ಹಾರ್ದಿಕ್ ಹೊಸ ಗರ್ಲ್‌ಫ್ರೆಂಡ್ ಕಿಸ್.. ಪಾಂಡ್ಯಗೆ ಫಾರಿನ್ ಹುಡ್ಗಿನೇ ಯಾಕೆ?
ಜಾಸ್ಮಿನ್ ವಾಲಿಯಾ ಯಾರು?

ಹಾರ್ದಿಕ್ ಪಾಂಡ್ಯ.. ಸದ್ಯ ಕ್ರಿಕೆಟ್ ಹಾಗೂ ವೈಯಕ್ತಿಕ ವಿಚಾರವಾಗಿ ಭಾರಿ ಸುದ್ದಿಯಲ್ಲಿದ್ದಾರೆ. ಪಾಂಡ್ಯ ನತಾಶಾಗೆ ಡಿವೋರ್ಸ್ ಕೊಟ್ಟಾದ್ಮೇಲೆ ವಿದೇಶಿ ನಟಿಯೊಂದಿಗೆ ಸುತ್ತಾಡ್ತಿದ್ದಾರೆ.. ಇವ್ರನ್ನೇ ಮದುವೆ ಆಗ್ತಿದ್ದಾರೆ ಎಂಬ ಗಾಸಿಪ್ ಹರಿದಾಡಿತ್ತು.. ಆದ್ರೀಗ ಆ ಸುಂದರಿ ಮತ್ತೆ ಕಾಣಿಸಿಕೊಂಡಿದ್ದಾರೆ. ದುಬೈನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಗ್ಯಾಲರಿಯಲ್ಲಿ ಕೂತ ಈ ಬ್ಯೂಟಿ ಹಾರ್ದಿಕ್ ಗೆ ಫ್ಲೈಯಿಂಗ್ ಕಿಸ್ ಮೇಲೆ ಕಿಸ್ ನೀಡಿದ್ದಾರೆ. ಇದೀಗ ಪಂದ್ಯ ವೇಳೆ ಹುರಿದುಂಬಿಸಿದವಳು ಯಾರು ಅನ್ನೋ ಪ್ರಶ್ನೆ ಅನೇಕರನ್ನ ಕಾಡ್ತಿದೆ. ಆಕೆ ಬೇರೆ ಯಾರು ಅಲ್ಲ.. ಜಾಸ್ಮಿನ್ ವಾಲಿಯಾ.. ಅಷ್ಟಕ್ಕೂ ಜಾಸ್ಮಿನ್ ವಾಲಿಯಾ ಯಾರು? ಹಾರ್ದಿಕ್ ಜೊತೆ ಈಕೆಯ ಹೆಸರು ತಳುಕುಹಾಕಿಕೊಂಡಿದ್ದು ಹೇಗೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬ್ಯಾಚುಲರ್ಸ್‌ಗೆ ಗಿಲ್ಲಿನಟ ಕ್ಯಾಪ್ಟನ್.. ಗಗನಾ ರೋಸ್ ಕೊಟ್ರೆ ಗಿಲ್ಲಿಗೆ ಉರಿ!
ಮೊದ್ಲೆಲ್ಲಾ ಬ್ರೇಕ್‌ಅಪ್ ಆದ್ರೆ ಪ್ರೀತಿಸಿದವರ ನೆನಪಲ್ಲೇ ದಿನ ಕಳಿತಾ ಇದ್ರು.. ಕೆಲವರಂತೂ ಮಾನಸಿಕವಾಗಿ ಕುಗ್ಗಿ ಹೋಗ್ತಿದ್ರು.. ಆದ್ರೀಗ ಜನರ ಮನಸ್ಥಿತಿ ಬದಲಾಗಿದೆ. ಪ್ರೀತಿ ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ. ಇವತ್ತು ಬ್ರೇಕ್ ಅಪ್ ಆದ್ರೆ ನಾಳೆ ಇನ್ನೊಬ್ಬರ ಜೊತೆ ಲವ್ ಆಗಿರುತ್ತೆ.. ಯಾವ ಫೀಲಿಂಗ್ಸ್ ಇರೋದಿಲ್ಲ.. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಹಾರ್ದಿಕ್ ಪಾಂಡ್ಯ ಮತ್ತು ಅವರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಅಂತಾ ಹೇಳಿದ್ರೆ ತಪ್ಪಾಗಲ್ವೇನೋ..
ನತಾಶಾ ಹಾಗೂ ಹಾರ್ದಿಕ್ ಪಾಂಡ್ಯ ಪ್ರೀತಿಸಿ ಎರಡೆರಡು ಬಾರಿ ಮದುವೆಯಾದವರು.. ಆದ್ರೀಗ ಇವರಿಬ್ಬರು ಡಿವೋರ್ಸ್ ಪಡ್ಕೊಳ್ಳೋದ್ರ ಮೂಲಕ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಎಲ್ಲವೂ ಮರೆತು ಅವರ ಅವರ ಬದುಕಿನಲ್ಲಿ ನೆಮ್ಮದಿಯಾಗಿದ್ದಾರೆ. ಅಷ್ಟೇ ಅಲ್ಲ ಹಾರ್ದಿಕ್ ನತಾಶ ಹೊಸ ಜೀವನ ಸಂಗಾತಿಯನ್ನು ಹುಡುಕ್ತಿದ್ದಾರೆ. ಇದಕ್ಕೆ ಪುರಾವೆ ಎನ್ನುವಂತೆ ನತಾಶಾ ಹೆಸರು ದಿಶಾ ಪಠಾಣಿಯ ಮಾಜಿ ಬಾಯ್‌ಫ್ರೆಂಡ್ ಅಲೆಕ್ಸಾಂಡರ್ ಅಲೆಕ್ಸ್ ಜೊತೆ ಥಳುಕು ಹಾಕಿಕೊಂಡಿದ್ದರೆ, ಹಾರ್ದಿಕ್ ಪಾಂಡ್ಯ ಹೆಸರು ಬ್ರಿಟನ್‌ನ ಬೆಡಗಿ ಜಾಸ್ಮಿನ್ ವಾಲಿಯಾ ಜೊತೆ ಕೇಳಿ ಬರುತ್ತಿದೆ. ಹಾರ್ದಿಕ್ ಮತ್ತು ಜಾಸ್ಮಿನ್ ಪರಸ್ಪರ್ ಡೇಟಿಂಗ್ ಮಾಡ್ತಿದ್ದಾರೆ ಎಂಬ ಅನ್ನೋ ಅನುಮಾನ ಹಾರ್ದಿಕ್ ಫ್ಯಾನ್ಸ್ ಗೆ ಕಾಡ್ತಾ ಇದೆ. ಈ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಪಂದ್ಯದ ವೇಳೆ ದುಬೈ ಕ್ರೀಡಾಂಗಣದಲ್ಲಿ ಜಾಸ್ಮಿನ್ ವಾಲಿಯಾ ಕಾಣಿಸಿಕೊಂಡಿದ್ದಾರೆ. ಪ್ರೇಕ್ಷಕರ ನಡುವೆ ಕೂತು ಹಾರ್ದಿಕ್ ಪಾಂಡ್ಯಗೆ ಫ್ಲೈಯಿಂಗ್ ಕಿಸ್ ಮೇಲೆ ಕಿಸ್ ನೀಡಿದ್ದಾರೆ. ಸದ್ಯ ಜಾಸ್ಮಿನ್ ವಾಲಿಯಾ ಫ್ಲೈಯಿಂಗ್ ಕಿಸ್ ನೀಡ್ತಿರೋ ಫೋಟೋ, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜಾಸ್ಮಿನ್ ಜಾದೂವಿನಿಂದ ಹಾರ್ದಿಕ್ ಬದುಕು ಬದಲಾಗುತ್ತಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇಬ್ಬರ ನಡುವೆ ಪ್ರೇಮಾಂಕುರವಾಗಿರುವ ಸುದ್ದಿ ನೂರಕ್ಕೆ ನೂರು ನಿಜಾ ಎನ್ನುವ ಮಾತು ಮಾತು ಕೂಡ ಕೇಳಿ ಬರುತ್ತಿದೆ.
ಅಂದ್ಹಾಗೇ ಜಾಸ್ಮಿನ್ ವಾಲಿಯಾ ಯಾರು ಅಂತಾ ನೋಡೋದಾದ್ರೆ.. ಈಕೆ ಇಂಗ್ಲೆಂಡ್‌ನ ಎಸ್ಸೆಕ್ಸ್ ನಗರದವಳು. ಆದ್ರೆ ಜಾಸ್ಮಿನ್ ತಂದೆ ತಾಯಿ ಭಾರತೀಯ ಮೂಲದವರು. ಇನ್ನು, ಜಾಸ್ಮಿನ್ ಪ್ರಖ್ಯಾತ ಗಾಯಕಿ. 2017ರಲ್ಲಿ ಬಿಡುಗಡೆಯಾಗಿದ್ದ ಇವರ “ಬೊಮ್ ಡಿಗ್ಗಿ” ಹಾಡನ್ನು ಕೇಳಿ ಅನೇಕ ಫಿದಾ ಆಗಿದ್ರು.. ಇದಕ್ಕೂ ಮುನ್ನ ಜಾಸ್ಮಿನ್ ವಾಲಿಯಾ ಬ್ರಿಟಿಷ್ ಟಿವಿ ರಿಯಾಲಿಟಿ ಸೀರಿಸ್ ‘ದಿ ಒನ್ಲಿ ವೇ ಎಸ್ಸೆಕ್ಸ್’ ನಲ್ಲಿ ಕಾಣಿಸಿಕೊಂಡಿದ್ದರು. ಈ ಶೋ ಮೂಲಕ ಜನಮನ ಗೆದ್ದಿದ್ರು. ಇಷ್ಟೇ ಅಲ್ಲ ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ನಿರೂಪಣೆ ಕೂಡ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇದೀಗ ಜಾಸ್ಮಿನ್ ಹೆಸ್ರು ಹಾರ್ದಿಕ್ ಪಾಂಡ್ಯ ಜೊತೆ ತಳುಕುಹಾಕಿಕೊಂಡಿದೆ.
ಹಾರ್ದಿಕ್ ಪಾಂಡ್ಯ ಜೊತೆ ಜಾಸ್ಮಿನ್ ಹೆಸ್ರು ತಳುಕುಹಾಕಿಕೊಂಡ ಬೆನ್ನಲ್ಲೇ ಇವರಿಬ್ರು ಪರಿಚಯ ಆಗಿದ್ದು ಎಲ್ಲಿ ಅನ್ನೋ ಪ್ರಶ್ನೆ ಕಾಡ್ತಿದೆ. ಆದ್ರೆ ಈ ಪ್ರಶ್ನೆಗೆ ಮಾತ್ರ ಉತ್ತರ ಇಲ್ಲ. ಆದ್ರೆ ನತಾಶಾಳಿಂದ ದೂರವಾದ ಕೆಲವೇ ದಿನಗಳಲ್ಲಿ, ಹಾರ್ದಿಕ್ ಪಾಂಡ್ಯ ಗ್ರೀಸ್ ನ ಐಶಾರಾಮಿ ಹೊಟೇಲ್‌ನಲ್ಲಿ ಕಾಲ ಕಳೆದಿದ್ರು.. ಗ್ರೀಸ್‌ಗೆ ಹೋಗಿದ್ದಾಗ ಅಲ್ಲಿ ತೆಗೆದುಕೊಂಡಿದ್ದ ಫೋಟೋಗಳಿಂದಾಗಿ ಜಾಸ್ಮಿನ್ ವಾಲಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡೋದಿಕ್ಕೆ ಶುರುವಾಗಿತ್ತು.. ಸೋಶಿಯಲ್ ಮೀಡಿಯಾದಲ್ಲಿ ಹಾರ್ದಿಕ್ ಹಾಕಿರುವ ಫೋಟೊದಲ್ಲಿನ ಬ್ಯಾಗ್ರೌಂಡ್‌ನಲ್ಲಿಯೇ ಗಾಯಕಿ ಕೂಡ ಫೋಟೋ ಅಪ್ಲೋಡ್ ಮಾಡಿದ್ರು.. ಈ ಫೋಟೋ ನೋಡಿದ ಫ್ಯಾನ್ಸ್ ಇವರಿಬ್ರು ರಿಲೇಶನ್‌ಷಿಪ್‌ನಲ್ಲಿ ಇದ್ದಾರೆ ಎಂಬ ವದಂತಿ ಹುಟ್ಟು ಹಾಕಿದ್ರು. ಸದ್ಯ ಜಾಸ್ಮಿನ್ ಭಾನುವಾರ ದುಬೈನಲ್ಲಿ ನಡೆದ ಪಂದ್ಯದಲ್ಲಿ ಕಾಣಿಸಿಕೊಂಡ್ರಿಂದ ಹಾರ್ದಿಕ್ ಮತ್ತು ಇವರ ಸಂಬಂಧದ ಕುರಿತು ಮತ್ತೊಮ್ಮೆ ಪ್ರಶ್ನೆ ಎದ್ದಿದೆ. ಜಾಸ್ಮಿನ್ ನೀಡಿದ ಫ್ಲೈಯಿಂಗ್ ಕಿಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬೆನ್ನಲ್ಲೇ ಕೆಲ ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದಾರೆ. ಪಾಂಡ್ಯ ಬಾಳಲ್ಲಿ ಮತ್ತೆ ಫಾರಿನ್ ಗರ್ಲ್ ಎಂಟ್ರಿ.. ಎರಡನೇ ಅತ್ತಿಗೆ ಸೂಪರ್.. ಅಂತಾ ಕಾಮೆಂಟ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಹಾರ್ದಿಕ್ ಅಥವಾ ಜಾಸ್ಮಿನ್ ಹರಿದಾಡ್ತಿರೋ ಗಾಳಿ ಸುದ್ದಿಗಳಿಗೆ ಬ್ರೇಕ್ ಹಾಕ್ತಾರಾ ಅಂತಾ ಕಾದುನೋಡ್ಬೇಕು.