ಪಾಂಡ್ಯ ಕ್ಯಾಪ್ಟನ್ಸಿ ಕಿತ್ಕೊಂಡ MI – HERO ಆಗಿದ್ದ ಹಾರ್ದಿಕ್ VILLAIN
ರೋಹಿತ್ ಅವಮಾನಿಸಿ ಕೆರಿಯರ್ ಖತಂ!

ಪಾಂಡ್ಯ ಕ್ಯಾಪ್ಟನ್ಸಿ ಕಿತ್ಕೊಂಡ MI – HERO ಆಗಿದ್ದ ಹಾರ್ದಿಕ್ VILLAINರೋಹಿತ್ ಅವಮಾನಿಸಿ ಕೆರಿಯರ್ ಖತಂ!

ಕಳೆದು ಹಲವು ವರ್ಷಗಳಿಂದ ಭಾರತದ ಖಾಯಂ ಪ್ಲೇಯರ್ ಆಗಿರೋ ಹಾರ್ದಿಕ್ ಪಾಂಡ್ಯ ಸ್ಟಾರ್ ಆಲ್​ರೌಂಡರ್. ಐಸಿಸಿ ಟೂರ್ನಿಗಳಲ್ಲೂ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. 2 ವರ್ಷಗಳ ಹಿಂದಷ್ಟೇ ಹಾರ್ದಿಕ್​ರನ್ನ ರೋಹಿತ್ ಶರ್ಮಾರ ಉತ್ತರಾಧಿಯೆಂದೇ ಕರೆಯಲಾಗಿತ್ತು. ಆದ್ರೀಗ ಅದೇ ಪಾಂಡ್ಯಗೆ ನಾಯಕತ್ವ ಇರ್ಲಿ ಉಪನಾಯಕತ್ವವೂ ಸಿಗ್ತಿಲ್ಲ. ಕ್ಯಾಪ್ಟನ್ಸಿ ರೇಸ್​ನಿಂದಲೇ ಹೊರಬಿದ್ದಾಗಿದೆ. ಯಾಕಂದ್ರೆ ಈ ಪಿರಿಯಡ್​ನಲ್ಲೇ ಹೀರೋ ಟು ವಿಲನ್ ಆಗಿ ಬದಲಾಗಿದ್ದಾರೆ. ಐಪಿಎಲ್​ನಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳು ಟೀಂ ಇಂಡಿಯಾದಲ್ಲಿ ಹೊಡೆತ ಕೊಟ್ಟಿದೆ.

ಇದನ್ನೂ ಓದಿ : ದತ್ತು ಪುತ್ರನಿಗಾಗಿ ಗಂಭೀರ್ ಪಾಲಿಟಿಕ್ಸ್ – KKR ಕೋಟಾದಲ್ಲಿ ಏಷ್ಯಾಕಪ್ ಗೆ ರಾಣಾ

ಗುಜರಾತ್ ನಿಂದ ಮುಂಬೈ ತಂಡಕ್ಕೆ ಬಂದಿದ್ದೇ ತಪ್ಪಾಯ್ತಾ?

ಹಾರ್ದಿಕ್ ಪಾಂಡ್ಯ ಕ್ರಿಕೆಟ್ ಕರಿಯರ್ 2023ರವರೆಗೆ ತುಂಬಾನೇ ಚೆನ್ನಾಗಿತ್ತು. ಫ್ಯಾನ್ಸ್ ಕೂಡ ಪಾಂಡ್ಯ ಬಗ್ಗೆ ಸಾಕಷ್ಟು ಕ್ರೇಜ್ ಹೊಂದಿದ್ರು. ಬಟ್ ಪಾಂಡ್ಯಗೆ ಮೊದಲ ಸೆಟ್ ಬ್ಯಾಕ್ ಆಗಿದ್ದೇ 2024ರ ಐಪಿಎಲ್. ಗುಜರಾತ್ ಟೈಟನ್ಸ್ ಕ್ಯಾಪ್ಟನ್ ಆಗಿ ಚೆನ್ನಾಗೇ ಇದ್ದ ಪಾಂಡ್ಯಗೆ ಗಾಳ ಹಾಕಿದ್ದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾಲೀಕರು. ಅದೂ ಕೂಡ ಐದೈದು ಸಲ ಕಪ್ ಗೆಲ್ಲಿಸಿಕೊಟ್ಟ ರೋಹಿತ್ ಶರ್ಮಾರನ್ನ ನಾಯಕತ್ವದಿಂದ ಕೆಳಗಿಳಿಸಿ ಪಾಂಡ್ಯಗೆ ಪಟ್ಟ ಕಟ್ಟೋ ಪ್ಲ್ಯಾನ್ ಅವ್ರದ್ದು. ಈ ಪ್ಲ್ಯಾನ್​ ಪಾಂಡ್ಯ ಕೂಡ ಒಪ್ಕೊಂಡಿದ್ರು. ಬಟ್ ರೋಹಿತ್​ರನ್ನ ದಿಢೀರ್ ಅಂತಾ ಇಳಿಸಿದ್ದೇ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇಲ್ಲಿಂದಲೇ ಪಾಂಡ್ಯಗೆ ಹಿನ್ನಡೆಯೂ ಆರಂಭವಾಗತೊಡಗಿತ್ತು.

ಪಾಂಡ್ಯ ಹೀರೋ ಟು ವಿಲನ್!

2021ರಲ್ಲಿ ಮುಂಬೈ ಪರ ಸದ್ದು ಮಾಡದ ಪಾಂಡ್ಯಗೆ ಗೇಟ್ ​ಪಾಸ್

ಗುಜರಾತ್ ಸೇರಿ ಅಲ್ಲಿ ಕ್ಯಾಪ್ಟನ್ ಆದ ಪಾಂಡ್ಯ ಚೊಚ್ಚಲ ಆವೃತ್ತಿಯಲ್ಲೇ ಕಪ್

2023ರಲ್ಲೂ ಗುಜರಾತ್ ಟೈಟಾನ್ಸ್ ತಂಡವನ್ನ ಫೈನಲ್​ಗೆ ಮುನ್ನಡೆಸಿದ್ರು

ಪಾಂಡ್ಯ ಜೊತೆ ಡೀಲ್ ಕುದುರಿಸಿ ಮುಂಬೈಗೆ ಕರೆತಂದು ಪಟ್ಟಾಭಿಷೇಕ

ರೋಹಿತ್ ಶರ್ಮಾ ಭಾರತ ಕ್ಯಾಪ್ಟನ್ ಆಗಿದ್ರೆ ಹಾರ್ದಿಕ್ ಪಾಂಡ್ಯ ಉಪನಾಯಕ

ರೋಹಿತ್ ರನ್ನ ಒಪ್ಪಿಸದೇ ಮುಂಬೈ ತಂಡದ ಕ್ಯಾಪ್ಟನ್ಸಿಯಿಂದ ಇಳಿಸಿದ್ದು ಆಕ್ರೋಶ

ಐಪಿಲ್ ಮುಗಿದ ಬೆನ್ನಲ್ಲೇ 2024ರ ಟಿ-20 ವಿಶ್ವಕಪ್ ಟೀಂ ಅನೌನ್ಸ್

ಟಿ-20 ವಿಶ್ವಕಪ್​ನಲ್ಲಿ ಸಿಡಿದೆದ್ದ ರೋಹಿತ್ 8 ಇನ್ನಿಂಗ್ಸ್ ಗಳಲ್ಲಿ 257 ರನ್

ಹಾರ್ದಿಕ್ ಪಾಂಡ್ಯ ಕೂಡ 144 ರನ್ ಗಳಿಸುವುದರೊಂದಿಗೆ 11 ವಿಕೆಟ್

ಫೈನಲ್ ಮ್ಯಾಚಲ್ಲಿ 3 ಓವರ್ ಬೌಲ್ ಮಾಡಿ 3 ವಿಕೆಟ್ ತೆಗೆದು ಮ್ಯಾಚ್ ಗೆಲ್ಲಿಸಿದ್ರು

ರೋಹಿತ್ ಟಿ-20ಐಗೆ ನಿವೃತ್ತಿ ಹೇಳಿದ್ರೆ ಪಾಂಡ್ಯನೇ ನೆಕ್ಸ್ ​ಟ್ ಕಪ್ತಾನ ಅನ್ನೋ ಟಾಕ್

ರೇಸ್​ನಲ್ಲೇ ಇಲ್ಲದ ಸೂರ್ಯಕುಮಾರ್ ಯಾದವ್ ನಾಯಕನಾಗಿ ನೇಮಕವಾದ್ರು

ಸೂರ್ಯನ ಕೈಕೆಳಗೆ ಪಾಂಡ್ಯ ಟಿ-20ಐ ಪಂದ್ಯಗಳನ್ನ ಆಡ್ಬೇಕು, ಉಪನಾಯಕತ್ವವೂ ಇಲ್ಲ

ಹಾರ್ದಿಕ್ ಪಾಂಡ್ಯ ಕ್ರಿಕೆಟ್​ನಲ್ಲಿ ಎಷ್ಟೇ ಬೆಳೆದ್ರೂ ಅವ್ರ ವೈಯಕ್ತಿಕ ಇಮೇಜ್ ಮಾತ್ರ ಸಾಕಷ್ಟು ವಿಚಾರಗಳಿಂದ ಡ್ಯಾಮೇಜ್ ಆಗಿದೆ. ಅದ್ರಲ್ಲಿ ಮುಂಬೈ ಇಂಡಿಯನ್ಸ್ ನಾಯಕತ್ವ ಒಂದ್ಕಡೆಯಾದ್ರೆ ಪರ್ಸನಲ್ ಲೈಫ್​ನಲ್ಲಿನ ಕೆಲ ಏರುಪೇರುಗಳು, ಪತ್ನಿ ಜೊತೆಗಿನ ಡಿವೋರ್ಸ್ ಪಾಂಡ್ಯರನ್ನ ನೆಗೆಟಿವ್ ಶೇಡ್​ನಲ್ಲಿ ಪೊಟ್ರೆ ಮಾಡಿದೆ. ಈ ಎಲ್ಲಾ ಕಾರಣಗಳಿಂದಲೇ ಗೌತಮ್ ಗಂಭೀರ್ ಗರಡಿಯಲ್ಲಿ ಪಾಂಡ್ಯ ಬರೀ ಆಟಗಾರನಷ್ಟೇ ಮುಂದುವರಿಬೇಕಾಯ್ತು. ಪ್ರಸ್ತುತ ಏಷ್ಯಾಕಪ್ ಟೂರ್ನಿಗೆ ಅನೌನ್ಸ್ ಆಗಿರೋ ಟೀಮ್​ನಲ್ಲೂ ಪಾಂಡ್ಯಗೆ ವೈಸ್ ಕ್ಯಾಪ್ಟನ್ಸಿಯೂ ಸಿಕ್ಕಿಲ್ಲ. ಸೂರ್ಯಕುಮಾರ್ ಯಾದವ್ ನಾಯಕನಾಗಿದ್ರೆ ಶುಭ್​ಮನ್ ಗಿಲ್ ಉಪನಾಯಕ ಆಗಿದ್ದಾರೆ. ಸೋ ಈ ಎಲ್ಲಾ ಬೆಳವಣಿಗೆಗಳನ್ನ ನೋಡಿದ್ರೆ ಹಾರ್ದಿಕ್ ಭಾರತ ತಂಡದಲ್ಲಿ ಇನ್ಮುಂದೆ ಸಾಮಾನ್ಯ ಆಟಗಾರನಾಗಿಯೇ ಕರಿಯರ್ ಮುಗಿಸಬೇಕಾಗುತ್ತೆ.

Shantha Kumari