ಸ್ಟಾರ್ ಆಟಗಾರ್ತಿ ಮೇಲೆ ಬಂದಿತ್ತು ಡೌಟ್.. – ಸಿಕ್ಸ್ ನೋಡಿ ಬ್ಯಾಟ್ ಟೆಸ್ಟ್!
ಹರ್ಮನ್ ಬದುಕಿನ ರೋಚಕ ರಹಸ್ಯ

ಬೌಲರ್ ಹಾಕಿದ ಚೆಂಡು ಪಿಚ್ ಆಗುವ ಮೊದಲೇ ಹೊಡೆಯೋ ಸ್ಟೈಲ್ ಚೆಂದ. ಲೆಗ್ ಬ್ರೇಕ್ ಗೂಗ್ಲಿ ಆಗ್ಲಿ, ಮಿಡ್ ಆನ್ ಸ್ಮ್ಯಾಷ್ ಆಗ್ಲಿ, ಮೊಣಕಾಲೂರಿ ಈಕೆ ಬ್ಯಾಟ್ ಬೀಸೋ ರೀತಿ ಇದೆಯೆಲ್ಲಾ.. ಫ್ಯಾನ್ಸ್ ಗಂತೂ ಹಬ್ಬ.. ಈಕೆ ಸಿಡಿಸಿದ್ದ ಸಿಕ್ಸ್ ಗೆ ಎಲ್ಲರೂ ಬೆರಗಾಗಿದ್ದು ಮಾತ್ರವಲ್ಲ.. ಲ್ಯಾಬಿಗೆ ಕಳಿಸಿ, ಡ್ರಗ್ ಪರೀಕ್ಷೆ ಮಾಡಿಸಿದ್ರು.. ಬ್ಯಾಟ್ ನ ಕೂಡ ಪರೀಕ್ಷೆಗೆ ಒಳಪಡಿಸಿದ್ರು.. ಎಲ್ಲ ಪರೀಕ್ಷೆಗಳನ್ನ ಧೈರ್ಯವಾಗಿ ಫೇಸ್ ಮಾಡಿದಾಕೆ ಈಗ ಕ್ರಿಕೆಟ್ ಲೋಕದ ಸ್ಟಾರ್.. ಮಹಿಳಾ ಕ್ರಿಕೆಟ್ನಲ್ಲಿ ಈಕೆಯದ್ದೇ ಒಂದು ಕೈ ಮೇಲೆ.. ಈಕೆಗೆ ಸ್ಟಾರ್ ಕ್ರಿಕೆಟರ್ ಒಬ್ರು ಸ್ಪೂರ್ತಿ.. ಟೀಮ್ ಇಂಡಿಯಾದ ಸಾರಥಿಯಾದ ಈ ಸ್ಟಾರ್ ಇದೀಗ Wpl ನಲ್ಲೌ ಸ್ಟಾರ್.. ತಂಡದ ಗೆಲುವಿಗಾಗಿ ಪ್ರತಿಹಂತದಲ್ಲೂ ಶ್ರಮ ಪಡೋ ಈ ಚಿಗರೆ ಮರಿ ಯಾರು ಗೊತ್ತಾ. ಬೇರೆ ಯಾರು ಅಲ್ಲ.. ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್ ಪ್ರೀತ್ ಕೌರ್.. ಈಕೆಯ ಕ್ರಿಕೆಟ್ ಜರ್ನಿ ನಿಜಕ್ಕೂ ಇಂಟ್ರೆಸ್ಟಿಂಗ್ ಇಲ್ಲಿದೆ.
ಇದನ್ನೂ ಓದಿ: ಮಟಾಷ್ ಲೆಗ್ ಮೊಹಮ್ಮದ್ ರಿಜ್ವಾನ್ – ಪಾಕ್ ಕ್ಯಾಪ್ಟನ್ ಗೆ ಇದೆಂಥಾ ಗತಿ?
WPL ನಲ್ಲಿ ಈ ಬಾರಿ ಹೆಚ್ಚು ಸುದ್ದಿಯಾಗಿದ್ದು ಅಂದ್ರೆ ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್.. WPL ನಲ್ಲಿ ಆರ್ಸಿಬಿ ಫ್ಯಾನ್ಸ್ ಆರ್ಭಟಕ್ಕೆ ಸ್ಟೇಡಿಯಂ ನಲ್ಲಿ ಕೌರ್ ಕಿವಿಮುಚ್ಚಿಕೊಂಡಿದ್ರು.. ಆದ್ರೆ ಅದೇ ದಿನ ಕೌರ್ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಆರ್ ಸಿಬಿ ತಂಡವನ್ನೇ ಸೋಲಿಸಿದ್ರು.. ಭಾರತ ತಂಡದ ಯಶಸ್ವೀ ನಾಯಕಿ ಹರ್ಮನ್ ಲೈಫ್ ಜರ್ನಿ ಕೂಡ ಬಹಳ ಇಂಟ್ರೆಸ್ಟಿಂಗ್ ಆಗಿದೆ.. ಹರ್ಮನ್ ಬದುಕು ನಿಜಕ್ಕೂ ಎಲ್ಲರಿಗೂ ಸ್ಪೂರ್ತಿ ನೀಡುವಂತಿದೆ. ಹರ್ಮನ್ ಮಾರ್ಚ್ 8, 1989 ರಲ್ಲಿ ಪಂಜಾಬಿನ ಮೊಗಾದಲ್ಲಿ ಹರ್ಮಂದರ್ ಸಿಂಗ್ ಭುಲ್ಲಾ ಹಾಗೂ ಸತ್ವಿಂದರ್ ಕೌರ್ ದಂಪತಿಯ ಪುತ್ರಿಯಾಗಿ ಹುಟ್ಟಿದ್ರು.. ತಂದೆ ಹರ್ಮನ್ ಹುಟ್ಟೋದಿಕ್ಕೂ ಮುನ್ನ ಗಂಡು ಮಗು ಜನಿಸುತ್ತೆ ಅಂತಾ ಅಂದ್ಕೊಂಡಿದ್ರು.. ಹೀಗಾಗೇ ಆಕೆ ಹುಟ್ಟಿದ ದಿನದಂದು ಗಂಡು ಮಗುವಿನ ಡ್ರೆಸ್ ಅನ್ನ ತಂದಿದ್ದರಂತೆ ಹರ್ಮನ್ ಅಪ್ಪ.. ಹಾಗಂತ ಹೆಣ್ಣು ಮಗು ಹುಟ್ಟಿದಕ್ಕೆ ಬೇಸರ ಮಾಡಿಕೊಳ್ಳದೆ, ಆಕೆಯನ್ನು ಧೈರ್ಯ ವಂತೆಯಾಗಿ ಬೆಳೆಸಿದ್ರು. ಅದ್ರಿಂದಾಗಿಯೇ ಪುರುಷರಂತೆ ಪವರ್ ಫುಲ್ ಬ್ಯಾಟಿಂಗ್ ಅನ್ನ ಹೆಣ್ಮಕ್ಳು ಮಾಡ್ಬೋದು ಅನ್ನೋದನ್ನ ಕೌರ್ ತೋರಿಸಿಕೊಟ್ಟಿದ್ದಾರೆ. ಅಂದ್ಹಾಗೆ ಕೌರ್ ಗೆ ಕ್ರಿಕೆಟ್ ಮೇಲೆ ಕ್ರೇಜ್ ಹುಟ್ಟಿಕೊಂಡಿದ್ದಕ್ಕೂ ಒಂದು ರೀಸನ್ ಇದೆ. ಹರ್ಮನ್ ಪ್ರೀತ್ ತಂದೆ ಕೂಡ ಕ್ರೀಡಾಪಟು.. ಅವ್ರು ವಾಲಿಬಾಲ್ ಮತ್ತು ಬಾಸ್ಕೆಟ್ ಬಾಲ್ ಆಟಗಾರ.. ಹವ್ಯಾಸಿ ಕ್ರಿಕೆಟರ್ ಕೂಡ ಆಗಿದ್ರು.. ಆಗಾಗ ಕ್ಲಬ್ ಮಟ್ಟದ ಟೂರ್ನಿಗಳಲ್ಲಿ ಕೌರ್ ತಂದೆ ಆಟ ಆಡ್ತಿದ್ರು.. ಆದ್ರೆ ಹರ್ಮಂದರ್ ತಮ್ಮ ಮಗಳನ್ನ ಅಥ್ಲೀಟ್ ಮಾಡ್ಬೇಕು ಅಂತಾ ಅಂದ್ಕೊಂಡಿದ್ರು.. ಆದ್ರೆ ಮಗಳಿಗೆ ಕ್ರಿಕೆಟ್ ಮೇಲೆ ಒಲವು ಮೂಡಿತ್ತು.. ವೀರೆಂದ್ರ ಸೆಹ್ವಾಗ್ ಆಟವನ್ನ ನೋಡಿ ಬೆಳೆದ ಕೌರ್ ಅವ್ರ ದೊಡ್ಡ ಅಭಿಮಾನಿಯಾಗಿದ್ರು.. ಮಗಳಿಗೆ ಕ್ರಿಕೆಟ್ ಮೇಲಿರುವ ಆಸಕ್ತಿಯನ್ನ ಕಂಡ ತಂದೆ ಆಕೆಯನ್ನ ಮನೆಯಿಂದ 30 ಕಿ.ಮೀ ದೂರದಲ್ಲಿದ್ದ ಜಿಯಾನ್ ಜ್ಯೋತಿ ಸ್ಕೂಲ್ ನ ಕ್ರಿಕೆಟ್ ಅಕಾಡೆಮಿಗೆ ಸೇರಿದ್ರು.. ಅಲ್ಲಿ ಕೋಚ್ ಕಮಲದೀಶ್ ಸಿಂಗ್ ಸೋಧಿ ಹರ್ಮನ್ ಪ್ರೀತ್ ಕ್ರಿಕೆಟ್ ತರಬೇತಿ ನೀಡಲು ಶುರುಮಾಡಿದ್ರು. ಕೋಚ್ ಹೇಳಿಕೊಟ್ಟಂತೆ ಕೌರ್ ಎಲ್ಲಾ ಸ್ಕಿಲ್ ಗಳನ್ನ ಕಲಿತುಕೊಂಡ್ರು.. ಆದ್ರೆ ಕೌರ್ ಉತ್ತಮ ಆಟ ಆಡ್ತಿದ್ರೂ ಆಕೆಗೆ ಅಷ್ಟೊಂದು ಅವಕಾಶ ಸಿಕ್ಕಿರ್ಲಿಲ್ಲ.. ಹೀಗಾಗಿ ಪುರಷರೊಂದಿಗೆ ಕೌರ್ ಕ್ರಿಕೆಟ್ ಆಡ್ತಾ ಇದ್ರು.. ಕೆಲ ವರ್ಷದ ಬಳಿಕ ಹರ್ಮನ್ ಮೋಗಾದ ಜಿಲ್ಲಾ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದ್ರು.. ಇಲ್ಲಿಂದ ಹರ್ಮನ್ ಕ್ರಿಕೆಟ್ ಜರ್ನಿ ಶುರುವಾಯ್ತು.. 2007-08ರ ಅಂಡರ್ 19 ಏಕದಿನ ಪಂದ್ಯದಲ್ಲಿ ಅಬ್ಬರ ಬ್ಯಾಟಿಂಗ್ ನಿಂದ ಸಂಚಲನ ಸೃಷ್ಟಿಸಿದ್ದರು. ಅವರ ಸಿಡಿಲಬ್ಬರದ ಆಟ ಆಯ್ಕೆ ಸಮಿತಿಯ ಗಮನ ಸೆಳೆಯಿತು. ಇದು ಆಕೆ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಸಹಾಯ ಮಾಡಿತು. ಅದಾದ್ಮೇಲೆ ಹರ್ಮನ್ ಮುಂಬೈಗೆ ಸ್ಥಳಾಂತರ ಆಗುವ ತನಕ ಅಂದ್ರೆ 2014 ವರೆಗೆ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡ್ತಿದ್ರು.. ರೈಲ್ವೆಯಲ್ಲಿ ಕೆಲಸ ಸಿಗಲು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸಹಾಯ ಮಾಡಿದ್ದರಂತೆ.
ಇನ್ನು ಹರ್ಮನ್ ಪೀತ್ ಕೌರ್ 2009 ರಲ್ಲಿ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ರು. ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಿದರು. ಆದ್ರೆ ಕೌರ್ ಗೆ ಆ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಇನ್ನು ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲೂ ಅವರು ಪ್ರಭಾವ ಬೀರಲಿಲ್ಲ, 18 ಎಸೆತಗಳನ್ನು ಎದುರಿಸಿ ಕೇವಲ ಎಂಟು ರನ್ ಕಲೆಹಾಕಿದ್ರು. ಆದ್ರೆ ಆಸ್ಟ್ರೇಲಿಯಾ ವಿರುದ್ಧ ನಡೆದ ಮುಂದಿನ ಪಂದ್ಯದಲ್ಲಿ ತಮ್ಮ ನಿಜವಾದ ಸಾಮರ್ಥ್ಯವನ್ನು ತೋರಿಸಿದ್ರು. ಪಂದ್ಯದಲ್ಲಿ ಅವ್ರ ಸ್ಟ್ರೆಂತ್ ಏನು ಅನ್ನೋದು ಎಲ್ಲರಿಗೂ ಗೊತ್ತಾಯ್ತು.. ಹರ್ಮನ್ಪ್ರೀತ್ ಕೌರ್ ಆಸಿಸ್ ವಿರುದ್ಧ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದಿದ್ರು. ಆಗ ಭಾರತ ತಂಡ 47 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿತ್ತು. ಭಾರತಕ್ಕೆ ಬಿಗ್ ಫಿನಿಶಿಂಗ್ ಅಗತ್ಯವಿದ್ದ ಸಮಯದಲ್ಲಿ ಸ್ಫೋಟಕ ಆಟವಾಡಿದ ಕೌರ್, ಎಂಟು ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಬಿಗ್ ಸಿಕ್ಸರ್ನೊಂದಿಗೆ ಅಜೇಯ 19 ರನ್ ಗಳಿಸಿದ್ರು. ಎಲಿಸ್ ಪೆರಿ ಎಸೆದ 48ನೇ ಓವರ್ನ ಐದನೇ ಬಾಲ್ ಫುಲ್ ಟಾಸ್ ಆಗಿತ್ತು, ಮಿಡ್ ವಿಕೆಟ್ ಮೇಲೆ ಸಿಕ್ಸರ್ ಭಾರಿಸಿದ ರಭಸಕ್ಕೆ ಚೆಂಡು ಸಿಡ್ನಿ ಓವಲ್ ಗ್ರೌಂಡ್ನ ಮೇಲ್ಛಾವಣಿಗೆ ಬಡಿದಿತ್ತು. ಮೈದಾನದಲ್ಲಿದ್ದ ಪ್ರೇಕ್ಷಕರು ಕೌರ್ ಬ್ಯಾಟಿಂಗ್ ಕೌಶಲ್ಯಕ್ಕೆ ಆಶ್ಚರ್ಯಚಕಿತರಾಗಿದ್ರು. ಮಹಿಳಾ ಕ್ರಿಕೆಟ್ನಲ್ಲಿ ಇದು ಅತಿ ದೊಡ್ಡ ಸಿಕ್ಸರ್ ಎಂದು ದಾಖಲಾಯ್ತು.
ಆದ್ರೆ ಕೌರ್ ಸಿಕ್ಸರ್ ಕಂಡ ಪಂದ್ಯದ ಅಧಿಕಾರಿಗಳಿಗೆ ಅನುಮಾನ ಮೂಡಿತ್ತು, 19 ವರ್ಷ ವಯಸ್ಸಿನ ಹುಡುಗಿ ಇಂತಹ ದೊಡ್ಡ ಸಿಕ್ಸ್ ಹೊಡೆಯಲು ಹೇಗೆ ಸಾಧ್ಯ ಎಂದು ಶಂಕಿಸಿದ್ದರು. ಒಬ್ಳು ಹುಡುಗಿ ಬಾಲನ್ನು ಅಷ್ಟು ಎತ್ತರ ಮತ್ತು ದೂರಕ್ಕೆ ಹೊಡಿಬೋದು ಅಂತಾ ಯಾರೂ ನಂಬಿರಲಿಲ್ಲ. ಆಕೆ ಎನರ್ಜಿ ಬೂಸ್ಟಿಂಗ್ ಡ್ರಗ್ ತೆಗೆದುಕೊಂಡಿದ್ದಾರಾ ಅನ್ನೋ ಅನುಮಾನದಿಂದ ಡೋಪ್ ಪರೀಕ್ಷೆಗೆ ಒಳಪಡಿಸಿದ್ರು.. ಇದರ ಜೊತೆಗೆ ಹರ್ಮನ್ ಪ್ರೀತ್ ಕೌರ್ ಅವರ ಬ್ಯಾಟ್ ಅನ್ನು ಮ್ಯಾಚ್ ರೆಫ್ರಿ ಪರೀಕ್ಷೆ ಮಾಡಿದ್ದರು. ಆದರೆ ಎಲ್ಲಾ ಆರೋಪಗಳಿಂದ ಹೊರಬಂದಿದ್ರು.
ಕೌರ್ ಇದುವರೆಗೆ ತಮ್ಮ ವೃತ್ತಿಜೀವನದಲ್ಲಿ 135 ಏಕದಿನ ಪಂದ್ಯಗಳನ್ನು ಆಡಿದ್ದು, 73.65 ಸ್ಟ್ರೈಕ್ ರೇಟ್ನಲ್ಲಿ 3648 ರನ್ ಗಳಿಸಿದ್ದಾರೆ. ಕನಿಷ್ಠ 100 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ ಮಹಿಳಾ ಬ್ಯಾಟರ್ಗಳಲ್ಲಿ ವಿಶ್ವದ 12ನೇ ಅತ್ಯುತ್ತಮ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ ಕೌರ್. ಕಳೆದೊಂದು ದಶಕದಿಂದ ಎಲ್ಲ ಕ್ರಿಕೆಟ್ ಪ್ರಕಾರದಲ್ಲೂ ಭಾರತ ತಂಡಕ್ಕೆ ಆಧಾರ ಸ್ತಂಭವೆನಿಸಿದ್ದಾರೆ. ಮಹಿಳೆಯರ ವಿಶ್ವಕಪ್ನಲ್ಲಿ ನಾಕೌಟ್ ಹಂತದ ಪಂದ್ಯದಲ್ಲಿ 171 ರನ್ ಗಳಿಸಿ ನಾಟೌಟ್ ಆಗಿ ಉಳಿದಿದ್ದು ದಾಖಲೆಯಾಗಿದೆ.. ಟೀಂ ಇಂಡಿಯಾದ ಜೊತೆಗೆ Wpl ನಲ್ಲಿ ಕೌರ್ ಮುಂಬೈ ಇಂಡಿಯನ್ಸ್ ತಂಡದ ನಾಯಕಿಯಾಗಿ ಟೀಮ್ ನ ಮುನ್ನಡೆಸುತ್ತಲೇ ಅಭಿಮಾನಿಗಳ ಮನಗೆದ್ದಿದ್ದಾರೆ. ಹರ್ಮನ್‌ಪ್ರೀತ್ ಕೌರ್ ಇನ್ನಷ್ಟು ವರ್ಷ ತನ್ನ ಆಟದ ಮೂಲಕ ದೊಡ್ಡ ಸಾಧನೆ ಮಾಡಲಿ ಎನ್ನುವುದೇ ಅಭಿಮಾನಿಗಳ ಹಾರೈಕೆ.