ಬ್ಯಾಟಿಂಗ್, ಬೌಲಿಂಗ್ ನಲ್ಲೂ ಹಾರ್ದಿಕ್ ಪಾಂಡ್ಯ ನಂಬರ್ 1 – ದಾಖಲೆ ಬರೆದ ಆಲ್ ರೌಂಡರ್

ಬೆಂಗಳೂರು ವರ್ಸಸ್ ಮುಂಬೈ ನಡುವಿನ ಪಂದ್ಯದಲ್ಲಿ ಪಾಂಡ್ಯ ಬ್ರದರ್ಸ್ ಸಿಕ್ಕಾಪಟ್ಟೆ ಶೈನ್ ಆಗಿದ್ರು. ಮುಂಬೈ ಪರ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡ್ರಲ್ಲೂ ಹಾರ್ದಿಕ್ ಪಾಂಡ್ಯ ಮಿಂಚಿದ್ರೂ ಮ್ಯಾಚ್ ಗೆಲ್ಲೋಕೆ ಆಗ್ಲಿಲ್ಲ. ಬಟ್ ಆರ್ಸಿಬಿ ಪರ ಡೆತ್ ಓವರ್‌ನಲ್ಲಿ ಮೂರು ವಿಕೆಟ್ ಕಿತ್ತ ಕೃನಾಲ್ ಮ್ಯಾಚ್ ವಿನ್ನರ್ ಆಗಿದ್ರು. 2024ರ ಐಪಿಎಲ್ನಲ್ಲಿ ಮುಂಬೈನ ವಾಂಖೆಡೆಯಲ್ಲಿ ಹಾರ್ದಿಕ್ ಪಾಂಡ್ಯ ವಿರುದ್ಧ ಘೋಷಣೆಗಳು ಕೇಳಿ ಬರ್ತಿದ್ವು. ಆದ್ರೀಗ ಅದೇ ಅಭಿಮಾನಿಗಳು ಹಾರ್ದಿಕ್ ಹಾರ್ದಿಕ್ ಅಂತಾ ಘೋಷಣೆಗಳನ್ನ ಕೂಗ್ತಿದ್ದಾರೆ. ಅದಕ್ಕೆ ಕಾರಣ ಹಾರ್ದಿಕ್ ತಂಡಕ್ಕಾಗಿ ನೀಡ್ತಿರೋ ಪ್ರದರ್ಶನ. ಇದೇ ಪ್ರದರ್ಶನ ಈಗ ದಾಖಲೆ ವೀರರ ಪಟ್ಟಿಗೆ ಸೇರಿಸಿದೆ.
ಇದನ್ನೂ ಓದಿ : CSKಗಾಗಿ ಧೋನಿ ಸಾಮ್ರಾಜ್ಯ ಪತನ – 3 ICC, 5 IPL ಟ್ರೋಫಿಗಿಲ್ವಾ ಬೆಲೆ?
ಹಾರ್ದಿಕ್ ಪಾಂಡ್ಯ ದಿ ಬೆಸ್ಟ್ ಆಲ್ರೌಂಡರ್ ಅನ್ನೋದಕ್ಕೆ ಅವ್ರ ಪ್ರದರ್ಶನವೇ ಸಾಕ್ಷಿ. ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಒಂದೇ ಓವರ್‌ನಲ್ಲಿ ಆರ್‌ಸಿಬಿಯ ವಿರಾಟ್ ಕೊಹ್ಲಿ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಔಟ್ ಮಾಡುವ ಮೂಲಕ 2 ವಿಕೆಟ್ ಕಬಳಿಸಿ ಮಿಂಚಿದರು. ಅಲ್ದೇ ಬ್ಯಾಟಿಂಗ್‌ನಲ್ಲಿಯೂ ಅಬ್ಬರಿಸಿ ಆರ್‌ಸಿಬಿಗೆ ಸೋಲಿನ ಭಯ ಉಂಟು ಮಾಡಿದ್ರು. ಕೇವಲ 15 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 42 ರನ್ ಗಳಿಸಿ ಮುಂಬೈ ಗೆಲುವಿಗಾಗಿ ಹೋರಾಟ ನಡೆಸಿದರು. ಈ ಮೂಲಕ ಹಾರ್ದಿಕ್ ಪಾಂಡ್ಯ ಟಿ20ಯಲ್ಲಿ 5,000 ರನ್ ಮತ್ತು 200 ವಿಕೆಟ್ ಗಳನ್ನ ಬೇಟೆಯಾಡಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಆಲ್ರೌಂಡರ್ ಲಿಸ್ಟ್ನಲ್ಲಿ ಅತೀ ಹೆಚ್ಚು ವಿಕೆಟ್ ಕಿತ್ತ ಹಾಗೇ ರನ್ ಕಲೆಹಾಕಿರೋ ಲಿಸ್ಟ್ನಲ್ಲಿ ಯಾವೆಲ್ಲಾ ಆಟಗಾರರಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.
ಹೆಸರು ರನ್ ವಿಕೆಟ್
ಡ್ವೇನ್ ಬ್ರಾವೋ 6970 631
ಶಕೀಬ್ ಅಲ್ ಹಸನ್ 7438 492
ಆಂಡ್ರೆ ರಸೆಲ್ 9018 470
ಮೊಹಮ್ಮದ್ ನಬಿ 6135 369
ಸಮಿತ್ ಪಟೇಲ್ 6673 352
ಕೀರನ್ ಪೊಲಾರ್ಡ್ 13537 326
ಆ ನಂತ್ರದ ಲಿಸ್ಟ್ನಲ್ಲಿ ರವಿ ಬೋಪಾರ, ಡೇನಿಯಲ್ ಕ್ರಿಶ್ಚಿಯನ್, ಮೊಯಿನ್ ಅಲಿ, ಶೇನ್ ವ್ಯಾಟ್ಸನ್, ಮೊಹಮ್ಮದ್ ಹಫೀಜ್ ಇದ್ದಾರೆ. ಇದೀಗ ಈ ಲಿಸ್ಟ್ಗೆ ಪಾಂಡ್ಯ ಹೆಸರೂ ಕೂಡ ಸೇರ್ಪಡೆಯಾಗಿದ್ದು 5390 ರನ್‌ಗಳನ್ನ ಕಲೆ ಹಾಕಿದ್ರೆ 200 ವಿಕೆಟ್‌ಗಳನ್ನ ಬೇಟೆಯಾಡಿದ್ದಾರೆ. ಇನ್ನು ಈ ಬಾರಿಯ ಐಪಿಎಲ್ನಲ್ಲಿ ಮೊದಲ ಪಂದ್ಯದಿಂದ ನಿಷೇಧಕ್ಕೆ ಒಳಗಾಗಿದ್ರು. ಆ ಬಳಿಕ ನಾಲ್ಕು ಮ್ಯಾಚ್ ಆಡಿದ್ದು ಈ ವೇಳೆ ಬ್ಯಾಟಿಂಗ್ನಲ್ಲಿ 81 ರನ್ಸ್ ಕಲೆ ಹಾಕಿದ್ದಾರೆ. ಹಾಗೇ 10 ವಿಕೆಟ್‌ಗಳನ್ನ ಬೇಟೆಯಾಡಿದ್ದಾರೆ.

ನೋಡಿರಿ

