ಇಂಗ್ಲೆಂಡ್ ಸರಣಿಗೆ ಹರ್ಷಿತ್ ರಾಣಾ ಎಂಟ್ರಿ – KKR ಶಿಷ್ಯನಿಗೆ ಗಂಭೀರ್ ಚಾನ್ಸ್
ಫೇವರಿಸಂ ಆಟಕ್ಕೆ ಅನ್ಶುಲ್ ಬಲಿ?

ಡಬ್ಲ್ಯೂಟಿಸಿ ಫೈನಲ್ ರೇಸ್ ಹಿನ್ನೆಲೆಯಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿ ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳಿಗೂ ತುಂಬಾನೇ ಇಂಪಾರ್ಟೆಂಟ್. ಸೋ ಗೆಲುವಿನ ಮೂಲಕವೇ ಶುಭಾರಂಭಕ್ಕೆ ಪ್ಲ್ಯಾನ್ ಮಾಡ್ತಿವೆ. ಶುಭ್ಮನ್ ಗಿಲ್ ಟೀಂ ಇಂಡಿಯಾ ಕ್ಯಾಪ್ಟನ್ ಆಗಿದ್ರೆ ರಿಷಭ್ ಪಂತ್ಗೆ ವೈಸ್ ಕ್ಯಾಪ್ಟನ್ಸಿ ನೀಡಲಾಗಿದೆ. ಹಾಗೇ ಅಧಿಕೃತ ಪಂದ್ಯಕ್ಕಾಗಿ ಒಟ್ಟಾರೆಯಾಗಿ 18 ಆಟಗಾರರು ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಆದ್ರೆ ತಂಡಕ್ಕೆ ಆಯ್ಕೆಯಾಗದೇ ಇದ್ರೂ ಹರ್ಷಿತ್ ರಾಣಾ ಟೀಂ ಇಂಡಿಯಾ ಕ್ಯಾಂಪ್ನಲ್ಲಿ ಕಾಣಿಸಿಕೊಂಡಿರೋದೇ ಈಗ ಚರ್ಚೆಗೆ ಗ್ರಾಸವಾಗಿದೆ. ಶಿಷ್ಯನಿಗಾಗಿ ಗಂಭೀರ್ ಪ್ರತಿಭಾವಂತರನ್ನೇ ಸೈಡ್ ಲೈನ್ ಮಾಡಿದ್ರಾ ಅನ್ನೋ ಪ್ರಶ್ನೆಗಳು ಮೂಡಿವೆ.
ಇದನ್ನೂ ಓದಿ : ಇಂಗ್ಲೆಂಡ್ ನಲ್ಲಿ ಸೂರ್ಯಕುಮಾರ್ ಯಾದವ್ ಶಸ್ತ್ರಚಿಕಿತ್ಸೆ – ಬಾಂಗ್ಲಾ ಸರಣಿಗೆ ಶ್ರೇಯಸ್ ಅಯ್ಯರ್ ಕ್ಯಾಪ್ಟನ್
ರೋಹಿತ್ ಶರ್ಮಾ ಹಾಗೇ ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿ ಪಡೆದಿದ್ದು ಮೇ 24 ರಂದು ಶುಭ್ಮನ್ ಗಿಲ್ ನೇತೃತ್ವದ 18 ಸದಸ್ಯರ ತಂಡವನ್ನು ಇಂಗ್ಲೆಂಡ್ ಸರಣಿಗೆ ಪ್ರಕಟಿಸಲಾಗಿತ್ತು. ಐಪಿಎಲ್ ನಲ್ಲಿ ಮಿಂಚಿದ್ದ ಸಾಯಿ ಸುದರ್ಶನ್ ಅವರು ಮೊದಲ ಬಾರಿಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕರುಣ್ ನಾಯರ್ ಮತ್ತು ಶಾರ್ದುಲ್ ಠಾಕೂರ್ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಸದ್ಯ ತಂಡದಲ್ಲಿ ಐವರು ವೇಗದ ಬೌಲರ್‌ಗಳಿದ್ದಾರೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್ ಮತ್ತು ಅರ್ಶದೀಪ್ ಸಿಂಗ್ ಹೆಸರು ಅನೌನ್ಸ್ ಆಗಿದೆ. ಹೀಗಿದ್ರೂ ದೈನಿಕ್ ಜಾಗರಣ್ ವರದಿಯ ಪ್ರಕಾರ, ಹರ್ಷಿತ್ ರಾಣಾ ಅವರನ್ನು ಸಹ ತಂಡಕ್ಕೆ ಸೇರಿಸಲಾಗಿದೆ. ಅಂದ್ರೆ ಅನಧಿಕೃತ ಟೆಸ್ಟ್ ಆಡಿದ್ದ ಮತ್ತು 18 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯದೇ ಇರುವ ಆಟಗಾರರು ಭಾರತಕ್ಕೆ ಮರಳುವಂತೆ ಬಿಸಿಸಿಐ ಸೂಚಿಸಿದೆ. ಆದರೆ ಹರ್ಷಿತ್ ರಾಣಾ ಅವರನ್ನು ಮಾತ್ರ ತಂಡದೊಂದಿಗೆ ಉಳಿಯುವಂತೆ ಸೂಚಿಸಿದೆ. ಬ್ಯಾಕ್ ಅಪ್ ಪ್ಲೇಯರ್ ಆಗಿ ತಂಡದಲ್ಲಿ ಉಳಿದುಕೊಳ್ಳಲಿದ್ದಾರೆ. ಜೂನ್ 20 ರಂದು ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಸರಣಿಯ ಉದ್ಘಾಟನಾ ಪಂದ್ಯಕ್ಕಾಗಿ ತಂಡದ ಜೊತೆಯಲ್ಲಿದ್ದಾರೆ.
ಹರ್ಷಿತ್ ರಾಣಾ ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 50.75 ಸರಾಸರಿಯಲ್ಲಿ ಕೇವಲ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ರು. ಪರ್ತ್‌ನಲ್ಲಿ 48 ರನ್ ಗೆ 3 ವಿಕೆಟ್ ಪಡೆದಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ದೆಹಲಿ ಮೂಲದ ರಾಣಾ 13 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 27.79 ಸರಾಸರಿಯಲ್ಲಿ 48 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಬ್ಯಾಟಿಂಗ್‌ನಲ್ಲಿ 32.80 ಸರಾಸರಿಯನ್ನು ಹೊಂದಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಎರಡು ಅರ್ಧ ಶತಕಗಳು ಸೇರಿವೆ. ತಂಡದಲ್ಲಿ ಇತರೆ ಆಟಗಾರರು ಗಾಯಗೊಂಡಾಗ ಬ್ಯಾಕಪ್ಗೆ ಇರ್ಲಿ ಅಂತಾ ಎಕ್ಸ್ಟ್ರಾ ಪ್ಲೇಯರ್ಸ್ನ ಸೆಲೆಕ್ಟ್ ಮಾಡೋದು ಹೊಸದೇನು ಅಲ್ಲ. ಆದ್ರೆ ಹರ್ಷಿತ್ ರಾಣಾನೇ ಯಾಕೆ ಬೇಕು ಅನ್ನೋದಷ್ಟೇ ಪ್ರಶ್ನೆ. ಯಾಕಂದ್ರೆ ಇಂಗ್ಲೆಂಡ್ ವಿರುದ್ಧ ಅನಧಿಕೃತ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅನ್ಶುಲ್ ಕಾಂಬೋಜ್ರನ್ನ ಕೈಬಿಟ್ಟು ರಾಣಾಗೆ ಯಾಕೆ ಚಾನ್ಸ್ ಕೊಟ್ರೂ ಅನ್ನೋ ಪ್ರಶ್ನೆಗಳು ಮೂಡಿವೆ.
ಕಾಂಬೋಜ್ ಪ್ರತಿಭೆ ಕಾಣಿಸಲ್ವಾ?
24 ವರ್ಷದ ಅನ್ಶುಲ್ ಕಾಂಬೋಜ್ ಭಾರತ-ಎ ಪರ ಅದ್ಭುತ ಬೌಲಿಂಗ್
ಎರಡು ಪಂದ್ಯಗಳಲ್ಲಿ ಐದು ವಿಕೆಟ್, ಒಂದು ಅರ್ಧಶತಕವೂ ಬಂದಿದೆ
ಅನ್ಶುಲ್ ಕಾಂಬೋಜ್ ಪ್ರದರ್ಶನದ ಮುಂದೆ ರಾಣಾ ಏನೇನೂ ಅಲ್ಲ
ಅನ್ಶುಲ್ ಎರಡು ಪಂದ್ಯಗಳಲ್ಲಿ ಐದು ವಿಕೆಟ್, ರಾಣಾ ಒಂದು ವಿಕೆಟ್
ರಣಜಿ ಟ್ರೋಫಿ ಸೀಸನಲ್ಲಿ 35 ವಿಕೆಟ್‌ಗಳನ್ನು ಬೇಟೆಯಾಡಿದ್ರು
ಇನ್ನಿಂಗ್ಸ್ ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದ ಮೂರನೇ ಬೌಲರ್
ಕಾಂಬೋಜ್ 9 ಮೇಡನ್ ಸಹಿತ ಕೇವಲ 49 ರನ್ ನೀಡಿ 10 ವಿಕೆಟ್

ನೋಡಿರಿ

