IPL ಕಿಕ್ ಕಿತ್ತುಕೊಳ್ಳುತ್ತಾ ಇಂಜುರಿ? – RCB, SRH, KKRಗೆ ಡಬಲ್ ಶಾಕ್
ಟೂರ್ನಿಯಿಂದಲೇ ಹೊರಬಿದ್ದವರೆಷ್ಟು?

IPL ಕಿಕ್ ಕಿತ್ತುಕೊಳ್ಳುತ್ತಾ ಇಂಜುರಿ? – RCB, SRH, KKRಗೆ ಡಬಲ್ ಶಾಕ್ಟೂರ್ನಿಯಿಂದಲೇ ಹೊರಬಿದ್ದವರೆಷ್ಟು?

2026ರ ಐಪಿಎಲ್ ಕಿಕ್ ಸ್ಟಾರ್ಟ್​ಗೆ ಇನ್ನೊಂದೇ ವಾರ ಬಾಕಿ. ಮಾರ್ಚ್ 28ರಿಂದ 19ನೇ ಸೀಸನ್ ಅದ್ಧೂರಿಯಾಗಿ ಸ್ಟಾರ್ಟ್ ಆಗುತ್ತೆ. ಎಲ್ಲಾ ತಂಡಗಳು ಟ್ರೋಫಿ ಮೇಲೆ ಕಣ್ಣಿಟ್ಟು ಭರ್ಜರಿ ಪ್ರಾಕ್ಟೀಸ್ ಕೂಡ ಮಾಡ್ತಿದ್ದಾರೆ. ಆದ್ರೆ ಟೂರ್ನಿ ಆರಂಭಕ್ಕೂ ಮೊದಲೇ ಕೆಲ ತಂಡಗಳಿಗೆ ಆಘಾತ ಎದುರಾಗಿದೆ. ತಂಡದಲ್ಲಿ ಮೇನ್  ಪ್ಲೇಯರ್ಸ್ ಎನಿಸಿಕೊಂಡವ್ರೇ ಪಂದ್ಯಗಳಿಂದ ಹೊರಗುಳಿಯೋ ಚಾನ್ಸಸ್ ಇದೆ. ಅದ್ರಲ್ಲೂ ಬೌಲಿಂಗ್ ಬ್ರಹ್ಮಾಸ್ತ್ರವಾಗಿದ್ದ ಪ್ಲೇಯರ್​ಗಳಿಗೆ ಇಂಜುರಿ ಭೂತ ಬೆನ್ನು ಬಿದ್ದಿದೆ. ಕೆಲವ್ರು ಟೂರ್ನಿಯಿಂದಲೇ ರೂಲ್ಡ್ ಔಟ್ ಆದ್ರೆ ಇನ್ನೂ ಕೆಲವ್ರು ಕೆಲ ಪಂದ್ಯಗಳನ್ನ ಮಿಸ್ ಮಾಡಿಕೊಳ್ತಾರೆ.

ಇದನ್ನೂ ಓದಿ : T-20ಗೆ ಸಂಜು Or ಶ್ರೇಯಸ್ ಕ್ಯಾಪ್ಟನ್ – ಸೂರ್ಯನ ಸಾರಥ್ಯ ಕೊನೆಯಾಗುತ್ತಾ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ನಡುವಿನ ಹೈವೋಲ್ಟೇಜ್ ಪಂದ್ಯಕ್ಕಾಗಿ ಕ್ರಿಕೆಟ್ ಫ್ಯಾನ್ಸ್ ಎಲ್ರೂ ಕಾಯ್ತಿದ್ದಾರೆ. ಬ್ಯಾಟಿಂಗ್ ಫ್ರೆಂಡ್ಲಿಯಾಗಿರೋ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಈ ಸಲ ಮತ್ತೊಂದು ಇತಿಹಾಸ ನಿರ್ಮಾಣವಾಗುತ್ತಾ ಅನ್ನೋ ಚರ್ಚೆ ನಡೀತಿದೆ. ಬ್ಯಾಟರ್​ಗಳ ಪ್ಯಾರಡೈಸ್​ನಲ್ಲಿ ಅವ್ರನ್ನ ಕಟ್ಟಿಹಾಕೋ ಪ್ರಮುಖ ಬೌಲರ್​ಗಳೇ ಈಗ ಇಂಜುರಿ ಭೂತಕ್ಕೆ ತುತ್ತಾಗಿದ್ದಾರೆ. ಆರ್​​ಸಿಬಿ, ಎಸ್​ಆರ್​ಹೆಚ್ ಪಂದ್ಯದಲ್ಲಿ ಎರಡೂ ತಂಡಗಳ ಮೇನ್ ಬೌಲರ್​ಗಳೇ ಪಂದ್ಯವನ್ನ ಮಿಸ್ ಮಾಡಿಕೊಳ್ತಿದ್ದಾರೆ.

ಐಪಿಎಲ್ ಆರಂಭದಲ್ಲೇ ಇಂಜುರಿ ಭೂತ!

ಆಟಗಾರ                                    ತಂಡ                                   ಲಭ್ಯತೆ

ಹರ್ಷಿತ್ ರಾಣಾ                        ಕೆಕೆಆರ್                              ರೂಲ್ಡ್ ಔಟ್

ಮಥೀಷ ಪತಿರಾನ                       ಕೆಕೆಆರ್                            ಆರಂಭಿಕ ಪಂದ್ಯಗಳಿಗಿಲ್ಲ

ಜೋಶ್ ಹ್ಯಾಜಲ್‌ ವುಡ್              ಆರ್‌ಸಿಬಿ                        2-3 ಪಂದ್ಯ

ಪ್ಯಾಟ್ ಕಮ್ಮಿನ್ಸ್                     ಎಸ್‌ ಆರ್‌ ಹೆಚ್                3-4 ಪಂದ್ಯ

ವನಿಂದು ಹಸರಂಗ                     ಎಲ್‌ ಎಸ್‌ ಜಿ               ಲಭ್ಯತೆ ಅನುಮಾನ

ಮಯಾಂಕ್ ಯಾದವ್              ಎಲ್‌ ಎಸ್‌ ಜಿ                    ಅಬ್ಸರ್ವೇಷನ್

ಆಡಮ್ ಮಿಲ್ನೆ                         ಆರ್‌ ಆರ್                     ರೂಲ್ಡ್ ಔಟ್ ಸಾಧ್ಯತೆ

Shantha Kumari