ಆಸ್ಟ್ರೇಲಿಯಾ ಪ್ರವಾಸದಲ್ಲಿ ಹಾಕಿ ತಂಡವನ್ನು ಮುನ್ನಡೆಸಲಿದ್ದಾರೆ  ಹರ್ಮನ್‌ಪ್ರೀತ್

ಆಸ್ಟ್ರೇಲಿಯಾ ಪ್ರವಾಸದಲ್ಲಿ ಹಾಕಿ ತಂಡವನ್ನು ಮುನ್ನಡೆಸಲಿದ್ದಾರೆ  ಹರ್ಮನ್‌ಪ್ರೀತ್

ನವದೆಹಲಿ: ನ. 26 ರಿಂದ ನಡೆಯಲಿರುವ ಸರಣಿಗೆ 23 ಮಂದಿಯ ಹಾಕಿ ತಂಡವನ್ನು ಮಂಗಳವಾರ ಪ್ರಕಟಿಸಿದೆ. ಅನುಭವಿ ಡ್ರ್ಯಾಗ್‌ಫ್ಲಿಕ್ಕರ್ ಹರ್ಮನ್‌ಪ್ರೀತ್ ಸಿಂಗ್ ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿರುವ  23 ಸದಸ್ಯರ ಭಾರತೀಯ ಪುರುಷರ ಹಾಕಿ ತಂಡಕ್ಕೆ ನಾಯಕನಾಗಿ ಹಾಗೂ ಉಪನಾಯಕರಾಗಿ ಅಮಿತ್ ರೋಹಿದಾಸ್  ನೇಮಕಗೊಂಡಿದ್ದಾರೆ.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಕೈಬಿಟ್ಟಿದ್ದಕ್ಕೆ ಐಪಿಎಲ್‌ಗೆ ಗುಡ್‌ಬೈ

ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಟೂರ್ನಿಯ ಪೂರ್ವ ಸಿದ್ದತೆಯಾಗಿ ಈ ಸರಣಿ ನಡೆಯಲಿದ್ದು, ಐದು ಪಂದ್ಯಗಳು ನಿಗದಿಯಾಗಿದೆ. ಜನವರಿ 13 ರಿಂದ 29 ರವರೆಗೆ ಭುವನೇಶ್ವರ ಹಾಗೂ ರೂರ್ಕೇಲಾದಲ್ಲಿ ವಿಶ್ವಕಪ್ ನಡೆಯಲಿದೆ.

ಭಾರತ ತಂಡ-ಗೋಲ್ ಕೀಪರ್ಸ್: ಕೃಷ್ಣ ಬಹದ್ದೂರ್ ಪಾಠಕ್, ಶ್ರೀಜೇಶ್ ಪಿ.ಆರ್

ಡಿಫೆಂಡರ್ಸ್: ಜರ್ಮನ್ ಪ್ರೀತ್ ಸಿಂಗ್, ಸುರೇಂದರ್ ಕುಮಾರ್, ಹರ್ಮನ್ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಜುಗರಾಜ್ ಸಿಂಗ್, ಮನದೀಪ್ ಮೋರ್, ನೀಲಮ್ ಸಂಜೀಪ್ ಕ್ಸೆಸ್, ವರುಣ್ ಕುಮಾರ್

ಮಿಡ್‌ಫೀಲ್ಡರ್ಸ್: ಸುಮಿತ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ಶಂಶೇರ್ ಸಿಂಗ್, ನೀಲಕಂಠ ಶರ್ಮಾ, ರಾಜ್‌ಕುಮಾರ್ ಪಾಲ್, ಮೊಹಮ್ಮದ್, ರಾಹೀಲ್ ಮೌಸೀನ್, ಆಕಾಶದೀಪ್ ಸಿಂಗ್, ಗುರ್ಜಂತ್ ಸಿಂಗ್

ಫಾರ್ವರ್ಡ್ಸ್: ಮನ್‌ದೀಪ್ ಸಿಂಗ್, ಅಭಿಷೇಕ್, ದಿಲ್‌ಪ್ರೀತ್ ಸಿಂಗ್, ಸುಖಜೀತ್ ಸಿಂಗ್.

suddiyaana