ಹಾರ್ದಿಕ್ ಗೆ ಇಂಜುರಿಯೇ ಶತ್ರು – 3 ತಿಂಗಳಾದ್ರೂ ಫಿಟ್ ನೆಸ್ ಫೇಲ್
ಶಮಿಯಂತೆಯೇ ಆಗ್ತಾರಾ ಪಾಂಡ್ಯ?

ಐಪಿಎಲ್ ಬಳಿಕ ಒಂದೇ ಒಂದು ಟಿ-20ಐ ಪಂದ್ಯ ಆಡದ ಪಾಂಡ್ಯ ಈಗ ಆಫ್ಘನ್ ವಿರುದ್ಧದ ಟಿ-20ಐ ಸಿರೀಸ್ಗೆ ಕಂ ಬ್ಯಾಕ್ ಮಾಡ್ಬೋದು ಅನ್ಕೊಂಡ್ರೆ ಅಲ್ಲೂ ಸೆಟ್ಬ್ಯಾಕ್ ಆಗಿದೆ. ಮತ್ತೊಂದು ಸಮಸ್ಯೆ ಕಾಣಿಸಿಕೊಂಡಿದೆ. ಹಾಗಂತ ಪಾಂಡ್ಯ ಒಬ್ರೇ ಅಲ್ಲ ಸಾಕಷ್ಟು ಪ್ಲೇಯರ್ಸ್ ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಇನ್ನೂ ಶಾಕಿಂಗ್ ವಿಚಾರ ಅಂದ್ರೆ ಇದೇ ಇಂಜುರಿ ಕಾರಣಕ್ಕೆ ಕ್ರಿಕೆಟ್ನೇ ಬಿಟ್ಟವರೂ ಇದ್ದಾರೆ.
ಇದನ್ನೂ ಓದಿ : RCB ಪ್ಲೇಯರ್ಸ್ಗೆ ಮತ್ತೆ ಅನ್ಯಾಯ! – 2027ರವರೆಗೆ ಕೋಚ್ ಗಂಭೀರ್ ಸೇಫ್
ಕ್ರಿಕೆಟ್ನಲ್ಲಿ ಒಂದ್ಸಲ ಕ್ಲಿಕ್ ಆದ್ರೆ ನೇಮ್, ಫೇಮ್, ಮನಿ, ಲಕ್ಸುರಿ ಲೈಫ್ ಹೀಗೆ ಎಲ್ಲವೂ ಸಿಗುತ್ತೆ.. ಲೈಫ್ ಜಿಂಗಾಲಾಲಾ ಅನ್ನಿಸ್ಬೋದು. ಆದ್ರೆ ಒಬ್ಬ ಸಕ್ಸಸ್ಫುಲ್ ಕ್ರಿಕೆಟರ್ ಆಗೋಕೆ ಸಾಕಷ್ಟು ಸ್ಯಾಕ್ರಿಫೈಸ್ ಮಾಡ್ಬೇಕಾಗುತ್ತೆ. ಇಷ್ಟದ ಊಟ ಬಿಡ್ಬೇಕು.. ಗಂಟೆಗಟ್ಟಲೆ ದೇಹ ದಂಡಿಸ್ಬೇಕು.. ಫಿಟ್ನೆಸ್ ಮೇಂಟೇನ್ ಮಾಡ್ಬೇಕು. ಅದೇ ಒಂದ್ಸಲ ಇಂಜುರಿ ಆಯ್ತೋ.. ರಿಕವರ್ ಆಗೋಕೆ ತಿಂಗಳುಗಟ್ಟಲೆ ಟೈಂ ತಗೊಳುತ್ತೆ. ಅದ್ರಲ್ಲೂ ಬ್ಯಾಟರ್ಗಳಿಗಿಂತ ಜಾಸ್ತಿ ಬೌಲರ್ಸ್ ಮತ್ತು ಆಲ್ರೌಂಡರ್ಗಳೇ ಗಾಯಕ್ಕೆ ತುತ್ತಾಗ್ತಾರೆ. ಈಗ ಪಾಂಡ್ಯ ಕೂಡ ಫಿಟ್ನೆಸ್ ಸಾಧಿಸಲಾಗ್ದೆ ಕಳೆದ ಮೂರು ತಿಂಗಳಿಂದ್ಲೂ ತಂಡದಿಂದ ಹೊರಗುಳಿದಿದ್ದಾರೆ.
ಬೆಂಗಳೂರಿನಲ್ಲೇ ಮನೆ ಮಾಡಿದ್ರೂ ಪಾಂಡ್ಯ ಫಿಟ್ ನೆಸ್ ಕಷ್ಟ!
ಒಂದ್ಕಡೆ ಬಿಸಿಸಿಐ ಬ್ಯಾಕ್ ಟು ಬ್ಯಾಕ್ ಶೆಡ್ಯೂಲ್ಗಳೊಂದಿಗೆ ಮೂರೂ ಮಾದರಿಯಲ್ಲೂ ಪಂದ್ಯಗಳನ್ನ ಆಡಿಸ್ತಿದೆ. ಮತ್ತೊಂದ್ಕಡೆ ಆಟಗಾರರು ಮಾತ್ರ ಇಂಜುರಿಯಲ್ಲಿ ಬಳಲ್ತಿದ್ದಾರೆ. ಐಪಿಎಲ್ ಬಳಿಕ ಜಸ್ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್, ಸಾಯಿ ಸುದರ್ಶನ್, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ವರುಣ್ ಚಕ್ರವರ್ತಿ, ಆಕಾಶ್ ದೀಪ್ ಸಿಂಗ್ ಹೀಗೆ ಭಾರತದ ಪರ ಆಡುವ ಸ್ಟಾರ್ ಪ್ಲೇಯರ್ಗಳೇ ಹಲವು ವಾರಗಳಿಂದ ಬಿಸಿಸಿಐನ ಸೆಂಟ್ರ್ ಆಫ್ ಎಕ್ಸ್ಲೆನ್ಸ್ನಲ್ಲಿ ರಿಕವರ್ ಆಗ್ತಿದ್ದಾರೆ. ಆಫ್ಘನ್ ವಿರುದ್ಧದ ಸರಣಿಗೆ ಕೆಲವ್ರು ಸೆಲೆಕ್ಟ್ ಆಗಿದ್ರೂ ಪರ್ಮಿಷನ್ ಸಿಗಬೇಕಷ್ಟೇ. ಮತ್ತೊಂದೆಡೆ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್ ಆದ್ಮೇಲೆ ಭಾರತದ ಪರ ಆಡೋಕೆ ಸಾಧ್ಯನೇ ಆಗಿಲ್ಲ. ಸತತ ಮೂರು ತಿಂಗಳ ಬಳಿಕ ಫಿಟ್ ಆಗಿ ಆಫ್ಘನ್ ವಿರುದ್ಧದ ಸರಣಿಗೆ ಸೆಲೆಕ್ಟ್ ಆಗ್ಬೋದು ಎನ್ನಲಾಗಿತ್ತು. ಆದ್ರೀಗ ಅದೂ ಕಷ್ಟವಾಗಿದೆ. ಇಲ್ಲಿ ಇನ್ನೊಂದು ವಿಚಾರವನ್ನ ಹೇಳಲೇಬೇಕು. ಇದೇ ಗಾಯದ ಕಾರಣದಿಂದಾಗಿ ಸಾಕಷ್ಟು ಸ್ಟಾರ್ ಕ್ರಿಕೆಟರ್ಗಳು ತಮ್ಮ ಕೆರಿಯರ್ನೇ ಕಳ್ಕೊಂಡಿದ್ದಾರೆ. ಗಾಯದಿಂದ ರಿಕವರ್ ಆಗಿ ಬಂದ್ರೂ ಅವಕಾಶಗಳು ಸಿಕ್ಕಿಲ್ಲ. ಜೊತೆಗೆ ಒಲ್ಲದ ಮನಸ್ಸಲ್ಲಿ ವಿದಾಯವನ್ನ ಹೇಳಿದವರೂ ಇದ್ದಾರೆ.
ಶಮಿ ಕೆರಿಯರ್ ಗೆ ದೊಡ್ಡ ಹೊಡೆತ ನೀಡಿದ ಇಂಜುರಿ!
ಟೀಂ ಇಂಡಿಯಾದಲ್ಲಿ ಪ್ರತೀ ಸರಣಿಗಳ ಆರಂಭದ ಹೊತ್ತಲ್ಲೂ ಟೀಂ ಅನೌನ್ಸ್ ಆಗುವಾಗ ಮೊಹಮ್ಮದ್ ಶಮಿ ಹೆಸರು ಸದ್ದು ಮಾಡುತ್ತೆ. 2023ರ ಏಕದಿನ ವಿಶ್ವಕಪ್ನಲ್ಲಿ ಬ್ಯಾಟರ್ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಶಮಿ ತಮ್ಮ ಕೆರಿಯರ್ನ ಪೀಕ್ನಲ್ಲಿದ್ರು. ಆದ್ರೆ ಅದಾದ್ಮೇಲೆ ಗಾಯಗೊಂಡ ಶಮಿಗೆ ಭಾರತ ತಂಡದಲ್ಲಿ ಸ್ಥಾನ ಪರ್ಮನೆಂಟ್ ಆಗ್ಲೇ ಇಲ್ಲ. ಅಷ್ಟೋ ಇಷ್ಟೋ ಅವಕಾಶಗಳು ಸಿಕ್ರೂ ಈಗ ತಂಡದಿಂದ ಹೊರಗೇ ಉಳಿದಿದ್ದಾರೆ. ಹೀಗಾಗಿ ಶಮಿ ಕೆರಿಯರ್ಗೂ ಇಂಜುರಿಯೇ ದೊಡ್ಡ ಹೊಡೆತ ನೀಡಿತ್ತು. ಅಷ್ಟೇ ಅಲ್ಲದೆ ಸಾಬಾ ಕರೀಂ, ಮುನಫ್ ಪಟೇಲ್, ಪ್ರವೀಣ್ ಕುಮಾರ್, ಜಾವಗಲ್ ಶ್ರೀನಾಥ್, ಆಶೀಶ್ ನೆಹ್ರಾ ಹೀಗೆ ಸಾಕಷ್ಟು ಕ್ರಿಕೆಟರ್ಸ್ ಅಗತ್ಯಕ್ಕೂ ಮುನ್ನವೇ ವಿದಾಯ ಘೋಷಣೆ ಮಾಡಿದ್ರು. ಈಗ ಪಾಂಡ್ಯ ವಿಚಾರದಲ್ಲೂ ಅಂಥದ್ದೇ ಭಯ ಶುರುವಾಗಿದೆ.

ನೋಡಿರಿ

