ಟೆಸ್ಟ್ ಕ್ರಿಕೆಟ್ ಗೆ ಪಾಂಡ್ಯ? – BCCI ಆಫರ್ ಒಪ್ತಾರಾ ಹಾರ್ದಿಕ್?
WTC ಫೈನಲ್.. ಟಾಪ್-2 ಸಾಧ್ಯನಾ?

ಟೆಸ್ಟ್ ಕ್ರಿಕೆಟ್ ಗೆ ಪಾಂಡ್ಯ? – BCCI ಆಫರ್ ಒಪ್ತಾರಾ ಹಾರ್ದಿಕ್?WTC ಫೈನಲ್.. ಟಾಪ್-2 ಸಾಧ್ಯನಾ?

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ರೇಸ್​ನ ಪಾಯಿಂಟ್ಸ್ ಪಟ್ಟಿಯಲ್ಲಿ ಪ್ರಸ್ತುತ ಭಾರತ 6ನೇ ಸ್ಥಾನದಲ್ಲಿದೆ. 2027ರಲ್ಲಿ ನಡೆಯಲಿರೋ ಡಬ್ಲ್ಯೂಟಿಸಿ ಫೈನಲ್​ನ ಟಾಪ್​2ನಲ್ಲಿ ಇರ್ಬೇಕು ಅಂದ್ರೆ ಮುಂದಿನ ಪ್ರತೀ ಪಂದ್ಯಗಳಲ್ಲೂ ಮಸ್ಟ್ & ಶುಡ್ ಗೆಲ್ಲಲೇಬೇಕು. ಸದ್ಯದ ಟೀಂ ಫಾರ್ಮ್ ಹಾಗೇ ಪರ್ಫಾಮೆನ್ಸ್ ನೋಡಿದ್ರೆ ಅದು ಅಸಾಧ್ಯ ಅನ್ನೋ ಥರನೇ ಇದೆ. ಬಟ್ ಟೀಂ ಚೇಂಜ್ ಮಾಡಿದ್ರೆ ಪಾಸಿಬಲ್ ಮಾಡ್ಬೋದು.

ಇದನ್ನೂ ಓದಿ : ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡದ ಕಮಾಲ್ – ಹ್ಯಾಟ್ರಿಕ್‌ ಗೆಲುವು

ಟೀಂ ಇಂಡಿಯಾ ಟೆಸ್ಟ್ ಫಾರ್ಮೆಟ್​ನಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆರ್.ಅಶ್ವಿನ್ ರಂಥ ದಿಗ್ಗಜ ಆಟಗಾರರು ನಿವೃತ್ತಿ ಘೋಷಣೆ ಮಾಡಿದ್ಮೇಲೆ ಅಭಿಮಾನಿಗಳ ಕ್ರೇಜ್ ಕಮ್ಮಿ ಆಗಿದೆ. ಆಟಗಾರರ ಪ್ರದರ್ಶನವೂ ಅಷ್ಟಕ್ಕಷ್ಟೇ ಇದೆ. ಸೋ ಈಗ ಮತ್ತೆ ಭಾರತ ತಂಡವನ್ನ ಮೇಲೆತ್ತಬೇಕು ಅಂದ್ರೆ ಅದ್ಭುತ ಪ್ರದರ್ಶನವೊಂದೇ ದಾರಿ. ಇಂಥಾ ಟೈಮಲ್ಲಿ ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡ್ರಲ್ಲೂ ಇಂಪ್ಯಾಕ್ಟ್ ಮಾಡಬಲ್ಲ ಹಾರ್ದಿಕ್ ಪಾಂಡ್ಯ ಬೆಸ್ಟ್ ಚಾಯ್ಸ್ ಆಗ್ತಾರೆ ಅಂತಾ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಹೇಳಿದ್ದಾರೆ. ಹಾಗಾದ್ರೆ ಈ ಪ್ಲ್ಯಾನ್ ವರ್ಕ್ ಆಗುತ್ತಾ? ಪಾಂಡ್ಯ ರೆಡ್ ಬಾಲ್​ಗೆ ಕಂ ಬ್ಯಾಕ್ ಮಾಡ್ತಾರಾ ಅನ್ನೋ ಕುತೂಹಲ ಜಾಸ್ತಿಯಾಗ್ತಿದೆ.

ಭಾರತದ ಪರ 7ನೇ ಸ್ಥಾನದಲ್ಲಿ ಪಾಂಡ್ಯ ಆಡಿಸುವಂತೆ ಸಲಹೆ!

ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಪ್ರಕಾರ ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನೂ ಆಡಬಹುದು ಎಂದಿದ್ದಾರೆ. ರೆಡ್ ಬಾಲ್ ಫಾರ್ಮೆಟ್​ಗೆ ಕಂ ಬ್ಯಾಕ್ ಮಾಡಿದ್ರೆ 7ನೇ ಕ್ರಮಾಂಕದಲ್ಲಿ ಆಡಿಸಬಹುದು ಎಂದು ಸಲಹೆ ನೀಡಿದ್ದಾರೆ. ಪಾಂಡ್ಯ ಅವರ ಪ್ರಸ್ತುತ ಫಿಟ್‌ನೆಸ್  ಮತ್ತು ಸಾಮರ್ಥ್ಯವನ್ನ ನೋಡಿದ್ರೆ ಇದು ಅಸಾಧ್ಯ ಅನ್ನಿಸೋದಿಲ್ಲ. ಆಲ್​ರೌಂಡರ್ ಪಾಂಡ್ಯ ಟೆಸ್ಟ್ ಕ್ರಿಕೆಟ್​ಗೆ ಸರಿಯಾಗಿ ಸೂಟ್ ಆಗ್ತಾರೆ. ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ ಮತ್ತು ವಾಷಿಂಗ್ಟನ್ ಸುಂದರ್ ಅವರಂತಹ ಆಟಗಾರರನ್ನು ಸಿಚುಯೇಷನ್ ಮತ್ತು ಬ್ಯಾಲೆನ್ಸ್​ ಮೇಲೆ ಡಿಪೆಂಡ್ ಆಗಿದೆ. ಌಂಡ್ ಪದೇಪದೆ ಬದಲಾವಣೆಗಳು ನಡೀತಿವೆ.  ಆದ್ರೆ ಪಾಂಡ್ಯ ಟೆಸ್ಟ್​ನಲ್ಲಿ ಆಡೋಕೆ ಬಯಸಿದ್ರೆ ಖಂಡಿತ ಅವ್ರನ್ನ ಆಡಿಸಬಹುದು ಎಂದಿದ್ದಾರೆ. ಹಾಗೇ ಪಾಂಡ್ಯ ಆಡುವ ರೀತಿ ನೋಡಿದ್ರೆ ಏನು ಬೇಕಾದರೂ ಆಗಬಹುದು. ಬಿಸಿಸಿಐ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲಲು ಬಯಸಿದರೆ ಪಾಂಡ್ಯ ಕೂಡ ಆಡಲ್ಲ ಅಂತಾ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಅದೆಲ್ಲಕ್ಕಿಂತ ಮುಖ್ಯವಾಗಿ ಮಾರ್ಡ್ರೆನ್ ಕ್ರಿಕೆಟ್​ನಲ್ಲಿ ಆಲ್​ರೌಂಡರ್​ಗಳು 20 ಓವರ್​ಗಳನ್ನ ಬೌಲ್​ ಮಾಡಬೇಕಾದ ಅಗತ್ಯ ಇಲ್ಲ. ಈಗ ನಿತೀಶ್ ಕುಮಾರ್ ರೆಡ್ಡಿ ಕೂಡ ಅಷ್ಟೊಂದು ಬೌಲಿಂಗ್ ಮಾಡುತ್ತಿಲ್ಲ. ಸುಮಾರು 12 ಓವರ್ ಗಳನ್ನು ಬೌಲಿಂಗ್ ಮಾಡುತ್ತಾರೆ. ಹಾರ್ದಿಕ್ ಪಾಂಡ್ಯ ಪ್ರತಿ ಇನ್ನಿಂಗ್ಸ್ ಗೆ 12 ರಿಂದ 15 ಓವರ್ ಗಳನ್ನು ಬೌಲ್ ಮಾಡಿದರೆ ಸಾಕು. ಅಷ್ಟು ಓವರ್​ಗಳಲ್ಲೇ ತಂಡಕ್ಕೆ ಏನು ಬೇಕೋ ಅದನ್ನ ಕೊಡ್ತಾರೆ ಅಂತಾ ಭರವಸೆ ವ್ಯಕ್ತಪಡಿಸಿದ್ದಾರೆ.

ಟೆಸ್ಟ್ ನಲ್ಲೂ ಪಾಂಡ್ಯ ರೆಕಾರ್ಡ್ಸ್ ಅದ್ಭುತ!

ಇನ್ನು ಹಾರ್ದಿಕ್ ಪಾಂಡ್ಯ ಭಾರತದ ಪರ ಕೊನೆಯದಾಗಿ ಟೆಸ್ಟ್ ಮತ್ತು ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದು 2018 ರಲ್ಲಿ.. ಪದೇ ಪದೇ ಕಾಡುತ್ತಿದ್ದ ಬೆನ್ನುನೋವಿನಿಂದ ಬಳಲುತ್ತಿದ್ದ ಪಾಂಡ್ಯ ನಂತರ ರೆಡ್-ಬಾಲ್ ಕ್ರಿಕೆಟ್‌ನಿಂದ ದೂರ ಸರಿದರು. ಸೋ ಆಗಿಂದ ಕಂಪ್ಲೀಟ್ ಆಗಿ ವೈಟ್-ಬಾಲ್ ಕ್ರಿಕೆಟ್​ನತ್ತ ಫೋಕಸ್ ಮಾಡಿದ್ದಾರೆ. ಹೀಗಾಗಿ  ಸೀಮಿತ ಓವರ್‌ಗಳ ಆಟಗಾರರಲ್ಲಿ ಬೆಸ್ಟ್ ಆಲ್​ರೌಂಡರ್ ಆಗಿದ್ದಾರೆ. ಆದ್ರೆ ಟೆಸ್ಟ್ ಮಾದರಿಯಲ್ಲಿ ನಿತೀಶ್ ರೆಡ್ಡಿ, ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್ ಮತ್ತು ಹರ್ಷಿತ್ ರಾಣಾ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಪಾಂಡ್ಯ ಅವರ ಟೆಸ್ಟ್ ದಾಖಲೆ ಸೀಮಿತವಾಗಿದ್ದರೂ, 11 ಪಂದ್ಯಗಳಿಂದ 31.29 ಸರಾಸರಿಯಲ್ಲಿ 532 ರನ್‌ಗಳು ಮತ್ತು 31.05 ಸರಾಸರಿಯಲ್ಲಿ 17 ವಿಕೆಟ್‌ಗಳನ್ನ ಬೇಟೆಯಾಡಿದ್ದಾರೆ. ಹೀಗಾಗಿ ಐಸಿಸಿ ವೈಟ್-ಬಾಲ್ ಪ್ರಶಸ್ತಿಗಳ ನಂತರ ಪಾಂಡ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನಲ್ಲೂ ಆಡಿದ್ರೆ ಅವ್ರ ಕೆರಿಯರ್ ಕಂಪ್ಲೀಟ್ ಆಗುತ್ತೆ.  ಸೋ ಈಗ ಟಿ-20 ವಿಶ್ವಕಪ್​ ಮೇಲೆ ಫೋಕಸ್ ಮಾಡಿರೋ ಭಾರತಕ್ಕೆ ಪಾಂಡ್ಯ ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡ್ರಲ್ಲೂ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ನೀಡೋ ಸ್ಟಾರ್ ಪ್ಲೇಯರ್ ಆಗಿದ್ದಾರೆ. ಐಸಿಸಿ ಬಿಗ್ ಟೂರ್ನಿ ಬಳಿಕ ಟೆಸ್ಟ್ ಕ್ರಿಕೆಟ್ ಆಡಿಸೋದ್ರ ಬಗ್ಗೆ ಚಿಂತನೆ ಮಾಡ್ಬೋದೋ ಏನೋ. ಆದ್ರೆ ಪಾಂಡ್ಯಗೆ ಇಂಜುರಿಯೇ ದೊಡ್ಡ ವಿಲನ್ ಆಗಿದ್ದು ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನೋಡ್ಬೇಕು.

Shantha Kumari