ಪಾಂಡ್ಯ ದಾಂಪತ್ಯದಲ್ಲಿ ಬಿರುಕು – ಹಾರ್ದಿಕ್ನ ಶೇ.70 ರಷ್ಟು ಆಸ್ತಿ ನತಾಶಾ ಪಾಲು..?
ಯಾಕೋ ಈ ವರ್ಷದ ಆರಂಭದಿಂದಲೂ ಹಾರ್ದಿಕ್ ಪಾಂಡ್ಯ ಟೈಮ್ ಸರಿಯಿಲ್ಲ ಅನ್ಸುತ್ತೆ. ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಲೇ ಇದೆ. ಒಂದು ಕಡೆ ಕ್ರಿಕೆಟ್ ಜೀವನದಲ್ಲಿ ಫೇಲ್ ಆಗಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ಒಳ್ಳೆ ಪ್ರದರ್ಶನ ನೀಡಿಲ್ಲ. ಇದ್ರಿಂದಾಗಿ ಸಾಕಷ್ಟು ಟ್ರೋಲ್‌ಗೂ ಒಳಗಾಗುತ್ತಿದ್ದಾರೆ. ಇದೀಗ ಪಾಂಡ್ಯ ವೈಯಕ್ತಿಕ ಜೀವನದಲ್ಲೂ ಫೇಲ್ ಆಗಿದ್ದಾರಾ ಅನ್ನೋ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಹಾರ್ದಿಕ್ ಪಾಂಡ್ಯ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆ ಎಂಬ ಸುದ್ದಿ.
ಇದನ್ನೂ ಓದಿ: ವಿದೇಶದಲ್ಲಿ ಪ್ರಜ್ವಲ್ ರೇವಣ್ಣ ಗೇಮ್ ಪ್ಲ್ಯಾನ್! – ಬ್ಲೂಕಾರ್ನರ್ ತಪ್ಪಿಸಲು ಶೆನ್‌ಜೆನ್ ಮೊರೆ?
ಹೌದು, ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್ ದಾಂಪತ್ಯದಲ್ಲಿ ಬಿರುಕು ಬಿದ್ದಿದೆ. ಪಾಂಡ್ಯ, ನತಾಶಾ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿಗಳನ್ನು ಪುಷ್ಠೀಕರಿಸುವಂತೆ ಇದೀಗ ಇವರಿಬ್ಬರ ನಡುವಣ ಮನಸ್ತಾಪ ಬಹಿರಂಗವಾಗಿದೆ.
ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್ 2020 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ಪ್ರತಿ ಸೀಸನ್ ಐಪಿಎಲ್ನಲ್ಲೂ ನತಾಶಾ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಪಾಂಡ್ಯ ಪಾದಾರ್ಪಣೆ ಮಾಡಿದರೂ, ನತಾಶಾ ಮಾತ್ರ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ ಯಾವುದೇ ಪಂದ್ಯವನ್ನು ವೀಕ್ಷಿಸಲು ಅವರು ಆಗಮಿಸಿರಲಿಲ್ಲ. ಅಷ್ಟೇ ಅಲ್ಲದೆ ಮಾರ್ಚ್ 4 ನತಾಶಾ ಅವರ ಜನ್ಮದಿನ. ಈ ದಿನದಂದು ಹಾರ್ದಿಕ್ ಪಾಂಡ್ಯ ಪತ್ನಿಗೆ ಸೋಷಿಯಲ್ ಮೀಡಿಯಾದಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿ ಹಾರ್ದಿಕ್ ಪಾಂಡ್ಯ ಒಂದೇ ಒಂದು ಪೋಸ್ಟ್ ಹಾಕಿರಲಿಲ್ಲ.
ಅತ್ತ ನತಾಶಾ ಸ್ಟಾಂಕೋವಿಕ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಪಾಂಡ್ಯ ಉಪನಾಮವನ್ನು ತೆಗೆದು ಹಾಕಿದ್ದಾರೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಹಾರ್ದಿಕ್ ಪಾಂಡ್ಯ ಜೊತೆಗಿನ ಒಂದೇ ಒಂದು ಫೋಟೋವನ್ನು ಶೇರ್ ಮಾಡಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಇದೀಗ ಇಬ್ಬರು ಡೈವೋರ್ಸ್ ಆಗಲಿದ್ದಾರೆ ಎಂದು ವದಂತಿಗಳು ಹರಿದಾಡುತ್ತಿದೆ.
ಅಹಮದಾಬಾದ್ ಮಿರರ್ ವರದಿ ಪ್ರಕಾರ, ವಿಚ್ಛೇದನದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ತನ್ನ ಆಸ್ತಿಯಲ್ಲಿ 70 ಪ್ರತಿಶತವನ್ನು ನತಾಶಾಗೆ ನೀಡಬೇಕಾಗಬಹುದು. ಏಕೆಂದರೆ ಪಾಂಡ್ಯ ಅವರ ಹೆಂಡತಿ ಸರ್ಬಿಯಾ ದೇಶದವರು. ಹೀಗಾಗಿ ಅವರು ಜೀವನಾಂಶವನ್ನು ಸರ್ಬಿಯನ್ ದಿನಾರ್ನಲ್ಲಿ ಪಡೆದುಕೊಳ್ಳುವ ಸಾಧ್ಯತೆಯಿದೆ. ಈ ಎಲ್ಲಾ ಕಾರಣಗಳಿಂದಾಗಿ ಪಾಂಡ್ಯ ತಮ್ಮ ಮುಂದಿನ ನಡೆಯ ಬಗ್ಗೆ ಎಲ್ಲೂ ಕೂಡ ಮಾತನಾಡುತ್ತಿಲ್ಲ ಎಂದು ವರದಿಯಾಗಿದೆ.