ಹರ್ಷಿಕಾ – ಭುವನ್ ಮುದ್ದು ಮಗಳಿಗೆ ನಾಮಕರಣ – ಕಂದಮ್ಮನಿಗೆ ಇದೇ ಹೆಸರು ಇಟ್ಟಿದ್ದೇಕೆ?

ಸ್ಯಾಂಡಲ್ವುಡ್ನ ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಇತ್ತೀಚೆಗಷ್ಟೇ ನಟಿ ಹರ್ಷಿಕಾ ಪೂಣಚ್ಚ ದಂಪತಿ ತಮ್ಮ ಚೊಚ್ಚಲ ಮಗುವನ್ನು ನಿವಾಸಕ್ಕೆ ಅದ್ಧೂರಿಯಾಗಿ ಬರಮಾಡಿಕೊಂಡಿದ್ದರು. ಇದೀಗ ಈ ಜೋಡಿ ತಮ್ಮ ಮಗುವಿನ ನಾಮಕರಣ ಮಾಡಿದ್ದಾರೆ.
ಇದನ್ನೂ ಓದಿ: SRH ವಿರುದ್ಧ ಗುಜರಾತ್ ಗೆ ಭರ್ಜರಿ ಗೆಲುವು – ಪ್ಲೇ ಆಫ್ನಿಂದ ಹೊರ ಬಿದ್ದ ಸನ್ರೈಸರ್ಸ್ ಹೈದ್ರಾಬಾದ್
ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ದಂಪತಿ ಮಗುವಿಗೆ ಶ್ರೀದೇವಿ ಪೊನ್ನಕ್ಕ ಎಂದು ಹೆಸರಿಟ್ಟಿದ್ದಾರೆ. ಮಗುವಿನ ಫೋಟೊ ಅನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಧುನಿಕ ಹೆಸರುಗಳನ್ನು ಇಡುವ ಟ್ರೆಂಡ್ ಹೆಚ್ಚಾಗಿರುವ ಸಮಯದಲ್ಲಿ ತಮ್ಮ ಪುತ್ರಿಗೆ ಶ್ರೀದೇವಿ ಪೊನ್ನಕ್ಕ ಎಂದು ದೇವರ ಹೆಸರನ್ನು ಈ ಜೋಡಿ ಇರಿಸಿದೆ. ಅಂದಹಾಗೆ ಪೊನ್ನಕ್ಕ ಎಂಬುದು ಸರ್ ನೇಮ್ ಅಲ್ಲ, ಬದಲಿಗೆ ಅದೂ ಸಹ ಹೆಸರೇ. ಮಗುವಿನ ಪೂರ್ಣ ಹೆಸರು ಶ್ರೀದೇವಿ ಪೊನ್ನಕ್ಕ.
ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರುಗಳು 2023ರ ಆಗಸ್ಟ್ ತಿಂಗಳಲ್ಲಿ ವಿವಾಹವಾದರು. ಇಬ್ಬರು ಬಹು ಸಮಯ ಪ್ರೀತಿಸಿ ಮನೆಯವರ ಒಪ್ಪಿಗೆ ಮೇರೆಗೆ ಕೊಡವ ಸಂಪ್ರದಾಯದಂತೆ ಕೊಡಗಿನಲ್ಲಿಯೇ ವಿವಾಹವಾದರು. ಈ ಇಬ್ಬರು ವಿವಾಹಕ್ಕೆ ಕನ್ನಡ ಚಿತ್ರರಂಗ ಹಾಗೂ ಟಿವಿ ಲೋಕದ ಹಲವು ಸೆಲೆಬ್ರಿಟಿಗಳು ಹಾಜರಾಗಿದ್ದರು.
2024 ರಲ್ಲಿ ನಟಿ ಹರ್ಷಿಕಾ ಪೂಣಚ್ಚ ತಾವು ತಾಯಿಯಾಗುತ್ತಿರುವ ವಿಷಯ ಘೋಷಿಸಿದರು. ಬಳಿಕ ಗರ್ಭಿಣಿ ಆಗಿದ್ದಾಗ ಕೊಡವ ಶೈಲಿಯಲ್ಲಿ ಫೋಟೊಶೂಟ್ ಸಹ ಮಾಡಿಸಿ ಗಮನ ಸೆಳೆದರು. ನಟಿಯ ಸೀಮಂತ ಕಾರ್ಯಕ್ರಮವನ್ನು ಸಹ ಅದ್ಧೂರಿಯಾಗಿ ಮಾಡಲಾಗಿತ್ತು. ಚಿತ್ರರಂಗದ ಹಲವು ಸೆಲೆಬ್ರಿಟಿಗಳು, ಹರ್ಷಿಕಾ, ಭುವನ್ ಅವರ ಗೆಳೆಯರು ಕುಟುಂಬದವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಬಳಿಕ 2024ರ ಸೆಪ್ಟೆಂಬರ್ ತಿಂಗಳಲ್ಲಿ ಈ ಜೋಡಿಗೆ ಮುದ್ದಾದ ಹೆಣ್ಣು ಮಗು ಜನಿಸಿತು.
ಮದುವೆ ಸೇರಿದಂತೆ ಎಲ್ಲ ಕಾರ್ಯಗಳನ್ನು ಸಂಪ್ರದಾಯಿಕ ಶೈಲಿಯಲ್ಲಿಯೇ ಮಾಡಿಕೊಂಡು ಬಂದ ಈ ಜೋಡಿ ಈಗ ಮಗುವಿಗೆ ಸಹ ಸಾಂಪ್ರದಾಯಿಕ ಹೆಸರನ್ನೇ ಇರಿಸಿದ್ದಾರೆ. ನಾಮಕರಣ ಕಾರ್ಯಕ್ರಮದಲ್ಲಿ ಎರಡೂ ಕುಟುಂಬದವರು, ಭುವನ್, ಹರ್ಷಿಕಾ ಅವರುಗಳ ಆಪ್ತ ಗೆಳೆಯರು ಭಾಗಿ ಆಗಿದ್ದರು. ನಾಮಕರಣದಂದು ಸಹ ಮಗುವಿಗೆ ಕೊಡವ ಶೈಲಿಯ ಉಡುಗೆಗಳನ್ನು ತೊಡಿಸಿದ್ದು ವಿಶೇಷ.