ಬಿಗ್‌ ಬಾಸ್‌ ಖ್ಯಾತಿಯ ಭುವನ್‌, ನಟಿ ಹರ್ಷಿಕಾ ಪೂಣಚ್ಚ ಮದುವೆ ಡೇಟ್ ಫಿಕ್ಸ್‌! ‌

ಬಿಗ್‌ ಬಾಸ್‌ ಖ್ಯಾತಿಯ ಭುವನ್‌, ನಟಿ ಹರ್ಷಿಕಾ ಪೂಣಚ್ಚ ಮದುವೆ ಡೇಟ್ ಫಿಕ್ಸ್‌! ‌

ನಟ ಹಾಗೂ ಬಿಗ್‌ ಬಾಸ್‌ ಖ್ಯಾತಿಯ ಭುವನ್‌ ಪೊನ್ನಣ್ಣ ಅವರು ಸ್ಯಾಂಡಲ್‌ ವುಡ್‌ ನಟಿ ಹರ್ಷಿಕಾ ಪೂಣಚ್ಚ ಜೊತೆ ದಾಂಪತ್ಯ ಜೀವನಕ್ಕೆ ಶೀಘ್ರವೇ ಕಾಲಿಡಲಿದ್ದಾರೆ.

ಇದನ್ನೂ ಓದಿ: ‘ಕಿಸ್’ ಮನೆಯಲ್ಲಿ ಮಾಡಿಕೊಳ್ಳಿ, ಊರಿಗೆಲ್ಲಾ ಯಾರಿಗೆ ತೋರಿಸ್ತೀರಾ? – ಹಾರ್ದಿಕ್ ಪಾಂಡ್ಯ, ನತಾಶಾ ಜೋಡಿಗೆ ಫುಲ್ ಕ್ಲಾಸ್

ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣಅವರು ಇದೇ ಆಗಸ್ಟ್‌ 24 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆಯ ಲಗ್ನಪತ್ರಿಕೆ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಈ ಜೋಡಿಯ ಮದುವೆ ಕೊಡಗಿನಲ್ಲಿ ನಡೆಯಲಿದ್ದು, ಕೊಡವರ ಸಂಪ್ರದಾಯದಂತೆ ನಡೆಯಲಿದೆ. ಮದುವೆಯಲ್ಲಿ ಕುಟುಂಬಸ್ಥರು ಹಾಗೂ ಸಿನಿಮಾ ತಾರೆಯರು ಪಾಲ್ಗೊಳ್ಳುವ ನೀರಿಕ್ಷೆ ಇದೆ.

ಆಗಸ್ಟ್ 24 ರಂದು ಅಮ್ಮತ್ತಿಯ ಕೊಡವ ಸಮಾಜದಲ್ಲಿ ನಡೆಯಲ್ಲಿರುವ ವಿವಾಹವಾಗಿದೆ. ಮದುವೆಯ ಆಮಂತ್ರಣ ಪತ್ರಿಕೆಯೂ ಸಿದ್ಧವಾಗಿದೆ. ಕೊಡಗಿನ ಇಗ್ಗುತ್ತಪ್ಪ ದೇವಾಲಯದಲ್ಲಿ ಲಗ್ನಪತ್ರಿಕೆ ಕಾರ್ಯ ಕೊಡಗಿನಲ್ಲಿ ಸರಳವಾಗಿ ನಡೆದಿದೆ. ಈ ಕಾರ್ಯದ ವೇಳೆ ಎರಡೂ ಕುಟುಂಬದ ಕೆಲವರು ಮಾತ್ರ ಭಾಗಿಯಾಗಿದ್ದರು.

suddiyaana