ಗರ್ಲ್‌ಫ್ರೆಂಡ್ ಜಾಸ್ಮಿನ್‌ಗಾಗಿ ರೂಲ್ಸ್ ಬ್ರೇಕ್! -ಹಾರ್ದಿಕ್ ಗೆ BCCI ಶಿಕ್ಷೆ ಫಿಕ್ಸ್?

ಹಾರ್ದಿಕ್ ಪಾಂಡ್ಯ.. ಸದಾ ಒಂದಲ್ಲ ಒಂದು ವಿಚಾರದ ಮೂಲಕ ಅಭಿಮಾನಿಗಳಿಂದ ಗುಮ್ಮಿಸಿಕೊಳ್ಳುವ ಸ್ಟಾರ್ ಆಲ್‌ರೌಂಡರ್.. ಸದ್ಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಆಗಿ ತಂಡವನ್ನ ಮುನ್ನಡೆಸ್ತಿದ್ದಾರೆ.. ಆದ್ರೆ ಈ ಬಾರಿ ಪಾಂಡ್ಯ ಪ್ರದರ್ಶನ ಅಷ್ಟಕಷ್ಟೇ.. ಹೀಗಾಗೆ ಈ ಟೀಕೆಗೆ ಗುರಿಯಾಗ್ತಿದ್ದಾರೆ. ಆದ್ರೀಗ ಹಾರ್ದಿಕ್ ನತಾಶಗೆ ಡಿವೋರ್ಸ್ ಕೊಟ್ಟ ಬಳಿಕ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರಂತೆ.. ಆ ಸುಂದರಿಯನ್ನೇ ಮದುವೆ ಆಗ್ತಾರಾ ಅನ್ನೋ ಪ್ರಶ್ನೆ ಪಾಂಡ್ಯ ಅಭಿಮಾನಿಗಳನ್ನ ಕಾಡ್ತಿದೆ. ಇವೆಲ್ಲದ್ರ ಬೆನ್ನಲ್ಲೇ ಪಾಂಡ್ಯಗೆ ತನ್ನ ಗರ್ಲ್‌ಫ್ರೆಂಡ್‌ನಿಂದಾಗೇ ಸಂಕಷ್ಟ ಶುರುವಾಗಿದೆ. ಬಿಸಿಸಿಐ ನಿಯಮವನ್ನೇ ಹಾರ್ದಿಕ್ ಗಾಳಿಗೆ ತೂರಿದ್ದಾರೆ ಅನ್ನೋ ಆರೋಪ ಕೂಡ ಕೇಳಿಬಂದಿದೆ. ಅಷ್ಟಕ್ಕೂ ಹಾರ್ದಿಕ್ ಆಕೆಯನ್ನೇ ಮದುವೆ ಆಗ್ತಾರಾ? ಪಾಂಡ್ಯ ವಿರುದ್ಧ ಕೇಳಿಬಂದಿರೋ ಹೊಸ ಆರೋಪ ಏನು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸಾಲು ಸಾಲು ಸೋಲು.. ಅಂತ್ಯ ಆರಂಭ – PAK ಕ್ರಿಕೆಟ್ ಕಥೆ ಮುಗಿಯಿತಾ?
ಟೀಮ್ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಕ್ರಿಕೆಟ್ ಬದುಕು ಮಾತ್ರವಲ್ಲದೇ ಅವ್ರ ಪರ್ಸನಲ್ ಲೈಫ್ ವಿಚಾರವೂ ಸದ್ದು ಮಾಡ್ತಿರುತ್ತೆ. ಪ್ರೀತಿಸಿ ಎರಡೆರಡು ಬಾರಿ ಮದುವೆಯಾಗಿದ್ದ ಹಾರ್ದಿಕ್ ಹಾಗೂ ನತಾಶ ಡಿವೋರ್ಸ್ ಪಡೆದು ಬೇರೆ ಬೇರೆ ಆಗಿದ್ದಾರೆ.. ಡಿವೋರ್ಸ್ ಆಗ್ತಿದ್ದಂತೆ ಪಾಂಡ್ಯ ಜೊತೆ ಒಂದೊಂದೇ ಹೆಸ್ರು ತಳುಕು ಹಾಕಿಕೊಳ್ಳೋದಿಕ್ಕೆ ಶುರುವಾಗಿತ್ತು.. ಆದ್ರೀಗ ಪಾಂಡ್ಯ ಖ್ಯಾತ ಗಾಯಕಿ ಜೊತೆ ಪ್ರೀತಿಯಲ್ಲಿ ಬಿದ್ದಿರೋದು ಕನ್ಫರ್ಮ್ ಆಗಿದೆ ಅಂತಾ ಹೇಳಲಾಗ್ತಿದೆ. ನೀನೆಲ್ಲೋ ನಾನಲ್ಲೇ ಅನ್ನೋ ತರ.. ಪಾಂಡ್ಯ ಎಲ್ಲೋ.. ಅಲ್ಲೇ ತಾನು ಇದ್ದೀನಿ ಅಂತಾ ಬ್ರಿಟಿಷ್ ಗಾಯಕಿ ಜಾಸ್ಮಿನ್ ವಾಲಿಯಾ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಇದೀಗ ಈಕೆಯನ್ನೇ ಪಾಂಡ್ಯ ಮದ್ವೆಯಾಗ್ತಾರಾ ಅನ್ನೋ ಪ್ರಶ್ನೆ ಎದ್ದಿದೆ.
ಹಾರ್ದಿಕ್ ಪಾಂಡ್ಯ ನತಾಶಗೆ ಡಿವೋರ್ಸ್ ಕೊಟ್ಟ ಬೆನ್ನಲ್ಲೇ ಬ್ರಿಟಿಷ್ ಗಾಯಕಿ ಜಾಸ್ಮಿನ್ ವಾಲಿಯಾ ಸುತ್ತಾಡ್ತಿದ್ದಾರೆ. ಪಾಂಡ್ಯ ಮ್ಯಾಚ್ ಎಲ್ಲೇ ಇರ್ಲಿ.. ಆಕೆ ಸ್ಟೇಡಿಯಂ ಗೆ ಬಂದು ಸಪೋರ್ಟ್ ಮಾಡ್ತಿರ್ತಾರೆ.. ಗ್ಯಾಲರಿಯಲ್ಲಿ ಕುಳಿತು ಪಾಂಡ್ಯಗೆ ಚಿಯರ್ ಅಪ್ ಮಾಡ್ತಾರೆ. ಮೊನ್ನೆಯಷ್ಟೇ ಮುಂಬೈ ಇಂಡಿಯನ್ಸ್ ತಂಡದ ಮ್ಯಾಚ್ ಇದ್ದಾಗಲೂ ಜಾಸ್ಮೀನ್ ಸ್ಟೇಡಿಯಂ ನಲ್ಲಿ ಕಾಣಿಸಿಕೊಂಡಿದ್ರು.. ಮ್ಯಾಚ್ ಮುಗಿತಿದ್ದಂತೆ ಆಕೆ ಮುಂಬೈ ಇಂಡಿಯನ್ಸ್ ಟೀಮ್ ನ ಬಸ್ ನಲ್ಲೇ ಹೊಟೇಲ್ ಗೆ ತೆರಳಿದ್ರು.. ಇದು ಈಗ ವಿವಾದಕ್ಕೆ ಕಾರಣವಾಗಿದೆ.
ಹೌದು, ಪಂದ್ಯ ಮುಗಿದ ನಂತರ MI ಆಟಗಾರರು, ಸಿಬ್ಬಂದಿ, ಹಾಗೇ ಆಟಗಾರರ ಫ್ಯಾಮಿಲಿ ಮೆಂಬರ್ಸ್ ತಂಡದ ಬಸ್‌ನಲ್ಲಿ ಹೋಟೇಲ್ ಗೆ ತೆರಳಿದ್ರು. ಈ ವೇಳೆ ಜಾಸ್ಮಿನ್ ವಾಲಿಯಾ ಕೂಡ ಇದೇ ಬಸ್ ನಲ್ಲಿ ಪ್ರಯಾಣಿಸಿದ್ದಾರೆ. ಇದ್ರ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬೆನ್ನಲ್ಲೇ ಪಾಂಡ್ಯ ರೂಲ್ಸ್ ಬ್ರೇಕ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಐಪಿಎಲ್ ನಿಯಮಗಳ ಪ್ರಕಾರ, ಕ್ರೀಡಾ ಸಿಬ್ಬಂದಿ, ಭ್ರಷ್ಟಾಚಾರ ನಿಗ್ರಹ ತಂಡ, ಆಟಗಾರರು ಹಾಗೂ ಅವರ ಆಪ್ತರಿಗೆ ಮಾತ್ರ ಈ ಬಸ್ಸಿನಲ್ಲಿ ಕುಳಿತುಕೊಳ್ಳಲು ಅವಕಾಶವಿರುತ್ತದೆ. ಇದನ್ನ ಹೊರತುಪಡಿಸಿ ಯಾರೂ ಬಸ್‌ನಲ್ಲಿ ಪ್ರಯಾಣಿಸುವಂತಿಲ್ಲ. ಆದ್ರೀಗ ಹಾರ್ದಿಕ್ ಈ ನಿಯಮವನ್ನು ಮೀರಿ ಜಾಸ್ಮಿನ್‌ರನ್ನು ಬಸ್‌ನಲ್ಲಿ ಕೂರಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಈ ರೂಲ್ಸ್ ಭ್ರಷ್ಟಾಚಾರ ನಿಗ್ರಹ ದಳದ ಸಲಹೆಯ ಆಧಾರದ ಮೇಲೆ ರೂಪಿತವಾಗಿದೆ. ಮ್ಯಾಚ್ ನಲ್ಲಿ ಫಿಕ್ಸಿಂಗ್ ತೆಡೆಯುವುದಕ್ಕಾಗಿ ಹೊರಗಿನವರು ತಂಡದ ಬಸ್‌ನಲ್ಲಿ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಈ ನಿಯಮ ಐಪಿಎಲ್‌ಗೆ ಮಾತ್ರವಲ್ಲ, ಐಸಿಸಿ ಪಂದ್ಯಾವಳಿಗಳಿಗೂ ಅನ್ವಯಿಸುತ್ತದೆ. ರೂಲ್ಸ್ ಬ್ರೇಕ್ ಮಾಡಿದ್ರೆ ಕಠಿಣ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದೀಗ ಹಾರ್ದಿಕ್ ವಿರುದ್ದ ಬಿಸಿಸಿಐ ಕ್ರಮ ಕೈಗೊಳ್ಳುತ್ತಾ ಅಂತಾ ಕಾದು ನೋಡ್ಬೇಕು.
ಆದ್ರೆ ಫ್ಯಾನ್ಸ್ ಮಾತ್ರ ಹಾರ್ದಿಕ್ ಜಾಸ್ಮಿನ್ ಪ್ರೀತಿಯಲ್ಲಿ ಬಿದ್ದಿದ್ದಾರೆ. ಶೀಘ್ರದಲ್ಲೇ ಮದುವೆನೂ ಆಗ್ಬೋದು. ಹೀಗಾಗೇ ಆಕೆಯನ್ನ ತಂಡದ ಬಸ್ ನಲ್ಲಿ ಕೂರ್ಸಿದ್ದಾರೆ ಅಂತಾ ಹೇಳಿದ್ದಾರೆ. ಮತ್ತೆ ಕೆಲವರು, ಹಾರ್ದಿಕ್ ಈ ರೀತಿ ನಡೆದುಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಂಡದ ನಾಯಕನಾಗಿ ರೂಲ್ಸ್ ಬ್ರೇಕ್ ಮಾಡೋದು ಎಷ್ಟು ಸರಿ ಅಂತಾ ಕೇಳಿದ್ದಾರೆ.