ಪಾಂಡ್ಯ ನತಾಶ ಮಧ್ಯೆ ನಡೆದಿದ್ದೇನು? – ಮನಬಿಚ್ಚಿ ಮಾತನಾಡಿದ ಹಾರ್ದಿಕ್ ಪತ್ನಿ!
ಡಿವೋರ್ಸ್ ಸುಳ್ಳೋ - ನಿಜವೋ?
ಹಾರ್ದಿಕ್ ಪಾಂಡ್ಯ ಹಾಗೂ ನತಾಶ ವಿಚ್ಚೇದನ ವದಂತಿಗೆ ಇನ್ನೂ ಬ್ರೇಕ್ ಬಿದ್ದಿಲ್ಲ.. ದಿನ ದಿನಕ್ಕೂ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ. ಇಬ್ಬರ ನಡೆಯೂ ನಿಗೂಢವಾಗಿದೆ. ನತಾಶ ಜಿಮ್, ಡ್ಯಾನ್ಸ್ ಅಂತಾ ಟೈಮ್ ಪಾಸ್ ಮಾಡ್ತಾ ಇದ್ರೆ, ಇತ್ತ ಹಾರ್ದಿಕ್ ಇಷ್ಟು ಕ್ರಿಕೆಟ್ ಅಂತಾ ಬ್ಯುಸಿ ಆಗಿದ್ದಾರೆ. ಡಿವೋರ್ಸ್ ರೂಮರ್ಸ್ ಹರಿದಾಡೋಕೆ ಶುರುವಾಗಿ ಹಲವು ತಿಂಗಳೇ ಉರುಳಿದ್ರೂ ಕೂಡ ಈ ಬಗ್ಗೆ ಇಬ್ಬರೂ ತುಟಿ ಬಿಚ್ಚಿ ಮಾತನಾಡ್ತಿಲ್ಲ. ಈ ನಡುವೆ ಹಾರ್ದಿಕ್ ಮಿಲ್ಕಿ ಬ್ಯೂಟಿ ಜೊತೆ ಡೇಟಿಂಗ್ ನಡೆಸ್ತಿದ್ದಾರೆ ಅನ್ನೋ ಗಾಸಿಪ್ ಹಬ್ತಾ ಇದೆ. ಇದೀಗ ಇಷ್ಟು ದಿನ ಸೈಲೆಂಟ್ ಆಗಿದ್ದಾ ನತಾಶ ಮಾರ್ಮಿಕವಾಗಿ ಮಾತನಾಡಿದ್ದಾರೆ.. ಜನ ಏನನ್ನೂ ತಿಳಿಯದೇ ಜಡ್ಜ್ ಮಾಡ್ತಾರೆ ಅಂತಾ ಹೇಳಿರುವ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ನತಾಶ ಹೇಳಿದ್ದೇನು? ಹಾರ್ದಿಕ್ ದಂಪತಿ ಮಧ್ಯೆ ಏನಾಗಿತ್ತು? ನತಾಶ ವಾದ ಏನು ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಗಂಭೀರ್ ಕೊಹ್ಲಿ ಒಂದಾಗಿದ್ದು ಇದಕ್ಕಾ? – ಗೌತಮ್ ಗಂಭೀರ್ ಗಾಗಿ ಕೊಹ್ಲಿಯನ್ನೇ ಕಡೆಗಣಿಸಿತಾ BCCI
ಹಾರ್ದಿಕ್ ಪಾಂಡ್ಯ ಕಳೆದ ಮೂರ್ನಾಲ್ಕು ತಿಂಗಳಲ್ಲಿ ಅನುಭವಿಸಿದಷ್ಟು ನೋವು, ಅಪಮಾನ, ಯಾತನೆ ಯಾರೊಬ್ಬರು ಅನುಭವಿಸಿಲ್ಲ. ಐಪಿಎಲ್ನಲ್ಲಿ ಸಾಲು ಸಾಲು ಟೀಕೆ, ಅಭಿಮಾನಿಗಳಿಂದಲೇ ಟ್ರೋಲ್, ದಾಂಪತ್ಯ ಜೀವನದಲ್ಲಿ ಬಿರುಕು ಅಂತಾ ನೋವಿನ ಮೇಲೆ ನೋವುಂಡ್ರು. ಇದೇ ನೋವಲ್ಲಿ ಟಿ20 ವಿಶ್ವಕಪ್ ತೆರಳಿದ್ದ ಹಾರ್ದಿಕ್ ಎಲ್ಲವನ್ನೂ ಮೆಟ್ಟಿನಿಂತು ದೇಶಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು.. ಪಾಂಡ್ಯ ಆಟವನ್ನ ಎಲ್ಲರು ಬೆರಗಾಗಿ ನೋಡಿದ್ರು.. ಚಾಂಪಿಯಲ್ ಆಗುತ್ತಿದ್ದಂತೆ ಚಪ್ರಿ ಅಂದವರೆಲ್ಲಾ ರಿಯಲ್ ಚಾಂಪಿಯನ್ ಅಂತ ಕೊಂಡಾಡಿದ್ರು..
ಪಾಂಡ್ಯ ಸಾಧನೆ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಕೊಂಡಾಡ್ತಿದೆ. ನತಶಾ ಮಾತ್ರ ಫುಲ್ ಸೈಲೆಂಟ್ ಆಗಿದ್ರು.. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ರು ಕೂಡ ಗಂಡನ ಸಾಧನೆಯ ಬಗ್ಗೆ ಒಂದೇ ಒಂದು ಮೆಚ್ಚುಗೆಯ ಮಾತುಗಳನ್ನ ಆಡಲಿಲ್ಲ. ಕನಿಷ್ಠ ಒಂದೇ ಒಂದು ಪೋಸ್ಟ್ ಮಾಡಲಿಲ್ಲ. ಹೀಗಾಗಿ ಡಿವೋರ್ಸ್ ವದಂತಿಗೆ ಪುಷ್ಠಿ ಸಿಕ್ಕಿದಂತಾಯಿತು ಮತ್ತು ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳು ನಿಜವೆಂದು ಹಲವರು ನಂಬಿದರು. ಅಲ್ಲದೆ, ನತಾಶಾ ಅವರನ್ನು ಕ್ರೀಡಾಭಿಮಾನಿಗಳು ಸಿಕ್ಕಾಪಟ್ಟೆ ಟ್ರೋಲ್ ಮಾಡಿದರು. ನತಾಶಾಳಂತಹ ಪತ್ನಿ ಯಾರಿಗೂ ಬೇಡ ಎಂದು ಕಿಡಿಕಾರಿದರು.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಮಿಲ್ಕಿ ಬ್ಯೂಟಿ ಜತೆ ಲವ್ನಲ್ಲಿ ಬಿದ್ದಿದ್ದಾರೆ ಸುಂಟರಗಾಳಿಯಂತೆ ಹಬ್ತಾ ಇದೆ. ಹಾರ್ದಿಕ್ ಪಾಂಡ್ಯ ಪ್ರಾಚಿ ಸೋಲಂಕಿಯ ಪ್ರೀತಿಯ ಬಲೆಗೆ ಬಿದ್ದಿದ್ದಾರೆ ಅನ್ನೋ ಸುದ್ದಿ ಸದ್ಯ ಸಖತ್ ಸೌಂಡ್ ಮಾಡ್ತಿದೆ. ಈ ಬೆನ್ನಲ್ಲೇ ನತಾಶ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ನತಾಶಾ ವಿಚ್ಛೇದನಕ್ಕೆ ನೇರವಾಗಿ ಪ್ರತಿಕ್ರಿಯಿಸುವ ಬದಲು ಪರೋಕ್ಷವಾಗಿ ತನ್ನ ಬಗ್ಗೆ ನೆಗೆಟಿವ್ ಆಗಿ ಮಾತನಾಡುತ್ತಿರುವವರಿಗೆ ಕೌಂಟರ್ ಕೊಟ್ಟಿದ್ದಾರೆ. ಟಿ20 ವಿಶ್ವಕಪ್ ಬಳಿಕ ಹಾರ್ದಿಕ್ ಪಾಂಡ್ಯಗೆ ಬೆಂಬಲ ಹೆಚ್ಚುತ್ತಿದ್ದಂತೆಯೇ ಕೆಲವರು ನತಾಶಾ ಅವರ ತಪ್ಪೇ ಇರಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲು ಆರಂಭಿಸಿದ್ದಾರೆ.
ಟ್ರೋಲ್ ಮಾಡುತ್ತಿರುವವರಿಗೆ ತಿರುಗೇಟು ನೀಡಿರುವ ನತಾಶಾ, ಜನ ಏನನ್ನೂ ತಿಳಿಯದೆ ಯಾರನ್ನಾದರೂ ಜಡ್ಜ್ ಮಾಡುತ್ತಾರೆ. ಘಟನೆಯ ಹಿಂದೆ ಏನು ನಡೆದಿದೆ ಎಂಬುದು ನಿಜವಾಗಿಯೂ ಅವರಿಗೆ ಗೊತ್ತಿರುವುದಿಲ್ಲ. ಆದರೆ, ನೇರವಾಗಿ ನಿರ್ಣಯಿಸುವ ಮೂಲಕ, ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಒಬ್ಬ ವ್ಯಕ್ತಿಯ ಬಗ್ಗೆ ಯಾವುದೇ ಗಾಳಿಸುದ್ದಿ ಬಂದಾಗ ಅದು ನಿಜವೋ ಸುಳ್ಳೋ ಎಂದು ತಿಳಿಯದೆ, ಅವರ ಬಗ್ಗೆ ಸಹಾನುಭೂತಿ ತೋರಿಸದೆ ಅವರನ್ನು ಜಡ್ಜ್ ಮಾಡಿಬಿಡುತ್ತಾರೆ. ಇಂತಹ ಸಮಯದಲ್ಲಿ ತುಂಬಾ ದುಃಖವಾಗುತ್ತದೆ ಎಂದು ನತಾಶಾ ವಿಡಿಯೋದಲ್ಲಿ ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ತನ್ನ ಮಧ್ಯೆ ಏನಾಯಿತು ಎಂದು ತಿಳಿಯದವರೂ ನನ್ನದೇ ತಪ್ಪು ಎನ್ನುವ ಅರ್ಥದಲ್ಲಿ ತೀರ್ಪು ನೀಡುತ್ತಿರುವುದಕ್ಕೆ ನತಾಶಾ ಪರೋಕ್ಷವಾಗಿ ಪ್ರತಿಕ್ರಿಯಿಸಿರಬಹುದು ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
ಇಷ್ಟು ದಿನ ಸೈಲೆಂಟಾಗಿದ್ದ ನಟಾಶಾ ಇದೀಗ ತುಟಿ ಬಿಚ್ಚಿದ್ದಾರೆ. ಹಾರ್ದಿಕ್ ಮತ್ತು ತಮ್ಮ ನಡುವೆ ಏನಾಗಿದೆ? ಡಿವೋರ್ಸ್ ಸುದ್ದಿ ಸುಳ್ಳೋ-ನಿಜವೋ ಎಂಬ ಬಗ್ಗೆ ಮಾತನಾಡಿಲ್ಲ. ಹಾರ್ದಿಕ್ ಕೂಡ ಎಲ್ಲೂ ಈ ಬಗ್ಗೆ ಮಾತಾಡ್ತಿಲ್ಲ. ಇದು ಹಾರ್ದಿಕ್ ನಟಾಶಾಗೆ ಗುಡ್ಬೈ ಹೇಳಿ ಪ್ರಾಚಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನೋ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡ್ತಿರೋದಂತೂ ಸುಳ್ಳಲ್ಲ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಡಿವೋರ್ಸ್ ವಿಚಾರವಾಗಿ ಮುಂದಿನ ದಿನಗಳಲ್ಲಿ ಹಾರ್ದಿಕ್ ಪಾಂಡ್ಯ ಯಾವ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕುತೂಹಲ ಮೂಡಿದೆ.