PBKSಗೆ ಪಾಂಡ್ಯ.. LSGಗೆ ಸೂರ್ಯ? – MIಗೆ ಮತ್ತೆ ರೋಹಿತ್ ಕ್ಯಾಪ್ಟನ್?
IPLನಲ್ಲಿ ಮತ್ತೊಂದು ಬಿಗ್ ಡೀಲ್?

PBKSಗೆ ಪಾಂಡ್ಯ.. LSGಗೆ ಸೂರ್ಯ? – MIಗೆ ಮತ್ತೆ ರೋಹಿತ್ ಕ್ಯಾಪ್ಟನ್?IPLನಲ್ಲಿ ಮತ್ತೊಂದು ಬಿಗ್ ಡೀಲ್?

ಮುಂಬೈ ಇಂಡಿಯನ್ಸ್.. ಐಪಿಎಲ್​ನ ಐದು ಬಾರಿಯ ಚಾಂಪಿಯನ್ಸ್ ತಂಡ.. ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್​ಗಳ ದಂಡೇ ಇರೋ ಫ್ರಾಂಚೈಸಿ. ಆದ್ರೆ ಕಳೆದ ಮೂರ್ನಾಲ್ಕು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಎಂಐ ಕ್ಯಾಂಪ್​ನದ್ದೇ ಹಾಟ್ ಟಾಪಿಕ್. ಅದ್ರಲ್ಲೂ ಬಿಗ್ ಪ್ಲೇಯರ್​ಗಳ ಹೆಸ್ರೇ ಬಿಸಿಬಿಸಿ ಚರ್ಚೆಯಲ್ಲಿದೆ. ಕ್ಯಾಪ್ಟನ್ ಬದಲಾವಣೆ ಬಿರುಗಾಳಿಯೂ ಎದ್ದಿದೆ.

ಇದನ್ನೂ ಓದಿ : ಕೆಣಕಿದ ಕೊಹ್ಲಿ.. ಫಿಲಿಪ್ಸ್ ಡೋಂಟ್ಕೇರ್ RCB ಡಫಿಗೆ ಕಿರಿಕಿರಿಯಾದ ವಿರಾಟ್!

2026ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ 9ನೇ ಸ್ಥಾನದಲ್ಲಿ ಲೀಗ್ ಮುಗಿಸಿತ್ತು. ಬಟ್ 2027ಕ್ಕೆ ಮತ್ತೆ ಗತವೈಭವ ಶುರು ಮಾಡ್ಬೇಕು ಅಂತಾ ಈಗಾಗ್ಲೇ ಕೋಚಿಂಗ್ ಸ್ಟಾಫ್ಸ್​ನಲ್ಲಿ ಕಂಪ್ಲೀಟ್ ಬದಲಾವಣೆ ಮಾಡಿದ್ದಾರೆ. ಇನ್ನೇನಿದ್ರೂ ಕೆಲ ಆಟಗಾರರಿಗೆ ಗೇಟ್​ಪಾಸ್ ಕೊಟ್ಟು ಹೊಸ ಪ್ಲೇಯರ್​ಗಳನ್ನ ಸೆಳೆಯೋಕೆ ಕಸರತ್ತೂಗಳೂ ನಡೆದಿವೆ. ಅದ್ರಲ್ಲೂ ಸದ್ಯದ ಟ್ರೆಂಡಿಂಗ್ ಮ್ಯಾಟರ್ ಅಂದ್ರೆ ಹಾರ್ದಿಕ್ ಪಾಂಡ್ಯ ಅವ್ರ ಟ್ರೇಡ್ ಡೀಲ್.

ಹಾರ್ದಿಕ್ ಪಾಂಡ್ಯಗಾಗಿ ರಾಜಸ್ಥಾನ ಮತ್ತು ಪಂಜಾಬ್ ನಡುವೆ ಫೈಟ್!

ಹಾರ್ದಿಕ್ ಪಾಂಡ್ಯ ಗ್ರೇಟ್ ಅಲ್​​ರೌಂಡರ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಬ್ಯಾಟ್ ಹಿಡಿದ್ರೂ ಪವರ್ ಹಿಟ್ಟರ್.. ಬೌಲಿಂಗ್ ಬಂದ್ರೂ ವಿಕೆಟ್ ಟೇಕರ್. ಆದ್ರೆ ಕಳೆದ ಮೂರು ಆವೃತ್ತಿಗಳಿಂದ ಮುಂಬೈ ಕ್ಯಾಪ್ಟನ್ ಆದ್ಮೇಲೆ ತಂಡದ ಪ್ರದರ್ಶನವೂ ಅಷ್ಟಕ್ಕಷ್ಟೇ. ಅವ್ರ ಆಟವೂ ಆವರೇಜ್ ಆಗಿದೆ. ಹೀಗಾಗಿ ಪಾಂಡ್ಯನನ್ನೇ ಹೊರ ಬಿಡೋಕೆ ಫ್ರಾಂಚೈಸಿ ಮುಂದಾಗಿದೆ. ಈ ವಿಚಾರ ಗೊತ್ತಾಗ್ತಿದ್ದಂತೆ ಫ್ರಾಂಚೈಸಿಗಳೂ ಮುಗಿಬಿದ್ದಿವೆ. ಪಂಜಾಬ್ ಕಿಂಗ್ಸ್ ತಂಡ ಹಾರ್ದಿಕ್ ಅವರನ್ನು ಪಡೆಯಲು ಮುಂಬೈ ಜೊತೆ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ. ಪ್ರಸ್ತುತ ಆಫರ್​ ಪ್ರಕಾರ ಅರ್ಶ್‌ದೀಪ್ ಸಿಂಗ್ ಮತ್ತು ವಿಕೆಟ್ ಕೀಪರ್-ಬ್ಯಾಟರ್ ವಿಷ್ಣು ವಿನೋದ್ ರನ್ನ ಮುಂಬೈಗೆ ಕೊಟ್ಟು ಪಾಂಡ್ಯರನ್ನ ಪಂಜಾಬ್​ಗೆ ತರೋ ಡೀಲ್ ಮುಂದಿಟ್ಟಿದ್ದಾರೆ. ಮತ್ತೊಂದ್ಕಡೆ ರಾಜಸ್ಥಾನ್ ರಾಯಲ್ಸ್ ಕೂಡ ಹಾರ್ದಿಕ್‌ಗಾಗಿ ಆಸಕ್ತಿ ತೋರಿಸಿದೆ. ಯಶಸ್ವಿ ಜೈಸ್ವಾಲ್ ಸೇರಿದಂತೆ ಹೊಸ ಆಟಗಾರರ ಹೆಸರೂ ಸ್ವ್ಯಾಪ್​ ಡೀಲ್​ನಲ್ಲಿ ಕೇಳಿ ಬರ್ತಿದೆ. ಆದ್ರೆ ಫ್ರಾಂಚೈಸಿ ಮಾತ್ರ ಹಾರ್ದಿಕ್ ವಿಚಾರವಾಗಿ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ.

ಲಕ್ನೋ ಕ್ಯಾಪ್ಟನ್ ಆಗ್ತಾರಾ ಸೂರ್ಯಕುಮಾರ್ ಯಾದವ್?

ಇನ್ನು ಮುಂಬೈ ಕ್ಯಾಂಪ್​ನಿಂದ ಹೊರಬರೋ ಮತ್ತೊಂದು ಬಿಗ್ ನೇಮ್ ಟೀಂ ಇಂಡಿಯಾ ಮಾಜಿ ನಾಯಕ ಸೂರ್ಯಕುಮಾರ್ ಯಾದವ್. ರಿಷಬ್ ಪಂತ್​ರನ್ನ ತಂಡದಿಂದ ಹೊರಬಿಟ್ಟ ಮೇಲೆ ಸಂಜೀವ್ ಗೋಯೆಂಕಾ ಒಡೆತನದ ಲಕ್ನೋ ಸೂಪರ್ ಜೇಂಟ್ಸ್ ಫ್ರಾಂಚೈಸಿ ಹೊಸ ನಾಯಕನ ಹುಡುಕಾಟದಲ್ಲಿದೆ. ಸೋ ಸೂರ್ಯಕುಮಾರ್ ತಂಡಕ್ಕೆ ಕರೆತಂದ್ರೆ ಅವ್ರನ್ನ ನಾಯಕ ಮಾಡೋದು ಅವ್ರ ಪ್ಲ್ಯಾನ್. ಟೀಂ ಇಂಡಿಯಾದಲ್ಲಿ ಒಂದೇ ಒಂದು ಸರಣಿ ಸೋಲದೆ ತಂಡವನ್ನ ಟಿ-20 ವಿಶ್ವಚಾಂಪಿಯನ್ ಮಾಡಿದ ನಾಯಕ ಸೂರ್ಯ. ಹೀಗಾಗಿ ಮುಂಬೈ ಫ್ರಾಂಚೈಸಿ ಜೊತೆ ಟ್ರೇಡ್ ಡೀಲ್​ಗೆ ಟ್ರೈ ಮಾಡ್ತಿದೆ. ಬಟ್ ಮುಂಬೈ ಮಾತ್ರ ಸೂರ್ಯನ ಕಡೆ ಜಾಸ್ತಿ ಒಲವಿರೋ ಥರ ಇದ್ದು ಅವ್ರನ್ನ ತಂಡದಲ್ಲೇ ಉಳಿಸಿಕೊಳ್ಳೋ ಸಾಧ್ಯತೆಗಳು ಜಾಸ್ತಿ ಇದೆ. ಌಂಡ್ ಇದೆಲ್ಲಕ್ಕಿಂತ ಬಿಸಿ ಬಿಸಿ ಸುದ್ದಿ ಅಂದ್ರೆ ಕ್ಯಾಪ್ಟನ್ ಬದಲಾವಣೆ.

ಮುಂಬೈಗೆ ಮತ್ತೆ ಮಹರಾಜನಾಗ್ತಾರಾ ರೋಹಿತ್ ಶರ್ಮಾ?

ಪ್ರಸ್ತುತ ತಂಡದಲ್ಲಿ ಕೇಳಿಬರ್ತಿರೋ ಅತಿದೊಡ್ಡ ಬದಲಾವಣೆ ಸುದ್ದಿಯೇ ನಾಯಕತ್ವ ಬದಲಾವಣೆ ಸುದ್ದಿ. 2027ರ ಸೀಸನ್‌ನಲ್ಲಿ ರೋಹಿತ್ ಮತ್ತೆ MI ನಾಯಕನಾಗಬಹುದು ಎನ್ನಲಾಗಿದೆ. ಒಂದು ವೇಳೆ ಹಾರ್ದಿಕ್ ಪಾಂಡ್ಯ ತಂಡದಿಂದ ಹೊರಹೋಗದಿದ್ದರೂ ರೋಹಿತ್​ಗೆ ನಾಯಕತ್ವ ವಹಿಸುವ ಸಾಧ್ಯತೆ ಜಾಸ್ತಿ ಇದೆ. ತಂಡಕ್ಕೆ 5 ಬಾರಿ ಕಪ್ ಗೆಲ್ಲಿಸಿಕೊಟ್ಟ ರೋಹಿತ್​ರನ್ನ ಕಡೆಗಣಿಸಿದ್ದೇ ತಂಡದ ಕಳಪೆ ಪ್ರದರ್ಶನಕ್ಕೆ ಕಾರಣವಾಗಿತ್ತು. ಹೀಗಾಗಿ ಗತವೈಭವ ಮರುಸ್ಥಾಪಿಸಲು ಮತ್ತೆ ರೋಹಿತ್ ಮೊರೆ ಹೋಗೋಕೆ ಮುಂದಾಗಿದ್ದಾರೆ. ಆದ್ರೆ ರೋಹಿತ್ ನಿರ್ಧಾರದ ಮೇಲೆ ಎಲ್ಲವೂ ಡಿಸೈಡ್ ಆಗಲಿದೆ. 2027ರ ಐಪಿಎಲ್ ವೇಳೆಗೆ ರೋಹಿತ್ ಶರ್ಮಾಗೆ 40 ವರ್ಷ ವಯಸ್ಸಾಗಲಿದ್ದು, ಈ ಸೀಸನ್ ಮಾತ್ರ ಆಡೋಕೆ ನಿರ್ಧರಿಸಿದ್ರೆ ಕ್ಯಾಪ್ಟನ್ಸಿ ಒಪ್ಪದೇ ಇರಬಹುದು. 2027ರ ಏಕದಿನ ವಿಶ್ವಕಪ್ ಬಳಿಕ ಎಲ್ಲಾ ಮಾದರಿಗೂ ನಿವೃತ್ತಿ ಘೋಷಣೆ ಮಾಡ್ಬೋದು. ಒಂದು ವೇಳೆ ಅವರು ಆಟಗಾರನಾಗಿ ಮುಂದುವರಿಯಲು ಬಯಸದಿದ್ದರೆ, ಮುಂಬೈ ತಂಡದ ಮೆಂಟರ್ (Mentor) ಅಥವಾ ಕೋಚಿಂಗ್ ಸ್ಟಾಫ್ ಆಗಿ ಹೊಸ ಜವಾಬ್ದಾರಿ ವಹಿಸಿಕೊಳ್ಳಬಹುದು.

Shantha Kumari

Leave a Reply

Your email address will not be published. Required fields are marked *