T20Iನಿಂದ ಹಾರ್ದಿಕ್ OUT! ಗಾಯಕ್ವಾಡ್‌ಗೆ KING ಕೊಹ್ಲಿ ಸ್ಲಾಟ್‌?

T20Iನಿಂದ ಹಾರ್ದಿಕ್ OUT!  ಗಾಯಕ್ವಾಡ್‌ಗೆ KING ಕೊಹ್ಲಿ ಸ್ಲಾಟ್‌?

ಐಪಿಎಲ್ ಟೂರ್ನಿ ಈಗ ರೋಚಕ ಘಟ್ಟ ತಲುಪಿದೆ. ಈ ಟೂರ್ನಿಯ ಅಂಗಳದಲ್ಲಿ ನಡೆಯುತ್ತಿರುವ ಕೆಲ ಸ್ವಾರಸ್ಯಕರ ಘಟನೆಗಳ ಸಂಕ್ಷಿಪ್ತ ಸುದ್ದಿ ಇಲ್ಲಿದೆ.

ಇದನ್ನೂ ಓದಿ: ODIನಿಂದ ಹೊರಬಿದ್ದ RO-KO – ರಿಪ್ಲೇಸ್ ಮೆಂಟ್ RISK ಆಗುತ್ತಾ?

ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ್ದ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್  ವೈಭವ್ ಅವರನ್ನು ಶ್ಲಾಘಿಸಿದ್ದಾರೆ.  ಈ ರೀತಿಯ ಬ್ಯಾಟಿಂಗ್ ಅನ್ನು ಹಿಂದೆಂದೂ ನೋಡಿಲ್ಲ  ಅವರು ಚೆಂಡನ್ನು ಬಹಳ ನಿಖರವಾಗಿ ಹೊಡೆಯುತ್ತಾರೆ. ಅವರ ಯಾವುದೇ ಹೊಡೆತಗಳು ಎಂದಿಗೂ ತಪ್ಪಾಗಿಲ್ಲ.  ನಾವು ಫುಲ್‌ ಲೆನ್ತ್‌ ಎಸೆತಗಳನ್ನು ಎಸೆದಾಗ, ಅವರು ಅವುಗಳನ್ನು ಸಹ ಹೊಡೆಯುತ್ತಿದ್ದರು. ವೈಭವ್‌ಗೆ ಎಲ್ಲಿ ಬೌಲ್ ಮಾಡಬೇಕೆಂದು ನಮಗೆ ಲೆಕ್ಕಾಚಾರ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

IPL ಆರಂಭಿಸಿ ಕ್ರಿಕೆಟ್ ಲೋಕದಲ್ಲಿ ಕಮಾಲ್ ಮಾಡಿದ ಲಲಿತ್ ಮೋದಿಯವರ ಜೀವನ ಚರಿತ್ರೆ ಈಗ ಬೆಳ್ಳಿಪರದೆಗೆ ಬರಲು ಸಿದ್ಧವಾಗುತ್ತಿದೆ. ತಮ್ಮ ಜೀವನ ಆಧಾರಿತ ಬಯೋಪಿಕ್  ಕೆಲಸಗಳು ಈಗ ಸ್ಕ್ರಿಪ್ಟಿಂಗ್ ಹಂತದಲ್ಲಿವೆ ಎಂದು ಲಲಿತ್ ಮೋದಿ ಅವರೇ ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಚಿತ್ರದಲ್ಲಿ ತಮ್ಮ ಪಾತ್ರವನ್ನು ಮಾಡಲು ಬಾಲಿವುಡ್‌ನ ಸ್ಟಾರ್ ನಟ ರಣವೀರ್ ಸಿಂಗ್  ಅವ್ರ ಆಸಕ್ತಿ ತೋರಿಸಿದ್ದರು ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ

ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ತಂಡದಿಂದ ತೆಗೆದುಹಾಕಿ ಶ್ರೇಯಸ್ ಅಯ್ಯರ್ ಅವರನ್ನು ಟಿ20 ತಂಡದ ಹೊಸ ನಾಯಕರನ್ನಾಗಿ ನೇಮಿಸುವುದ್ದಕ್ಕೆ  ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ಗುರುವಾರ ನಡೆದ ಬಿಸಿಸಿಐ ಅಪೆಕ್ಸ್​ ಕೌನ್ಸಿಲ್ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.  ಸೂರ್ಯಕುಮಾರ್ ನಾಯಕತ್ವದ ಜೊತೆಗೆ ತಂಡದಿಂದಲೂ ಹೊರಬೀಳಲಿದ್ದಾರೆ ಎಂದು ವರದಿ ತಿಳಿಸಿವೆ.

ಸೂರ್ಯಕುಮಾರ್ ಯಾದವ್ ಅವರನ್ನು ನಾಯಕತ್ವದಿಂದ ತೆಗೆದುಹಾಕುವುದು ಸರಿಯಾದ ಕ್ರಮವಲ್ಲ ಎಂದು ಮಾಜಿ ಮುಖ್ಯ ಆಯ್ಕೆದಾರ ಎಂಎಸ್‌ಕೆ ಪ್ರಸಾದ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.   ಸೂರ್ಯಕುಮಾರ್ ಯಾದವ್‌ ಅವರನ್ನು ತೆಗೆದುಹಾಕುವುದರಿಂದ ಸರಿಯಾದ ಸಂದೇಶ ಬರುವುದಿಲ್ಲ ಎಂದು ನಾನು ನಂಬುತ್ತೇನೆ. ಅವರಿಗೆ ಇನ್ನೂ ಕೆಲವು ಸರಣಿಗಳನ್ನು ನೀಡಿ, ಮತ್ತು ಅವರ ಕಳಪೆ ಫಾರ್ಮ್ ಮುಂದುವರಿದರೆ ನಾಯಕತ್ವವನ್ನು ಹಸ್ತಾಂತರ ಮಾಡಿ ಎಂದು ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ ಐರ್ಲೆಂಡ್ ಮತ್ತು ಇಂಗ್ಲೆಂಡ್ ಟಿ20 ಪ್ರವಾಸಗಳಿಂದ ಹೊರಗುಳಿಯುವ ಸಾಧ್ಯತೆಯಿದೆ. 2027ರ ಏಕದಿನ ವಿಶ್ವಕಪ್‌ಗೆ ಅವರನ್ನು ಸಿದ್ಧಪಡಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಾರ್ದಿಕ್ ಅವರ ಫಿಟ್‌ನೆಸ್ ಮತ್ತು ಬೌಲಿಂಗ್ ಸಾಮರ್ಥ್ಯವನ್ನು ಆಯ್ಕೆದಾರರು ODIನಲ್ಲಿ ಸೂಕ್ಷ್ಮವಾಗಿ ಗಮನಿಸಲಿದ್ದಾರೆ. ಗಾಯದ ಸಮಸ್ಯೆಗಳು ಪಾಂಡ್ಯಗೆ ದೊಡ್ಡ ತಲೆನೋವಾಗಿದ್ದು, ಶಿವಂ ದುಬೆ ಮತ್ತು ನಿತೀಶ್ ರೆಡ್ಡಿ ಅವರ ಸ್ಥಾನ ತುಂಬುವ ಸಾಧ್ಯತೆ ಇದೆ.

ಸ್ನಾಯು ಸೆಳೆತದ ಗಾಯದಿಂದಾಗಿ ಆಧುನಿಕ ಬ್ಯಾಟಿಂಗ್‌ ದಿಗ್ಗಜ ವಿರಾಟ್‌ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರ ನಡೆದಿದ್ದಾರೆ. ಹಾಗಾಗಿ ಅವರು ಸ್ಥಾನಕ್ಕೆ ಭಾರತ ಏಕದಿನ ತಂಡದಲ್ಲಿ ಯುವ ಬ್ಯಾಟ್ಸ್‌ಮನ್‌ ಋತುರಾಜ್‌ ಗಾಯಕ್ವಾಡ್‌ಗೆ  ಅವಕಾಶ ನೀಡಬಹುದು ಎಂಬ ಮಾತು ಕೇಳಿ ಬರ್ತಿದೆ.

ಟೆಸ್ಟ್ ತಂಡದ ಉಪನಾಯಕನ ಸ್ಥಾನದಿಂದ ರಿಷಭ್ ಪಂತ್ ಅವರನ್ನು ತೆಗೆದುಹಾಕಲಾಗಿದ್ದು, ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಪಂತ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಹಿರಿಯ ಆಟಗಾರನಾಗಿ ಹೇಗೆ ವರ್ತಿಸಬೇಕು ಎಂಬುದರ ಕುರಿತು ಗಂಭೀರ್ ಪಂತ್ ಅವರಿಗೆ ತಿಳಿಹೇಳಿದ್ದಾರೆ ಎನ್ನಲಾಗಿದೆ. ಮಾದರಿ ಮತ್ತು ಹಿರಿಯ ಆಟಗಾರನಾಗಿ ರಿಷಭ್ ಉತ್ತಮ ಪಾತ್ರ ವಹಿಸಬೇಕೆಂದು ಅವರು ಪಂತ್‌ಗೆ ಸಲಹೆ ನೀಡಿದ್ದಾರಂತೆ.

ನಾಳೆಯಿಂದ ನಡೆಯಲಿರುವ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಇತಿಹಾಸ ಸೃಷ್ಟಿಸುವ ಕನಸಿನಲ್ಲಿದ್ದಾರೆ.ಈ ಪಂದ್ಯದಲ್ಲಿ ಇವರು ಆರು ಸಿಕ್ಸರ್‌ಗಳನ್ನು ಬಾರಿಸಿದರೆ,  ಟೆಸ್ಟ್ ಕ್ರಿಕೆಟ್‌ನಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಭಾರತೀಯ ಕ್ರಿಕೆಟಿಗ ಮತ್ತು ವಿಶ್ವದ ನಾಲ್ಕನೇ ಕ್ರಿಕೆಟಿಗರಾಗುತ್ತಾರೆ. ವಿಶ್ವ ಕ್ರಿಕೆಟ್‌ನಲ್ಲಿ ಈ ಸಾಧನೆಯನ್ನು ಈ ಮೊದಲು ಬೆನ್ ಸ್ಟೋಕ್ಸ್, ಬ್ರೆಂಡನ್ ಮೆಕಲಮ್ ಮತ್ತು ಆಡಮ್ ಗಿಲ್‌ಕ್ರಿಸ್ಟ್ ಮಾತ್ರ ಮಾಡಿದ್ದಾರೆ.

ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆ.ಎಸ್. ಭರತ್ 32ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.  ಇವರು ಭಾರತದ ಪರ 7 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ವಿಕೆಟ್ ಕೀಪಿಂಗ್‌ನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸೇರಿದಂತೆ ತಂಡದ ಸದಸ್ಯರು, ತರಬೇತುದಾರರು ಮತ್ತು ಬಿಸಿಸಿಐಗೆ ಕೃತಜ್ಞತೆ ಸಲ್ಲಿಸಿ ಹೆಮ್ಮೆಯಿಂದ ತಮ್ಮ ವಿದಾಯ ಹೇಳಿದ್ದಾರೆ.

ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಏಕದಿನ ಸರಣಿ ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಪಾಕಿಸ್ತಾನಿ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿ ಹೋಗಿದೆ.  ಆಸ್ಟ್ರೇಲಿಯಾ ತಂಡವು 42 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 157 ರನ್‌ಗಳಿಗೆ ಆಲೌಟ್ ಆಯ್ತು.  ಪಾಕಿಸ್ತಾನ ಪರ ಶಾಹೀನ್ ಶಾ ಅಫ್ರಿದಿ ಅದ್ಭುತ ಬೌಲಿಂಗ್ ಪ್ರದರ್ಶಿಸಿ ಎಂಟು ಓವರ್‌ಗಳಲ್ಲಿ 30 ರನ್‌ಗಳಿಗೆ ಮೂರು ವಿಕೆಟ್ ಪಡೆದರು. 3 ರಲ್ಲಿ 2 ಪಂದ್ಯ ಗೆಲ್ಲೋ ಮೂಲಕ ಪಾಕ್ ಈ ಸರಣಿಯನ್ನ ಗೆದ್ದುಕೊಂಡಿದೆ.

 

Kishor KV

Leave a Reply

Your email address will not be published. Required fields are marked *