ಹರಿಪ್ರಿಯ ಜೊತೆ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡ ವಸಿಷ್ಠ ಸಿಂಹ

ಹರಿಪ್ರಿಯ ಜೊತೆ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡ ವಸಿಷ್ಠ ಸಿಂಹ

ಸ್ಯಾಂಡಲ್‌ವುಡ್‌ನ ಸ್ಟಾರ್ ಜೋಡಿ ಹರಿಪ್ರಿಯ ಮತ್ತು ವಸಿಷ್ಠ ಸಿಂಹ ಹಸೆಮಣೆಯೇರಲಿದ್ದಾರೆ. ಡಿಸೆಂಬರ್ 2ರಂದು ಹರಿಪ್ರಿಯ ಮತ್ತು ವಸಿಷ್ಠ ಸಿಂಹ ಸಿಂಪಲ್ ಆಗಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.  ಕೆಲವು ದಿನಗಳಿಂದ ಈ ಜೋಡಿ ಪ್ರೀತಿಸುತ್ತಿದ್ದಾರೆ ಅನ್ನೋ ಗುಸುಗುಸು ಕೇಳಿಬಂದಿತ್ತು. ಆದರೆ, ಇಬ್ಬರೂ ಈ ಬಗ್ಗೆ ಎಲ್ಲೂ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರು ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ. ಹರಿಪ್ರಿಯಾ ಅವರ ನಿವಾಸದಲ್ಲಿ ಸಿಂಪಲ್​ ಆಗಿ ಈ ಶುಭಕಾರ್ಯ ನಡೆದಿದೆ.

ಇದನ್ನೂ ಓದಿ:  ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾಕ್ಕೆ ಮಗಳೇ ನಿರ್ಮಾಪಕಿ..?

ಹರಿಪ್ರಿಯಾ ಅವರ ನಿವಾಸದಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಎರಡೂ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು. ತಮ್ಮ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಉಂಗುರ ಬದಲಾಯಿಸಿಕೊಂಡಿದ್ದಾರೆ. ಈ ಜೋಡಿ

ಜನವರಿ ಅಥವಾ ಫೆಬ್ರವರಿಯಲ್ಲಿ ಮದುವೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಲ ದಿನಗಳ ಹಿಂದಷ್ಟೇ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದುಬೈ ಪ್ರವಾಸ ಮುಗಿಸಿಕೊಂಡು ಬಂದಿದ್ದರು. ಕೈಕೈ ಹಿಡಿದು ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

suddiyaana