ಪಾಂಡ್ಯ ಬಾಳಲ್ಲಿ ಮತ್ತೆ ಸುಂಟರಗಾಳಿ.. ಡಿವೋರ್ಸ್ ಬಳಿಕ ಕೈಕೊಟ್ಟ Girlfriend? – ಏಕಾಂಗಿ ಹಾರ್ದಿಕ್‌ಗೆ ಇವ್ರೇ ಸ್ಟ್ರೆಂಥ್!

ಟೀಮ್ ಇಂಡಿಯಾದ ಸ್ಟಾರ್ ಅಲ್‌ರೌಂಡರ್ ಹಾರ್ದಿಕ್ ಪಾಂಡ್ಯ.. ಈ ಸ್ಟಾರ್ ಆಟಗಾರನ ಜೀವನದಲ್ಲಿ ಎಲ್ಲವೂ ಸರಿಯಿಲ್ಲ.. ಯಾಕಂದ್ರೆ ಪಾಂಡ್ಯ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು.. ಐಶರಾಮಿ ಜೀವನ ಇದ್ರೂ ನೆಮ್ಮದಿ ಇಲ್ಲ ಅನ್ನೋ ತರ ಆಗಿದೆ.. ನತಾಶಗೆ ಡಿವೋರ್ಸ್ ಕೊಟ್ಟ ಬಳಿಕ ಪಾಂಡ್ಯ ಎರಡನೇ ಮದುವೆ ವಿಚಾರ ಸದ್ದು ಮಾಡಿತ್ತು. ವಿದೇಶಿ ಸುಂದರಿ ಜೊತೆ ಡೇಟಿಂಗ್ ನಡೆಸ್ತಿದ್ದಾರೆ.. ಶೀಘ್ರವೇ ಮದುವೆಯಾಗಲಿದ್ದಾರೆಂದು ಹೇಳಲಾಗಿತ್ತು. ಆದ್ರೀಗ ಬ್ರಿಟೀಷ್ ಗಾಯಕಿ ಜಾಸ್ಮೀನ್ ಜೊತೆ ಕೂಡ ಬ್ರೇಕ್‌ಅಪ್ ಆಗಿದೆ.. ಇದೀಗ ನೋವಲ್ಲಿರೋ ಪಾಂಡ್ಯಗೆ ಮಗ ಅಗಸ್ತ್ಯ ಸ್ಟ್ರೆಂಥ್ ಆಗಿದ್ದಾನೆ.. ಕಹಿ ಘಟನೆಗಳಿಂದ ಆಚೆ ಬರೋದಿಕ್ಕೆ ಮಗನೇ ಸ್ಪೂರ್ತಿಯಾಗಿದ್ದಾನೆ.
ಇದನ್ನೂ ಓದಿ: ಸೈಕೋ ಕೈಗೆ ಸಿಕ್ಕಿಬಿದ್ದ ವಿಶ್ವ!- ಜಾನು ಜೊತೆ ಗೂಬೆ ಕತೆ ಫಿನಿಶ್?
ಹಾರ್ದಿಕ್ ಪಾಂಡ್ಯ ಜೀವನದಲ್ಲಿ ಎಲ್ಲವೂ ಫಟಾಫಟ್ ಆಗಿ ಸಿಕ್ತು.. ಸಿಂಗಲ್ ಆಗಿದ್ದ ಪಾಂಡ್ಯ ಬಾಳಲ್ಲಿ ಸರ್ಬಿಯಾ ಮೂಲದ ನತಾಶಳ ಎಂಟ್ರಿಯಾಗಿತ್ತು.. ಒಂದು ವರ್ಷ ಡೇಟಿಂಗ್.. ಏಳು ತಿಂಗಳಲ್ಲಿ ಎಂಗೇಟ್ಮೆಂಟ್. ಇದರ ಮಧ್ಯೆ ಪ್ರೇಯಸಿ ಪ್ರೆಗ್ನೆಂಟ್.. ನಂತರ ಮಗು. ಅದಾದ್ಮೇಲೆ ಮದ್ವೆ.. ಎಲ್ಲವೂ ಸರಿಯಿದೆ.. ಅಂದ್ಕೊಂಡಂತೆ ಬದುಕು ಸಾಗ್ತಿದೆ ಅನ್ನುವಷ್ಟಲ್ಲೇ ಡಿವೋರ್ಸ್ ಎಂಬ ಬಿರುಗಾಳಿ ಪಾಂಡ್ಯ ಬಾಳನ್ನ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿತ್ತು.. ಡಿವೋರ್ಸ್‌ನಿಂದ ಕುಗ್ಗಿ ಹೋಗಿದ್ದ ಪಾಂಡ್ಯ ಬಾಳಿಗೆ ಅಷ್ಟೇ ವೇಗವಾಗಿ ಮತ್ತೊಬ್ಬಳ ಎಂಟ್ರಿಯಾಗಿತ್ತು.. ಬ್ರಿಟಿಷ್ ಗಾಯಕಿ ಜಾಸ್ಮಿನ್ ವಾಲಿಯಾ ಪ್ರೀತಿಯ ಬಲೆಯಲ್ಲಿ ಪಾಂಡ್ಯ ಬಿದ್ದಿದ್ರು.. ಮೀಟಿಂಗ್ ಡೇಟಿಂಗ್ ಅಂತ ಈ ಜೋಡಿ ಸುತ್ತಾಡಿದ್ದೇ ಸುತ್ತಾಡಿದ್ದು.. ಆಗ್ಲೇ ಮದುವೆ ಆಗ್ತಾರೆ ಅನ್ನೋ ಮಾತು ಕೂಡ ಕೇಳಿಬಂದಿತ್ತು.. ಆದ್ರೆ, ಅದೇನಾಯ್ತೋ ಗೊತ್ತಿಲ್ಲ. ಎಲ್ಲಾ ಸರಿಯಾಯ್ತು.. ಲೈಫ್ ಮತ್ತೆ ಟ್ರ್ಯಾಕ್ ಗೆ ಬರ್ತಿದೆ ಅಂದ್ಕೊಳ್ಳುವಾಗಲೇ ಮತ್ತೆ ಪಾಂಡ್ಯಗೆ ಸಂಕಷ್ಟ.. ಪ್ರೀತಿ ಗೀತಿ ಸುತ್ತಾಡ್ತಿದ್ದಾಗಲೇ ಜಾಸ್ಮಿನ್ ವಾಲಿಯಾ ಜೊತೆಗೆ ಏಕಾಏಕಿ ಬ್ರೇಕ್ ಅಪ್.. ಇದೀಗ ಪಾಂಡ್ಯ ಮತ್ತೆ ಏಕಾಂಗಿಯಾಗಿದ್ದಾರೆ.. ಒಂಟಿಯಾಗಿರೋ ಪಾಂಡ್ಯಗೆ ಈ ಮಗನೇ ಸರ್ವಸ್ವ ಆಗಿದ್ದಾನೆ.
ಹಾರ್ದಿಕ್ ಪಾಂಡ್ಯ ವೈಯಕ್ತಿಕ ಜೀವನ ಹಳಿತಪ್ಪಿದೆ.. ಮೊದಲು ಡಿವೋರ್ಸ್, ಈಗ ಬ್ರೇಕ್‌ಅಪ್.. ಒಂದಾದ ಮೇಲೊಂದು ಕಹಿ ಘಟನೆ ಎದುರಾಗ್ತಾ ಇದೆ. ಆದ್ರೆ ಪಾಂಡ್ಯ ಅದ್ಯಾವುದಕ್ಕೂ ಕೇರ್ ಮಾಡ್ತಾನೇ ಇಲ್ಲ.. ಯಾಕಂದ್ರೆ ಹಾರ್ದಿಕ್‌ನ ಎಲ್ಲಾ ನೋವಿಗೆ ಅಗಸ್ತ್ಯ ಮುಲಾಮು. ಕತ್ತಲಾಗಿರೋ ಹಾರ್ದಿಕ್ ಬಾಳಿಗೆ ಮಗನೇ ಬೆಳಕಾಗಿದ್ದಾನೆ. ಇತ್ತೀಚೆಗಂತೂ ಪಾಂಡ್ಯ ಮಗನೊಂದಿಗೆ ಹೆಚ್ಚು ಟೈಮ್ ಸ್ಪೆಂಡ್ ಮಾಡ್ತಾ ತನ್ನ ನೋವನ್ನ ಮರಿತಾ ಇದ್ದಾರೆ.. ಮಗನೊಂದಿಗೆ ಕಳೆದ ಕ್ಷಣದ ವಿಡಿಯೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಪಾಂಡ್ಯ ಪೋಸ್ಟ್ ಮಾಡ್ತಾ ಇದ್ದಾರೆ.
ಹಾರ್ದಿಕ್ ಪಾಂಡ್ಯ ಗುರಿ ಸದ್ಯ ಭವಿಷ್ಯದ ಕಡೆಗಿದೆ. ಐಪಿಎಲ್ ಬಳಿಕ ಲಾಂಗ್ ಬ್ರೇಕ್ ತೆಗೆದುಕೊಂಡಿದ್ದ ಹಾರ್ದಿಕ್ ಪಾಂಡ್ಯ ಈಗ ಮತ್ತೆ ಅಭ್ಯಾಸದ ಕಣಕ್ಕೆ ಮರಳಿದ್ದಾರೆ. ಇದಕ್ಕೆಲ್ಲ ಕಾರಣ ಪುತ್ರ ಅಗಸ್ತ್ಯ ಮೇಲಿನ ಪ್ರೀತಿ. ಈ ಹಿಂದೆಯೇ ಪಾಂಡ್ಯ.. ನನ್ನ ಮಗನೇ ನನ್ನ ಜೀವನದ ಬಿಗ್ಗೆಸ್ಟ್ ಮೋಟಿವೇಷನ್ ಅಂತ ಹೇಳಿಕೊಂಡಿದ್ರು.. ಇದೀಗ ಮೈದಾನಕ್ಕೆ ಮರಳಿರೋ ಹಾರ್ದಿಕ್‌ಗೆ ಇಲ್ಲೂ ಮಗನೇ ಸ್ಟ್ರೆಂಥ್ ಆಗಿದ್ದಾನೆ. ಇನ್ನು ಮನೆಯಲ್ಲಿದ್ದಾಗಲೂ ಪಾಂಡ್ಯ ಅಗಸ್ತ್ಯನಿಗೆ ಕ್ರಿಕೆಟ್ ಬಗ್ಗೆ ಹೇಳಿಕೊಡ್ತಿದ್ದಾರೆ. ಆತ ಕೂಡ ಫುಲ್ ಇಂಟ್ರೆಸ್ಟಿಂಗ್ ಆಗೇ ತಂದೆ ಹೇಳಿದ್ದನ್ನೆಲ್ಲಾ ಕೇಳ್ತಿದ್ದಾನೆ.. ಹೀಗಾಗಿ ಪಾಂಡ್ಯ ಮಗ ಕ್ರಿಕೆಟ್ ಲೋಕಕ್ಕೂ ಕಾಲಿಡ್ತಾನಾ ಅನ್ನೋ ಕ್ಯೂರಿಯಾಸಿಟಿ ಫ್ಯಾನ್ಸ್‌ಗೆ ಇದೆ.
ಹಾರ್ದಿಕ್ ಪಾಂಡ್ಯ ಪದೇ ಪದೇ ಜೀವನದಲ್ಲಿ ಎಡವಿದಾಗಲೂ ಬೌನ್ಸ್ ಬ್ಯಾಕ್ ಆಗ್ತಿರೋದಿಕ್ಕೆ ಮುದ್ದಿನ ಮಗನೇ ಕಾರಣ. ಮಗನ ಮುಂದೆ ಹೀರೋ ಆಗಿ ಮಿಂಚಬೇಕು ಅನ್ನೋ ಬಯಕೆ ಇರೋದ್ರಿಂದಲೇ ಪಾಂಡ್ಯ ಎಲ್ಲಾ ನೋವನ್ನ ಮರಿತಾ ಇದ್ದಾರೆ.. ಏಕಾಂಗಿತನದಿಂದ ಹೊರ ಬರ್ಲಿಕ್ಕೆ ಪ್ರಯತ್ನಿಸ್ತಿದ್ದಾರೆ. ಪಾಂಡ್ಯ ಮುಂದಿನ ಜೀವನ ಚೆನ್ನಾಗಿರ್ಲಿ ಅನ್ನೋದು ಫ್ಯಾನ್ಸ್ ಆಶಯ.

ನೋಡಿರಿ

