ಕುಂಬಳಕಾಯಿ ಖಾದ್ಯ ಸವಿದು ಒಂದೇ ಕುಟುಂಬದ ಮೂವರು ಮಕ್ಕಳು ಸಾವು

ಕುಂಬಳಕಾಯಿ ಖಾದ್ಯ ಸವಿದು ಒಂದೇ ಕುಟುಂಬದ ಮೂವರು ಮಕ್ಕಳು ಸಾವು

ಆ ಕುಟುಂಬದ ಸದಸ್ಯರು ಖುಷಿ ಖುಷಿಯಾಗಿಯೇ ಊಟ ಮಾಡಿ ಮಲಗಿದ್ದರು. ಆದರೆ ಆ ವಿಧಿ ಅವರ ಖುಷಿಯನ್ನೇ ಕಸಿದುಕೊಂಡಿದೆ. ಬದುಕಿ ಬಾಳಬೇಕಿದ್ದ ಮಕ್ಕಳು ದುರಂತ ಅಂತ್ಯ ಕಂಡಿದ್ದಾರೆ. ಕುಂಬಳಕಾಯಿಯಿಂದ ತಯಾರಿಸಿದ ಖಾದ್ಯ ತಿಂದು ಒಂದೇ ಕುಟುಂಬದ ಮೂವರು ಮಕ್ಕಳು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಹರಿಯಾಣದ ರೋಹ್ಟಕ್​ ಬಳಿಯ ಬಲಾಂದ್​ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಸಾಕು ನಾಯಿಗಳು ಕಚ್ಚಾಡಿಕೊಂಡಿತೆಂದು ಮಾಲೀಕರ ಜಗಳ! – ನಡೆದೇ ಹೋಯ್ತು ಘೋರ ದುರಂತ!

ಆಗಸ್ಟ್ 15ರ ರಾತ್ರಿ ಮನೆಯಲ್ಲಿ ಪೇಠೆ ಕಿ ಸಬ್ಜಿ ಅಂದರೆ ಕುಂಬಳಕಾಯಿ ಖಾದ್ಯ ತಯಾರಿಸಿ, ತಿಂದು ಮಲಗಿದ್ದರು. ತಡರಾತ್ರಿ ಒಂದೇ ಕುಟುಂಬದ ಒಂಬತ್ತು ಜನರಿಗೆ ವಾಂತಿಭೇದಿ ಕಾಣಿಸಿಕೊಂಡಿದ್ದರಿಂದ ಮನೆಯವರು ಚಿಕಿತ್ಸೆಗಾಗಿ ವೈದ್ಯರ ಮೊರೆ ಹೋಗಿದ್ದರು. ಈ ವೇಳೆ ವೈದ್ಯರು ಔಷಧಿ ನೀಡಿ ಮನೆಗೆ ಕಳುಹಿಸಿದ್ದಾರೆ. ಆದರೆ, ಮನೆಗೆ ಬಂದ ಮೇಲೆ ಅವರ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಾಗಿದ್ದಾರೆ. ಈ ವೇಳೆ ಚಿಕಿತ್ಸೆಗೆ ಫಲಕಾರಿಯಾಗದೇ ಮೂವರು ಮೃತಪಟ್ಟಿದ್ದಾರೆ.

ಮೃತರನ್ನು ದಿವ್ಯಾ(7) ಇಯಾಂಶು (2) ಮತ್ತು ಲಕ್ಷಿತಾ (8) ಎಂದು ಗುರುತಿಸಲಾಗಿದ್ದು, ಗಣಿಕಾ (10) ಸ್ಥಿತಿ ಚಿಂತಾಜನಕವಾಗಿದೆ. ಕುಟುಂಬದ ಇತರ ಸದಸ್ಯರಾದ ರಾಕೇಶ್ ಮತ್ತು ಆತನ ಪತ್ನಿ ಮೋನಿಕಾ, ರಾಜೇಶ್ ಮತ್ತು ಆತನ ಪತ್ನಿ ಸೀಮಾ, ಹಿರಿಯ ಮಗ ಜತಿನ್ (10) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಬಗ್ಗೆ ಘಟನೆ ಬಗ್ಗೆ ಮಾಹಿತಿಯನ್ನು ಪಡೆದಿದ್ದು, ಕುಟುಂಬದ ಸದಸ್ಯರ ದೂರು, ಆಹಾರದ ಮಾದರಿಗಳನ್ನು ಸಹ ತೆಗೆದುಕೊಳ್ಳಲಾಗುವುದು ಎಂದು ಶಿವಾಜಿ ಕಾಲೋನಿ ಪೊಲೀಸರು ತಿಳಿಸಿದ್ದಾರೆ.

suddiyaana