ಕೌರ್ & ಸ್ಮೃತಿ ನಡುವೆ ಬಿರುಕು – ಕ್ಯಾಪ್ಟನ್ಸಿ ಬದಲಾವಣೆ ಗುಟ್ಟು ರಟ್ಟು
ಟಗರುಪುಟ್ಟಿ ಆಟ ಮುಗಿಯಿತಾ?

ಕೌರ್ & ಸ್ಮೃತಿ ನಡುವೆ ಬಿರುಕು – ಕ್ಯಾಪ್ಟನ್ಸಿ ಬದಲಾವಣೆ ಗುಟ್ಟು ರಟ್ಟುಟಗರುಪುಟ್ಟಿ ಆಟ ಮುಗಿಯಿತಾ?

ಭಾರತೀಯ ಮಹಿಳಾ ಕ್ರಿಕೆಟ್​ ತಂಡದಲ್ಲಿ ಆರ್​ಸಿಬಿ ಸಿಂಹಿಣಿಯ ದರ್ಬಾರ್ ಶುರುವಾಗಿದೆ. ಹರ್ಮನ್ ಪ್ರೀತ್ ಕೌರ್ ಕ್ಯಾಪ್ಟನ್ಸಿ ಯುಗಾಂತ್ಯವಾಗಿದ್ದು ಸ್ಮೃತಿ ಮಂದಾನ ಹೊಸ ಸಾರಥಿಯಾಗಿದ್ದಾರೆ. ಟೆಸ್ಟ್, ಏಕದಿನ ಮತ್ತು ಟಿ20ಐಗೆ ಫುಲ್ ಟೈಂ ಕ್ಯಾಪ್ಟನ್ ಆಗಿ ಬಿಸಿಸಿಐ ಅಪಾಯಿಂಟ್ ಮಾಡಿದೆ. ಸ್ಮೃತಿಗೆ ನಾಯಕತ್ವ ಸಿಕ್ಕಿರೋದು ನಿರೀಕ್ಷಿತವೇ. ಆದ್ರೆ ಈಗ ಇರೋ ಬ್ರೇಕಿಂಗ್ ನ್ಯೂಸ್ ಏನಂದ್ರೆ ತಂಡದಲ್ಲಿ ಹರ್ಮನ್ ಪ್ರೀತ್ ಕೌರ್ ಮತ್ತು ಸ್ಮೃತಿ ಮಂದಾನ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋ ಶಾಕಿಂಗ್ ನ್ಯೂಸ್ ರಿವೀಲ್ ಆಗಿದೆ.

ಇದನ್ನೂ ಓದಿ : T-20I ಗೆ ಬಂದಾಯ್ತು ಬೆಂಕಿ ಭುವಿ! – 4 ವರ್ಷ.. BCCI ತಲೆ ಬಾಗಿದ್ದೇಗೆ?

2024 ಮತ್ತು 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ ಯಶಸ್ವೀ ನಾಯಕಿ ಸ್ಮೃತಿ ಮಂದಾನಗೆ ಭಾರತ ಮಹಿಳಾ ತಂಡದ ಕ್ಯಾಪ್ಟನ್ಸಿಯೂ ಸಿಕ್ಕಿದೆ. ಸ್ಮೃತಿ ಲೀಡರ್​ಶಿಪ್​ನಲ್ಲೇ ಜಿಂಬಾಬ್ವೆ ವಿರುದ್ಧ ಟಿ-20ಐ ಮತ್ತು ಏಕದಿನ ಮಾದರಿ ಸರಣಿಗಳಿಗೆ ತಂಡವನ್ನೂ ಅನೌನ್ಸ್ ಮಾಡಲಾಗಿದೆ. ಈ ಸರಣಿಯ ಮೂಲಕ ತಮ್ಮ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ. ಟಿ20 ಸರಣಿಗೆ ಶಫಾಲಿ ವರ್ಮಾ, ಏಕದಿನ ತಂಡಕ್ಕೆ ದೀಪ್ತಿ ಶರ್ಮಾ ಅವರನ್ನು ವೈಸ್ ಕ್ಯಾಪ್ಟನ್ ಆಗಿ ನೇಮಿಸಲಾಗಿದೆ. ನಾಯಕತ್ವದಿಂದ ಕೆಳಗಿಳಿದ್ರೂ ಹರ್ಮನ್‌ಪ್ರೀತ್ ಕೌರ್ ಆಟಗಾರ್ತಿಯಾಗಿ ತಂಡದಲ್ಲಿ ಮುಂದುವರಿದಿದ್ದಾರೆ. ಅಕ್ಟೋಬರ್ 16 ರಿಂದ ಆರಂಭವಾಗಲಿರುವ ಈ ತಾಯ್ನಾಡಿನ ಸರಣಿಯಲ್ಲಿ ಭಾರತ ಮತ್ತು ಜಿಂಬಾಬ್ವೆ ತಂಡಗಳು 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಿವೆ. ಆದ್ರೆ ಈ ಸರಣಿಯಿಂದ ಕನ್ನಡತಿ ಶ್ರೇಯಾಂಕ ಪಾಟೀಲ್ ಹೊರಬಿದ್ದಿದ್ದಾರೆ. ಇಂಜುರಿ ಕಾರಣಕ್ಕೆ ಅವ್ರನ್ನ ತಂಡಕ್ಕೆ ಸೆಲೆಕ್ಟ್ ಮಾಡಿಲ್ಲ. ಸೋ ಹೊಸಬರು ಮತ್ತು ಹಳಬರ ಕಾಂಬಿನೇಷನ್​ನಲ್ಲಿ ಸ್ಮೃತಿಗೆ ಬಿಗ್ ಚಾಲೆಂಜ್ ಎದುರಾಗಿದೆ. 2013ರಿಂದ ಭಾರತ ತಂಡದ ಸ್ಟಾರ್ ಆಟಗಾರ್ತಿಯಾಗಿರುವ ಸ್ಮೃತಿ, ಇದುವರೆಗೆ ಭಾರತದ ಪರ 18 ಟಿ20 ಹಾಗೂ 4 ಏಕದಿನ ಪಂದ್ಯಗಳಲ್ಲಿ ನಾಯಕಿಯಾಗಿ ತಂಡವನ್ನು ಲೀಡ್ ಮಾಡಿದ ಎಕ್ಸ್​ಪೀರಿಯನ್ಸ್ ಕೂಡ ಇದೆ. ಆದ್ರೆ ಈ ನಾಯಕತ್ವದ ಬದಲಾವಣೆಯ ಬೆನ್ನಲ್ಲೇ ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮೃತಿ ಮಂಧಾನ ನಡುವೆ ಭಿನ್ನಾಭಿಪ್ರಾಯಗಳಿವೆ ಌಂಡ್ ಬಿರುಕು ಮೂಡಿದೆ ಅನ್ನೋ ಸುದ್ದಿ ಹಲ್​ಚಲ್ ಎಬ್ಬಿಸಿದೆ.

ಸ್ಮೃತಿಗೆ ಕ್ಯಾಪ್ಟನ್ಸಿ ಸಿಕ್ಕಿದ್ದು ಕೌರ್ ಗೆ ಇಷ್ಟವಿಲ್ವಾ?

ಹರ್ಮನ್‌ಪ್ರೀತ್ ಕೌರ್ ಮೂರೂ ಮಾದರಿ ನಾಯಕತ್ವದಿಂದ ಕೆಳಗಿಳಿದ ಕೂಡಲೇ 30 ವರ್ಷದ ಸ್ಮೃತಿ ಮಂಧಾನಗೆ ನಾಯಕತ್ವದ ಪಟ್ಟ ಸಿಕ್ಕಿರುವ ಬೆನ್ನಲ್ಲೇ ಇಂಥಾದ್ದೊಂದು ಶಾಕಿಂಗ್ ವಿಚಾರ ರಿವೀಲ್ ಆಗಿದೆ. ಸಾಕಷ್ಟು ದಿನಗಳಿಂದ ಇಬ್ಬರ ನಡುವೆ ಬಿರುಕು ಕಾಣಿಸಿಕೊಂಡಿದ್ದು, ಡ್ರೆಸ್ಸಿಂಗ್ ರೂಮ್‌ನಲ್ಲಿ ಇಬ್ಬರೂ ಫೇಸ್ ಟು ಫೇಸ್ ಮಾತನಾಡದ ಌಂಡ್ ಐ ಕಾಂಟ್ಯಾಕ್ಟ್ ಕೂಡ ಮಾಡದ ಲೆವೆಲ್​ನಲ್ಲಿತ್ತು. ಇಬ್ಬರ ನಡುವಿನ ಮುನಿಸು ಡ್ರೆಸ್ಸಿಂಗ್ ರೂಮ್​ನ ಇತರೆ ಪ್ಲೇಯರ್ಸ್ ಮೇಲೂ ಎಫೆಕ್ಟ್ ಆಗಿತ್ತು ಎನ್ನಲಾಗಿದೆ. ಒಟ್ನಲ್ಲಿ ಸ್ಮೃತಿ ಕ್ಯಾಪ್ಟನ್ಸಿ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11,000 ಕ್ಕೂ ಹೆಚ್ಚು ರನ್ ಕಲೆಹಾಕಿರುವ ಸ್ಮೃತಿ ಏಕದಿನ ಕ್ರಿಕೆಟ್​ನಲ್ಲಿ 120 ಪಂದ್ಯಗಳಿಂದ ಸುಮಾರು 48ರ ಸರಾಸರಿಯಲ್ಲಿ 5,411 ರನ್ ಬಾರಿಸಿದ್ದು, ಇದರಲ್ಲಿ 14 ಶತಕಗಳು ಸೇರಿವೆ. ಟಿ20 ಕ್ರಿಕೆಟ್​ನಲ್ಲಿ 179 ಪಂದ್ಯಗಳಲ್ಲಿ 31ರ ಸರಾಸರಿಯಲ್ಲಿ 4,867 ರನ್ ಸಿಡಿಸಿದ್ದು, 2 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಸ್ವರೂಪದಲ್ಲಿ ಅತಿ ಹೆಚ್ಚು ರನ್​ಗಳಿಸಿರುವ ವಿಶ್ವದಾಖಲೆ ಮಂಧಾನ ಹೆಸರಿನಲ್ಲಿದೆ. ಇನ್ನು ಮಂಧಾನ ಆಡಿರುವ ಕೇವಲ 9 ಟೆಸ್ಟ್ ಪಂದ್ಯಗಳಿಂದ 52 ಕ್ಕೂ ಹೆಚ್ಚು ಸರಾಸರಿಯಲ್ಲಿ 788 ರನ್ ಗಳಿಸಿದ್ದು, 149 ರನ್ ಇವರ ಗರಿಷ್ಠ ಸ್ಕೋರ್ ಆಗಿದೆ. ಭಾರತದ ಪರ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ 100 ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

Shantha Kumari

Leave a Reply

Your email address will not be published. Required fields are marked *