ಭಾರತ ತೊರೆದ ಹಾರ್ದಿಕ್‌ ಪತ್ನಿ? – ಲಗೇಜ್‌ ಸಮೇತ ನತಾಶ ಹೋಗಿದ್ದೆಲ್ಲಿಗೆ?
ದಂಪತಿ ಜಗಳ.. ಮಗನ ಭವಿಷ್ಯ ಏನು?

ಭಾರತ ತೊರೆದ ಹಾರ್ದಿಕ್‌ ಪತ್ನಿ? – ಲಗೇಜ್‌ ಸಮೇತ ನತಾಶ ಹೋಗಿದ್ದೆಲ್ಲಿಗೆ?ದಂಪತಿ ಜಗಳ.. ಮಗನ ಭವಿಷ್ಯ ಏನು?

ಟೀಮ್‌ ಇಂಡಿಯಾ ಆಲ್‌ ರೌಂಡರ್‌ ಹಾರ್ದಿಕ್‌ ಪಾಂಡ್ಯ ಕ್ರಿಕೆಟ್‌ ಬದುಕಿನಲ್ಲಿ ಗ್ರೇಟ್‌ ಕಮ್‌ ಬ್ಯಾಕ್‌ ಮಾಡಿದ್ದಾರೆ.. ಐಪಿಎಲ್‌ ವೇಳೆ ಸಾಲು ಸಾಲು ವೈಫಲ್ಯ ಕಂಡಿದ್ದ ಪಾಂಡ್ಯ ವಿಶ್ವಕಪ್‌ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದ್ರೆ ವೈಯುಕ್ತಿ ಜೀವನದಲ್ಲಿ ಸಮಸ್ಯೆಗಳು ಅಲೆಯಂತೆ ಅಪ್ಪಳಿಸುತ್ತಿದೆ. ನತಾಶ ಹಾಗೂ ಹಾರ್ದಿಕ್‌ ಮಧ್ಯೆ ಬಿರುಕು ಬಿದ್ದಿದೆ ಅಂತ ಹೇಳಲಾಗುತ್ತಿದ್ದು, ಈ ವದಂತಿಗಳಿಗೆ ಪುಷ್ಠಿ ನೀಡುವಂತೆ ಪಾಂಡ್ಯ ಪತ್ನಿ ನಿಗೂಢ ನಡೆ ತೋರುತ್ತಿದ್ದಾರೆ.. ಸೋಶಿಯಲ್‌ ಮೀಡಿಯಾದಲ್ಲಿ ಹೊಸ ಹೊಸ ಪೋಸ್ಟ್‌ ಹಾಕಿ ಪರೋಕ್ಷವಾಗಿ ತಮ್ಮ ವಿರುದ್ಧ ಮಾತನಾಡುತ್ತಿರುವವರಿಗೆ ಟಾಂಗ್‌ ನೀಡ್ತಾ ಇದ್ದಾರೆ. ಇದೀಗ ನತಾಶ ಏಕಾಏಕಿ ವಿದೇಶಕ್ಕೆ ತೆರಳಿದ್ದಾರೆ. ತಮ್ಮ ಮಗನೊಂದಿಗೆ ಏರ್‌ ಪೋರ್ಟ್‌ ನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಇದೀಗ ನತಾಶ ಏರ್‌ ಪೋರ್ಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ನತಾಶ ಮಗನೊಂದಿಗೆ ಎಲ್ಲಿಗೆ ಹೋಗ್ತಿದ್ದಾರೆ? ಭಾರತ ಬಿಟ್ಟು ಸೆರ್ಬಿಯಾದಲ್ಲೇ ನೆಲೆಸಲಿದ್ದಾರಾ ಅನ್ನೋ ಪ್ರಶ್ನೆ ಶುರುವಾಗಿದೆ. ಅಷ್ಟಕ್ಕೂ ನತಾಶ ಹೊರಟಿರೋದಾದ್ರೂ ಎಲ್ಲಿಗೆ? ಅಗಸ್ತ್ಯ ನತಾಶ ಜೊತೆಗೆ ಇರ್ತಾನಾ ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪಾಂಡ್ಯಗೆ ಶಾಕ್ ಕೊಟ್ಟ ಸೂರ್ಯ – ಲಂಕಾ ಸರಣಿಗೆ SKY ಕ್ಯಾಪ್ಟನ್?

ಹಾರ್ದಿಕ್‌ ಪಾಂಡ್ಯ ದಾಂಪತ್ಯದಲ್ಲಿ ಬಿರುಕು ಬಿದ್ದಿದೆ ಎಂದು ಹರಿದಾಡುತ್ತಿರುವ ವಿಚಾರ ಬಗ್ಗೆ ನಿಮ್ಗೆಲ್ಲಾ ಗೊತ್ತೇ ಇದೆ. ಈ ಗಾಸಿಪ್‌ಗೆ ಪುಷ್ಠಿ ನೀಡುವಂತಹ ಬೆಳವಣಿಗೆಗಳು ಸಾಕಷ್ಟು ನಡೆಯುತ್ತಿವೆ. ಹಾರ್ದಿಕ್‌ ಹಾಗೂ  ನತಾಶ ಇಬ್ಬರು ಹಲವಾರು ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ನಡುವೆ ಏನಾಗ್ತಿದೆ ಎಂದು ತಿಳಿಯದೆ ಅಭಿಮಾನಿಗಳು ಕೂಡ ಗೊಂದಲದಲ್ಲಿದ್ದಾರೆ. ನತಾಶಾ ತನ್ನ ಸೀಕ್ರೆಟ್ ಪೋಸ್ಟ್ ಗಳಿಂದ ವಿಚ್ಛೇದನದ ಸುಳಿವು ನೀಡ್ತಿದ್ದಾರೆ. ಅದೇ ವೇಳೆ ಹಾರ್ದಿಕ್ ಕೂಡ ಈ ಬಗ್ಗೆ ಮೌನ ವಹಿಸಿದ್ದು, ಸಾಕಷ್ಟು ಅನುಮಾನಗಳಿಗೆ  ಕಾರಣವಾಗಿದೆ.

ಆದ್ರೆ ಇತ್ತೀಚೆಗೆ ಪಾಂಡ್ಯ ಮಿಸ್ಟರಿ ಗರ್ಲ್ ಜೊತೆ ಇರುವ ಫೋಟೋವೊಂದು ವೈರಲ್‌ ಆಗಿತ್ತು. ಇದನ್ನ ನೋಡಿದ ಫ್ಯಾನ್ಸ್ ವಿಚ್ಛೇದನ ಫಿಕ್ಸ್ ಎಂದಿದ್ರು. ಅದಾದ ಬಳಿಕ  ಪಾಂಡ್ಯ ಅಂಬಾನಿ ಕುಟುಂಬದ ಮದುವೆಯಲ್ಲಿ ಕಾಣಿಸಿಕೊಂಡಿದ್ರು. ಮದುವೆ ಸಮಾರಂಭದಲ್ಲಿ ಹಾರ್ದಿಕ್‌ ಕುಟುಂಬದವರೆಲ್ಲರೂ ಕಾಣಿಸಿಕೊಂಡಿದ್ರು. ಆದ್ರೆ ಅಲ್ಲೂ ಕೂಡ ನತಾಶ ಕಾಣಿಸಿಕೊಂಡಿರ್ಲಿಲ್ಲ. ಈ ಎಲ್ಲಾ ಬೆಳವಣಿಗೆಗಳ ನಡುವೆ ನತಾಶ ಇದ್ದಕ್ಕಿದ್ದಂತೆ  ಬ್ಯಾಗ್ ಪ್ಯಾಕ್ ಮಾಡಿಕೊಂಡು ಎಲ್ಲೋ ಹೊರಟಿದ್ದಾರೆ. ಇದ್ರ ವಿಡಿಯೋ ವೈರಲ್‌ ಆಗಿದೆ.

ಹೌದು, ನತಾಶಾ ಸ್ಟಾಂಕೋವಿಕ್ ಇದೀಗ ಮಗ ಅಗಸ್ತ್ಯನೊಂದಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಯಾಗ್ ಪ್ಯಾಕ್ ಮಾಡಿಕೊಂಡು ಬಂದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನತಾಶಾ ಕಾರಿನಿಂದ ಇಳಿದು ನಂತರ ಎರಡು ಲಗೇಜ್‌ ಬ್ಯಾಗ್‌ ತೆಗೆದುಕೊಂಡು ಮಗ ಅಗಸ್ತ್ಯನೊಂದಿಗೆ ಹೋಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಏರ್‌ ಪೋರ್ಟ್‌ನಲ್ಲಿ ನತಾಶ ಕ್ಯಾಮೆರಮೆನ್‌ಗಳಿಗೆ  ಸ್ಮೈಲ್ ಕೊಟ್ಟು ಮುಂದೆ ಸಾಗಿದ್ದಾರೆ.

ಇದಿಷ್ಟೇ ಅಲ್ಲದೇ ನತಾಶಾ  ತನ್ನ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ವೊಂದನ್ನ ಕೂಡ ಹಂಚಿಕೊಂಡಿದ್ದಾರೆ. ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಸೂಟ್ ಕೇಸ್ ನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅದರ ಮೇಲೆ ‘ಇದು ವರ್ಷದ ಸಮಯ’ ಎಂದು ಬರೆಯಲಾಗಿದೆ. ವಿಮಾನ ಮತ್ತು ಮನೆಯ ಎಮೋಜಿಗಳನ್ನು ಸಹ ಹಂಚಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಅವರು ಕಣ್ಣೀರು ತುಂಬಿದ ಎಮೋಜಿಯನ್ನು ಸಹ ಶೇರ್ ಮಾಡಿದ್ದಾರೆ.

ನತಾಶ ಬ್ಯಾಗ್‌ ಪ್ಯಾಕ್‌ ಮಾಡಿಕೊಂಡು ಹೊರಟಿದ್ದನ್ನು ನೋಡಿ ಅಭಿಮಾನಿಗಳಿಗೆ ಹಲವು ಪ್ರಶ್ನೆಗಳು ಮೂಡಿದೆ. ನತಾಶ ಎಲ್ಲಿಗೆ ಹೋಗುತ್ತಿದ್ದಾರೆ? ನತಾಶ ಭಾರತ ಬಿಟ್ಟು ಸೆರ್ಬಿಯಾದಲ್ಲಿ ನೆಲೆಸಲಿದ್ದಾರೆಯೇ ಅನ್ನೋ ಅನುಮಾನ ಕೂಡ ಮೂಡಿದೆ. ಇನ್ನು ಕೆಲ ಅಭಿಮಾನಿಗಳು ನತಾಶಾ ಭಾರತವನ್ನು ಬಿಟ್ಟು ಶಾಶ್ವತವಾಗಿ ವಿದೇಶದಲ್ಲಿ ನೆಲೆಸಲು ಹೊರಟಿದ್ದಾರೆ ಎಂದು ಕಮೆಂಟ್ ಮಾಡ್ತಿದ್ದಾರೆ.

ಹಾರ್ದಿಕ್ ಜೊತೆ ಪ್ಯಾಚ್ ಅಪ್ ಮಾಡಿಕೊಳ್ಳಲು ಇಷ್ಟವಿಲ್ಲದ ನತಾಶಾ ಮನೆಬಿಟ್ಟು ಹೋಗುವ ನಿರ್ಧಾರ ಮಾಡಿಬಿಟ್ಟಿದ್ದಾರೆ ಎನ್ನಲಾಗ್ತಿದೆ. ಇನ್ನು ಕೆಲವರು ಮಗನ ಜೊತೆ ಫಾರಿನ್ ಟ್ರಿಪ್ ಗೆ ಹೋಗ್ತಿದ್ದಾರೆ ಎನ್ನುತ್ತಿದ್ದಾರೆ. ನತಾಶಾ ಬಹುಶಃ ಸೆರ್ಬಿಯಾದಲ್ಲಿರುವ ತನ್ನ ಪೋಷಕರ ಮನೆಗೆ ಹೋಗುತ್ತಿದ್ದಾರೆ ಎಂದು ಕೂಡ ಫ್ಯಾನ್ಸ್ ಕಮೆಂಟ್ ಮಾಡ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಅವರೊಂದಿಗಿನ ಸಂಬಂಧವು ಹದಗೆಟ್ಟಾಗಿನಿಂದ ತನ್ನ ಮಗನೊಂದಿಗೆ ಹೆಚ್ಚು ಸಮಯ ಕಳೆಯುವ ಮೂಲಕ ಮನಸ್ಥಿತಿಯನ್ನು ರಿಫ್ರೆಶ್ ಮಾಡಿಕೊಳ್ತಿದ್ದಾರೆ ಎನ್ನಲಾಗ್ತಿದೆ. ಇನ್ನು ವಿಮಾನ ನಿಲ್ದಾಣದಲ್ಲಿ ನತಾಶಾ ಫೋನ್ ನ ವಾಲ್ ಪೇಪರ್ ಕೂಡ ಎಲ್ಲರ ಗಮನ ಸೆಳೆದಿದೆ. ನತಾಶಾ ಬ್ರೋಕನ್ ಹಾರ್ಟ್ ಹಾಗೂ ಅಗಸ್ತ್ಯನ ಫೋಟೋವನ್ನ ವಾಲ್ ಪೇಪರ್  ನಲ್ಲಿ ಹಾಕಿದ್ದಾರೆ. ಈ ವಾಲ್‌ ಪೇಪರ್‌ ನೋಡಿ ಡಿವೋರ್ಸ್‌ ಪಕ್ಕಾ ಅಂತಾ ಫ್ಯಾನ್ಸ್‌ ಹೇಳ್ತಿದ್ದಾರೆ.

ಹಾರ್ದಿಕ್‌ ಪಾಂಡ್ಯ ಹಾಗೂ ನತಾಶ ಇಬ್ಬರ ಮಧ್ಯೆ ಬಿರುಕು ಬಿದ್ದಾಗಿನಿಂದ ಮಗ ಅಗಸ್ತ್ಯ ಭವಿಷ್ಯದ ಕತೆ ಏನು ಅನ್ನೋದನ್ನ ಕೂಡ ಫ್ಯಾನ್ಸ್‌ ಚರ್ಚೆ ನಡೆಸ್ತಾ ಇದ್ದಾರೆ. ಕಳೆದ ಐಪಿಎಲ್‌ ವೇಳೆ ಪಾಂಡ್ಯ ಮ್ಯಾಚ್‌ನಲ್ಲಿ ಬ್ಯೂಸಿಯಾಗಿದ್ರು.. ಈ ಸಮಯದಲ್ಲಿ ಅಗಸ್ತ್ಯನನ್ನು ಹಾರ್ದಿಕ್‌ ಸಹೋದರ ಕೃನಾಲ್‌ ಪಾಂಡ್ಯ ನೋಡಿಕೊಂಡು ಇದ್ರು.. ಇದ್ರ ಫೋಟೋ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಅದಾದ ಬಳಿಕ ಅಂದ್ರೆ ಟಿ20 ವಿಶ್ವಕಪ್‌ ಬಳಿಕ ಪಾಂಡ್ಯ ಕೆಲದಿನ ನತಾಶ ಮಗನ ಜೊತೆ ಸಮಯ ಕಳೆದ್ರು.. ಮಗನ ಜೊತೆ ಕಳೆದ ಸಂತಸ ಕ್ಷಣವನ್ನ ಸೋಶಿಯಲ್‌ ಮೀಡಿಯಾದಲ್ಲಿ ಕೂಡ ಪೋಸ್ಟ್‌ ಮಾಡಿದ್ರು.. ಇದೀಗ ಕೆಲ ದಿನಗಳಿಂದ ಅಗಸ್ತ್ಯ ನತಾಶಳೊಂದಿಗೆ ಇದ್ದಾನೆ. ನತಾಶ ಜೊತೆ ಅಗಸ್ತ್ಯ ಹೊರಟಿರೋದ್ರಿಂದ ತಾಯಿ ಜೊತೆಗೆ ಇರ್ತಾನಾ? ಪಾಂಡ್ಯ ಜೊತೆಗೆ ಇರಲ್ವಾ  ಅನ್ನೋ ಪ್ರಶ್ನೆ ಎದುರಾಗಿದೆ. ಆದ್ರೆ ಪಾಂಡ್ಯ ದಂಪತಿ ಡಿವೋರ್ಸ್‌ ವಿಚಾರವಾಗ್ಲಿ, ಮಗನ ಭವಿಷ್ಯದ ಬಗ್ಗೆ ಎಲ್ಲೂ ಸ್ಪಷ್ಟನೆ ನೀಡಿಲ್ಲ.. ಅದೇನೆ ಇರ್ಲಿ ದಾಂಪತ್ಯ ಜೀವನ ಮುಂದುವರಿಸ್ಬೇಕಾ, ಬೇಡ್ವಾ?  ಮಗ ಯಾರ ಜೊತೆಗೆ ಇರ್ಬೇಕು ಅನ್ನೋ ವಿಚಾರ ಆ ದಂಪತಿಗೆ ಬಿಟ್ಟಿದ್ದು. ಆದ್ರೆ ಫ್ಯಾನ್ಸ್‌ ಮಾತ್ರ ಪಾಂಡ್ಯ ಜೀವನದ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸ್ಕೊಂಡು ಬಿಟ್ಟಿದ್ದಾರೆ.

Shwetha M