ಗುಜರಾತ್ ಗೂಡಿಗೆ ಪಾಂಡ್ಯ ವಾಪಸ್? – GT ಕ್ಯಾಪ್ಟನ್ಸಿ ಮತ್ತೆ ಕೈ ಸೇರುತ್ತಾ?
ಹಾರ್ದಿಕ್ ಗಾಗಿ ಹದ್ದಿನ ಕಣ್ಣಿಟ್ಟವರೆಷ್ಟು?

2027ರ ಐಪಿಎಲ್ ಗೂ ಮುನ್ನ ಸಾಕಷ್ಟು ಆಟಗಾರರು ಫ್ರಾಂಚೈಸಿಗಳನ್ನ ಬದಲಾವಣೆ ಮಾಡ್ತಾರೆ. ಈಗಾಗ್ಲೇ ಕೆಲ ಬಿಗ್ ಪ್ಲೇಯರ್ಗಳೇ ಟೀಂ ಚೇಂಜ್ ಮಾಡಿದ್ದಾರೆ. ಈ ಲಿಸ್ಟ್ನಲ್ಲಿ ಸದ್ಯ ಹಲ್ಚಲ್ ಎಬ್ಬಿಸ್ತಿರೋ ಹೆಸ್ರು ಹಾರ್ದಿಕ್ ಪಾಂಡ್ಯ. ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾಗೇ ಮುಂಬೈ ಇಂಡಿಯನ್ಸ್ನ ಹಾಲಿ ಕ್ಯಾಪ್ಟನ್ ಕುಂಗ್ ಫು ಪಾಂಡ್ಯ ಎಂಐ ಬಿಡೋದು ಕನ್ಫರ್ಮ್ ಆಗಿದೆ. ಬಟ್ ನೆಕ್ಸ್ಟ್ ಯಾವ ಟೀಂ ಸೇರ್ತಾರೆ ಅನ್ನೋ ಬಗ್ಗೆ ಮಾತ್ರ ದಿನಕ್ಕೊಂದು ಅಪ್ಡೇಟ್ಸ್ ಹೊರ ಬೀಳ್ತಿದೆ. ಈಗಿರೋ ಬ್ರೇಕಿಂಗ್ ನ್ಯೂಸ್ ಪ್ರಕಾರ ಹಾರ್ದಿಕ್ ಪಾಂಡ್ಯ ವಾಪಸ್ ಗುಜರಾತ್ ಟೈಟಾನ್ಸ್ ಗೆ ಹೋಗೋ ಯೋಜನೆಯಲ್ಲಿದ್ದಾರೆ.
ಇದನ್ನೂ ಓದಿ : ವಿಶ್ವಕಪ್ ಗೆಲ್ಲಲು ಭುವಿ ರೆಡಿ – ಸೆಲೆಕ್ಟರ್ಸ್ ಕೈಯಲ್ಲಿ ಫೈನಲ್ ಟಿಕೆಟ್!
ಟೀಂ ಇಂಡಿಯಾದಲ್ಲಿ ಸದ್ಯ ಸೀಮಿತ ಓವರ್ಗಳ ಸ್ಟಾರ್ ಆಲ್ರೌಂಡರ್ ಅಂದ್ರೆ ಅದು ಹಾರ್ದಿಕ್ ಪಾಂಡ್ಯ. ಬ್ಯಾಟಿಂಗ್ ಇರ್ಲಿ, ಬೌಲಿಂಗ್ ಇರ್ಲಿ ಮ್ಯಾಚ್ ವಿನ್ನಿಂಗ್ ಪ್ಲೇಯರ್. ಐಪಿಎಲ್ನಲ್ಲೂ ಕ್ಯಾಪ್ಟನ್ ಆಗಿ ಟ್ರೋಫಿ ಗೆದ್ದಿರೋ ಸ್ಟಾರ್. ಆದ್ರೆ ಯಾವಾಗ ಮುಂಬೈ ತಂಡಕ್ಕೆ ಕ್ಯಾಪ್ಟನ್ ಆದ್ರೋ ಅಲ್ಲಿಂದ ಅವ್ರ ನಸೀಬೂ ಚೆನ್ನಾಗಿಲ್ಲ. ಮುಂಬೈ ಇಂಡಿಯನ್ಸ್ ಪರ್ಪಾಮೆನ್ಸ್ ಕೂಡ ಅಷ್ಟಕ್ಕಷ್ಟೇ ಇದೆ. ಇದೇ ಕಾರಣಕ್ಕೆ ದೊಡ್ಡ ಬದಲಾವಣೆಗೆ ಸಿದ್ಧತೆ ನಡೆದಿದೆ. 2027ರ ಐಪಿಎಲ್ಗೂ ಮುನ್ನ ಪಾಂಡ್ಯ ಮುಂಬೈ ಬಿಡೋದು ಕನ್ಫರ್ಮ್ ಆಗಿದೆ. ಸದ್ಯ ಅವ್ರನ್ನ ತಂಡಗಳಿಗೆ ಸೇರಿಸಿಕೊಳ್ಳೋಕೆ ಬೇರೆ ಬೇರೆ ಫ್ರಾಂಚೈಸಿಗಳು ಡೀಲ್ ಪ್ಲ್ಯಾನ್ಗಳನ್ನ ಮಾಡ್ತಿದ್ರೆ ಪಾಂಡ್ಯ ಮಾತ್ರ ಗುಜರಾತ್ ಟೈಟಾನ್ಸ್ ಮೇಲೇ ಕಣ್ಣಿಟ್ಟಿದ್ದಾರೆ.
ಜಿಟಿ ಕ್ಯಾಪ್ಟನ್ಸಿ ಕೇಳಿದ ಪಾಂಡ್ಯ.. ಆಫರ್ ತಿರಸ್ಕರಿಸಿದ ಗುಜರಾತ್!
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲೇ ಗುಜರಾತ್ ಟೈಟಾನ್ಸ್ ತಂಡವು ತನ್ನ ಚೊಚ್ಚಲ 2022ರ ಐಪಿಎಲ್ ಟ್ರೋಫಿ ಗೆದ್ದುಕೊಂಡಿತ್ತು. 2023ರಲ್ಲಿ ರನ್ನರ್-ಅಪ್ ಆಗಿತ್ತು. ಅದಾದ ಮೇಲೆ 2024ರ ಸೀಸನ್ಗೆ ಪಾಂಡ್ಯ ಮುಂಬೈ ಟೀಂ ಸೇರಿಕೊಂಡಿದ್ರು. ಕಳೆದ ಮೂರು ವರ್ಷಗಳಲ್ಲಿ ನಾಯಕನಾಗಿ ತಂಡವನ್ನ ಲೀಡ್ ಮಾಡ್ತಿದ್ರೂ ಇಂಡಿವಿಶ್ಯೂಯಲ್ ಆಗಿ ಅವ್ರ ಕಡೆಯಿಂದಲೂ ಒಳ್ಳೆ ಪ್ರದರ್ಶನ ಬರ್ತಿಲ್ಲ. ತಂಡದ ಗ್ರೋತ್ ಕೂಡ ಅಷ್ಟ್ರಲ್ಲೇ ಇದೆ. ಹೀಗಾಗಿ ಎಂಐ ಕ್ಯಾಂಪ್ನಿಂದ ಹೊರಬಂದು ಮತ್ತೆ ಗುಜರಾತ್ ಗೂಡು ಸೇರಿಕೊಳ್ಳೋ ಪ್ಲ್ಯಾನ್ನಲ್ಲಿದ್ದ ಪಾಂಡ್ಯಗೆ ಬಾರೀ ಹಿನ್ನಡೆಯಾಗಿದೆ.
ಕ್ಯಾಪ್ಟನ್ಸಿ ಕನ್ಫ್ಯೂಷನ್!
ಗುಜರಾತ್ ತಂಡಕ್ಕೆ ಕ್ಯಾಪ್ಟನ್ಸಿ ಜೊತೆ ಮರಳುವುದಾಗಿ ಪಾಂಡ್ಯ ಡಿಮ್ಯಾಂಡ್
ಪಾಂಡ್ಯ ಕರೆಸಿಕೊಳ್ಳೋಕೆ ಜಿಟಿ ರೆಡಿ ಇದ್ರೂ ನಾಯಕತ್ವ ನಿರಾಕರಣೆ
ಗಿಲ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲು ಆಗಲ್ಲ ಎಂದ ಫ್ರಾಂಚೈಸಿ
ನಾಯಕತ್ವ ಇಲ್ಲದೆ ಗುಜರಾತ್ ಪರ ಆಡಲ್ಲ ಎನ್ನುತ್ತಿರುವ ಪಾಂಡ್ಯ
ಕ್ಯಾಪ್ಟನ್ಸಿ ಬೇಡಿಕೆಯಿಂದ ಗುಜರಾತ್ ಮತ್ತು ಪಾಂಡ್ಯ ನಡುವೆ ಗೊಂದಲ
ಇಲ್ಲಿ ಪಾಂಡ್ಯಗೆ ನಾಯಕತ್ವ ಬೇಕು.. ಆದ್ರೆ ಗಿಲ್ರನ್ನ ಕೆಳಗಿಳಿಸೋಕೆ ಗುಜರಾತ್ ರೆಡಿ ಇಲ್ಲ. ಇದೇ ಕಾರಣಕ್ಕೆ ಈ ಡೀಲ್ ಆಲ್ಮೋಸ್ಟ್ ಕ್ಯಾನ್ಸಲ್ ಆಗೋ ಸ್ಟೇಜ್ನಲ್ಲಿದೆ. ಆದ್ರೆ ಬೇರೆ ಬೇರೆ ಫ್ರಾಂಚೈಸಿಗಳು ಪಾಂಡ್ಯ ಮೇಲೆ ಕಣ್ಣಿಟ್ಟಿದ್ದಾರೆ. ಅದೂ ಕೂಡ ಕೆಲವ್ರು ವಿತ್ ಕ್ಯಾಪ್ಟನ್ಸಿ ಆಫರ್ ನೀಡ್ತಿದ್ದಾರೆ.
ಪಾಂಡ್ಯ ಮೇಲೆ ಹದ್ದಿನಕಣ್ಣು!
ದುಬಾರಿ ಸಂಭಾವನೆಯ ಜೊತೆ ಕ್ಯಾಪ್ಟನ್ಸಿ ನೀಡಲು ಕೆಕೆಆರ್ ಆಫರ್
ಭವಿಷ್ಯದ ಸ್ಟಾರ್ ಆಲ್ ರೌಂಡರ್ ಆಗಿ ಟ್ರೇಡ್ ಗೆ ಸಿಎಸ್ ಕೆ ಪ್ಲ್ಯಾನ್
ಕ್ಯಾಪ್ಟನ್ ಹುಡುಕಾಟದಲ್ಲಿರೋ ಲಕ್ನೋಗೂ ಪಾಂಡ್ಯ ಬೆಸ್ಟ್ ಚಾಯ್ಸ್
ನಾಯಕತ್ವದ ಬದಲಾವಣೆ ಚಿಂತನೆಯಲ್ಲಿರೋ ಡೆಲ್ಲಿಗೂ ಪಾಂಡ್ಯ ಟಾರ್ಗೆಟ್
ಜೈಸ್ವಾಲ್ ಬಿಟ್ಟು ಹಾರ್ದಿಕ್ ಪಡೆಯೋಕೆ ರಾಜಸ್ಥಾನ ರಾಯಲ್ಸ್ ಐಡಿಯಾ
ಹೀಗೆ 2027ರ ಐಪಿಎಲ್ಗೂ ಮುನ್ನ ಹಾರ್ದಿಕ್ ಪಾಂಡ್ಯ ಸೆಂಟ್ರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ. ಫ್ರಾಂಚೈಸಿಗಳ ನಡುವೆ ಒಳಗೊಳಗೇ ಡೀಲ್ಗಳು ನಡೀತಾ ಇದ್ರೂ ಕೂಡ ಯಾವುದೂ ಫೈನಲ್ ಆಗ್ತಿಲ್ಲ. ಅವ್ರ ಕಂಡೀಷನ್ಸ್, ಇವ್ರ ಡಿಮ್ಯಾಂಡ್ಸ್ ಹೀಗೆ ಯಾವುದೂ ಸರಿ ಹೋಗ್ತಿಲ್ಲ. ಆದ್ರೆ 20ನೇ ಆವೃತ್ತಿಯಲ್ಲಿ ಪಾಂಡ್ಯ ಮುಂಬೈ ಬಿಡೋದಂತೂ ಗ್ಯಾರಂಟಿ ಇದೆ.

ನೋಡಿರಿ

