ಅರೆಬರೆ ಬಟ್ಟೆಯಲ್ಲಿ ರೀಲ್ಸ್ ಮಾಡಿದ ಹೆಂಡ್ತಿ! – ಬದುಕಿದ್ದಾಗಲೇ ಪತ್ನಿಗೆ ಪಿಂಡಪ್ರದಾನ ಮಾಡಿದ ಗಂಡ

ಇದು ಡಿಜಿಟಲ್ ಯುಗ.. ಎಲ್ಲರಿಗಿಂತಲೂ ಡಿಫ್ರೆಂಟ್ ಆಗಿ ಕಾಣಬೇಕು ಅಂತ ಅರೆಬರೆ ಬಟ್ಟೆಯಲ್ಲಿ ರೀಲ್ಸ್, ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿರ್ತಾರೆ. ರೀಲ್ಸ್ ಹುಚ್ಚಿನಿಂದಾಗಿ ಈಗಾಗಲೇ ಹಲವು ಸಂಸಾರಗಳು ಮುರಿದು ಬಿದ್ದಿವೆ. ಇದೀಗ ಇಲ್ಲೊಂದು ಕಡೆ ಅರೆ,ಬರೆ ಬಟ್ಟೆ ಹಾಕಿ ರೀಲ್ಸ್ ಮಾಡುತ್ತಿದ್ದ ಹೆಂಡತಿಯ ಪಿಂಡ ಬಿಟ್ಟಿದ್ದಾನೆ. ಇದ್ರ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ನೂತನ ಶಾಸಕರಾಗಿ ಉಮೇಶ್ ಮೇಟಿ, ಸಮರ್ಥ್ ಶಾಮನೂರು ಪ್ರಮಾಣವಚನ ಸ್ವೀಕಾರ
ಹೌದು, ತನ್ನ ಮಾತು ಕೇಳದೆ ಸದಾ ಅರೆಬರೆ ಬಟ್ಟೆ ತೊಟ್ಟು ರೀಲ್ಸ್ ಮಾಡುತ್ತಿದ್ದ ಪತ್ನಿಯ ವರ್ತನೆಯಿಂದ ಬೇಸತ್ತ ವ್ಯಕ್ತಿಯೊಬ್ಬ, ಆಕೆ ಬದುಕಿದ್ದಾಗಲೇ ಹರಿದ್ವಾರದಲ್ಲಿ ಆಕೆಗೆ ಪಿಂಡಪ್ರದಾನ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಅಷ್ಟಕ್ಕೂ ಆಗಿದ್ದೇನು?
ವರದಿಗಳ ಪ್ರಕಾರ, ರೀಲ್ಸ್ ಸ್ಟಾರ್ ಆಗಿರುವ ಹೇಮಾ ಚೌಧರಿ(@hemachoudhary986) ಎಂಬುವವರ ಪತಿಯೇ ಈ ವಿಚಿತ್ರ ಸಾಹಸಕ್ಕೆ ಕೈಹಾಕಿದವರು. ಹೇಮಾ ಅವರು ಸದಾ ಕಾಲ ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟ್ ಮಾಡುವುದು ಮತ್ತು ರೀಲ್ಸ್ ಮಾಡುವುದರಲ್ಲಿ ಬ್ಯುಸಿಯಾಗಿರುತ್ತಿದ್ದಳು. ಈ ವಿಚಾರವಾಗಿ ದಂಪತಿಗಳ ನಡುವೆ ಸಾಕಷ್ಟು ಬಾರಿ ಜಗಳ ನಡೆದಿತ್ತು. ರೀಲ್ಸ್ ಮಾಡುವುದನ್ನು ನಿಲ್ಲಿಸು, ಸಂಸಾರದ ಕಡೆ ಗಮನ ಕೊಡು ಎಂಬ ಪತಿಯ ಮನವಿಗೆ ಹೇಮಾ ಕಿವಿಗೊಟ್ಟಿರಲಿಲ್ಲ ಎನ್ನಲಾಗಿದೆ.
ಅರೆಬರೆ ಬಟ್ಟೆತೊಟ್ಟು ರೀಲ್ಸ್ ಮಾಡುತ್ತಿದ್ದ ಪತ್ನಿಯಿಂದ ಅಸಮಾಧಾನಗೊಂಡ ಪತಿ ಆಯ್ದುಕೊಂಡ ದಾರಿ ಹರಿದ್ವಾರ. ಅಲ್ಲಿಗೆ ತೆರಳಿದ ಆತ, ಸಾಮಾನ್ಯವಾಗಿ ಸತ್ತವರಿಗೆ ಮಾಡುವ ಪಿಂಡಪ್ರದಾನ ವಿಧಿವಿಧಾನವನ್ನು ತನ್ನ ಪತ್ನಿಯ ಹೆಸರಿನಲ್ಲಿ ನೆರವೇರಿಸಿದ್ದಾರೆ. ವಿಶೇಷವೆಂದರೆ, ಪತ್ನಿ ರೀಲ್ಸ್ ಮಾಡುವುದನ್ನು ವಿರೋಧಿಸುತ್ತಿದ್ದ ಪತಿ, ತಾನು ಮಾಡಿದ ಈ ಪಿಂಡಪ್ರದಾನದ ಇಡೀ ಪ್ರಕ್ರಿಯೆಯನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ನನ್ನ ಪತ್ನಿ ಈಗ ನನಗೆ ಸತ್ತಂತೆ ಎಂಬ ಸಂದೇಶವನ್ನು ರವಾನಿಸಲು ಆತ ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನೋಡಿರಿ

