‘ಕಿಸ್’ ಮನೆಯಲ್ಲಿ ಮಾಡಿಕೊಳ್ಳಿ, ಊರಿಗೆಲ್ಲಾ ಯಾರಿಗೆ ತೋರಿಸ್ತೀರಾ? – ಹಾರ್ದಿಕ್ ಪಾಂಡ್ಯ, ನತಾಶಾ ಜೋಡಿಗೆ ಫುಲ್ ಕ್ಲಾಸ್

‘ಕಿಸ್’ ಮನೆಯಲ್ಲಿ ಮಾಡಿಕೊಳ್ಳಿ, ಊರಿಗೆಲ್ಲಾ ಯಾರಿಗೆ ತೋರಿಸ್ತೀರಾ? – ಹಾರ್ದಿಕ್ ಪಾಂಡ್ಯ, ನತಾಶಾ ಜೋಡಿಗೆ ಫುಲ್ ಕ್ಲಾಸ್

ಹಾರ್ದಿಕ್ ಪಾಂಡ್ಯ ಒಬ್ಬ ಸ್ಟಾರ್ ಕ್ರಿಕೆಟರ್. ಇವರ ಪತ್ನಿ ನತಾಶಾ ಕೂಡಾ ಸೆಲೆಬ್ರಿಟಿಯೇ. ಈ ಜೋಡಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. 3 ವರ್ಷಗಳ ಹಿಂದೆ ಕೊರೊನಾ ಸಂದರ್ಭದಲ್ಲಿ ಸಿಂಪಲ್ ಆಗಿ ಮದುವೆಯಾಗಿದ್ದ ಈ ಜೋಡಿ, ಕಳೆದ ಪೆಬ್ರವರಿಯಲ್ಲಿ ಆಪ್ತರು, ಸ್ನೇಹಿತರ ಸಮ್ಮುಖದಲ್ಲಿ ಗ್ರ್ಯಾಂಡ್ ಆಗಿ ಮತ್ತೆ ಮದುವೆಯಾಗಿದ್ದರು. ಇವರ ಮದುವೆಗೆ ಮಗ ಅಗಸ್ತ್ಯ ಕೂಡ ಸಾಕ್ಷಿಯಾಗಿದ್ದು ವಿಶೇಷವಾಗಿತ್ತು. ಸದ್ಯ ಹ್ಯಾಪಿ ಕಪಲ್ ಅಂತಾನೇ ಕರೆಸಿಕೊಳ್ಳುತ್ತಿರುವ ಈ ಜೋಡಿಯ ಬೆಡ್ ರೂಮ್ ಫೋಟೋ ವೈರಲ್ ಆಗುತ್ತಿದೆ.

ಇದನ್ನೂ ಓದಿ: ರಿಷಬ್ ಶೆಟ್ಟಿ ನಿರ್ದೇಶನದ ‘ಲಾಫಿಂಗ್ ಬುದ್ದ’ ಸಿನಿಮಾ ಶೂಟಿಂಗ್ ಮುಕ್ತಾಯ – ಪ್ರಮೋದ್ ಶೆಟ್ಟಿಗೆ ತೇಜು ಬೆಳವಾಡಿ ಸಾಥ್

ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ದಂಪತಿ ತಮ್ಮ ಬೆಡ್‌ರೂಮ್ ಫೋಟೋ ಹಂಚಿಕೊಳ್ಳುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಹುಶಃ ಇದು ಮತ್ತೆ  ಮದುವೆಯಾದ ಮೇಲೆ ಮಾಡಿಕೊಂಡಿರುವ ಫೋಟೋ ಶೂಟ್ ಇರಬಹುದು. ಆದರೆ ಇದು ತೀರಾ ಅಶ್ಲೀಲ ಫೋಟೋಶೂಟ್ ಎಂದು ಅನೇಕರು ಗರಂ ಆಗಿದ್ದಾರೆ. ಅಸಲಿಗೆ ಫೋಟೋದಲ್ಲಿ, ಹಾರ್ದಿಕ್ ದಂಪತಿ ಮಂಚದ ಮೇಲೆ ಪೋಸ್ ನೀಡಿದ್ದಾರೆ. ಪತಿಗೆ ನತಾಶಾ ಚುಂಬನ ಮಾಡುವ ಫೋಟೋ ಇದಾಗಿದೆ. ಹಾರ್ದಿಕ್ ಕಪ್ಪು ಶರ್ಟ್ ಧರಿಸಿದ್ದರೆ, ನತಾಶಾ ಬ್ಲ್ಯಾಕ್ & ವೈಟ್ ಡ್ರೆಸ್ನಲ್ಲಿ ಮಿಂಚಿದ್ದಾರೆ. ನತಾಶಾ ಪಾಂಡ್ಯಾ ಒಬ್ಬರಿಗೊಬ್ಬರು ಕಿಸ್ ಮಾಡುತ್ತಿರುವ ಪೋಸ್‌ನಲ್ಲಿ ಈ ಫೋಟೋಗಳಿವೆ. ಈ ಫೋಟೋ ಶೇರ್ ಮಾಡ್ತಿದ್ದಂತೆ ನೆಟ್ಟಿಗರು ದಂಪತಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಿಸ್ ಮನೆಯಲ್ಲಿ ಮಾಡಿ, ಊರಿಗೆಲ್ಲಾ ಏಕೆ ಫೋಟೋ ತೋರಿಸುತ್ತೀರಿ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಆಟಗಾರನಿಗೆ ಇಂತಹ ವರ್ತನೆ ಸೂಕ್ತವಲ್ಲ. ಇದು ಭಾರತೀಯ ಸಂಸ್ಕೃತಿಯಲ್ಲ ಎಂದು ಹಾರ್ದಿಕ್‌ಗೆ ಕೆಲವರು ಬುದ್ಧಿ ಹೇಳಿದ್ದಾರೆ.

suddiyaana