ಮಾಡಿದ್ದುಣ್ಣೋ ಮಹರಾಯ – ಪಾಂಡ್ಯ MIಗೆ ಬಂದಿದ್ದೇ ತಪ್ಪಾಯ್ತಾ?
ರೋಹಿತ್ & ಸೂರ್ಯಗೆ ಸಾರಥ್ಯ ಸಿಕ್ಕಿದ್ದೇಗೆ?

ಮಾಡಿದ್ದುಣ್ಣೋ ಮಹರಾಯ – ಪಾಂಡ್ಯ MIಗೆ ಬಂದಿದ್ದೇ ತಪ್ಪಾಯ್ತಾ?ರೋಹಿತ್ & ಸೂರ್ಯಗೆ ಸಾರಥ್ಯ ಸಿಕ್ಕಿದ್ದೇಗೆ?

ಜಸ್ಟ್ ಒನ್ ವೀಕ್. ಭಾರತ ವರ್ಸಸ್ ಶ್ರೀಲಂಕಾ ಸರಣಿಗೆ ಇನ್ನು ಜಸ್ಟ್ ಒನ್ ವೀಕ್ ಅಷ್ಟೇ ಬಾಕಿ. ಮೂರು ಟಿ-20 ಹಾಗೇ 3 ಏಕದಿನ ಪಂದ್ಯಗಳ ಸರಣಿಗೆ ಬಿಸಿಸಿಐ ಅಚ್ಚರಿಯ ಕ್ಯಾಪ್ಟನ್ಸ್ ಮತ್ತು ಪ್ಲೇಯರ್ಸ್​ನ ಅನೌನ್ಸ್ ಮಾಡಿದೆ. ಅದ್ರಲ್ಲೂ ಟಿ-20ಗೆ ನಾನೇ ನಾಯಕ ಅಂತಾ ರೇಸ್​ನಲ್ಲಿದ್ದವ್ರನ್ನೆಲ್ಲಾ ಸೈಡ್​ಲೈನ್ ಮಾಡಿ ಸೂರ್ಯಕುಮಾರ್ ಯಾದವ್​ಗೆ ಪಟ್ಟ ಕಟ್ಟಲಾಗಿದೆ. ಬಟ್ ಇಲ್ಲಿ ಶಾಕಿಂಗ್ ವಿಚಾರ ಅಂದ್ರೆ ಸೂರ್ಯನಿಗೆ ಪಟ್ಟ ಕಟ್ಟಿರೋದ್ರ ಹಿಂದೆ ದೊಡ್ಡ ಅಜೆಂಡಾನೇ ಇದೆ. ರೋಹಿತ್ ಶರ್ಮಾ ಉತ್ತರಾಧಿಕಾರಿ ನಾನೇ ಅಂತಾ ಫಿಕ್ಸ್ ಆಗಿದ್ದ ಹಾರ್ದಿಕ್ ಪಾಂಡ್ಯಗೆ ಇದು ಭಾರೀ ಹಿನ್ನಡೆಯಾಗಿದೆ. ಐಪಿಎಲ್​ನಲ್ಲಿ ಮಾಡಿದ ಒಂದಷ್ಟು ಎಡವಟ್ಟುಗಳಿಗೆ ಪಾಂಡ್ಯ ಟೀಂ ಇಂಡಿಯಾದಲ್ಲಿ ಬೆಲೆ ತೆರಬೇಕಾಗಿದೆ. ಪಾಂಡ್ಯ ಪರಿಸ್ಥಿತಿ ನಿಜಕ್ಕೂ ಹೇಗಾಗಿದೆ ಅಂದ್ರೆ ಮಾಡಿದ್ದುಣ್ಣೋ ಮಹರಾಯ ಎಂಬಂತಾಗಿದೆ.

ಇದನ್ನೂ ಓದಿ: ಅಂಗದ್, ಅಕಾಯ್, ವಮಿಕಾ ಹೇಗಿದೆ ಕ್ರಿಕೆಟರ್ಸ್ ಮಕ್ಕಳ‌ ಹೆಸರು?  – ಈ ಪುಟಾಣಿಗಳ ಹೆಸರಿನ ಅರ್ಥವೇನು?

ಟಿ-20 ವಿಶ್ವಕಪ್ ಬಳಿಕ ಹಿಟ್​ಮ್ಯಾನ್ ರೋಹಿತ್ ಶರ್ಮಾ ಟಿ-20ಐಗೆ ಗುಡ್​ ಬೈ ಹೇಳಿದ್ರು. 17 ವರ್ಷಗಳ ಬಳಿಕ ಭಾರತಕ್ಕೆ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಟ್ಟ ರೋಹಿತ್​ರ ಈ ನಿರ್ಧಾರ ಕೋಟ್ಯಂತರ ಭಾರತೀಯರಿಗೆ ಆಘಾತ ನೀಡಿತ್ತು. ಭಾರತ ವಿಶ್ವಕಪ್ ಗೆಲ್ತು ಅಂತಾ ಖುಷಿ ಪಡ್ಬೇಕೋ ಇಲ್ಲ ರೋಹಿತ್ ಮತ್ತು ಕೊಹ್ಲಿಯಂತಹ ದಿಗ್ಗಜ ಆಟಗಾರರು ಇನ್ಮುಂದೆ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್ ಆಡೋದಿಲ್ಲ ಅಂತಾ ದುಃಖ ಪಡ್ಬೇಕೋ ಗೊತ್ತಾಗದೆ ಒದ್ದಾಡಿದ್ರು. ಆದ್ರೆ ಒಂದಂತೂ ಸತ್ಯ. ಆವತ್ತು ರೋಹಿತ್​ರ ನಿವೃತ್ತಿಯಿಂದ ಇಡೀ ಜಗತ್ತಿನಲ್ಲಿ ಯಾರಾದ್ರೂ ಖುಷಿ ಪಟ್ಟಿದ್ರು ಅಂದ್ರೆ ಅದು ಹಾರ್ದಿಕ್ ಪಾಂಡ್ಯ ಒಬ್ಬರೇ ಇರಬೇಕು. ಅದಕ್ಕೆ ಕಾರಣ ಕೂಡ ಇತ್ತು. ಯಾಕಂದ್ರೆ ರೋಹಿತ್​ರ ಉತ್ತರಾಧಿಕಾರಿ ನಾನೇ. ಟಿ20ಐಗೆ ಇನ್ಮುಂದೆ ನಾನೇ ವಾರಸುದಾರ ಅಂತಾ ಪಾಂಡ್ಯ ಕಂಪ್ಲೀಟ್ ಫಿಕ್ಸ್ ಆಗಿದ್ರು. ಯಾಕಂದ್ರೆ ಈ ಹಿಂದೆ ಕೂಡ ಟಿ-20 ನಾಯಕನಾಗಿ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾವನ್ನ ಲೀಡ್ ಮಾಡಿದ್ರು. ಹಾಗೇ ಟಿ-20 ವಿಶ್ವಕಪ್​ಗೂ ವೈಸ್ ಕ್ಯಾಪ್ಟನ್ ಆಗಿದ್ರು. ಸೋ ಇನ್ಮುಂದೆ ಚುಟುಕು ಫಾರ್ಮೇಟ್​ಗೆ ನಾನೇ ನಾಯಕ ಅನ್ನೋದು ಸಹಜವಾಗೇ ಅವ್ರ ತಲೆಯಲ್ಲಿತ್ತು. ಬಟ್ ಶ್ರೀಲಂಕಾ ಸರಣಿಗೆ ಟೀಂ ಅನೌನ್ಸ್ ಆದ್ಮೇಲೆ ಅವ್ರ ಪ್ಲ್ಯಾನ್ ಕಂಪ್ಲೀಟ್ ಉಲ್ಟಾ ಆಗಿದೆ. ನಾಯಕ ಇರ್ಲಿ ಉಪನಾಯಕನ ಪಟ್ಟವೂ ಕೈ ತಪ್ಪಿ ಹೋಗಿದೆ.

ಲಂಕಾ ದಹನಕ್ಕೆ ರೆಡಿಯಾಗಿರೋ ಟೀಂ ಇಂಡಿಯಾ ಸ್ಕ್ವಾಡ್​ನಲ್ಲಿ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯರನ್ನ ಕಂಪ್ಲೀಟ್ ಸೈಡ್​ಲೈನ್ ಮಾಡಲಾಗಿದೆ. ಟಿ-20ಐ ಕ್ಯಾಪ್ಟನ್ ಇರಲಿ ಪಾಂಡ್ಯನ ಮುಕುಟದಲ್ಲಿದ್ದ ಉಪನಾಯಕನ ಕಿರೀಟವನ್ನೂ ಕಿತ್ತುಕೊಳ್ಳಲಾಗಿದೆ. ಇನ್ಮುಂದೆ ಟೀಂ ಇಂಡಿಯಾದಲ್ಲಿ ಪಾಂಡ್ಯ ಒಬ್ಬ ಸಾಮಾನ್ಯ ಆಟಗಾರನಷ್ಟೇ. ಹಾಗಂತ ನಾವಿಲ್ಲಿ ಪಾಂಡ್ಯ ಒಳ್ಳೆ ಪ್ಲೇಯರ್ ಅಲ್ಲ ಅಂತಾ ಹೇಳ್ತಾನೇ ಇಲ್ಲ. ಟಿ-20 ವಿಶ್ವಕಪ್​ನ ಫೈನಲ್ ಮ್ಯಾಚ್​ನ ಲಾಸ್ಟ್ ಓವರ್​ನಲ್ಲಿ ಟೀಂ ಇಂಡಿಯಾಗೆ ಗೆಲುವು ಧಕ್ಕಿಸಿಕೊಟ್ಟಿದ್ದೇ ಪಾಂಡ್ಯ. ಆಟದಲ್ಲಿ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ಪಕ್ಕಕ್ಕಿಟ್ಟು ನೋಡಿದರೆ ಪಾಂಡ್ಯರಲ್ಲಿ ನೀವು ಮಾದರಿ ಎನಿಸುವಂಥಾ ಯಾವ ಗುಣಗಳನ್ನೂ ಕಾಣೋಕೆ ಸಾಧ್ಯ ಇಲ್ಲ. ಈಗ ವಿರಾಟ್ ಮತ್ತು ಕೊಹ್ಲಿಯಂತಹ ಆಟಗಾರರನ್ನ ಅಭಿಮಾನಿಗಳು ಮನಸ್ಸಿನಿಂದ ಇಷ್ಟ ಪಡ್ತಾರೆ. ಆಟ ಅಷ್ಟೇ ಅಲ್ಲದೆ ಅವ್ರ ಬಿಹೇವಿಯರ್ ಕೂಡ ಇಷ್ಟ ಆಗುತ್ತೆ. ಬಟ್ ಪಾಂಡ್ಯರನ್ನ ಆಟಕ್ಕೆ ಹೊರತುಪಡಿಸಿದ್ರೆ ಮನಸ್ಸಿಂದ ಇಷ್ಟ ಪಡುವಂಥ ಯಾವ ಕ್ವಾಲಿಟೀಸ್ ಕೂಡ ನಿಮಗೆ ಕಾಣೋದಿಲ್ಲ. ಇದೇ ಈಗ ಪಾಂಡ್ಯರನ್ನ ಸೈಡ್ ಲೈನ್ ಮಾಡಿರೋದು.

ಹಾರ್ದಿಕ್ ಪಾಂಡ್ಯಗೆ ಕ್ಯಾಪ್ಟನ್ ಹಾಗೇ ವೈಸ್ ಕ್ಯಾಪ್ಟನ್ ಪಟ್ಟ ತಪ್ಪಿರೋದ್ರ ಬಗ್ಗೆ ಸಾಕಷ್ಟು ಅಭಿಮಾನಿಗಳಿಗೆ ಪ್ರಶ್ನೆ ಇದ್ದೇ ಇದೆ. ಬಟ್ ಈ ಎಲ್ಲಾ ಬೆಳವಣಿಗೆಗಳ ಹಿಂದೆ ಐಪಿಎಲ್​ನಲ್ಲಿ ಆದ ಕೆಲವೊಂದಷ್ಟು ಘಟನೆಗಳನ್ನ ನಾವಿಲ್ಲಿ ಹೇಳಬೇಕು. ಹಾರ್ದಿಕ್ ಪಾಂಡ್ಯ 2015ರಿಂದ 2021ರವರೆಗೆ ಮುಂಬೈ ಇಂಡಿಯನ್ಸ್ ಪರವೇ ಆಡಿದ್ರು. ಬರೋಬ್ಬರಿ 7 ವರ್ಷ ಅದೇ ಫ್ರಾಂಚೈಸಿಗಾಗಿ ಹಿಟ್​ಮ್ಯಾನ್ ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಡಿ ಕಣಕ್ಕಿಳಿದಿದ್ರು. ಬಟ್ ಪಾಂಡ್ಯಗೆ ನಾಯಕನ ಪಟ್ಟಕ್ಕೇರಬೇಕು ಅನ್ನೋ ಆಸೆ. ಅದಕ್ಕಾಗಿ ಫ್ರಾಂಚೈಸಿ ಮಾಲೀಕರಾದ ನೀತಾ ಅಂಬಾನಿ ಮತ್ತು ಆಕಾಶ್ ಅಂಬಾನಿ ಮುಂದೆ ತಮ್ಮ ಬೇಡಿಕೆ ಇಟ್ಟಿದ್ರು. ಬಟ್ ರೋಹಿತ್ ಶರ್ಮಾ ಇರೋವರೆಗೂ ಕ್ಯಾಪ್ಟನ್ ಪಟ್ಟ ಕಟ್ಟೋಕೆ ಸಾಧ್ಯನೇ ಇಲ್ಲ ಅಂತಾ ಆಕಾಶ್ ಅಂಬಾನಿ ಖಡಾಖಂಡಿತವಾಗಿ ಹೇಳಿದ್ದರು. ಆದ್ರೆ ನಾಯಕತ್ವದ ಬೆನ್ನು ಬಿದ್ದಿದ್ದ ಪಾಂಡ್ಯ ಮರುವರ್ಷವೇ ಅಂದ್ರೆ 2022ರಲ್ಲಿ ಹೊಸ ತಂಡ ಗುಜರಾತ್ ಟೈಟನ್ಸ್ ಗೆ ಜಂಪ್ ಆದ್ರು. ನಾಯಕನ ಪಟ್ಟವೂ ದಕ್ಕಿತು. ಅದೇನು ಅದೃಷ್ಟವೋ ಏನೋ ಮೊದಲ ಸೀಸನ್​ನಲ್ಲೇ ತಂಡ ಚಾಂಪಿಯನ್ ಪಟ್ಟಕ್ಕೇರಿತು. ನಾಯಕನಾಗಿ ಮೊದಲ ವರ್ಷವೇ ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಪಾಂಡ್ಯ ಮರುವರ್ಷ ಅಂದ್ರೆ 2023ರಲ್ಲಿ ಮತ್ತೆ ತಂಡವನ್ನ ಫೈನಲ್​ಗೇರಿಸಿದ್ರು. ಬಟ್ ಕಪ್ ಗೆಲ್ಲೋಕೆ ಆಗ್ಲಿಲ್ಲ. ಐಪಿಎಲ್’ನಲ್ಲಿ ಯಾವ ತಂಡಕ್ಕೂ ಸಿಗದ ಅದ್ಧೂರಿ ಆರಂಭ ಪಾಂಡ್ಯ ನಾಯಕತ್ವದ ಗುಜರಾತ್ ತಂಡಕ್ಕೆ ಸಿಕ್ಕಿತ್ತು.

ಒಂದು ಗೆಲುವು, ಮತ್ತೊಂದು ರನ್ನರ್​ಅಪ್. ಇಷ್ಟು ಸಾಕಿತ್ತು ಪಾಂಡ್ಯ ಕಾಲು ನೆಲದ ಮೇಲೆ ನಿಲ್ಲದೆ ಇರೋಕೆ. ನನ್ನಿಂದಲೇ ಟೀಂ ಗೆದ್ದಿದ್ದು ಅನ್ನೋ ಅಹಂಕಾರವೂ ನೆತ್ತಿಗೇರಿತ್ತು. ಇನ್ನು ಬಿಸಿಸಿಐ ಬಾಸ್ ಜಯ್ ಶಾ ಮೊದ್ಲೇ ಗುಜರಾತ್​ನವ್ರು. ಹೀಗಾಗಿ ಭಾರತ ತಂಡದಲ್ಲೂ ಪಾಂಡ್ಯಗೆ ಇಂಪಾರ್ಟೆನ್ಸ್ ಜಾಸ್ತಿ ಆಯ್ತು. ಟಿ20 ತಂಡದ ನಾಯಕತ್ವವೂ ಪಾಂಡ್ಯ ಹೆಗಲೇರಿತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟಿ20 ತಂಡಕ್ಕೆ ಬೇಡ ಎನ್ನುವಷ್ಟರ ಮಟ್ಟಿಗೆ ಪಾಂಡ್ಯ ಅದಾದ್ಲೇ ಬೆಳೆದು ಬಿಟ್ಟಿದ್ರು. ಯಾವಾಗ ಪಾಂಡ್ಯ ಟೀಂ ಇಂಡಿಯಾದಲ್ಲಿ ಮೆರೆದಾಡೋಕೆ ಶುರು ಮಾಡಿದ್ರೋ ಹಾಗೇ ಗುಜರಾತ್ ತಂಡಕ್ಕೆ ಮೊದಲ ವರ್ಷವೇ ಚಾಂಪಿಯನ್ ಟ್ರೋಫಿ ಗೆಲ್ಲಿಸಿಕೊಟ್ರೋ ಇದನ್ನ ನೋಡಿ ಮುಂಬೈ ಇಂಡಿಯನ್ಸ್ ತಂಡದ ಮಾಲೀಕ ಆಕಾಶ್ ಅಂಬಾನಿಗೂ ಶಾಕ್ ಆಗಿತ್ತು. ಮುಂಬೈ ತಂಡಕ್ಕೆ 5 ಟ್ರೋಫಿಗಳನ್ನು ಗೆಲ್ಲಿಸಿ ಕೊಟ್ಟಿದ್ದನ್ನೂ ಮರೆತು ರೋಹಿತ್ ಶರ್ಮಾರಂಥ ಶ್ರೇಷ್ಠಾ ನಾಯಕನನ್ನೇ ಪಕ್ಕಕ್ಕೆ ತಳ್ಳಿದ್ರು. ಗುಜರಾತ್​ ಟೈಟಾನ್ಸ್ ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯನನ್ನ ಕರ್ಕೊಂಡು ಬಂದು ಮುಂಬೈ ನಾಯಕನಾಗಿ ಪಟ್ಟಾಭಿಷೇಕ ಮಾಡಿಯೇ ಬಿಟ್ಟಿದ್ರು. ಬಟ್ ಇಲ್ಲಿ ಇನ್ನೊಂದು ವಿಚಾರ ಇದೆ. ರೋಹಿತ್ ಶರ್ಮಾರನ್ನು ಕನಿಷ್ಠ ಸೌಜನ್ಯಕ್ಕೂ ಕೂಡ ಒಂದು ಮಾತೂ ಕೇಳದೆ ಪಾಂಡ್ಯನಿಗೆ ಪಟ್ಟ ಕಟ್ಟಲಾಗಿತ್ತು. ಆದ್ರೆ ರೋಹಿತ್ ಇದೆಲ್ಲವನ್ನೂ ಸಹಿಸಿಕೊಂಡೇ ಈ ಬಾರಿ ಮುಂಬೈ ಪರ ಕಣಕ್ಕಿಳಿದಿದ್ರು. ಬಹುಶಃ ಮುಂಬೈ ತಂಡದಲ್ಲಿ ಹಾರ್ದಿಕ್ ಪಾಂಡ್ಯನನ್ನು ನಾಯಕನನ್ನಾಗಿ ಪೂರ್ಣ ಮನಸ್ಸಿನಿಂದ ಒಪ್ಪಿಕೊಂಡವರು ಇಬ್ಬರೇ.. ಒಂದು ನೀತಾ ಅಂಬಾನಿ ಮತ್ತು ಮತ್ತೊಂದು ಆಕಾಶ್ ಅಂಬಾನಿ.. ಯಾಕಂದ್ರೆ ಪಾಂಡ್ಯ ಪಟ್ಟಾಭಿಷೇಕ ಅವರದ್ದೇ ನಿರ್ಧಾರವಾಗಿತ್ತು.

ಅಸಲಿಗೆ ಪಾಂಡ್ಯ ಮುಂಬೈ ತಂಡ ಬಿಟ್ಟಿದ್ದೇ ಕ್ಯಾಪ್ಟನ್ ಪಟ್ಟ ಸಿಗ್ಲಿಲ್ಲ ಅಂತಾ. ಈಗ ಅದೇ ಪಾಂಡ್ಯನನ್ನ ಕರ್ಕೊಂಡು ಬಂದು ಗದ್ದುಗೆ ನೀಡಿದ್ರೆ ಯಾರು ತಾನೇ ಒಪ್ಪಿಕೊಳ್ತಾರೆ. ಹೀಗಾಗೇ ಹಾರ್ದಿಕ್ ಪಾಂಡ್ಯ ಮುಂಬೈ ತಂಡಕ್ಕೆ ವಾಪಸ್ ಬಂದಾಗ ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಅಸಮಾಧಾನ ಹೊರಹಾಕಿದ್ದರು. ಅದ್ರ ಎಫೆಕ್ಟ್ ಎನ್ನುವಂತೆ 2024ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಅಟ್ಟರ್ ಫ್ಲಾಪ್ ಪ್ರದರ್ಶನ ನೀಡಿತ್ತು. ಪಾಯಿಂಟ್ಸ್ ಟೇಬಲ್​ನಲ್ಲಿ 10ನೇ ಸ್ಥಾನ ಅಂದ್ರೆ ಕೊನೇ ಪ್ಲೇಸ್​ನಲ್ಲಿ ಕುಳಿತಿತ್ತು. ಬಟ್ ಆನಂತರ ಕಾಲ ಚಕ್ರ ಹೇಗೆ ಉರುಳಿತು ಅನ್ನೋದು ನಿಮ್ಗೆಲ್ಲಾ ಗೊತ್ತೇ ಇದೆ.

ಮುಂಬೈ ತಂಡದಲ್ಲಿ ನಾಯಕತ್ವ ಕಳೆದುಕೊಂಡು ಸೈಡ್​ಲೈನ್ ಆಗಿದ್ದ ರೋಹಿತ್ ಶರ್ಮಾ ಭಾರತ ಟಿ20 ತಂಡದ ನಾಯಕನಾಗಿ ದೇಶಕ್ಕೆ ವಿಶ್ವಕಪ್ ಗೆದ್ದು ಕೊಟ್ರು.. ಮುಂಬೈ ತಂಡದ ನಾಯಕತ್ವದ ನಿರೀಕ್ಷೆಯಲ್ಲಿದ್ದ ಸೂರ್ಯಕುಮಾರ್ ಯಾದವ್ ಈಗ ಹಾರ್ದಿಕ್ ಪಾಂಡ್ಯನನ್ನು overtake ಮಾಡಿ ಭಾರತ ಟಿ20 ತಂಡದ full time skipper ಆಗಿ ಸೆಲೆಕ್ಟ್ ಆಗಿದ್ದಾರೆ. ಈ ಎಲ್ಲಾ ಆಟದ ಹಿಂದಿನ ಸೂತ್ರಧಾರ ತಂಡದ ಹೊಸ ಕೋಚ್ ಗೌತಮ್ ಗಂಭೀರ್. ಅಷ್ಟೇ ಯಾಕೆ ಪಾಂಡ್ಯ ಪಾಲಿಗೆ ಗಾಡ್ ಫಾದರ್​ನಂತಿದ್ದ ಜಯ್ ಶಾ ಕೂಡ ನೆರವಿಗೆ ಬಂರಲಿಲ್ಲ. ಫೈನಲಿ ಪಾಂಡ್ಯ ಪರಿಸ್ಥಿತಿ ಮಾಡಿದ್ದುಣ್ಣೋ ಮಹಾರಾಯ ಎಂಬಂತಾಗಿದೆ. ಜಯ್ ಶಾ ಬಿಸಿಸಿಐ secretary ಆದ ಕೂಡಲೇ ಭಾರತ ಏಕದಿನ ಹಾಗೂ ಟಿ20 ತಂಡದ ನಾಯಕತ್ವ ಪಡೆಯಲು ಕಸರತ್ತು ನಡೆಸಿದ್ದ ಪಾಂಡ್ಯಗೆ ಕಾಲವೇ ಉತ್ತರ ಕೊಟ್ಟಿದೆ. ಮುಂಬೈ ಆಟಗಾರರಿಗೇ ಚೋಕ್ ಕೊಟ್ಟು ನಾಯಕನ ಪಟ್ಟಕ್ಕೇರಿದ್ದ ಪಾಂಡ್ಯ ಇಂದು ನಾಯಕತ್ವದ ಪೈಪೋಟಿಯಲ್ಲಿ ಅದೇ ಮುಂಬೈನ ಇಬ್ಬರು ಆಟಗಾರರ ಮುಂದೆ ಸೋಲೊಪ್ಪಿಕೊಂಡಿದ್ದಾರೆ. ಪಾಂಡ್ಯ ಕ್ಯಾಪ್ಟನ್ ಆಗಬಾರದು ಅನ್ನೋದು ನಮ್ಮ ಉದ್ದೇಶ ಅಲ್ಲ. ಬಟ್ ಒಂದಷ್ಟು ವಿಚಾರಗಳಲ್ಲಿ ಸಹ ಆಟಗಾರರಿಗೂ ಬೆಲೆ ಕೊಡಬೇಕಾಗುತ್ತೆ. ಎಲ್ಲರನ್ನೂ ಗೌರವಿಸಬೇಕಾಗುತ್ತೆ. ಯಾಕಂದ್ರೆ ಕ್ರಿಕೆಟ್ ಅನ್ನೋದು ಇಂಡಿವಿಶ್ಯೂಯಲ್ ಗೇಮ್ ಅಲ್ಲ. ಟೀಂ ಎಫರ್ಟ್ ಇದ್ದಾಗಷ್ಟೇ ಗೆಲ್ಲೋಕೆ ಸಾಧ್ಯ.

Shwetha M

Leave a Reply

Your email address will not be published. Required fields are marked *