ರಾಣಾಗೆ BCCI ರೆಡ್ ಕಾರ್ಪೆಟ್ – 3ನೇ ಪಂದ್ಯಕ್ಕೆ ಗಂಭೀರ್ ದತ್ತುಪುತ್ರ
AFG ಕ್ಲೀನ್ ಸ್ವೀಪ್ ಗೆ ಪ್ಲೇಯಿಂಗ್ 11 ರೆಡಿ

ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೀತಾ ಇದೆ. ಇನ್ನೂ ಒಂದು ಪಂದ್ಯ ಬಾಕಿ ಇದ್ದಂತೆಯೇ ಭಾರತ ಈ ಸರಣಿಯನ್ನ ಗೆದ್ದಾಗಿದೆ. ಜೂನ್ 20 ಅಂದ್ರೆ ಶನಿವಾರ ಕೊನೇ ಮ್ಯಾಚ್ ಇದ್ದು ಭಾರತ ಈ ಪಂದ್ಯವನ್ನೂ ಗೆದ್ದು ಅಫ್ಘನ್ನರನ್ನ ಕ್ಲೀನ್ ಸ್ವೀಪ್ ಮಾಡೋ ಟಾರ್ಗೆಟ್ನಲ್ಲಿದೆ. ಆದ್ರೆ ಈ ಪಂದ್ಯಕ್ಕೂ ಮುನ್ನ ತಂಡದಲ್ಲಿ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಗೌತಮ್ ಗಂಭೀರ್ ಶಿಷ್ಯನಿಗೆ ಮತ್ತೊಮ್ಮೆ ರೆಡ್ ಕಾರ್ಪೆಟ್ ಹಾಕಲಾಗಿದೆ.
ಇದನ್ನೂ ಓದಿ : ಒಂದೇ ದಿನ ಭಾರತ HAT-TRICK – ಬೌಲಿಂಗ್ ALL-OUT ಅಸ್ತ್ರ ಸೂಪರ್
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರನೇ ಏಕದಿನ ಪಂದ್ಯ ಶನಿವಾರ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿದೆ. ಈ ಮ್ಯಾಚ್ನಲ್ಲಿ ಗೆದ್ದು ಭಾರತ ಸರಣಿಯಲ್ಲಿ ವೈಟ್ ವಾಶ್ ಮಾಡೋ ಟಾರ್ಗೆಟ್ನಲ್ಲಿದೆ. ಅತ್ತ ಅಫ್ಘಾನಿಸ್ತಾನ ಅಟ್ಲೀಸ್ಟ್ ಕೊನೇ ಮ್ಯಾಚಲ್ಲಾದ್ರೂ ಗೆದ್ದು ಮರ್ಯಾದೆ ಉಳಿಸಿಕೊಳ್ಳೋಣ ಅಂತಾ ನೋಡ್ತಿದ್ದಾರೆ. ಈ ಪಂದ್ಯಕ್ಕೂ ಮುನ್ನ ಬಿಸಿಸಿಐ ತಂಡದಲ್ಲಿ ಮೇಜರ್ ಸರ್ಜರಿ ಮಾಡಿದೆ.
ಸರಣಿಯ ಕೊನೇ ಪಂದ್ಯಕ್ಕೆ ಹರ್ಷಿತ್ ರಾಣಾ ತಂಡಕ್ಕೆ ಸೇರ್ಪಡೆ!
ಚೆನ್ನೈನಲ್ಲಿ ನಡೆಯಲಿರೋ ಸರಣಿಯ ಕೊನೇ ಪಂದ್ಯಕ್ಕಾಗಿ ಹರ್ಷಿತ್ ರಾಣಾಗೆ ದಿಢೀರ್ ಅಂತಾ ಬುಲಾವ್ ಕೊಟ್ಟಿದ್ದಾರೆ. ಈ ಬಗ್ಗೆ ಬಿಸಿಸಿಐ ಕನ್ಫರ್ಮ್ ಮಾಡಿದೆ. ಇಂಜುರಿ ಕಾರಣದಿಂದಾಗಿ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿದ್ದ ರಾಣಾ ಈಗ ಫಿಟ್ ಆಗಿದ್ದು, ಟೀಂ ಇಂಡಿಯಾಗೆ ಕಂ ಬ್ಯಾಕ್ ಮಾಡಲು ರೆಡಿಯಾಗಿದ್ದಾರೆ. ರಾಣಾ ರಿಕವರ್ ಆಗೋದನ್ನೇ ಕಾಯ್ತಾ ಇದ್ರೇನೋ ಅನ್ನೋ ರೇಂಜ್ಗೆ ಬಿಸಿಸಿಐ ಅಫ್ಘಾನ್ ವಿರುದ್ಧದ ಮೂರನೇ ಪಂದ್ಯಕ್ಕೆ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಫೆಬ್ರವರಿ 4 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಾಕ್ಟೀಸ್ ಮ್ಯಾಚಲ್ಲಿ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದ ರಾಣಾ ಆ ನಂತ್ರ ಮೈದಾನದಿಂದ ದೂರವೇ ಇದ್ರು. ಟಿ-20 ವಿಶ್ವಕಪ್, ಐಪಿಎಲ್ನಲ್ಲೂ ಆಡಿರಲಿಲ್ಲ. ರಾಣಾ ಜಾಗದಲ್ಲಿ ಮೊಹಮ್ಮದ್ ಸಿರಾಜ್ ಸೆಲೆಕ್ಟ್ ಆಗಿದ್ರು. ಹೀಗೆ ಕಳೆದ ನಾಲ್ಕು ತಿಂಗಳಿಂದ ಮೈದಾನಕ್ಕಿಳಿಯದ ರಾಣಾಗೆ ಸೆಂಟ್ರ್ ಆಫ್ ಎಕ್ಸ್ಲೆನ್ಸ್ನಲ್ಲಿ ಪರ್ಮಿಷನ್ ಸಿಕ್ಕ ಬೆನ್ನಲ್ಲೇ ತಂಡಕ್ಕೆ ಜಾಯ್ನ್ ಮಾಡಿಕೊಂಡಿದ್ದಾರೆ. ಌಂಡ್ ಒನ್ ಮೋರ್ ಥಿಂಗ್ ರಾಣಾಗೆ ಇನ್ನೂ ರಿಕವರಿ ಕ್ಲಿಯರೆನ್ಸ್ ಸಿಗೋ ಮೊದ್ಲೇ ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಟಿ20ಐ ಸರಣಿ ಹಾಗೂ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟಕ್ಕೂ ಸೆಲೆಕ್ಟ್ ಮಾಡಿದ್ರು ಅನ್ನೋದೇ ಇಂಟ್ರೆಸ್ಟಿಂಗ್ ಆಗಿದೆ. ಇದು ಸಾಲ್ದು ಅಂತಾ ಅದೇನ್ ಅರ್ಜೆಂಟ್ ಇತ್ತೋ ಅನ್ನೋ ಥರ ದಿಢೀರ್ ಅಂತಾ ಅಫ್ಘಾನ್ ವಿರುದ್ಧದ ಕೊನೆಯ ಪಂದ್ಯಕ್ಕೂ ಸೆಲೆಕ್ಟ್ ಮಾಡಿದ್ದಾರೆ. ಗೌತಮ್ ಗಂಭೀರ್ ದತ್ತುಪುತ್ರ ಹರ್ಷಿತ್ ರಾಣಾಗೆ ರೆಡ್ ಕಾರ್ಪೆಟ್ ಹಾಕಿರೋ ಬಿಸಿಸಿಐ ಪ್ಲೇಯಿಂಗ್ 11ನಲ್ಲೂ ಆಡಿಸೋದು ಪಕ್ಕಾ ಆದಂತಿದೆ. ಇದೊಂಥರಾ ರಾಣಾಗೆ ವಾರ್ಮ್ ಅಪ್ ಮ್ಯಾಚ್ ಅನ್ನೋ ಥರ ಸ್ಟೇಜ್ ಸೆಟ್ ಮಾಡ್ತಿದ್ದಾರೆ. ಆಲ್ರೆಡಿ ಭಾರತ ಸರಣಿ ಗೆದ್ದಿರೋದ್ರಿಂದ ಇಂಥಾದ್ದೊಂದು ರಿಸ್ಕ್ ತಗೊಳ್ಳೋಕೆ ಬಿಸಿಸಿಐ ಮ್ಯಾನೇಜ್ಮೆಂಟ್ ಮುಂದಾಗಿದೆ. ಆಲ್ರೆಡಿ ಈ ಸರಣಿಯಲ್ಲೇ ಯಂಗ್ ಸ್ಟಾರ್ ಗುರ್ನೂರ್ ಬ್ರಾರ್ ಎರಡು ಪಂದ್ಯಗಳಲ್ಲಿ ಆರು ವಿಕೆಟ್‌ಗಳನ್ನು ಪಡೆದು ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಪ್ರಿನ್ಸ್ ಯಾದವ್ ಎರಡನೇ ಏಕದಿನ ಪಂದ್ಯದಲ್ಲಿ ಎರಡು ವಿಕೆಟ್‌ಗಳನ್ನು ಬೇಟೆಯಾಡಿದ್ರು. ಪ್ರಸಿದ್ಧ್ ಕೃಷ್ಣರನ್ನೇ ಸೆಕೆಂಡ್ ಮ್ಯಾಚ್ಗೆ ಕೈಬಿಟ್ಟಿದ್ರು. ಅಂಥಾದ್ರಲ್ಲಿ ರಾಣಾಗೆ ಬುಲಾವ್ ಕೊಟ್ಟಿರೋದೇ ಬಾರೀ ಚರ್ಚೆಯಾಗ್ತಿದೆ.
ಸಂಭಾವ್ಯ ಪ್ಲೇಯಿಂಗ್ 11
ಶುಭ್ ಮನ್ ಗಿಲ್
ರೋಹಿತ್ ಶರ್ಮಾ
ಇಶಾನ್ ಕಿಶನ್
ಶ್ರೇಯಸ್ ಅಯ್ಯರ್
ಕೆಎಲ್ ರಾಹುಲ್
ವಾಷಿಂಗ್ಟನ್ ಸುಂದರ್
ನಿತೀಶ್ ರೆಡ್ಡಿ
ಗುರ್ನೂರ್ ಬ್ರಾರ್
ಕುಲ್ದೀಪ್ ಯಾದವ್
ಪ್ರಿನ್ಸ್ ಯಾದವ್
ಹರ್ಷಿತ್ ರಾಣಾ

ನೋಡಿರಿ

