ಪಾಂಡ್ಯ- ಪ್ರಾಚಿ LOVE ಹೌದಾ? – ಹಾರ್ದಿಕ್ ಮನೆಗೆ ಬಂದಿದ್ದೇಕೆ ಗೆಳತಿ?
ರಷ್ಯಾ ಮಾಡೆಲ್ ಜೊತೆಗೂ ಸ್ನೇಹ?

ಪಾಂಡ್ಯ- ಪ್ರಾಚಿ LOVE ಹೌದಾ? – ಹಾರ್ದಿಕ್ ಮನೆಗೆ ಬಂದಿದ್ದೇಕೆ ಗೆಳತಿ?ರಷ್ಯಾ ಮಾಡೆಲ್ ಜೊತೆಗೂ ಸ್ನೇಹ?

ಟಿ20 ವಿಶ್ವಕಪ್ ಗೆದ್ದ ಮೇಲೆ ಟೀಮ್ ಇಂಡಿಯಾ ಆಟಗಾರರು ತಮ್ಮ ಮುದ್ದಿನ ಹೆಂಡತಿ, ಮುದ್ದು ಮಕ್ಕಳ ಜೊತೆ ಸಂಭ್ರಮಿಸುತ್ತಿದ್ರು. ಆದ್ರೆ, ಒಬ್ರು ಮಾತ್ರ ಒಬ್ಬಂಟಿಯಾಗಿ ಕೂತು ಕಣ್ಣೀರು ಹಾಕುತ್ತಿದ್ದರು. ಕ್ಯಾಮರಾ ಕಣ್ಣು ಆ ಒಬ್ಬ ಆಟಗಾರನನ್ನೇ ಫೋಕಸ್ ಮಾಡ್ತಿತ್ತು. ಅಲ್ಲಿ ಎಲ್ಲ ಕುಟುಂಬದವರ ಸಂತಸ ಮುಗಿಲುಮುಟ್ಟಿತ್ತು. ಒಬ್ಬನೇ ಒಬ್ಬನ ಕಣ್ಣೀರು ಭೂಮಾತೆಯ ಒಡಲು ಸೇರಿತ್ತು. ಹೌದು.. ಹಾರ್ದಿಕ್ ಪಾಂಡ್ಯ ಅಂದು ಬಿಕ್ಕಿ ಬಿಕ್ಕಿ ಅತ್ತಿದ್ದು ಖುಷಿಗೋ, ಇಲ್ಲ ಒಂಟಿಯಾಗಿದ್ದೇನೆ ಅನ್ನೋ ನೋವಿಗೋ.. ಆದ್ರೆ, ಒಂದಂತೂ ಫ್ಯಾನ್ಸ್ ಗೆ ಅರಿವಾಗಿತ್ತು. ಹಾರ್ದಿಕ್ ಪಾಂಡ್ಯ ಬಾಳಲ್ಲಿ ಪತ್ನಿ ನತಾಶಾ ದೂರಾಗಿದ್ದಳು. ಇದೇ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಲವ್ ಟ್ರ್ಯಾಕ್ ಗೆ ಮರಳಿದ್ದಾರಾ. ಪಾಂಡ್ಯ ಬಾಳಲ್ಲಿ ಮತ್ತೆ ಪ್ರೀತಿ ಮೂಡಿದೆಯಾ, ಪಾಂಡ್ಯ ಖುಷಿ ಖುಷಿಯಲ್ಲೇ ಡೇಟಿಂಗ್ ಮಾಡ್ತಿದ್ದಾರಾ ಎಂಬ ಕ್ಯೂರಿಯಾಸಿಟಿ ಶುರುವಾಗಿದೆ. ಯಾಕೆಂದ್ರೆ, ಪಾಂಡ್ಯ ಜೊತೆ ಒಬ್ಳು ಚೆಲುವೆ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾಳೆ. ಆಕೆ ಯಾರು, ಪಾಂಡ್ಯಾ ಜೊತೆ ಆಕೆಗಿರೋ ರಿಲೇಶನ್ ಶಿಪ್ ಏನು? ಇನ್ನೊಬ್ಬ ಚೆಲುವೆ ಕೂಡಾ ಪಾಂಡ್ಯಾ ಪ್ರೀತಿಗಾಗಿ ಕಾಯ್ತಿದ್ದಾಳೆ. ಆಕೆ ಯಾರು ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:BCCI ಹಣ ಬೇಡ ಎಂದ ದ್ರಾವಿಡ್ – ಕನ್ನಡಿಗನ ನಿರ್ಧಾರಕ್ಕೆ ಜಗತ್ತೇ ಬೆರಗು

ಟಿ20 ವಿಶ್ವಕಪ್ ಗೆದ್ದ ಮೇಲೆ ಟೀಮ್ ಇಂಡಿಯಾ ಆಟಗಾರರು ಅವರವರ ಮನೆಗೆ ತೆರಳಿದ್ದೂ ಆಗಿದೆ. ಸಂಭ್ರಮಿಸಿದ್ದೂ ಆಗಿದೆ. ಆದ್ರೆ, ಇಲ್ಲೂ ಕೂಡಾ ಹಾರ್ದಿಕ್ ಪಾಂಡ್ಯ ತಾನು ಒಂಟಿ. ನನ್ನ ಸಂಗಾತಿ ನನ್ನ ಜೊತೆಯಿಲ್ಲ ಎಂಬಂತೆ ಫೋಟೋ ಶೇರ್ ಮಾಡಿಕೊಂಡಿದ್ದರು. ಮಗನ ಜೊತೆಯಿರೋ ಫೋಟೋ ಮಾತ್ರ ಶೇರ್ ಮಾಡಿಕೊಂಡಿದ್ರು. ಅಂದು ಅಪ್ಪಿ ತಪ್ಪಿಯೂ ಬೇರೆಯಾರ ಫೋಟೋ ಕೂಡಾ ಹಾರ್ದಿಕ್ ಪಾಂಡ್ಯ ಶೇರ್ ಮಾಡಿಕೊಂಡಿರ್ಲೇ ಇಲ್ಲ. ಇಲ್ಲೇ ಇರೋದು ಪಾಂಡ್ಯ ಸೆಕೆಂಡ್ ಲವ್ ಸ್ಟೋರಿಗೆ ಸಿಕ್ಕಿರೋ ಟ್ವಿಸ್ಟ್. ಅಂದು ಪಾಂಡ್ಯ ಮನೆಗೆ ಬಂದಾಗ ಫುಲ್ ಫ್ಯಾಮಿಲಿ ಜೊತೆಗಿದ್ರು. ಆದ್ರೆ, ಫ್ಯಾನ್ಸ್ ಕಾಯ್ತಿದ್ದ ನತಾಶಾ ಮಾತ್ರ ಅಲ್ಲಿರಲಿಲ್ಲ. ನೋಡುವಾ ಮನೆಯಲ್ಲಾದ್ರೂ ನತಾಶಾ ಇರ್ತಾಳಾ. ಇಬ್ರೂ ಜೊತೆಯಲ್ಲೇ ಸೆಲೆಬ್ರೇಷನ್ ಮಾಡ್ತಾರಾ ಅಂತಾ ಫ್ಯಾನ್ಸ್ ಕಣ್ಣಿಗೆ ಎಣ್ಣೆಬಿಡ್ಕೊಂಡ್ ಕಾಯ್ತಿದ್ದೇ ಬಂತು. ಆದ್ರೆ, ನನಗೆ ನೀನೇ ಜಗತ್ತು ಎಂದು ಮಗನ ಜೊತೆ ನಿಂತಿರೋ ಫೋಟೋ ಮಾತ್ರ ಶೇರ್ ಮಾಡ್ಕೊಂಡಿದ್ರು ಹಾರ್ದಿಕ್. ಆಗ ನೋಡ್ಬೇಕಿತ್ತು. ಫ್ಯಾನ್ಸ್ ಹಾಕಿರೋ ಕಮೆಂಟ್. ನಮ್ಮ ವಿಶ್ವಕಪ್ ಹೀರೋ ಒಂಟಿಯಾದ್ರು. ಸಂಗಾತಿಯಿಲ್ಲದೇ ಪಾಂಡ್ಯ ಪಾಡು ನೋಡೋಕ್ಕಾಗಲ್ಲ ಅಂತಾ ನತಾಶಾಗೆ ಹಿಡಿಶಾಪ ಹಾಕ್ತಿದ್ರು. ಆದ್ರೆ, ಇಲ್ಲೇ ಒಂದು ಸೀಕ್ರೆಟ್ ಕೂಡಾ ಇತ್ತು. ಅದೀಗ ಲೇಟ್ ಆದ್ರೂ ಲೇಟೆಸ್ಟ್ ನ್ಯೂಸ್ ಆಗಿದೆ. ಪಾಂಡ್ಯ ಮನೆಯಲ್ಲಿ ಸೆಲೆಬ್ರೇಷನ್‌ಗೆ ಬಂದ ಗೆಳತಿ ಕೊನೆಗೂ ಆ ಫೋಟೋ ಶೇರ್ ಮಾಡಿದ್ದಾರೆ. ಅದ್ರಲ್ಲಿ ಪಾಂಡ್ಯ ಮುಖದ ಚಾರ್ಮ್ ನೋಡಿ.. ಅಣ್ಣಂಗೆ ಲವ್ವಾಗಿದೆ ಅನ್ನೋ ರೀತಿ ಪಾಂಡ್ಯ ಕೂಡಾ ಖುಷಿಯಲ್ಲೇ ಗೆಳತಿ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ಈಕೆಯೇ ಪ್ರಾಚಿ ಸೋಲಂಕಿ.

ಪಿಎಸ್‌29 ಅನ್ನೋ ಇನ್‌ಸ್ಟಾಗ್ರಾಂ ಖಾತೆ ನಿರ್ವಹಿಸುತ್ತಿರುವ ಪ್ರಾಚಿ ಸೋಲಂಕಿ ಅನ್ನೋ ಇನ್‌ ಫುಲೆನ್ಸರ್ ಹಾರ್ದಿಕ್ ಪಾಂಡ್ಯ ಮನೆಗೆ ಹೋಗಿದ್ದಾರೆ. ಹಾರ್ದಿಕ್ ಪಾಂಡ್ಯ ಜೊತೆ ಫೋಟೋ, ಕ್ಲಿಕ್ಕಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಹಾರ್ದಿಕ್ ಪಾಂಡ್ಯ ಹಾಗೂ ಕುಟುಂಬ ಸದಸ್ಯರ ಜೊತೆ ಹೆಚ್ಚು ಸಮಯ ಕಳೆದಿದ್ದಾರೆ. ಕ್ರುನಾಲ್ ಪಾಂಡ್ಯ ಸೇರಿದಂತೆ ಹಾರ್ದಿಕ್ ಕುಟುಂಬ ಸದಸ್ಯರ ಜೊತೆಗೂ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ, ವಿಶ್ವಕಪ್ ಹೀರೋ ಭೇಟಿಯಾದಾಗ ಎಂಬ ಕ್ಯಾಪ್ಷನ್ ಕೊಟ್ಟು ವಿಡಿಯೋ ಹಂಚಿಕೊಂಡಿದ್ದಾರೆ. ನನ್ನನ್ನು ಮನೆಗೆ ಆತ್ಮೀಯವಾಗಿ ಬರಮಾಡಿಕೊಂಡಿದ್ದಕ್ಕೆ ಹಾರ್ದಿಕ್ ಪಾಂಡ್ಯಗೆ ಧನ್ಯವಾದ ಎಂದು ಪ್ರಾಚಿ ಸೋಲಂಕಿ ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯ ಬಾಳಿನಿಂದ ನತಾಶ ದೂರವಾದ ಬಳಿಕ ಇನ್‌ಸ್ಟಾ ಇನ್‌ ಫುಲೆನ್ಸರ್ ಜೊತೆ ಡೇಟಿಂಗ್‌ನಲ್ಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿತ್ತು. ಈಕೆ ಯಾರು ಅನ್ನೋದು ಈಗ ಗೊತ್ತಾಗಿದೆ. ಪ್ರಾಚಿ ಸೋಲಂಕಿ ಪ್ರಸಿದ್ಧ ಮೇಕಪ್ ಆರ್ಟಿಸ್ಟ್​ ಕೂಡಾ ಹೌದು. ಪಾಂಡ್ಯ ಮತ್ತು ಫ್ರಾಚಿ ಸೂಪರ್ ಜೋಡಿ. ಶೀಘ್ರದಲ್ಲೇ ಮದ್ವೆಯಾಗಿ ಗುಡ್ ನ್ಯೂಸ್ ಕೊಡಿ ಅಂತಿದ್ದಾರೆ ಫ್ಯಾನ್ಸ್. ಆದ್ರೆ, ನತಾಶಾ ಮುಂದಿನ ನಡೆಯೇನು ಎಂಬ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ. ಇದ್ರ ಮಧ್ಯೆ ಇನ್ನೊಬ್ಬ ಚೆಲುವೆ ಕೂಡಾ ಹಾರ್ದಿಕ್ ಪಾಂಡ್ಯಾಗಾಗಿ ಕಾಯ್ತಿದ್ದಾಳೆ. ಆಕೆಯೇ ರಷ್ಯಾದ ಮಾಡೆಲ್ ಕಮ್ ನಟಿ ಎಲೆನಾ ಟುತೇಜಾ. ಹಾರ್ದಿಕ್ ಜೊತೆ ನನಗೆ ಒಳ್ಳೇ ಬಾಂಡಿಂಗ್ ಇದೆ. ನಾವಿಬ್ಬರೂ ಜಾಹೀರಾತಿನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದೇವೆ. ಭಾರತ ತಂಡದ ಜೊತೆಗೆ ಹಾರ್ದಿಕ್ ಪಾಂಡ್ಯ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ರಷ್ಯಾ ಮಾಡೆಲ್ ಎಲೆನಾ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಿದ್ದಾರೆ. ಈ ಜೋಡಿ ಕೂಡಾ ಸೂಪರ್ ಆಗಿದೆ ಅಂತಿದ್ದಾರೆ ಫ್ಯಾನ್ಸ್.

ಇದೆಲ್ಲದರ ನಡುವೆ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ನಡುವೆ ವಿಚ್ಛೇದನ ಆಗಿದೆಯಾ ಎಂಬ ಬಗ್ಗೆ ಎಲ್ಲೂ ವರದಿಯಾಗಿಲ್ಲ. ಇಬ್ಬರೂ ಜೊತೆಯಲಿಲ್ಲ ಅನ್ನೋದು ಮಾತ್ರ ಬಹಿರಂಗವಾಗಿದೆ. ಇನ್ನು ನತಾಶಾ ಬಗ್ಗೆ ಹೇಳೋದಾದ್ರೆ, ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸರ್ಬಿಯಾ ಮೂಲದವರು. ಬಾಲಿವುಡ್ ಬ್ಯೂಟಿಕ್ವೀನ್. 2019ರಲ್ಲಿ ಹಾರ್ದಿಕ್ ಪಾಂಡ್ಯ ಮತ್ತು  ನತಾಶಾ ಇಬ್ಬರೂ ಪ್ರೀತಿಯಲ್ಲಿ ಇರೋದಾಗಿ ತಿಳಿಸಿದ್ದರು. 2020 ಜನವರಿ 1ರಂದು ನ್ಯೂ ಇಯರ್ ಪಾರ್ಟಿಯಲ್ಲಿ ಗೆಳತಿಯ ಮುಂದೆ ಮೊಣಕಾಲೂರಿ ಪ್ರಪೋಸ್ ಮಾಡಿದ್ದರು. ಪ್ರಪೋಸ್ ಮಾಡಿದ ವರ್ಷ ಮೇ 31ರಂದು ನತಾಶಾ ಗರ್ಭಿಣಿ ಎಂಬ ವಿಷಯವನ್ನು ಪಾಂಡ್ಯ ಹೇಳಿಕೊಂಡಿದ್ದರು. ಜುಲೈ 30, 2020ರಂದು ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಜೀವನಕ್ಕೆ ಮುದ್ದಾದ ಗಂಡು ಮಗುವಿನ ಆಗಮನವಾಗಿತ್ತು. ನಾಲ್ಕು ವರ್ಷ ಜೊತೆಯಾಗಿ ಜೀವನ ನಡೆಸಿದ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಎರಡು ವರ್ಷದ ಮಗ ಆಗಸ್ತ್ಯನ ಸಮ್ಮುಖದಲ್ಲಿ 14 ಫೆಬ್ರವರಿ 2023ರಂದು ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಉದಯಪುರದಲ್ಲಿ ಮದುವೆಯಾಗಿದ್ದರು. ಈಗ ಪಾಂಡ್ಯ ಸಂಸಾರ ಹಳಿ ತಪ್ಪಿದೆ. ನತಾಶಾ ಮತ್ತು ಪಾಂಡ್ಯಾ ವಿರುದ್ಧ ದಿಕ್ಕಿನಲ್ಲಿ ನಿಂತಿದ್ದಾರೆ. ಇದ್ರ ಮಧ್ಯೆ ಟಿ20 ವಿಶ್ವಕಪ್ ಗೆದ್ದಾಗ ಪಾಂಡ್ಯ ತಾನು ಹೀರೋ ಆದೆ ಎಂದು ಭಾವುಕರಾಗಿಯೋ, ಇಲ್ಲ ನತಾಶಾ ದೂರಾದ ನೋವಲ್ಲೋ ಮೈದಾನದಲ್ಲೇ ಕಣ್ಣೀರಿಟ್ಟಿದ್ದರು. ಆದ್ರೆ, ಎಲ್ಲೂ ಕೂಡಾ ಹಾರ್ದಿಕ್ ಪಾಂಡ್ಯ ಪತ್ನಿ ದೂರಾದ ಬಗ್ಗೆ ಬಾಯ್ಬಿಟ್ಟಿಲ್ಲ. ಮಗನೇ ನನ್ನ ಜಗತ್ತು ಅನ್ನೋ ಪೋಸ್ಟ್ ಶೇರ್ ಮಾಡಿಕೊಂಡಿದ್ದು ಬಿಟ್ರೆ ಪತ್ನಿ ಬಗ್ಗೆ ಹೇಳಿಲ್ಲ. ನತಾಶಾ ಕೂಡಾ ಅಷ್ಟೇ. ಎಲ್ಲಿಯೂ ಪಾಂಡ್ಯ ಬಗ್ಗೆ ಬರೆದುಕೊಂಡಿಲ್ಲ. ಇಬ್ಬರ ನಡುವೆ ಮುನಿಸೋ, ಇಲ್ಲ ಡೈವೋರ್ಸ್ ಆಗಿದೆಯೋ ಅದು ಕೂಡಾ ಗೊತ್ತಾಗಬೇಕಿದೆ.

Shwetha M

Leave a Reply

Your email address will not be published. Required fields are marked *