ಹೆಡ್‌ಕೋಚ್ ಕೋಟಾದಲ್ಲಿ ರಾಣಾಗೆ ಚಾನ್ಸ್! – RO-KO, ಶಮಿಗಿರೋ ರೂಲ್ಸ್‌ ಶಿಷ್ಯನಿಗಿಲ್ಲ!

ಹೆಡ್‌ಕೋಚ್ ಕೋಟಾದಲ್ಲಿ ರಾಣಾಗೆ ಚಾನ್ಸ್! – RO-KO, ಶಮಿಗಿರೋ ರೂಲ್ಸ್‌ ಶಿಷ್ಯನಿಗಿಲ್ಲ!

ಹರ್ಷಿತ್ ರಾಣಾ ಆಯ್ಕೆ ಬಗ್ಗೆ ಕ್ರಿಕೆಟ್ ಅಂಗಳದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗ್ತಿದೆ. ಟೀಂ ಇಂಡಿಯಾಕ್ಕೆ ರಾಣಾ ಕಂಬ್ಯಾಕ್ ಮಾಡುವುದ್ದಕ್ಕೆ ಕಾರಣ ಗಂಭೀರ್‌.. ಹೆಡ್‌ಕೋಚ್ ಕೋಟಾದಲ್ಲಿ ಇವರು ಚಾನ್ಸ್ ಪಡೆದಿದ್ದಾರೆ ಅನ್ನೋ ಚರ್ಚೆ ಆಗ್ತಿದೆ.

ಟೀಂ ಇಂಡಿಯಾ ಟಿ20I  ಹೊಸ ತಂಡ ಆಯ್ಕೆ ಆಗಿರುವುದು ಹಳೇ ವಿಷ್ಯ..  ಹೊಸ ಟೀಂ ಅನೌನ್ಸ್ ಆಗಿ 4-5 ದಿನ ಕಳೆದ್ರು ಆಗ್ತಿರೋ ವಿಷ್ಯ ಒಂದೇ ಎಲ್ಲಾ ಓಕೆ, ಹರ್ಷಿತ್ ರಾಣಾ ಯಾಕೆ ಅನ್ನೋದು.. ಹೆಡ್‌ಕೋಚ್ ಕೋಟಾದಲ್ಲಿ ಶಿಷ್ಯನಿಗೆ ಚಾನ್ಸ್ ಸಿಕ್ಕಿದೆ ಅನ್ನೋ ಹಾಗೇ ಕ್ರಿಕೆಟ್ ಫ್ಯಾನ್ಸ್ ಮಾತನಾಡುತ್ತಿದ್ದಾರೆ. ಯಾಕಂದ್ರೆ ಕ್ಯಾಪ್ಟನಲ್ ಆಗಿದ್ದ  ಸೂರ್ಯಕುಮಾರ್ ಯಾದವ್​ ಜೊತೆಗೆ ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಕುಲ್ದೀಪ್ ಯಾದವ್​ರನ್ನು ತಂಡದಿಂದಲೇ ಹೊರಗಿಡಲಾಗಿದೆ. ಇವರ ಜಾಗಕ್ಕೆ ಐಪಿಎಲ್​​​ನಲ್ಲಿ ಉತ್ತಮ ಪ್ರದರ್ಶನ ತೋರಿದ ಕೆಲವು ಆಟಗಾರರಿಗೆ ಅವಕಾಶ ನೀಡಲಾಗಿದೆ. ವೈಭವ್ ಸೂರ್ಯವಂಶಿಗೆ ಚಾನ್ಸ್ ಕೊಟ್ಟಿದ್ದು ನಾವು ಒಪ್ಪಲೇ ಬೇಕು. ಆದ್ರೆ ವಿಶ್ವಕಪ್​ ತಂಡದಲ್ಲಿರುವವರನ್ನು ಹೊರಗಿಟ್ಟು, ಜನವರಿಯಿಂದ ಮೈದಾನದಿಂದ ಹೊರಗಿದ್ದು ಒಂದೇ ಒಂದು ಪಂದ್ಯ ಆಡದ ಆಟಗಾರನಿಗೆ ಯಾಕೆ ಚಾನ್ಸ್ ಕೊಟ್ರಿ ಅನ್ನೋದು ಈಗ ಪ್ರಶ್ನೆ..  ಬೇರೆ ಪಂದ್ಯ ಬಿಡಿ ಇತ್ತೀಚೆಗೆ ಮುಗಿದ ಐಪಿಎಲ್ ಕೂಡ ಆಡಿರಲಿಲ್ಲ. ಆ ಆಟಗಾರ ಯಾರು ಅಂದ್ರೆ ಹರ್ಷಿತ್ ರಾಣಾ.. ಈ ರಾಣಾನನ್ನ ಯಾವ ಮಾನದಂಡದ ಮೇಲೆ ಆಯ್ಕೆ ಮಾಡಲಾಗಿದೆ? ಅನ್ನೋ ಪ್ರಶ್ನೆ ಈಗ ಹುಟ್ಟುಕೊಂಡಿದೆ. ಹರ್ಷಿತ್ ರಾಣಾ ಗೌತಮ್ ಗಂಭೀರ್ ಅವರ ನೆಚ್ಚಿನ ಆಟಗಾರ, ತನ್ನ ಶಿಷ್ಯ ಅನ್ನೋ ಕಾರಣಕ್ಕೆ ಭಾರತ ತಂಡದ ಟಿ20ಐ ತಂಡಕ್ಕೆ  ಆಗಿದ್ದಾರೆ ಅಂತ ಚಿಕ್ಕ ಮಕ್ಕಳನ್ನ ಕೇಳಿದ್ರು ಹೇಳ್ತಾರೆ.

ಗಂಭೀರ್ ಕೋಟಾದಲ್ಲಿ ಶಿಷ್ಯ ರಾಣಾಗೆ ಚಾನ್ಸ್‌

ಭಾರತ ಕ್ರಿಕೆಟ್ ತಂಡದ ಯುವ ವೇಗದ ಬೌಲರ್ ಹರ್ಷಿತ್ ರಾಣಾರನ್ನ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಶಿಷ್ಯ ಅಂತ ಕರೆಯಲಾಗುತ್ತೆ.. ಯಾಕಂದ್ರೆ ರಾಣಾ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದಾಗ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಆಡಿದ್ರು. ಗಂಭೀರ್ ಅವರು ರಾಣಾ ಅವರ ಪ್ರತಿಭೆಗೆ ಫಿದಾ ಆಗಿದ್ರು, ಇದೇ ಕಾರಣಕ್ಕೆ ಸಾಕಷ್ಟು ಚಾನ್ಸ್ ನೀಡಿದ್ದಾರೆ. ಈಗಲೂ ನೀಡುತ್ತಿದ್ದಾರೆ. ಕೇವಲ ಒಂದು ಮಾದರಿಗೆ ಮಾತ್ರವಲ್ಲ, ಟೆಸ್ಟ್, ಏಕದಿನ ಹಾಗೂ ಟಿ20 ಮೂರು ಸ್ವರೂಪಕ್ಕೂ ಅವಕಾಶ ನೀಡುತ್ತಲೇ ಇದ್ದಾರೆ. ಐಪಿಎಲ್ ಪ್ರದರ್ಶನದ ಕಾರಣದಿಂದ ಟೀಮ್ ಇಂಡಿಯಾಕ್ಕೆ ಹಲವು ಬಾರಿ ಆಯ್ಕೆಯಾಗಿದ್ದಾರೆ. ಆದ್ರೆ ರಜತ್​ ಪಾಟೀದಾರ್​​, ಭುವನೇಶ್ವರ್ ಕುಮಾರ್​​, ರಸಿಕ್ ದಾರ್ ರಂತಹ ಐಪಿಎಲ್​​​ನಲ್ಲಿ ಉತ್ತಮ ಪ್ರದರ್ಶನ ತೋರಿದವರನ್ನು ಕಡೆಗಣಿಸಲಾಗಿದೆ.

5 ತಿಂಗಳು ಕ್ರಿಕೆಟ್ ಆಡದ ರಾಣಾಗೆ ಯಾಕೆ ಚಾನ್ಸ್‌?

ಇನ್ನೊಂದು ವಿಷ್ಯ ಏನಪ್ಪ ಅಂದ್ರೆ ಹರ್ಷಿತ್ ರಾಣಾ ಕೊನೆಯ ಬಾರಿಗೆ 2026 ರ ಜನವರಿ 28 ರಂದು ವಿಶಾಖಪಟ್ಟಣದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಪರ ಟಿ 20 ಪಂದ್ಯ ಆಡಿದ್ದರು. ಈ ಪಂದ್ಯದ ವೇಳೆ ಹರ್ಷಿತ್ ರಾಣಾ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದರು. ಈ ಗಾಯದಿಂದಾಗಿ ಇವರು ಟೂರ್ನಿಯಿಂದ ಔಟ್ ಆದ್ರು. ಇದಾದ ನಂತರ ಇಲ್ಲಿ ತನಕ ಅಂದ್ರೆ ಜೂನ್ ವರೆಗೆ ಸುಮಾರು 5 ತಿಂಗಳುಗಳ ಕಾಲ ಒಂದೇ ಒಂದು ಪಂದ್ಯ ಆಡಿಲ್ಲ. ಈ ಸಲದ ಐಪಿಎಲ್‌ನಲ್ಲೂ ಆಡಿಲ್ಲ. ಹರ್ಷಿತ್ ರಾಣಾ ಚೇತರಿಕೆಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ. ಅವರು ಗಾಯದಿಂದ ಚೇತರಿಸಿಕೊಂಡಿದ್ದಾರೆಯೇ ಅಥವಾ ಇಲ್ಲವೇ? ಫಿಟ್​​ನೆಸ್​ ಟೆಸ್ಟ್ ಕ್ಲಿಯರ್ ಮಾಡಿದ್ದಾರಾ ಅನ್ನೋ ಮಾಹಿತಿ ಕೂಡ ಇಲ್ಲ. ಆದ್ರೂ ಇವರಿಗೆ ಚಾನ್ಸ್ ಸಿಕ್ಕಿದೆ.. ಟೀಂ ಇಂಡಿಯಾದ ಹೆಚ್‌ಕೋಚ್‌ ಗಂಭೀರ್ ಇವರನ್ನು ಹೇಗೆ ಆಯ್ಕೆ ಮಾಡಿದ್ರು? ಯಾವ ಮಾನದಂಡದಲ್ಲಿ ಆಯ್ಕೆ ಮಾಡಿದ್ರು ಅನ್ನೋದು ಫ್ಯಾನ್ಸ್ ಪ್ರಶ್ನೆ.

 ಶಮಿಗೆ ಇರೋ ರೂಲ್ಸ್ ಹರ್ಷಿತ್‌ಗೆ ಯಾಕಿಲ್ಲ?

ನೋಡಿ ಇಲ್ಲೇ ಗೊತ್ತಾಗುತ್ತೆ ಗಂಭೀರ್ ಅವರು ತನ್ನ ಶಿಷ್ಯನಿಗೆ ಹೇಗೆಲ್ಲಾ ಸಪೋರ್ಟ್ ಮಾಡ್ತಾರೆ ಅನ್ನೋದು.. ಮೊಹಮ್ಮದ್ ಶಮಿ ಸೇರಿದಂತೆ ಇತರ ಆಟಗಾರರ ಫಿಟ್ನೆಸ್ ಬಗ್ಗೆ ಪ್ರಶ್ನಿಸುವ ಗಂಭೀರ್‌, ಹರ್ಷಿತ್ ರಾಣಾ ಅವರನ್ನು ಹೇಗೆ ಆಯ್ಕೆ ಮಾಡುವುದ್ದಕ್ಕೆ ಯಾವ ಫಿಟ್ನೆಸ್ ಕೇಳಿಲ್ಲ, ಅದ್ರು ಬಗ್ಗೆ ಮಾತನಾಡಿಲ್ಲ. ಮೊಣಕಾಲು ಶಸ್ತ್ರಚಿಕಿತ್ಸೆಯ ನಂತರ ರಾಣಾಯಾವುದೇ ದೇಶೀಯ ಪಂದ್ಯಗಳನ್ನು ಆಡಿಲ್ಲ.. ಆದ್ರೂ ಈಗ ಆಯ್ಕೆ ಆಗಿದ್ದಾರೆ.. 5 ತಿಂಗಳಲ್ಲಿ ಒಂದೇ ಒಂದು ಪಂದ್ಯ ಆಡಿಲ್ಲ..  ವೀಕ್ಷಕರೇ ನಿಮ್ಗೆ ನೆನೆಪಿರಬಹುದು.. ವಿರಾಟ್ ಕೊಹ್ಲಿ ಆಗಿರಲಿ ಅಥವಾ ರೋಹಿತ್ ಶರ್ಮಾ ಆಗಿರಲಿ, ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪ್ರತಿಯೊಬ್ಬ ಆಟಗಾರನೂ ದೇಶೀಯ ಕ್ರಿಕೆಟ್ ಆಡಬೇಕು ಎಂದು BCCI ಹಿಂದೆ ಹೇಳಿತ್ತು. ಹಾರ್ದಿಕ್ ಪಾಂಡ್ಯ ಗಾಯಗೊಂಡಾಗ, ಆಯ್ಕೆಗಾಗಿ ಅವರ ಫಿಟ್ನೆಸ್ ಅನ್ನು ಸಾಬೀತುಪಡಿಸಲು ಅವರನ್ನು ಕೇಳಲಾಯಿತು. ಶಮಿ ಪ್ರಕರಣದಲ್ಲಿಯೂ ಗಾಯದ ನಂತರ ತಮ್ಮನ್ನು ತಾವು ಸಾಬೀತುಪಡಿಸಲು ಕೇಳಲಾಗಿತ್ತು. ಆದ್ರೆ  ಬೇರೆಯವರ ವಿಚಾರದಲ್ಲಿ ಇಷ್ಟೆಲ್ಲಾ ಕೇಳಿ ಆಯ್ಕೆ ಮಾಡುವಾಗ ರಾಣಾ ವಿಷಯದಲ್ಲಿ ಅದ್ಯಾವುದು ಯಾಕೆ ನಡೆದಿಲ್ಲ. ಇದ್ದನ್ನೆಲ್ಲಾ ಗಮನಿಸಿದ್ರೆ ಗೊತ್ತಾಗುವ ವಿಷ್ಯ ಏನಪ್ಪ ಅಂದ್ರೆ ರಾಣಾ ಸಿಕ್ಕಿರೋ ಚಾನ್ಸ್‌, ಹೆಡ್‌ಕೋಚ್ ಕೋಟಾದಲ್ಲಿ ಅನ್ನೋದು.. ನಮಸ್ಕಾರ..

Kishor KV

Leave a Reply

Your email address will not be published. Required fields are marked *