ರಾಹುಲ್ Vs ಪಾಂಡ್ಯ ಕ್ಯಾಪ್ಟನ್ ರೇಸ್ – HITಮ್ಯಾನ್ ಬಳಿಕ ODIಗೆ ಯಾರು ಬೆಸ್ಟ್?

ವಿಶ್ವ ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಸಾರ್ವಭೌಮನಾಗಿ ಮೆರೀತಿದೆ.. 2024ರ ಟಿ-20 ವಿಶ್ವಕಪ್ ಗೆದ್ದಿದ್ದ ಭಾರತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ ಚಾಂಪಿಯನ್ ಆಗಿ ಟ್ರೋಫಿ ಎತ್ತಿ ಹಿಡಿದಿದೆ. ಭಾರತಕ್ಕೆ ಎರಡೆರಡು ಐಸಿಸಿ ಟ್ರೋಫಿಗಳನ್ನ ಗೆದ್ದು ಕೊಟ್ಟ ನಾಯಕ ರೋಹಿತ್ ಶರ್ಮಾ. ನಾಯಕನಾಗಿ, ಆಟಗಾರನಾಗಿ ರೋಹಿತ್ಶರ್ಮಾ ಬೆಸ್ಟ್ನಲ್ಲಿ ಬೆಸ್ಟ್ ರಿಸಲ್ಟ್ ತಂದುಕೊಟ್ಟಿದ್ದಾರೆ. ಮುಂದೆಯೂ ಕೂಡ ಅಂಥದ್ದೇ ಪರ್ಫಾಮೆನ್ಸ್ ಕೊಡೋ ಭರವಸೆಯಲ್ಲಿದ್ದಾರೆ. ಅದೇ ಕಾನ್ಫಿಡೆನ್ಸ್ನಲ್ಲೇ ಸದ್ಯಕ್ಕಂತೂ ನಿವೃತ್ತಿ ಇಲ್ಲ ಅಂದಿದ್ದಾರೆ. ಬಟ್ ಇಂದಲ್ಲ ನಾಳೆ ರೋಹಿತ್ ಶರ್ಮಾ ವಿದಾಯ ಹೇಳಲೇಬೇಕು. ಸೋ ಆಗ ಯಾರು ನಾಯಕ ಆಗ್ತಾರೆ ಅನ್ನೋ ಚರ್ಚೆ ನಡೀತಿದೆ. ಇದ್ರಲ್ಲಿ ಪಾಂಡ್ಯ ಮತ್ತು ರಾಹುಲ್ ಮುಂಚೂಣಿಯಲ್ಲಿದ್ದಾರೆ.
ಕೂಲ್ & ಕ್ಲಾಸಿಕ್ ಪ್ಲೇಯರ್ ಕೆಎಲ್ ರಾಹುಲ್!
ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಕೆ.ಎಲ್ ರಾಹುಲ್. ಟೀಂ ಇಂಡಿಯಾದ ಮೂರೂ ಮಾದರಿಯಲ್ಲೂ ತಂಡದ ವೈಸ್ ಕ್ಯಾಪ್ಟನ್ ಆಗಿದ್ದವರು. ಕೆ.ಎಲ್ ರಾಹುಲ್ 2022ರಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಬಾರಿ ಏಕದಿನ ನಾಯಕರಾಗಿ ಡೆಬ್ಯೂ ಮಾಡಿದ್ದರು. ಭಾರತ ತಂಡದ 26ನೇ ಏಕದಿನ ಕ್ಯಾಪ್ಟನ್ ಆಗಿ ಡೆಬ್ಯೂ ಮಾಡಿದ್ದಾರೆ ಕೆ.ಎಲ್ ರಾಹುಲ್. ಇನ್ನು, ರಾಹುಲ್ ತಮ್ಮ ಬ್ಯಾಟಿಂಗ್ ಸ್ಟೈಲ್ ಮತ್ತು ಕನ್ಸಿಸ್ಟೆಸ್ಟಿ ಪರ್ಫಾಮೆನ್ಸ್ ಮೂಲಕವೇ ಸದ್ದು ಮಾಡಿದವ್ರು. ಓಪನರ್ ಬ್ಯಾಟರ್ ಆಗಿ ಮಾತ್ರವಲ್ಲದೆ ಮಿಡಲ್ ಆರ್ಡರ್ ಬ್ಯಾಟರ್ ಆಗಿ ಯಶಸ್ಸು ಕಂಡಿದ್ದಾರೆ. ವಿಕೆಟ್ ಕೀಪಿಂಗ್ನಲ್ಲೂ ನಿಪುಣರಾಗಿದ್ದಾರೆ. ಸೋ ಕೆಎಲ್ ರಾಹುಲ್ರನ್ನ ಒಡಿಐ ಫಾರ್ಮೆಟ್ಗೆ ಮುಂದಿನ ದಿನಗಳಲ್ಲಿ ಕ್ಯಾಪ್ಟನ್ ಮಾಡಿದ್ರೂ ಮಾಡಬಹುದು. ಕೆಎಲ್ ರಾಹುಲ್ ಟೀಂ ಇಂಡಿಯಾ ಪರ 85 ಇನ್ನಿಂಗ್ಸ್ಗಳಲ್ಲಿ 79 ಬಾರಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 3,043 ರನ್ ಕಲೆ ಹಾಕಿದ್ದಾರೆ. ಹೈಯೆಸ್ಟ್ ಸ್ಕೋರ್ 112 ರನ್. ಇನ್ನು 49ರ ಆವರೇಜ್ ಹೊಂದಿದ್ದಾರೆ. ಹೀಗಾಗಿ ಕ್ಯಾಪ್ಟನ್ಸಿಗೆ ಬೆಸ್ಟ್ ಪಿಕ್ ಆಗಬಹುದು.
ಬ್ಯಾಟಿಂಗ್ & ಬೌಲಿಂಗ್ ಗೂ ಸೈ ಹಾರ್ದಿಕ್ ಪಾಂಡ್ಯ!
ಇನ್ನು ಟೀಂ ಇಂಡಿಯಾ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ. ಅಗ್ರೆಸ್ಸಿವ್ ಬ್ಯಾಟಿಂಗ್ನಿಂದ ಮಾತ್ರವಲ್ಲ ವೇಗದ ಬೌಲಿಂಗ್ನಿಂದಲೂ ವಿನ್ನಿಂಗ್ ಪರ್ಫಾಮೆನ್ಸ್ ನೀಡ್ತಾರೆ. ಅದ್ರಲ್ಲೂ ಆಟದಲ್ಲಿ ಸಿಕ್ಕಾಪಟ್ಟೆ ಜೋಶ್ನಲ್ಲೇ ಇರೋ ಪಾಂಡ್ಯ ಯಂಗ್ಸ್ಟರ್ಸ್ಗೂ ಕೂಡ ಇನ್ಪಿರೇಷನ್ ಆಗ್ತಾರೆ. ಅಲ್ದೇ ಪಾಂಡ್ಯ ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ಲೀಡ್ ಮಾಡಿದ್ದಾರೆ. ಕ್ಯಾಪ್ಟನ್ಸಿ ಕ್ವಾಲಿಟೀಸ್ ಇದ್ದು ಯಾವುದೇ ಒತ್ತಡದ ಸಂದರ್ಭದಲ್ಲೂ ಸರಿಯಾದ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಇದೆ. ಹಾರ್ದಿಕ್ ಪಾಂಡ್ಯ ಭಾರತದ ಪರ 94 ಇನ್ನಿಂಗ್ಸ್ಗಳ ಪೈಕಿ 68 ಮ್ಯಾಚ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 1904 ರನ್ ಕಲೆ ಹಾಕಿದ್ದಾರೆ. ಹಾಗೇ ಬೌಲಿಂಗ್ನಲ್ಲಿ 94 ಒಡಿಐ ಪಂದ್ಯಗಳಲ್ಲಿ 91 ವಿಕೆಟ್ ಬೇಟೆಯಾಡಿದ್ದಾರೆ. ಹೀಗಾಗಿ ಕ್ಯಾಪ್ಟನ್ಸಿ ವಿಚಾರದಲ್ಲಿ ತಂಡದ 2ನೇ ಆಯ್ಕೆ ಹಾರ್ದಿಕ್ ಪಾಂಡ್ಯ.
ಸದ್ಯ ಟೀಮ್ ಇಂಡಿಯಾ ಕ್ರಿಕೆಟ್ನಲ್ಲಿ ವಿಶ್ವದ ಅತ್ಯಂತ ಯಶಸ್ವಿ ತಂಡ. ಈ ಯಶಸ್ಸಿನ ಹಿಂದಿನ ಪ್ರಮುಖ ಕಾರಣ ಸಮರ್ಥ ನಾಯಕತ್ವ. ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ನಂತರ ಕ್ಯಾಪ್ಟನ್ ರೋಹಿತ್ ಶರ್ಮಾ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಸೋ ಇದೇ ಯಶಸ್ಸನ್ನ ಮುಂದೆಯೂ ಸಹ ಕೊಂಡೊಯ್ಯುವಂಥ ಸಮರ್ಥ ನಾಯಕ ಬೇಕಿದೆ. ಈಗಾಗ್ಲೇ ಟಿ-20ಯಲ್ಲಿ ಸೂರ್ಯಕುಮಾರ್ ಯಾದವ್ ಬೆಸ್ಟ್ ಪರ್ಫಾಮೆನ್ಸ್ ಕೊಡ್ತಿದ್ದು ಏಕದಿನ ಮಾದರಿಗೂ ಸಮರ್ಥ ನಾಯಕನ ಹುಡುಕಾಟ ನಡೀತಿದೆ.