ಧಾಂತಗಳಿಗೆ ಹೆಚ್ಚು ಹೆಚ್ಚು ಸಾಕ್ಷಿ ಸಿಕ್ಕಿದಷ್ಟು ಸಿದ್ಧಾಂತಗಳಲ್ಲಿ ಬದಲಾವಣೆಯಾಗುತ್ತಾ ಹೋಗುತ್ತದೆ. ಬಹುಷಃ ಅಂತಹ ಇನ್ನೂ ಉತ್ತರದ ಹುಡುಕಾಟದಲ್ಲಿರುವ ಪ್ರಶ್ನೆಯಂದರೇ ಅದೂ ಕೋಳಿ ಮೊದಲಾ ಅಥವಾ ಮೊಟ್ಟೆ ಮೊದಲಾ!. ಇದು ಪ್ರತಿಯೊಬ್ಬರ ತಲೆಯಲ್ಲೂ ಕೊರೆಯುತ್ತಿರುವ ಪ್ರಶ್ನೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಬಾಲ್ಯದಿಂದಲೇ ಈ ಪ್ರಶ್ನೆಯನ್ನ ನಾವು ಎದುರಿಸಿಯೇ ಇರುತ್ತೇವೆ ಮತ್ತು ಅದೂ ಕೊನೆಗೆ ತಮಾಷೆಯ ರೂಪದಲ್ಲಿ ಕೊನೆಯಾಗುತ್ತದೆ. ಆದರೆ ಈಗ ಉತ್ತರವೇ ಸಿಗದ ಈ ಪ್ರಶ್ನೆಗೆ ಉತ್ತರವನ್ನ ಕೊಡುವಲ್ಲಿ ಸಂಶೋಧನಾ ತಂಡವೊಂದು ಪ್ರಯತ್ನ ಪಟ್ಟಿದೆ.

ಹೌದೂ.. ಬ್ರಿಸ್ಟಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಈ ಪ್ರಶ್ನೆಗೆ ಉತ್ತರವನ್ನ ಕಂಡುಕೊಂಡಿದ್ದಾರೆ. ವಿಜ್ಞಾನಿಗಳು ಕೋಳಿ ಮೊದಲಾ? ಮೊಟ್ಟೆ ಮೊದಲಾ? ಎನ್ನುವ ಪ್ರಶ್ನೆಗೆ ಮೊಟ್ಟೆ ಅಲ್ವೇ ಅಲ್ಲಾ ಕೋಳಿಯೇ ಮೊದಲು ಎಂದು ಹೇಳುತ್ತಿದ್ದಾರೆ. ಅದರ ಹಿಂದಿನ ಸಿದ್ಧಾಂತವು ವಿಭಿನ್ನವಾಗಿದೆ. ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಪ್ರಕಾರ, ಕೋಳಿಗಳು ಮೊದಲು ಹೀಗಿರಲಿಲ್ಲ. ಅವುಗಳು ಮೊದಲು ಮನುಷ್ಯರಂತೆ ಸಸ್ತನಿಗಳಾಗಿದ್ದವು. ಅಂದರೇ ಕೋಳಿ ಮೊಟ್ಟೆ ಇಡದೆ ತನ್ನ ಮರಿಗಳಿಗೆ ಜನ್ಮ ನೀಡುತ್ತಿದ್ದವು ಎಂದು ಅಧ್ಯಯನದ ವೇಳೆ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಇದನ್ನೂ ಓದಿ: ಮೊಟ್ಟೆ ಮೊದಲಾ.. ಕೋಳಿ ಮೊದಲಾ? – ಮಿಲಿಯನ್ ಡಾಲರ್ ಪ್ರಶ್ನೆಗೆ ವಿಜ್ಞಾನಿಗಳಿಂದ ಕೊನೆಗೂ ಉತ್ತರ!

ಈ ಅಧ್ಯಯನವೂ 51 ಪಳೆಯುಳಿಕೆ ಜಾತಿಗಳು ಮತ್ತು 29 ಜೀವಂತ ಜಾತಿಗಳ ವಿಶ್ಲೇಷಣೆಯನ್ನು ಆಧರಿಸಿದೆ. ಇದನ್ನು ಅಂಡಾಣು (ಮೊಟ್ಟೆ ಇಡುವುದು) ಅಥವಾ ವಿವಿಪಾರಸ್ (ಮರಿಗಳಿಗೆ ಜನ್ಮ ನೀಡುವುದು) ಎಂದು ವರ್ಗೀಕರಿಸಬಹುದು. ಅಂಡಾಣು(Eggs) ಜಾತಿಗಳು ಗಟ್ಟಿಯಾದ ಅಥವಾ ಮೃದುವಾದ ಚಿಪ್ಪಿನ ಮೊಟ್ಟೆಗಳನ್ನು ಇಡುವುದಕ್ಕೆ ಹೆಸರುವಾಸಿಯಾಗಿದ್ದರೆ, ವಿವಿಪಾರಸ್ ಪ್ರಭೇದಗಳು ಮರಿಗಳಿಗೆ ಜನ್ಮ ನೀಡುತ್ತವೆ. ಈ ಹೊಸ ಸಂಶೋಧನೆಗಳನ್ನು ನೇಚರ್ ಎಕಾಲಜಿ & ಎವಲ್ಯೂಷನ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಬ್ರಿಸ್ಟಲ್ ವಿಶ್ವವಿದ್ಯಾಲಯದ ಸಂಶೋಧಕರು ಮೊಟ್ಟೆ ಇಡುವ ಪಕ್ಷಿಗಳು ಸಸ್ತನಿಗಳಿಂದ ವಿಕಸನಗೊಂಡಿವೆ ಎಂದು ಹೇಳುತ್ತಾರೆ. ಅದೆಷ್ಟೋ ವರ್ಷಗಳ ಹಿಂದೆ ಮೊಟ್ಟೆಗಳನ್ನು ಇಟ್ಟು ಸಸ್ತನಿಗಳಿಗೆ ಜನ್ಮ ನೀಡಿದ ಜಾತಿಗಳು ಇದ್ದವು. ಈ ಜಾತಿಗಳು ವಿಕಸನಗೊಳ್ಳುವ ಮುಂಚೆಯೇ ಭೂಮಿಯ ಮೇಲೆ ಕೋಳಿಗಳು ಅಸ್ತಿತ್ವದಲ್ಲಿದ್ದವು ಎಂದು ಅಧ್ಯಯನದ ವೇಳೆ ಗೊತ್ತಾಗಿದೆ.

ಈ ಹಿಂದೆಯೂ ಕೋಳಿಯೇ ಮೊದಲು ಎಂದು ಹೇಳುವ ಥಿಯರಿಗಳು ಸಾಕಷ್ಟಿವೆ!

ಮೊಟ್ಟೆಗಳ ರಚನೆಗೆ ಓವೊಕ್ಲಾಡಿನ್ ಎಂಬ ಪ್ರೊಟೀನ್ ಅಗತ್ಯ ಎಂದು ಸಂಶೋಧಕರು ಹೇಳುತ್ತಾರೆ. ಈ ಪ್ರೋಟೀನ್ ಮೊಟ್ಟೆಗಳ ಉತ್ಪಾದನೆಗೆ ಅವಶ್ಯಕವಾಗಿದೆ. ಗರ್ಭಾವಸ್ಥೆಯಲ್ಲಿ ಕೋಳಿಯ ಗರ್ಭಾಶಯದಲ್ಲಿ ಈ ವಿಶೇಷ ರೀತಿಯ ಪ್ರೋಟೀನ್ ರಚನೆಯಾಗುತ್ತದೆ. ಆದ್ದರಿಂದ ಕೋಳಿ ಮೊದಲು ಬಂದದ್ದು ಮೊಟ್ಟೆಯಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಓವೊಕ್ಲಾಡಿನ್ ಪ್ರೋಟೀನ್ ಸಹಾಯದಿಂದ, ಕ್ಯಾಲ್ಸಿಯಂ ಕಾರ್ಬೋನೇಟ್ ಮೊಟ್ಟೆಯ ಚಿಪ್ಪಿನಲ್ಲಿ ರೂಪಾಂತರಗೊಳ್ಳಲು ಪ್ರಾರಂಭಿಸುತ್ತದೆ ಎಂದು ಕಂಡುಬಂದಿದೆ. ನಿಧಾನವಾಗಿ ಈ ಶೆಲ್ ಗಟ್ಟಿಯಾಗಲು ಪ್ರಾರಂಭವಾಗುತ್ತದೆ ಎಂದು ಹಳೆ ಅಧ್ಯಯನಗಳು ಹೇಳುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

suddiyaana