ನಾಯಕತ್ವಕ್ಕೆ ಹರ್ಮನ್ ಪ್ರೀತ್ ಗುಡ್ ಬೈ! – ಚಾನ್ಸ್ ಸಿಗದೆ ಮುಳುಗಿದ ಸೂರ್ಯ!

ಕ್ರಿಕೆಟ್ ಲೋಕದ ಪ್ರಮುಖ ಸುದ್ದಿಗಳು
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ T20I ಸರಣಿ ಇಂದು ಲಖನೌನಲ್ಲಿ ಆರಂಭವಾಗಲಿದೆ. ಏಷ್ಯನ್ ಗೇಮ್ಸ್ ಚಿನ್ನ ಗೆದ್ದಿರುವ ಭಾರತ, ಮತ್ತೊಂದು ಸರಣಿಯಲ್ಲಿ ಗೆಲುವಿನ ಲಯ ಮುಂದುವರಿಸುವ ಗುರಿಯಲ್ಲಿದೆ. ಯುವ ಆಟಗಾರರಿಗೆ ಅವಕಾಶ ನೀಡುವ ಜೊತೆಗೆ T20 ತಂಡದ ಸಂಯೋಜನೆಯನ್ನು ಬಲಪಡಿಸಲು ಈ ಸರಣಿ ಪ್ರಮುಖವಾಗಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಬಹುನಿರೀಕ್ಷಿತ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಲಕ್ನೋ ಸಜ್ಜಾಗಿದೆ. ಈ ಪಂದ್ಯದಲ್ಲಿ ಅಭಿ, ವೈಭವ್, ಸಂಜು ಇವರಲ್ಲಿ ಯಾರು ಓಪನರ್ಸ್ ಆಗಿ ಕಣಕ್ಕಿಳಿಯಲಿದ್ದಾರೆ ಅನ್ನೋ ಪ್ರಶ್ನೆಗೆ ಗಂಭೀರ್ ಉತ್ತರ ನೀಡಿದ್ದಾರೆ. ವೈಭವ್ ಅದ್ಭುತ ಪ್ರತಿಭೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ತಂಡದಲ್ಲಿ ಈಗಾಗಲೇ ದೀರ್ಘಕಾಲದಿಂದ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಆಟಗಾರರಿದ್ದಾರೆ. ಅವರಿಗೆ ನಾವು ನಿರಂತರ ಅವಕಾಶ ನೀಡಬೇಕಿದೆ. ನಾನು ವೈಭವ್ ಜೊತೆ ವೈಯಕ್ತಿಕವಾಗಿ ಮಾತನಾಡಿದ್ದೇನೆ ಮತ್ತು ಅವರು ತಮ್ಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ ಎಂದು ತಿಳಿಸಿದ್ದೇನೆ ಎಂದಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ T20I ಸರಣಿಗೆ ವಾಷಿಂಗ್ಟನ್ ಸುಂದರ್ ಅವರನ್ನು ತಂಡದಿಂದ ಹಿಂಪಡೆಯಲಾಗಿದೆ. ಮುಂಬರುವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯತ್ತ ಗಮನಹರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಅವರ ಬದಲಿಗೆ ನಾಮನ್ ಧೀರ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಯುವ ಆಟಗಾರರಿಗೆ T20ಯಲ್ಲಿ ತಮ್ಮ ಸಾಮರ್ಥ್ಯ ತೋರಿಸಲು ಇದು ಮತ್ತೊಂದು ಅವಕಾಶವಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ನಿಧಾನಗತಿಯ ಓವರ್ರೇಟ್ ಕಾಯ್ದುಕೊಂಡ ಕಾರಣ ಭಾರತ ತಂಡದ ಆಟಗಾರರ ಪಂದ್ಯದ ಸಂಭಾವನೆಯ ಶೇಕಡಾ 20ರಷ್ಟು ದಂಡ ವಿಧಿಸಲಾಗಿದೆ. ಇದೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೂ ನಿಧಾನಗತಿಯ ಓವರ್ರೇಟ್ಗಾಗಿ ಶೇಕಡಾ 10ರಷ್ಟು ದಂಡ ಬಿದ್ದಿದೆ.
ಇದನ್ನೂ ಓದಿ: ನೆಲ ಕಚ್ಚಿದ್ರೂ ನಖ್ವಿಯ ದೌಲತ್ತು – IND ಕ್ಷಮೆಗೆ ಪಟ್ಟು.. WCLನಿಂದ ಔಟ್!
ಭಾರತ ಮಹಿಳಾ ತಂಡದ ಆಟಗಾರ್ತಿ ಹರ್ಮನ್ಪ್ರೀತ್ ಕೌರ್ ಎಲ್ಲಾ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. 2016ರಿಂದ ಭಾರತ ತಂಡವನ್ನು ಮುನ್ನಡೆಸಿದ್ದ ಅವರು, ಮಹಿಳಾ ವಿಶ್ವಕಪ್ ಗೆದ್ದ ಏಕೈಕ ಭಾರತೀಯ ನಾಯಕಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ನಾಯಕತ್ವ ತೊರೆದರೂ ಆಟಗಾರ್ತಿಯಾಗಿ ಭಾರತ ಪರ ಮುಂದುವರಿಯುವುದಾಗಿ ಹರ್ಮನ್ಪ್ರೀತ್ ಸ್ಪಷ್ಟಪಡಿಸಿದ್ದಾರೆ.
2026-27ರ ರಣಜಿ ಟ್ರೋಫಿಗೆ ಮುಂಬೈ ತಂಡ ಪ್ರಕಟಗೊಂಡಿದ್ದು, ಸಿದ್ಧೇಶ್ ಲಾಡ್ ನಾಯಕರಾಗಿದ್ದಾರೆ. ಆದರೆ, ಭಾರತದ ಮಾಜಿ ಟಿ20 ನಾಯಕ ಸೂರ್ಯಕುಮಾರ್ ಯಾದವ್ಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಟೀಂ ಇಂಡಿಯಾಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ರಣಜಿ ತಂಡಕ್ಕೆ ಆಯ್ಕೆ ಮಾಡದಿರುವುದು ಅವರ ವೃತ್ತಿಜೀವನ ಅಂತ್ಯವಾಗುತ್ತಿದ್ಯಾ ಅನ್ನೋ ಚರ್ಚೆ ಶುರುವಾಗಿದೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಈ ಮಹತ್ವದ ನಿರ್ಧಾರವನ್ನು ಡೆಲ್ಲಿ ಕ್ಯಾಪಿಟಲ್ಸ್ ಆಡಳಿತ ಮಂಡಳಿ ಅಧಿಕೃತವಾಗಿ ಪ್ರಕಟಿಸಿದೆ. ಕೋಚ್ ಆಗಿ ನೇಮಕಗೊಂಡ ಬಳಿಕ ಸಂತಸ ಹಂಚಿಕೊಂಡ ಗಂಗೂಲಿ, ಐಪಿಎಲ್ನಲ್ಲಿ ಮುಖ್ಯ ಕೋಚ್ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದು ನನಗೆ ಅಪಾರ ಸಂತೋಷ ತಂದಿದೆ. ಡೆಲ್ಲಿ ಕ್ಯಾಪಿಟಲ್ಸ್ ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾದ ಫ್ರಾಂಚೈಸಿ ಎಂದಿದ್ದಾರೆ.
ಭಾರತ A ಮತ್ತು ಆಸ್ಟ್ರೇಲಿಯಾ A ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಪುದುಚೇರಿಯಲ್ಲಿ ನಡೆಯಲಿದೆ. 2027ರ ವಿಶ್ವಕಪ್ ದೃಷ್ಟಿಯಿಂದ ಭಾರತದ ವೇಗದ ಬೌಲಿಂಗ್ ಆಯ್ಕೆಗಳಿಗೆ ಈ ಸರಣಿ ಮಹತ್ವದ್ದಾಗಿದೆ. ಜಸ್ಪ್ರೀತ್ ಬುಮ್ರಾಗೆ ಭವಿಷ್ಯದಲ್ಲಿ ಸೂಕ್ತ ಜೋಡಿ ಯಾರು ಎಂಬ ಹುಡುಕಾಟದಲ್ಲಿ ಟೀಂ ಇಂಡಿಯಾ ಇದ್ದು, ಯುವ ವೇಗದ ಬೌಲರ್ಗಳ ಪ್ರದರ್ಶನದ ಮೇಲೆ ಆಯ್ಕೆಗಾರರ ಕಣ್ಣು ನೆಟ್ಟಿದೆ.
ವಿಶ್ವ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ ವರ್ಲ್ಡ್ ಚಾಂಪಿಯನ್ಷಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಅಧಿಕೃತವಾಗಿ ರದ್ದಾಗಿದೆ. ಅಕ್ಟೋಬರ್ 10 ರಂದು ದುಬೈನಲ್ಲಿ ನಡೆಯಬೇಕಿದ್ದ ಈ ಮಹಾ ಕದನ ಸ್ಥಗಿತಗೊಂಡಿರುವುದು ಮಾತ್ರವಲ್ಲದೆ, ಪಾಕಿಸ್ತಾನ್ ಚಾಂಪಿಯನ್ಸ್ ತಂಡವು ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದೆ. PCB ವಿಧಿಸಿದ ಕಠಿಣ ಷರತ್ತುಗಳು ಹಾಗೂ ಟೂರ್ನಿ ಆಯೋಜಕರ ನಡುವಿನ ಭಿನ್ನಾಭಿಪ್ರಾಯವೇ ಈ ಹಠಾತ್ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ.
ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಟಿ20 ತಂಡದ ನಾಯಕತ್ವದಿಂದ ಸಲ್ಮಾನ್ ಅಲಿ ಆಘಾ ಅವರನ್ನು ಕೆಳಗಿಳಿಸಿ, ಸಾಹಿಬ್ಜಾದಾ ಫರ್ಹಾನ್ಗೆ ಮಣೆಹಾಕಿದೆ. ಬಾಬರ್ ಅಜಮ್, ಶಾಹೀನ್ ಅಫ್ರಿದಿ ಸೇರಿದಂತೆ ಪ್ರಮುಖರನ್ನು ಟಿ20 ತಂಡದಿಂದ ಕೈಬಿಡಲಾಗಿದೆ. ಮುಂಬರುವ ಶ್ರೀಲಂಕಾ ಟಿ20 ಸರಣಿ ಹಾಗೂ ತ್ರಿಕೋನ ಸರಣಿಗೆ ಹೊಸ ತಂಡಗಳನ್ನು ಪ್ರಕಟಿಸಲಾಗಿದೆ.

ನೋಡಿರಿ
