‘ನಾಯಿ’ ಎಂದಿದ್ಯಾರಿಗೆ ಸಿಧು?, ಮುಂಬೈನಲ್ಲೂ ಹಾರ್ದಿಕ್ ಟ್ರೋಲ್? – ಮುಂಬೈ ಇಂಡಿಯನ್ಸ್ ಒಳಗಿನ ರಹಸ್ಯ ಬಿಚ್ಚಿಟ್ಟಿದ್ಯಾರು?
ಆನೆಗೆ ಧೂಳು ಮೆತ್ತಿಕೊಂಡಿದ್ದರೂ ಆನೆಯ ಮೇಲಿನ ಗೌರವ ಕಡಿಮೆ ಆಗೋದಿಲ್ಲ.. ನಾಯಿಯನ್ನು ಚಿನ್ನದ ಸರಪಳಿಯಿಂದ ಕಟ್ಟಿಹಾಕಿದರೂ ಅದರ ಗೌರವ ಹೆಚ್ಚಾಗೋದಿಲ್ಲ.. ಕೇಳಿದ್ರೆ ವಾವ್ ವಾವ್ ಅನ್ನಿಸುವ ಈ ಸಾಲುಗಳನ್ನು ಹೇಳಿದ್ದು ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕಾಮೆಂಟೇಟರ್ ನವಜೋತ್ ಸಿಂಗ್ ಸಿಧು.. ಹಲವು ವರ್ಷಗಳ ನಂತರ ಕ್ರಿಕೆಟ್ ಕಾಮೆಂಟ್ರಿಗೆ ಮರಳಿರುವ ಸಿಧು ಐಪಿಎಲ್‌ನ ಆರಂಭದಲ್ಲೇ ತಮ್ಮ ಎಕ್ಸ್ ಖಾತೆಯಲ್ಲಿ ಹಾಕಿರುವ ಪೋಸ್ಟ್ ಸದ್ದು ಮಾಡಿದೆ.. ಇಷ್ಟಕ್ಕೂ ಸಿಧು ನಾಯಿ ಎಂದಿದ್ಯಾರನ್ನು.. ಆನೆಯ ಹೋಲಿಕೆ ಮಾಡಿದ್ಯಾರಿಗೆ? ಎನ್ನುವುದರ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಚೆನ್ನೈ ಸೂಪರ್ ಕಿಂಗ್ಸ್‌ಗೆ ಮೊದಲ ಸೋಲು – ಖಾತೆ ತೆರೆದ ಡೆಲ್ಲಿ ಕ್ಯಾಪಿಟಲ್ಸ್!
ನವಜೋತ್ ಸಿಂಗ್ ಸಿಧು ಹೇಳುವ ಶಾಯರಿಗಳು.. ಕಟ್ ಮಾಡುವ ಜೋಕ್‌ಗಳು.. ಕಾಮೆಂಟ್ರಿಯಲ್ಲಿ ಪೋಣಿಸುವ ಪದಪುಂಜಗಳು ಯಾವತ್ತಿದ್ದರೂ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಕೊಡುತ್ತವೆ.. ಕ್ರಿಕೆಟ್ ಪ್ರಿಯರ ಮನಸ್ಸಿನಲ್ಲಿ ಏನಿರುತ್ತದೋ ಅದನ್ನು ಓದಿಕೊಂಡಂವರಂತೆ ಸಿಧು ಪದಗಳನ್ನು ಪೋಣಿಸುತ್ತಾರೆ.. ಈಗ ಐಪಿಎಲ್ ಸೀಸನ್‌ನ ಆರಂಭದಲ್ಲೇ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಕ್ರಿಕೆಟ್ ಪ್ರಿಯರ ಟ್ರೋಲ್‌ಗೆ ಗುರಿಯಾಗಿದ್ದಾರೆ.. ಹಾರ್ದಿಕ್ ಪಾಂಡ್ಯ ಹೋದಲ್ಲಿ ಬಂದಲ್ಲಿ ಎಲ್ಲಾ ಕಡೆ ರೋಹಿತ್.. ರೋಹಿತ್.. ಅಂತ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾ, ಕರೆಯುತ್ತಿದ್ದಾರೆ.. ಸೋಮವಾರ ಮುಂಬೈ ಇಂಡಿಯನ್ಸ್ ತಂಡ ತವರು ನೆಲ ಮುಂಬೈನಲ್ಲೇ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಲು ರೆಡಿಯಾಗಿದೆ.. ಇಂತ ಟೈಮಲ್ಲೇ ನವಜೋತ್ ಸಿಂಗ್ ಸಿಧು ತಮ್ಮ ಎಕ್ಸ್ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ.. ತಾವೇ ಕಾಮೆಂಟ್ರಿಯ ಮೂಲಕ ಹೇಳಿರುವ ಸಾಲುಗಳಿರುವ ವೀಡಿಯೋಗಿಂತ ಈಗ ಅವರು ಬರೆದಿರುವ ಸಾಲುಗಳೇ ಹೆಚ್ಚು ಸದ್ದು ಮಾಡಿವೆ.. ಆ ವೀಡಿಯೋದಲ್ಲಿ ಎಲ್ಲಾ ಕಾಡುಗಳಲ್ಲಿ ಶ್ರೀಗಂಧದ ಮರ ಇರೋದಿಲ್ಲ.. ಹಾಗೆಯೇ ಎಲ್ಲಾ ಫ್ರಾಂಚೈಸಿಗಳ ಬಳಿ ರೋಹಿತ್ ಶರ್ಮಾನಂತಹ ಆಟಗಾರ ಇರೋದಿಲ್ಲ ಎಂದು ಕಾಮೆಂಟ್ರಿಯಲ್ಲಿ ಸಿಧು ಹೇಳಿದ್ದರು.. ಆದರೆ ಅದಕ್ಕಿಂತ ಹೆಚ್ಚು ಕಣ್ಣುಕುಕ್ಕಿದ್ದು ಎಕ್ಸ್‌ನಲ್ಲಿ ಬರೆದ ಸಾಲುಗಳು.. ಆನೆಗೆ ಧೂಳು ಮೆತ್ತಿಕೊಂಡಿದ್ದರೂ ಆನೆಯ ಮೇಲಿನ ಗೌರವ ಕಡಿಮೆ ಆಗೋದಿಲ್ಲ.. ನಾಯಿಯನ್ನು ಚಿನ್ನದ ಸರಪಳಿಯಿಂದ ಕಟ್ಟಿಹಾಕಿದರೂ ಅದರ ಗೌರವ ಹೆಚ್ಚಾಗೋದಿಲ್ಲ. ಎಂದು ಸಿಧು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.. ಈ ಕಾಮೆಂಟ್ ಓದಿದ ಅಭಿಮಾನಿಗಳು ಇದರಲ್ಲಿ ಆನೆ ಯಾರು? ನಾಯಿ ಯಾರು ಎಂದು ಚರ್ಚೆ ಶುರು ಮಾಡಿದ್ದಾರೆ.. ಆದರೆ ವೀಡಿಯೋದಲ್ಲಿ ರೋಹಿತ್ ಅವರನ್ನು ಹೊಗಳಿರುವುದರಿಂದ ಸಿಧು, ಧೂಳು ಮೆತ್ತಿಕೊಂಡಿರುವ ಆನೆಯೆಂದು ಕರೆದಿದ್ದು, ಕ್ಯಾಪ್ಟನ್ಸಿ ಕಳೆದುಕೊಂಡಿರುವ ರೋಹಿತ್ ಶರ್ಮಾ ಬಗ್ಗೆ ಎನ್ನುವುದರಲ್ಲಿ ಅನುಮಾನವೇ ಇಲ್ಲ… ಆದ್ರೆ ಇದೇ ವೇಳೆ ಚಿನ್ನದ ಸರಪಳಿಯಲ್ಲಿ ಕಟ್ಟಿಹಾಕಿರುವ ನಾಯಿ ಎಂದಿದ್ಯಾರಿಗೆ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಊಹೆಗೆ ಬಿಟ್ಟಿದ್ದು..
ಅಂದಹಾಗೆ ಇವತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಸೆಣೆಸಲಿದೆ. ಈ ಐಪಿಎಲ್ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್‌ಗೆ ತವರು ನೆಲದಲ್ಲಿ ಇದೇ ಮೊದಲ ಪಂದ್ಯ.. ಈಗಾಗ್ಲೇ ಆಡಿರುವ ಎರಡೂ ಪಂದ್ಯಗಲ್ಲಿ ಮುಂಬೈ ಇಂಡಿಯನ್ಸ್ ಸೋತಿದೆ.. ಅದರಲ್ಲೂ ಹೈದರಾಬಾದ್ ವಿರುದ್ಧ ಮುಂಬೈ ಹೀನಾಯವಾಗಿ ಸೋತಿದೆ.. ಬಲಿಷ್ಠ ಮುಂಬೈ ವಿರುದ್ಧ ಐಪಿಎಲ್‌ನ ದಾಖಲೆಯ ರನ್ ಬಾರಿಸಿ, ಎಂಐ ಬೌಲಿಂಗ್ ಅಟ್ಯಾಕ್ ಮತ್ತು ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯಾನ ಅಪ್ರಬುದ್ಧ ನಾಯಕತ್ವವನ್ನು ಹೈದ್ರಾಬಾದ್ ಎಕ್ಸ್‌ಪೋಸ್ ಮಾಡಿತ್ತು.. ಇನ್ನು ಆಡಿರುವ ಎರಡೂ ಪಂದ್ಯಗಳ ವೇಳೆ ಸ್ಟೇಡಿಯಂನಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಹಾರ್ದಿಕ್ ಪಾಂಡ್ಯಾನನ್ನು ಕಿಚಾಯಿಸಿದ್ದರು.. ಹೋದಲ್ಲಿ ಬಂದಲ್ಲಿ ಕಿವಿ ಬಿಡದ ರೀತಿಯಲ್ಲಿ ಕಾಡಿದ್ದಾರೆ.. ಈಗ ಮುಂಬೈನಲ್ಲೂ ಇದೇ ವರ್ತನೆ ಮರುಕಳಿಸುತ್ತಾ ಎಂಬ ಅನುಮಾವಿದೆ.. ಜಿಟಿಯಿಂದ ಮುಂಬೈ ತಂಡ ಸೇರಿಕೊಂಡ ಮೇಲೆ ಇದು ಹಾರ್ದಿಕ್‌ಗೆ ಮೊದಲ ಮುಂಬೈ ಪಂದ್ಯ.. ಅಲ್ಲದೆ ರೋಹಿತ್ ಶರ್ಮಾನನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುವ ಅಭಿಮಾನಿಗಳು ಮುಂಬೈನಲ್ಲಿದ್ದಾರೆ.. 10 ವರ್ಷಗಳ ಕ್ಯಾಪ್ಟನ್ಸಿಯಲ್ಲಿ ಮುಂಬೈ ತಂಡವನ್ನು ಐದು ಬಾರಿ ಚಾಂಪಿಯನ್ ಮಾಡಿದ್ದು ಇದೇ ರೋಹಿತ್ ಶರ್ಮಾ.. ಹಾಗಿದ್ದರೂ ತಂಡದ ಮೇಲಿನ ಅಭಿಮಾನದಿಂದ, ಟೀಂ ನಾಯಕನನ್ನು ತೆಗಳದೇ, ಇಡೀ ತಂಡವನ್ನು ಪ್ರೇಕ್ಷಕರು ಬೆಂಬಲಿಸುತ್ತಾರಾ ಎಂಬುದನ್ನೇ ಈಗ ಎಲ್ಲರೂ ಎದುರು ನೋಡುತ್ತಿದ್ದಾರೆ. ಇದರ ನಡುವೆ ಮುಂಬೈನಲ್ಲಿ ಹಾರ್ದಿಕ್ ಪಾಂಡ್ಯಾ ವಿರುದ್ಧ ಪ್ರೇಕ್ಷಕರು ಆಕ್ರೋಶ ಹೊರಹಾಕದಂತೆ ವಾಂಖೇಡೆ ಸ್ಟೇಡಿಯಂನಲ್ಲಿ ಸೂಚನೆ ನೀಡಲಾಗುತ್ತದೆ ಎಂಬ ಸುದ್ದಿ ಹರಿದಾಡಿತ್ತು.. ಆದ್ರೆ ಇಂತಹ ಸೂಚನೆ ನೀಡುವ ಸಾಧ್ಯತೆಯನ್ನು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ತಳ್ಳಿಹಾಕಿದೆ.. ಪ್ರೇಕ್ಷಕರಿಗೆ ಘೋಷಣೆ ಕೂಗದಂತೆ ಯಾವುದೇ ಸೂಚನೆ ನೀಡುವುದಿಲ್ಲ ಎಂದು ಎಂಸಿಎ ಸ್ಪಷ್ಟಪಡಿಸಿದೆ.. ಇದರಿಂದಾಗಿ ಮುಂಬೈನಲ್ಲಿ ಮತ್ತೆ ಹಾರ್ದಿಕ್‌ಗೆ ರೋಹಿತ್ ಬೆಂಬಲಿಗರು ಕಾಟ ಕೊಡುತ್ತಾರಾ ಎಂದು ನೋಡಬೇಕಿದೆ..
ಇದರ ನಡುವೆ ಹಾರ್ದಿಕ್ ಪಾಂಡ್ಯಾರನ್ನು ಮುಂಬೈ ಆಡಿರುವ ಎರಡು ಮ್ಯಾಚ್‌ಗಳ ವೇಳೆ ಪ್ಯಾನ್ಸ್ ಕಿಚಾಯಿಸಿದ್ದರು.. ಕಿವಿ ಬಿಡದಂತೆ ಕಾಡಿದ್ದರು.. ಮುಂಬೈ ತಂಡದ ಸ್ಪಿನ್ನರ್ ಪಿಯೂಷ್ ಚಾವ್ಲಾ ಇದರ ಬಗ್ಗೆ ಮಾತಾಡಿದ್ದಾರೆ.. ಮುಂಬೈ ತಂಡದ ಕ್ಯಾಪ್ಟನ್ ಕೇವಲ ಆಟದ ಬಗ್ಗೆ ಮಾತ್ರ ಫೋಕಸ್ ಆಗಿದ್ದಾರೆ.. ಪಾಂಡ್ಯಾ ಎಲ್ಲೂ ಪ್ರೇಕ್ಷಕರು ಎಬ್ಬಿಸಿರುವ ರೋಹಿತ್ ರೋಹಿತ್ ಕೂಗಿಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಪಿಯೂಷ್ ಚಾವ್ಲಾ ಹೇಳಿದ್ದಾರೆ.. ಅಲ್ಲದೆ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯಾ ನಡುವೆ ತಂಡದ ನಾಯಕತ್ವದ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಚಾವ್ಲಾ ಸ್ಪಷ್ಟಪಡಿಸಿದ್ದಾರೆ.. ಹಾಗಿದ್ದರೂ ಹೈದ್ರಾಬಾದ್ ವಿರುದ್ಧದ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ಫ್ರ್ಯಾಂಚೈಸಿ ಮಾಲೀಕ ಆಕಾಶ್ ಅಂಬಾರಿ, ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯಾರನ್ನು ಕರೆಸಿ ಮಾತುಕತೆ ನಡೆಸುತ್ತಿದ್ದರು.. ಅಲ್ಲದೆ ನೀತಾ ಅಂಬಾನಿ ಕೂಡ ರೋಹಿತ್ ಶರ್ಮಾ ಜೊತೆಗೆ ಚರ್ಚೆ ನಡೆಸುತ್ತಿದ್ದುದು ಕಂಡು ಬಂದಿತ್ತು.. ಇದ್ರಿಂದಾಗಿ ತಂಡದ ಕ್ಯಾಪ್ಟನ್ ಬದಲಾಗುತ್ತಾರೆ ಎಂದು ಮುಂಬೈ ಇಂಡಿಯನ್ಸ್ ಫ್ಯಾನ್ಸ್ ಅಂದುಕೊಂಡಿದ್ದರು.. ಆದ್ರೆ ಮೂರನೇ ಪಂದ್ಯದಲ್ಲೂ ಹಾರ್ದಿಕ್ ಪಾಂಡ್ಯಾ ಕ್ಯಾಪ್ಟನ್ ಆಗಿ ಮುಂದುವರೆಯಲಿದ್ದಾರೆ.. ಮುಂಬೈನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎಂಐ ಎದುರಿಸಲಿದೆ.. ಈ ಬಾರಿಯ ಐಪಿಎಲ್‌ನಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಗೆದ್ದಿರುವ ಆರ್‌ಆರ್ ಫುಲ್ ಜೋಶ್‌ನಲ್ಲಿದೆ.. ತಂಡದ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಕೂಡ ಉತ್ತಮವಾಗಿ ಆಡುತ್ತಿದ್ದು, ಇಡೀ ತಂಡ ಒಳ್ಳೆಯ ಬ್ಯಾಲೆನ್ಸ್‌ನಿಂದ ಕೂಡಿದೆ.. ಆದರೆ ಆಡಿರುವ ಎರಡೂ ಮ್ಯಾಚ್ ಸೋತಿರುವ ಮುಂಬೈ ಈಗ ಒತ್ತಡದಲ್ಲಿದೆ.. ಅಲ್ಲದೆ ಕ್ಯಾಪ್ಟನ್ ಆಗಿ ಮುಂದುವರೀಬೇಕಂದ್ರೆ ಹಾರ್ದಿಕ್‌ಗೆ ಈ ಮ್ಯಾಚ್ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.. ಮುಂಬೈನಲ್ಲಿ ಯಾರೇ ಟಾಸ್ ಗೆದ್ದರೂ ಮೊದಲು ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚಿದೆ.. ಡ್ಯೂ ಫ್ಯಾಕ್ಟರ್‌ನಿಂದ ಎರಡನೇ ಅವಧಿಯಲ್ಲಿ ಬೌಲಿಂಗ್ ಮಾಡುವುದು ಸ್ವಲ್ಪ ಕಷ್ಟವಾಗಬಹುದು.. ಮೇಲ್ನೋಟಕ್ಕೆ ಮುಂಬೈ ತಂಡ ಬಲಿಷ್ಠವಾಗಿದ್ದರೂ ಉತ್ತಮ ಆಟದ ಮೂಲಕ ಅವರನ್ನು ಮಣಿಸುವ ವಿಶ್ವಾಸದಲ್ಲಿ ರಾಜಸ್ಥಾನ ರಾಯಲ್ಸ್ ಇದೆ..