ಹಾರ್ದಿಕ್ ಪಾಂಡ್ಯ ನಾಯಕನಾಗಿ ಹ್ಯಾಟ್ರಿಕ್ ಸೋಲು – ಸೊನ್ನೆ ಸುತ್ತಿ ಕೆಟ್ಟ ದಾಖಲೆ ಬರೆದ ರೋಹಿತ್ ಶರ್ಮಾ

ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅತಿ ಕೆಟ್ಟ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ. ಐಪಿಎಲ್ನಲ್ಲಿ ಸತತ ಮೂರು ಸೋಲುಗಳೊಂದಿಗೆ ಹ್ಯಾಟ್ರಿಕ್ ಸೋಲು ಕಂಡ ಕ್ಯಾಪ್ಟನ್ ಎಂಬ ಕೆಟ್ಟ ದಾಖಲೆ ಹಾರ್ದಿಕ್ ಪಾಂಡ್ಯ ಹೆಸರಿಗೆ ಸೇರಿದೆ. ಇದಲ್ಲದೇ, ಹಿಟ್ಮ್ಯಾನ್ ರೋಹಿತ್ ಶರ್ಮಾ ಕೂಡಾ ನಾಚಿಕೆಗೇಡಿನ ದಾಖಲೆಯೊಂದನ್ನ ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ.
ಇದನ್ನೂ ಓದಿ: ಹಾರ್ದಿಕ್ ಪಡೆಗೆ ಮುಂಬೈನಲ್ಲೂ ಮುಖಭಂಗ – ಮುಂಬೈ ಇಂಡಿಯನ್ಸ್ಗೆ ಸತತ 3ನೇ ಸೋಲು
ಐಪಿಎಲ್ನಲ್ಲಿ ಬಲಿಷ್ಠ ತಂಡವೆಂದೇ ಮುಂಬೈ ಇಂಡಿಯನ್ಸ್ ತಂಡವನ್ನು ಕರೆಯಲಾಗುತ್ತದೆ. ಆದ್ರೆ, ಈ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಸತತ ಸೋಲಿನಿಂದ ಕಂಗೆಟ್ಟಿದೆ. ಅದ್ರಲ್ಲೂ ಆಡಿರುವ ಮೂರೂ ಪಂದ್ಯಗಳಲ್ಲೂ ಸೋಲಿನ ಕಹಿ ಕಂಡಿದೆ. ಹೀಗಾಗಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಹ್ಯಾಟ್ರಿಕ್ ಸೋಲು ಕಂಡ ಕ್ಯಾಪ್ಟನ್ ಎಂಬ ಕೆಟ್ಟ ದಾಖಲೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಹಾರ್ದಿಕ್ ಪಾಂಡ್ಯ ಈ ಹಿಂದೆ ಹರ್ಭಜನ್ ಸಿಂಗ್ ಹೊಂದಿದ್ದ ಅನಗತ್ಯ ದಾಖಲೆಯನ್ನು ಸರಿಗಟ್ಟಿದರು. 30ರ ಹರೆಯದ ಅವರು ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ನಾಯಕರಾಗಿ ಮೊದಲ ಮೂರು ಪಂದ್ಯಗಳಲ್ಲಿ ಸೋತ ಎರಡನೇ ನಾಯಕರಾರಾಗಿ ಹಾರ್ದಿಕ್ ಪಾಂಡ್ಯ ಹೊರಹೊಮ್ಮಿದ್ದಾರೆ.
ಐಪಿಎಲ್ನಲ್ಲಿ ಅತಿ ಹೆಚ್ಚು ಗೋಲ್ಡನ್ ಡಕ್ಗಳಿಗೆ ಔಟಾದ ನಾಚಿಕೆಗೇಡಿನ ದಾಖಲೆಯನ್ನು ಹಿಟ್ಮ್ಯಾನ್ ರೋಹಿತ್ ಶರ್ಮಾ ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಐಪಿಎಲ್ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡ ಆರ್ ಆರ್ ಎದುರು ಅಬ್ಬರಿಸುವ ನಿರೀಕ್ಷೆಯಿತ್ತು. ಮುಂಬೈ ಇಂಡಿಯನ್ಸ್ ಪರ ಓಪನರ್ ಆಗಿ ಬಂದ ರೋಹಿತ್ ಶರ್ಮಾ ಟ್ರೆಂಟ್ ಬೌಲ್ಟ್ ಮೊದಲನೇ ಓವರ್ನಲ್ಲೇ ಫಸ್ಟ್ ಬಾಲ್ಗೆ ಕ್ಯಾಚ್ ನೀಡಿ ಡಕೌಟ್ ಆದ್ರು. ಹೀಗಾಗಿ ಹಾರ್ದಿಕ್ ಪಾಂಡ್ಯ ಫ್ಯಾನ್ಸ್ ರೋಹಿತ್ ಶರ್ಮಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಫಸ್ಟ್ ಬಾಲ್ಗೆ ಸೊನ್ನೆ ಸುತ್ತಿದ ರೋಹಿತ್ ಶರ್ಮಾ, ಐಪಿಎಲ್ನಲ್ಲಿ ಅತಿ ಹೆಚ್ಚು ಗೋಲ್ಡನ್ ಡಕ್ಗಳಿಗೆ ಔಟಾದ ದಾಖಲೆ ತಮ್ಮ ಖಾತೆಗೆ ಸೇರಿಸಿಕೊಂಡ್ರು.