ಬುಮ್ರಾ ಬದಲಿಗೆ ಹರ್ಷಿತ್ ರಾಣಾ? – ಶಿಷ್ಯನ ಮೇಲೆ ಗಂಭೀರ್ ಹುಚ್ಚು ಪ್ರೀತಿ?
ಕನ್ನಡಿಗ ಕೌಶಿಕ್ ಕಿಚ್ಚು ಕಾಣೋದಿಲ್ವಾ?
ಫೆಬ್ರವರಿ 19ರಿಂದ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದ್ದು, ಭಾರತದ ಪಂದ್ಯಗಳೆಲ್ಲಾ ದುಬೈನಲ್ಲಿ ನಡೆಯಲಿವೆ. ಫೆಬ್ರವರಿ 20ರಂದು ಭಾರತ ಬಾಂಗ್ಲಾದೇಶದ ವಿರುದ್ಧ ತನ್ನ ಮೊದಲ ಪಂದ್ಯವನ್ನ ಆಡುವ ಮೂಲಕ ಟೂರ್ನಿಗೆ ಕಾಲಿಡಲಿದೆ. ಹಾಗೇ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಫೆಬ್ರವರಿ 23 ರಂದು ನಡೆಯಲಿದೆ. 2017ರಲ್ಲಿ ಕೊನೆಯದಾಗಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಫೈನಲ್ನಲ್ಲಿ ಸೋಲು ಕಂಡಿತ್ತು. ಪಾಕಿಸ್ತಾನ ಚಾಂಪಿಯನ್ ಆಗಿತ್ತು. ಆದ್ರೆ ಈ ಬಾರಿ ಟ್ರೋಫಿಯನ್ನ ಗೆಲ್ಲಲೇಬೇಕು ಎಂಬ ಹಠಕ್ಕೆ ಬಿದ್ದಿದೆ. ಇದಕ್ಕಾಗಿ ತಂಡವನ್ನೂ ಕಟ್ಟಿಯಾಗಿದೆ. ಬಟ್ ಕ್ಲೈಮ್ಯಾಕ್ಸ್ನಲ್ಲಿ ಟೀಮ್ನಲ್ಲಿ ಕೆಲ ಚೇಂಜಸ್ ಆಗೋದು ಕನ್ಫರ್ಮ್ ಆಗಿದೆ.
ಇದನ್ನೂ ಓದಿ : ಅಭಿಷೇಕ್ ಶರ್ಮಾ ಯುಗಾರಂಭ – ಯುವಿ ಶಿಷ್ಯ ಸಿಡಿಲಮರಿ ಆಗಿದ್ದೇಗೆ?
ಆಸ್ಟ್ರೇಲಿಯಾ ಸರಣಿಯಲ್ಲಿ ಸತತ ಬೌಲಿಂಗ್ನಿಂದ ಬೆನ್ನುನೋವಿಗೆ ತುತ್ತಾಗಿದ್ದ ಜಸ್ಪ್ರೀತ್ ಬುಮ್ರಾ ಕಂಪ್ಲೀಟ್ ಆಗಿ ಇನ್ನೂ ಕ್ಯೂರ್ ಆಗಿಲ್ಲ. ಇದೀಗ ಬೆಂಗಳೂರಿಗೆ ಆಗಮಿಸಿದ್ದು, ಇಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಯಲ್ಲಿನ ಬಿಸಿಸಿಐನ ಫಿಸಿಯೋ, ವೈದ್ಯರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಅಗತ್ಯ ಚಿಕಿತ್ಸೆ ಬಗ್ಗೆ ಬಿಸಿಸಿಐ ವೈದ್ಯಕೀಯ ತಂಡ ನಿರ್ಧರಿಸಲಿದ್ದು, ತಜ್ಞ ವೈದ್ಯರ ಸಲಹೆ ಪಡೆಯಲು ನ್ಯೂಜಿಲೆಂಡ್‌ಗೂ ಪ್ರಯಾಣಿಸೋ ಸಾಧ್ಯತೆ ಇದೆ. ಕಳೆದ ಬಾರಿ ಬುಮ್ರಾ ನ್ಯೂಜಿಲೆಂಡ್‌ನಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಲ್ದೇ ಇದೇ ತಿಂಗಳ 19ರಿಂದ ಚಾಂಪಿಯನ್ಸ್ ಟ್ರೋಫಿ ಆರಂಭಗೊಳ್ಳಲಿದ್ದು, ಆ ವೇಳೆಗೆ ಬುಮ್ರಾ ಫಿಟ್ ಆಗಲಿದ್ದಾರೆಯೇ ಎನ್ನುವ ಪ್ರಶ್ನೆ ಎದ್ದಿದೆ. ಒಂದು ವೇಳೆ ಬುಮ್ರಾ ಚಾಂಪಿಯನ್ಸ್ ಟ್ರೋಫಿ ಟೂರ್ನಿ ವೇಳೆಗೆ ಕಂಪ್ಲೀಟ್ ಆಗಿ ಫಿಟ್ ಆಗದಿದ್ರೆ ಮೊಹಮ್ಮದ್ ಸಿರಾಜ್ ಇಲ್ಲವೇ ಹರ್ಷಿತ್ ರಾಣಾ ಭಾರತ ತಂಡವನ್ನು ಸೇರಿಕೊಳ್ಳಬಹುದು.
ಆಸ್ಟ್ರೇಲಿಯಾ ಸರಣಿಯಲ್ಲಿ 152 ಓವರ್ಗಳನ್ನ ಬೌಲ್ ಮಾಡಿದ್ದ ಜಸ್ಪ್ರೀತ್ ಬುಮ್ರಾ ಬರೋಬ್ಬರಿ 32 ವಿಕೆಟ್ ಗಳನ್ನ ಬೇಟೆಯಾಡಿದ್ರು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಪಡ್ಕೊಂಡಿದ್ರು. ಇಂಥದ್ದೇ ಪರ್ಫಾಮೆನ್ಸ್ ಚಾಂಪಿಯನ್ಸ್ ಟ್ರೋಫಿಯಲ್ಲೂ ಬರುತ್ತೆ. ಭಾರತ ಬೌಲಿಂಗ್ನಲ್ಲಂತೂ ಫುಲ್ ಸ್ಟ್ರಾಂಗ್ ಅಂತಾ ಬಿಸಿಸಿಐ ಲೆಕ್ಕಾಚಾರವಾಗಿತ್ತು. ಆದ್ರೆ ಬುಮ್ರಾ ಟೂರ್ನಿ ಆಡೋದೇ ಡೌಟಿದ್ದು ಅವ್ರ ಸ್ಥಾನಕ್ಕೆ ಸಮರ್ಥ ಆಟಗಾರನನ್ನೇ ಸೆಲೆಕ್ಟ್ ಮಾಡಬೇಕಿದೆ. ಆರಂಭದಲ್ಲಿ ಮೊಹಮ್ಮದ್ ಸಿರಾಜ್ಗೆ ಚಾನ್ಸ್ ಸಿಗ್ಬೋದು ಅನ್ನೋದು ಎಲ್ರ ಲೆಕ್ಕಾಚಾರ ಆಗಿತ್ತು. ಬಟ್ ಈಗ ಹರ್ಷಿತ್ ರಾಣಾ ಹೆಸರು ದಿಢೀರ್ ಮುನ್ನಲೆಗೆ ಬಂದಿದೆ.
ಬುಮ್ರಾ ಬದಲಿಗೆ ಹರ್ಷಿತ್ ರಾಣಾ ಹೆಸರು ಮುನ್ನಲೆಗೆ ಬರೋಕೆ ಮುಖ್ಯ ಕಾರಣವೇ ಗೌತಮ್ ಗಂಭೀರ್. ಬಿಸಿಸಿಐ ಆಯ್ಕೆ ಸಮಿತಿ ಸಿರಾಜ್ ಮೇಲೆ ಇಂಟ್ರೆಸ್ಟ್ ತೋರಿಸ್ತಿದ್ರೆ ಗಂಭೀರ್ ಮಾತ್ರ ಹರ್ಷಿತ್ ರಾಣಾ ಮೇಲೆ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ. ಯಾಕಂದ್ರೆ ರಾಣಾ ಗಂಭೀರ್ ಅವ್ರ ಪಟ್ಟಾ ಶಿಷ್ಯ. 2024ರ ಐಪಿಎಲ್ನಲ್ಲಿ ಗಂಭೀರ್ ಕೆಕೆಆರ್ ನ ಮೆಂಟರ್ ಆಗಿದ್ದಾಗ ರಾಣಾ ಅದೇ ಟೀಮ್ನಲ್ಲಿ ಆಡಿದ್ರು. ಈ ವೇಳೆ ಇಬ್ಬರ ನಡುವೆ ಒಂದೊಳ್ಳೆ ಬಾಂಡಿಂಗ್ ಕ್ರಿಯೇಟ್ ಆಗಿತ್ತು. ಆ ನಂತ್ರ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ್ಮೇಲೆ ರಾಣಾಗೆ ಭಾರತ ತಂಡದಲ್ಲಿ ಚಾನ್ಸ್ ನೀಡಲಾಗಿತ್ತು. ಆಸ್ಟ್ರೇಲಿಯಾ ಸರಣಿ ವೇಳೆ 2 ಪಂದ್ಯಗಳಲ್ಲಿ ರಾಣಾ ಮೈದಾನಕ್ಕೆ ಇಳಿದಿದ್ರು ಇತ್ತೀಚೆಗಷ್ಟೇ ಜನವರಿ 31ರಂದು ಪುಣೆಯಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಶಿವಂ ದುಬೆ ಗಾಯಗೊಂಡು ಕಂಕಶನ್ ಸಬ್ಸ್ಟಿಟ್ಯೂಟ್ ಆಗಿ ಕಣಕ್ಕಿಳಿದಿದ್ದ ರಾಣಾ 3 ವಿಕೆಟ್ ಪಡೆದಿದ್ರು. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯಲ್ಲೂ ರಾಣಾಗೆ ಒಂದು ಚಾನ್ಸ್ ಕೊಡೋಣ ಅನ್ನೋದು ಗಂಭೀರ್ ವಾದ ಎನ್ನಲಾಗಿದೆ.
ಅಷ್ಟಕ್ಕೂ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಹರ್ಷಿತ್ ರಾಣಾಗಿಂತ ನೂರು ಪಟ್ಟು ಬೆಟರ್ ಪರ್ಫಾಮೆನ್ಸ್ ಕೊಡ್ತಿರೋ ಪ್ಲೇಯರ್ಸ್ ಇದ್ದಾರೆ. ಅದ್ರಲ್ಲೂ ನಮ್ಮ ಕನ್ನಡಿಗ ವಾಸುಕಿ ಕೌಶಿಕ್ ಈ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಅವ್ರ ಪರ್ಫಾಮೆನ್ಸ್ ನೆಕ್ಸ್ಟ್ ಲೆವೆಲ್ನಲ್ಲಿತ್ತು. 5 ವರ್ಷಗಳ ನಂತರ ಕರ್ನಾಟಕ ತಂಡ ವಿಜಯ್ ಹಜಾರೆ ಗೆಲ್ಲೋಕೆ ಮೇನ್ ಕಾರಣ ಆಗಿದ್ದೇ ಈ ವಾಸುಕಿ ಕೌಶಿಕ್. 10 ಪಂದ್ಯಗಳನ್ನ ಆಡಿದ್ದ ಕೌಶಿಕ್ 584 ಎಸೆತಗನ್ನ ಎದುರಿಸಿ 440 ರನ್ಗಳನ್ನ ಸಿಡಿಸಿದ್ರು. ಹಾಗೇ 18 ವಿಕೆಟ್ಗಳನ್ನೂ ಬೇಟೆಯಾಡಿದ್ರು. 47 ರನ್ಗೆ 3 ವಿಕೆಟ್ ಪಡೆದಿದ್ದು ಅವ್ರ ಬೆಸ್ಟ್ ಪರ್ಪಾಮೆನ್ಸ್ ಆಗಿತ್ತು. ಕೌಶಿಕ್’ನಂತ ಒಬ್ಬ ಬೌಲರ್ ತಂಡದಲ್ಲಿದ್ದರೆ ನೂರಾನೆ ಬಲ ಎನ್ನುವಂತೆ ಪರ್ಫಾಮ್ ಮಾಡಿದ್ರು. ಬಹುಶಃ ಕೌಶಿಕ್ ಎಂಬ ಅಸ್ತ್ರ ಮಯಾಂಕ್ ಅಗರ್ವಾಲ್ ಬತ್ತಳಿಕೆಯಲ್ಲಿ ಇಲ್ಲದೇ ಹೋಗಿದ್ದರೆ ವಿಜಯ್ ಹಜಾರೆ ಟ್ರೋಫಿ ಗೆಲ್ಲೋದು ನಿಜಕ್ಕೂ ಸಾಧ್ಯ ಆಗ್ತಿರಲಿಲ್ಲ ಅನ್ಸುತ್ತೆ. ಇದೇ ಕಾರಣಕ್ಕೆ ಕೆಲ ಕ್ರಿಕೆಟ್ ವಿಶ್ಲೇಷಕರು ವಾಸುಕಿ ಕೌಶಿಕ್ರನ್ನ ಕರ್ನಾಟಕದ ಮೆಗ್ರಾತ್ ಹೋಲಿಕೆ ಮಾಡಿದ್ದರು. ನಿಜ ಹೇಳ್ಬೇಕಂದ್ರೆ ಹರ್ಷಿತ್ ರಾಣಾಗೆ ಟೀಂ ಇಂಡಿಯಾದಲ್ಲಿ ಚಾನ್ಸ್ ಸಿಕ್ಕಿದ್ದೇ ಗೌತಮ್ ಗಂಭೀರ್ ಕೃಪಾ ಕಟಾಕ್ಷದಿಂದ. ರಾಣಾನಂತಹ ಹತ್ತು ಬೌಲರ್ಗಳಿಗೆ ಕೌಶಿಕ್ ಒಬ್ಬನೇ ಸರಿಸಮ ಆಗಬಲ್ಲರು.