ಕ್ರೀಡಾ ಸ್ಫೂರ್ತಿ ಮರೆತಾ ಹಾರ್ದಿಕ್ ಪಾಂಡ್ಯಗೆ ಶಾಕ್ ಕೊಟ್ಟ BCCI

ಕ್ರೀಡಾ ಸ್ಫೂರ್ತಿ ಮರೆತಾ ಹಾರ್ದಿಕ್ ಪಾಂಡ್ಯಗೆ ಶಾಕ್ ಕೊಟ್ಟ BCCI

ಕಳಪೆ ಪ್ರದರ್ಶನ ನೀಡಿದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯಗೆ ಕ್ರೀಡಾ ಸ್ಫೂರ್ತಿ ಮರೆತಿದ್ದಕ್ಕಾಗಿ ಬಿಸಿಸಿಐ 10% ಪಂದ್ಯ ಶುಲ್ಕ ಹಾಗೂ ಒಂದು ಡಿಮೆರಿಟ್ ಅಂಕದ ದಂಡ ವಿಧಿಸಿದೆ. ಇದು ಹಾರ್ದಿಕ್ ಅವರ ಈ ಐಪಿಎಲ್ ಕಳಪೆ ನಾಯಕತ್ವ ಮತ್ತು ವೈಯಕ್ತಿಕ ಪ್ರದರ್ಶನಕ್ಕೆ ಮತ್ತೊಂದು ಹೊಡೆತ.

ವಾಸ್ತವವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಇನ್ನಿಂಗ್ಸ್‌ನ 10 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ತಮ್ಮ ರನ್-ಅಪ್‌ಗೆ ಹಿಂತಿರುಗುವಾಗ, ಹಾರ್ದಿಕ್ ಪಾಂಡ್ಯ ಹತಾಶೆಯಿಂದಾಗಿ ನಾನ್ ಸ್ಟ್ರೈಕ್​ ವಿಕೆಟ್​ನ ಬೇಲ್ಸ್‌ಗಳನ್ನು ನೆಲಕ್ಕೆ ಉರುಳಿಸಿದರು. ಇದು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಉಲ್ಲಂಘನೆಯಾಗಿದ್ದು, ಈ ನಿಯಮ ಉಲ್ಲಂಘಸಿದ ಹಾರ್ದಿಕ್ ಪಾಂಡ್ಯಗೆ ಪಂದ್ಯ ಶುಲ್ಕ ಶೇ. 10 ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಿದೆ. ಇದರ ಜೊತೆಗೆ 1 ಡಿಮೆರಿಟ್ ಅಂಕವನ್ನು ಸಹ ನೀಡಿದೆ. ಹಾರ್ದಿಕ್ ತಮ್ಮ ತಪ್ಪನ್ನು ಪಂದ್ಯದ ರೆಫರಿ ರಾಜೀವ್ ಸೇಠ್ ಅವರ ಮುಂದೆ ಒಪ್ಪಿಕೊಂಡಿರುವ ಕಾರಣ ಹೆಚ್ಚಿನ ತನಿಖೆಯ ಅಗತ್ಯವಿಲ್ಲ ಎಂದು ಬಿಸಿಸಿಐ ತಿಳಿಸಿದೆ.

ಇದನ್ನೂ ಓದಿ: ಸಾಲ ಕೊಟ್ಟವನು ಕಾರಿನಲ್ಲಿ ಎಸ್ಕೇಪ್ – ಸಾಲ ಕೊಟ್ಟವನು ಕಾರಿನ ಬಾನೆಟ್ ಮೇಲೆ ಸರ್ಕಸ್

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡದ ಬ್ಯಾಟಿಂಗ್‌ ಕಳಪೆಯಾಗಿತ್ತು. ಆದಾಗ್ಯೂ ನಾಯಕನ ಇನ್ನಿಂಗ್ಸ್ ಆಡಿದ ಹಾರ್ದಿಕ್ ಪಾಂಡ್ಯ 27 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಎರಡು ಬೌಂಡರಿ ಸೇರಿದಂತೆ 26 ರನ್​ಗಳ ಇನ್ನಿಂಗ್ಸ್ ಅಡಿದರು. ಇನ್ನು ಬೌಲಿಂಗ್​ನಲ್ಲಿ ಪಾಂಡ್ಯ ಎರಡು ಓವರ್‌ಗಳಲ್ಲಿ 13 ರನ್ ಬಿಟ್ಟುಕೊಟ್ಟರಾದರೂ ಯಾವುದೇ ವಿಕೆಟ್ ಪಡೆಯಲಿಲ್ಲ.

ಐಪಿಎಲ್ 2026 ರಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ಒಂಬತ್ತು ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಹಾರ್ದಿಕ್ ನಾಯಕತ್ವದಲ್ಲಿ, ಮುಂಬೈ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಎರಡನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಈ ಒಂಬತ್ತು ಪಂದ್ಯಗಳಲ್ಲಿ ಪಾಂಡ್ಯ 172 ರನ್​ಗಳ ಜೊತೆಗೆ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದಾರೆ.

Kishor KV

Leave a Reply

Your email address will not be published. Required fields are marked *