ಗುಜರಾತ್ ಟೈಟಾನ್ಸ್ ಕ್ಯಾಪ್ಟನ್ ಆಗಿದ್ದ ಹಾರ್ದಿಕ್ ಪಾಂಡ್ಯಾ ಮರಳಿ ಮುಂಬೈಗೆ – ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಯಾರು?

ಗುಜರಾತ್ ಟೈಟಾನ್ಸ್ ಕ್ಯಾಪ್ಟನ್ ಆಗಿದ್ದ ಹಾರ್ದಿಕ್ ಪಾಂಡ್ಯಾ ಮರಳಿ ಮುಂಬೈಗೆ – ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಯಾರು?

ಗುಜರಾತ್ ಟೈಟಾನ್ಸ್​.. ಐಪಿಎಲ್​​ನಲ್ಲಿ ಅಕ್ಷರಶ: ಸೆನ್ಸೇಷನ್ ಕ್ರಿಯೇಟ್ ಮಾಡಿದಂಥಾ ಫ್ರಾಂಚೈಸಿ. ತನ್ನ ಫಸ್ಟ್ ಐಪಿಎಲ್​ ಟೂರ್ನಿಯನ್ನೇ ಗುಜರಾತ್ ಟೈಟಾನ್ಸ್​ ಗೆದ್ದುಕೊಂಡಿತ್ತು. ಬಳಿಕ 2ನೇ ಟೂರ್ನಿಯಲ್ಲಿ ಫೈನಲ್​ಗೆ ತಲುಪಿತ್ತು. ಗುಜರಾತ್​ ಟೈಟಾನ್ಸ್​ ವನ್ ಆಫ್ ದಿ ಸ್ಟ್ರ್ಯಾಂಗೆಸ್ಟ್ ಐಪಿಎಲ್ ಟೀಂ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಆದ್ರೆ ಗುಜರಾತ್​ ಟೀಂನಲ್ಲಿ ಈಗ ಒಂದಷ್ಟು ಸಂಚಲನವಾಗ್ತಿದೆ. ಶಾಕಿಂಗ್ ಬೆಳವಣಿಗೆಗಳು ನಡೀತಾ ಇದೆ. ಈ ಬಾರಿಯ ಐಪಿಎಲ್​ ಬಿಡ್ಡಿಂಗ್ ಇನ್ನೂ ಆಗಿಲ್ಲ. ಅದಕ್ಕೂ ಮುನ್ನವೇ ಕೆಲ ಟೀಂಗಳಲ್ಲಿ ಮೆಗಾ ಚೇಂಜೆಸ್​​ಗಳು ನಡೀತಾ ಇದೆ. ಅದ್ರಲ್ಲೂ ಗುಜರಾತ್ ಟೈಟಾನ್ಸ್​ ಕ್ಯಾಪ್ಟನ್ ಆಗಿದ್ದ ಹಾರ್ದಿಕ್​ ಪಾಂಡ್ಯಾ ಘರ್​ ವಾಪ್ಸಿಯಾಗ್ತಿದೆ. ಅಂದ್ರೆ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಯನ್ನ ಮತ್ತೆ ಸೇರಿಕೊಳ್ತಾ ಇದ್ದಾರೆ. ಹಾಗಿದ್ರೆ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್ ಯಾರು? ರೋಹಿತ್ ಶರ್ಮಾರನ್ನ ಪಾಂಡ್ಯಾ ರಿಪ್ಲೇಸ್ ಮಾಡ್ತಾರಾ? ಪಾಂಡ್ಯಾ ಮತ್ತೆ ಅಂಬಾನಿ ತೆಕ್ಕೆಗೆ ಬೀಳ್ತಿರೋದ್ಯಾಕೆ? ಗುಜರಾತ್ ಟೈಟಾನ್ಸ್​​ನ ಹೊಸ  ಕ್ಯಾಪ್ಟನ್ ಯಾರಾಗ್ತಾರೆ? ಇವೆಲ್ಲದರ ಕುರಿತ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರೋಹಿತ್ ಶರ್ಮಾ & ವಿರಾಟ್ ಕೊಹ್ಲಿ ಟಿ-20 ಭವಿಷ್ಯವೇನು? -ಬಿಸಿಸಿಐ ಕೊಟ್ಟ ಸೂಚನೆ ಏನು?

ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈ ಹಿಂದೆ ಮುಂಬೈ ಇಂಡಿಯನ್ಸ್​​​ನಲ್ಲೇ ಇದ್ರು. ಆದ್ರೆ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಹಾರ್ದಿಕ್​ ಪಾಂಡ್ಯಾಗೆ ಕ್ಯಾಪ್ಟನ್ಸಿ ಆಫರ್​ ಕೊಡುತ್ತಲೇ ಪಾಂಡ್ಯಾ ಮುಂಬೈನಿಂದ ಗುಜರಾತ್​ಗೆ ಜಂಪ್​ ಮಾಡಿದ್ರು. ಬರೋಬ್ಬರಿ 15 ಕೋಟಿ ರೂಪಾಯಿಗೆ ಈ ಡೀಲ್​ ಆಗಿತ್ತು. ಆದ್ರೀಗ ಪಾಂಡ್ಯಾ ಮತ್ತೆ ಮುಂಬೈ ಇಂಡಿಯನ್ಸ್​​ಗೆ ಜಾಯಿನ್ ಆಗ್ತಿದ್ದಾರೆ. ಇಲ್ಲಿ 15 ಕೋಟಿಗಿಂತಲೂ ಹೆಚ್ಚು ಸಂಭಾವನೆ ಪಡೆಯೋದು ಆಲ್​ಮೋಸ್ಟ್​ ಗ್ಯಾರಂಟಿಯಾಗಿದೆ. ಹೀಗಾಗಿ, ಐಪಿಎಲ್​ ಇತಿಹಾಸದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದ ಆಟಗಾರ ಅನ್ನೋ ಟ್ಯಾಗ್​ ಈಗ ಹಾರ್ದಿಕ್​​ ಪಾಂಡ್ಯಾಗೆ ಸಿಗುವ ಎಲ್ಲಾ ಸಾಧ್ಯತೆಗಳೂ ಇವೆ.

ಅಷ್ಟಕ್ಕೂ ಹಾರ್ದಿಕ್​ ಪಾಂಡ್ಯಾ ಗುಜರಾತ್​ ಟೈಟಾನ್ಸ್​ನಿಂದ ಹೊರ ಬರ್ತಿರೋದು ಯಾಕೆ?. ಅಲ್ಲಿ ಕ್ಯಾಪ್ಟನ್ಸಿ ಪಟ್ಟ ಸಿಕ್ಕಿದ್ದು, ಫಸ್ಟ್ ಟೂರ್ನಿಯನ್ನ ಗೆದ್ದುಕೊಂಡ್ರೂ ಪಾಂಡ್ಯಾ ಅಲ್ಲೇ ಕಂಟಿನ್ಯೂ ಆಗ್ತಿಲ್ಲ ಯಾಕೆ ಅನ್ನೋದು ಎಲ್ಲರ ಪ್ರಶ್ನೆ. ಕೆಲ ಮಾಹಿತಿ ​ ಪ್ರಕಾರ, ಗುಜರಾತ್​ ಟೈಟಾನ್ಸ್ ಮ್ಯಾನೇಜ್ಮೆಂಟ್​​ ಜೊತೆಗೆ ಹಾರ್ದಿಕ್ ಪಾಂಡ್ಯಾಗೆ ಅಷ್ಟೊಂದು ಹೊಂದಾಣಿಕೆಯಾಗ್ತಾ ಇಲ್ಲ. ಅಂದ್ರೆ, ಹಾರ್ದಿಕ್ ಪಾಂಡ್ಯಾ ಮತ್ತು ಮ್ಯಾನೇಜ್ಮೆಂಟ್​ ಜೊತೆಗೆ ಅಷ್ಟಾಗಿ ಕೋಪರೇಷನ್ ಇಲ್ಲ. ಹಾರ್ದಿಕ್ ಬೇಕಾದಂತೆ ಅಲ್ಲಿ ಎಲ್ಲವೂ ನಡೀತಾ ಇಲ್ಲ. ಸಮ್​​ತಿಂಗ್ ಇಂಟರ್​ನಲ್​ ಪ್ರಾಬ್ಲಂ ಇದೆ. ಹೀಗಾಗಿ ಪಾಂಡ್ಯಾ ಮತ್ತೆ ಮುಂಬೈ ಇಂಡಿಯನ್ಸ್​ಗೆ ಮರಳೋಕೆ ನಿರ್ಧರಿಸಿದ್ದಾರಂತೆ. ಅದ್ರೆ ಈ ಬೆಳವಣಿಗೆಯೇನು ಇದ್ದಕ್ಕಿದ್ದಂತೆ ಆಗಿರೋದಲ್ಲ. ಕಳೆದ ಐಪಿಎಲ್​ ಟೂರ್ನಿ ಬಳಿಕವೇ ಹಾರ್ದಿಕ್ ಪಾಂಡ್ಯ ಮತ್ತು ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ನಡುವೆ ಈ ಡೀಲ್​​ ಬಗ್ಗೆ ಮಾತುಕತೆ ಚಾಲ್ತಿಯಲ್ಲಿತ್ತು. ಇದೀಗ ಗುಜರಾತ್​ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗಳ ಮಧ್ಯೆ ಹಾರ್ದಿಕ್ ಪಾಂಡ್ಯಾರನ್ನ ಟ್ರಾನ್ಸ್​​ಫರ್​ ಮಾಡೋ ಕೊನೆಯ ಹಂತದ ಪ್ರೋಸೀಜರ್​ಗಳು ನಡೀತಾ ಇದೆ. ಪಾಂಡ್ಯಾ ವಿಚಾರವಾಗಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ಮಧ್ಯೆ ಕ್ಯಾಶ್ ಟ್ರೇಡ್ ನಡೆಯಲಿದೆ. ಅಂದ್ರೆ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯಾರ ಫುಲ್ ಸ್ಯಾಲರಿ ಅಮೌಂಟ್​​ನ್ನ ಪಾಂಡ್ಯಾಗೆ ಪೇ ಮಾಡುತ್ತೆ. ಜೊತೆಗೆ ಗುಜರಾತ್​ ಟೈಟಾನ್ಸ್​ಗೆ ಟ್ರಾನ್ಸ್​​ಫರ್ ಫೀಸ್​ನ್ನ ಕೂಡ ನೀಡುತ್ತೆ. ಇನ್ನು ಟ್ರಾನ್ಸ್​ಫರ್​ ಫೀಸ್​​ನಲ್ಲಿ ಶೇಕಡಾ 50ರಷ್ಟು ಹಣ ಹಾರ್ದಿಕ್​ ಪಾಂಡ್ಯಾಗೆ ಕೂಡ ಸಿಗಲಿದೆ. ಹೀಗಾಗಿ ಪಾಂಡ್ಯಾ ಐಪಿಎಲ್​ ಇತಿಹಾಸದಲ್ಲೇ ಅತ್ಯಂತ ಕಾಸ್ಟ್ಲಿ ಪ್ಲೇಯರ್ ಆಗುವ ಸಾಧ್ಯತೆ ಇದೆ. ನಿಮಗೆ ಗೊತ್ತಿರಲಿ,​​ 2015ರಲ್ಲಿ ಐಪಿಎಲ್​​ಗೆ ಡೆಬ್ಯೂ ಮಾಡಿದ ಪಾಂಡ್ಯಾ ಒಟ್ಟು 123 ಮ್ಯಾಚ್​ಗಳನ್ನ ಆಡಿದ್ದಾರೆ. 53 ವಿಕೆಟ್​​ಗಳನ್ನ ಪಡೆದಿದ್ದು, 2309 ರನ್ ಗಳಿಸಿದ್ದಾರೆ. 2015, 2017, 2019 ಮತ್ತು 2020ರಲ್ಲಿ ಪಾಂಡ್ಯಾ ಮುಂಬೈನಲ್ಲಿದ್ದಾಗ ಐಪಿಎಲ್​ ಟ್ರೋಫಿ ಗೆದ್ದಿದ್ರು. ನಂತರ 2022ರಲ್ಲಿ ಗುಜರಾತ್​ ಟೈಟಾನ್ಸ್​ ಕ್ಯಾಪ್ಟನ್​ ಆಗಿಯೂ ಟೈಟಲ್ ಗೆಲ್ತಾರೆ. ಟೋಟಲ್​ 5 ಐಪಿಎಲ್​ ಟ್ರೋಫಿ.

ರೋಹಿತ್ ಶರ್ಮಾ ಗುಜರಾತ್ ಟೈಟಾನ್ಸ್​ ಗೆ ಹೋಗ್ತಾರಾ?

ಯಾವಾಗ ಹಾರ್ದಿಕ್​ ಪಾಂಡ್ಯಾ ಮುಂಬೈ ಇಂಡಿಯನ್ಸ್​​ ಕಮ್​ಬ್ಯಾಕ್​ ಮಾಡ್ತಾರೆ ಅನ್ನೋದು ಗ್ಯಾರಂಟಿಯಾಯ್ತೋ, ಇತ್ತ ರೋಹಿತ್ ಶರ್ಮಾ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಪಾಂಡ್ಯಾ ಮುಂಬೈಗೆ ಬಂದ್ರೆ ರೋಹಿತ್ ಶರ್ಮಾ ಗುಜರಾತ್​ ಟೈಟಾನ್ಸ್ ಸೇರಿಕೊಳ್ತಾರಾ ಅನ್ನೋದು. ಒಂದು ವೇಳೆ ಹಾರ್ದಿಕ್ ಪಾಂಡ್ಯಾ ಮುಂಬೈ ಕ್ಯಾಪ್ಟನ್ ಆದ್ರೆ, ರೋಹಿತ್ ಶರ್ಮಾ ಗುಜರಾತ್ ಟೈಟಾನ್ಸ್ ಕ್ಯಾಪ್ಟನ್ ಆಗಬಹುದು ಅಂತೆಲ್ಲಾ ಸುದ್ದಿಗಳು ಹರಿದಾಡ್ತಿವೆ. ಆದ್ರೆ ಇದು ರಿಯಾಲಿಟಿ ಅಲ್ಲ. ಪಾಂಡ್ಯಾ ಮುಂಬೈಗೆ ಬಂದ್ರೂ ರೋಹಿತ್​​ ಶರ್ಮಾ ಗುಜರಾತ್​ ಟೈಟಾನ್ಸ್ ಜಾಯಿನ್ ಆಗೋದಿಲ್ಲ. ಮುಂಬೈ ಇಂಡಿಯನ್ಸ್​ನಲ್ಲೇ ಕಂಟಿನ್ಯೂ ಆಗ್ತಾರೆ. ಆದ್ರೆ ಇಲ್ಲಿ ಇನ್ನೊಂದು ಟ್ವಿಸ್ಟ್ ಇದೆ. ರೋಹಿತ್​ ಶರ್ಮಾ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗಿಯೇ ಇರ್ತಾರೆ ಅನ್ನೋದು ಇನ್ನೂ ಗ್ಯಾರಂಟಿ ಇಲ್ಲ. ಕ್ಯಾಪ್ಟನ್ಸಿ ಪಟ್ಟ ಹಾರ್ದಿಕ್​ ಪಾಂಡ್ಯಾಗೆ ಒಲಿದ್ರೂ ಆಶ್ಚರ್ಯ ಇಲ್ಲ. ಯಾಕಂದ್ರೆ 2013ರಿಂದ ಅಂದ್ರೆ ಕಳೆದ 10 ವರ್ಷಗಳಿಂದ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗಿದ್ದಾರೆ. ರೋಹಿತ್ ಲೀಡರ್​​ಶಿಪ್​ನಲ್ಲಿ ಮುಂಬೈ ಇಂಡಿಯನ್ಸ್ ಒಟ್ಟು 5 ಬಾರಿ ಟೈಟಲ್ ಗೆದ್ದಿದೆ. ಈಗಲೂ ರೋಹಿತ್​ ಶರ್ಮಾ ದಿ ಬೆಸ್ಟ್ ಕ್ಯಾಪ್ಟನ್. ಹೀಗಿರೋವಾಗ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ರೋಹಿತ್​ ಶರ್ಮಾರನ್ನ ಕ್ಯಾಪ್ಟನ್ಸಿಯಿಂದ ಕೆಳಗಿಳಿಸೋ ನಿರ್ಧಾರ ಕೈಗೊಳ್ಳುತ್ತಾ? ಅದಕ್ಕೆ ಇದು ಸರಿಯಾದ ಟೈಮಾ ಅನ್ನೋದು ಇಲ್ಲಿರುವ ಪ್ರಶ್ನೆ. ಒಂದು ವೇಳೆ ರೋಹಿತ್​ ಬದಲು ಪಾಂಡ್ಯಾಗೆ ಕ್ಯಾಪ್ಟನ್ಸಿ ಕೊಟ್ರೆ ಒಂದು ರೀತಿಯಲ್ಲಿ ರೋಹಿತ್ ಶರ್ಮಾಗೆ ಸೆಟ್​ ಬ್ಯಾಕ್ ಆಗಲಿದೆ. ಯಾಕಂದ್ರೆ, ವರ್ಲ್ಡ್​​ಕಪ್ ಫೈನಲ್​ ಸೋತ ಕಾರಣ ಈಗ ಮುಂಬೈ ಇಂಡಿಯನ್ಸ್​​ ಕೂಡ ಕ್ಯಾಪ್ಟನ್​ ಚೇಂಜ್ ಮಾಡೋ ಮುಂದಾಗಿದೆ ಅನ್ನೋ ಮೆಸೇಜ್ ಪಾಸ್ ಆಗುತ್ತೆ. ಹೀಗಾಗಿ ಈ ಸಂದರ್ಭದಲ್ಲಿ ತನ್ನ ಚಾಂಪಿಯನ್​ ಕ್ಯಾಪ್ಟನ್​​ನನ್ನ ಮುಂಬೈ ಇಂಡಿಯನ್ಸ್ ಬ್ಯಾಕ್​ಅಪ್ ಮಾಡೋದು ಒಳ್ಳೆಯದು. ರೋಹಿತ್​ರನ್ನೇ ಕ್ಯಾಪ್ಟನ್ ಆಗಿ ಕಂಟಿನ್ಯೂ ಮಾಡಿದ್ರೆ, ನಾಯಕನ ಬೆನ್ನಿಗೆ ನಿಂತ ಹಾಗೂ ಆಗುತ್ತೆ. ಜೊತೆಗೆ 2024ರ ವರ್ಲ್ಡ್​​ಕಪ್​ನಲ್ಲಿ ಆಡ್ಬೇಕಾ? ಟೀಂ ಇಂಡಿಯಾವನ್ನ ಲೀಡ್ ಮಾಡಬೇಕಾ ಅನ್ನೋ ಬಗ್ಗೆ ರೋಹಿತ್​ಗೂ ಒಂದು ಕ್ಲ್ಯಾರಿಟಿ ಸಿಗುತ್ತೆ. ಯಾಕಂದ್ರೆ ಮುಂದಿನ ಐಪಿಎಲ್​ ಟೂರ್ನಿ ಬಳಿಕ ಟಿ-20 ವರ್ಲ್ಡ್​​ಕಪ್ ನಡೆಯಲಿದೆ. ಇನ್ನು ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿ ಹೋದ್ರೂ ರೋಹಿತ್ ಶರ್ಮಾ ಏನೂ ಈ ಬಗ್ಗೆ ತಲೆಕೆಡಿಸಿಕೊಳ್ಳೋ ವ್ಯಕ್ತಿಯೇ ಅಲ್ಲ. ಹಾರ್ದಿಕ್ ಪಾಂಡ್ಯಾ ಅಂಡರ್​​ನಲ್ಲೇ ಆಡೋಕೆ ರೋಹಿತ್​ಗಂತೂ ನೋ ಪ್ರಾಬ್ಲಂ. ಈ ಹಿಂದೆ ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಸಚಿನ್​ ತೆಂಡೂಲ್ಕರ್ ಕೂಡ ಐಪಿಎಲ್​​ನಲ್ಲಿ ಆಡಿದ್ರು. ಜೊತೆಗೆ ಫ್ರಾಂಚೈಸಿ ಭವಿಷ್ಯದ ದೃಷ್ಟಿಯಿಂದಲೂ ಬದಲಾವಣೆಗಳನ್ನ ಮಾಡಬೇಕಾಗಿರೋದು ಸಹಜ.

ಶುಬ್ಮನ್ ಗಿಲ್ ಗುಜರಾತ್ ಟೈಟಾನ್ಸ್ ಕ್ಯಾಪ್ಟನ್?

ಇದು ನಿಜಕ್ಕೂ ಇಂಟ್ರೆಸ್ಟಿಂಗ್ ಆಗಿದೆ.. ಗುಜರಾತ್ ಟೈಟಾನ್ಸ್​ನಿಂದ ಹಾರ್ದಿಕ್ ಪಾಂಡ್ಯಾ ಮುಂಬೈಗೆ ಬಂದ್ರೆ ಆಗ ಜಿಟಿಗೆ ಹೊಸ ಕ್ಯಾಪ್ಟನ್​​ನನ್ನ ಸೆಲೆಕ್ಟ್ ಮಾಡಬೇಕಾಗುತ್ತೆ. ಇಲ್ಲಿ ಕ್ಯಾಪ್ಟನ್ಸಿ ಪಟ್ಟಕ್ಕೆ ಪ್ರಮುಖವಾಗಿ 4 ಮಂದಿ ರೇಸ್​ನಲ್ಲಿದ್ದಾರೆ. ಕೇನ್​ ವಿಲಿಯಮ್ಸನ್, ಡೇವಿಡ್ ಮಿಲ್ಲರ್, ರಶೀದ್ ಖಾನ್ ಮತ್ತು ಶುಬ್ಮನ್ ಗಿಲ್. ಹೇಳಿಕೇಳಿ ಕೇನ್ ವಿಲಿಯಮ್ಸನ್ ನ್ಯೂಜಿಲ್ಯಾಂಡ್​​ನ ಅತ್ಯಂತ ಅನುಭವಿ ಕ್ಯಾಪ್ಟನ್. ವನ್ ಆಫ್ ದಿ ಬೆಸ್ಟ್ ಪರ್ಸನ್ ಟು ಲೀಡ್​ ದ ಟೀಮ್.. ದಕ್ಷಿಣ ಆಫ್ರಿಕಾದ ಡೇವಿಡ್​ ಮಿಲ್ಲರ್​ಗೂ ತಂಡವನ್ನ ಮುನ್ನಡೆಸೋ ಕೆಪಾಸಿಟಿ ಇದೆ. ಇನ್ನು ಅಫ್ಘಾನಿಸ್ತಾನದ ರಶೀದ್​ ಖಾನ್​​ರಲ್ಲೂ ಒಬ್ಬ ನಾಯಕ ಇದ್ದಾನೆ. ಅವರು ಕೂಡ ಈ ಪೊಸೀಶನ್​ ಫಿಟ್. ಮತ್ತೊಬ್ಬ ಆಪ್ಷನ್ ಶುಬ್ಮನ್ ಗಿಲ್. ಟೀಂ ಇಂಡಿಯಾದ ಭವಿಷ್ಯ ಶುಬ್ಮನ್ ಗಿಲ್ ಕೈಯಲ್ಲಿದೆ. ಮುಂದಿನ ಕೆಲ ವರ್ಷಗಳಲ್ಲಿ ಶುಬ್ಮನ್ ಗಿಲ್ ಟೀಂ ಇಂಡಿಯಾ ಕ್ಯಾಪ್ಟನ್ ಆಗಬಹುದು. ಈಗ ಐಪಿಎಲ್​ನಲ್ಲಿ ಗುಜರಾತ್ ಕ್ಯಾಪ್ಟನ್​ ಮಾಡಿದ್ರೆ ಇಲ್ಲೊಂದು ನಾಯಕತ್ವದ ಟೆಸ್ಟ್ ನಡೆಸಿದಂತೆಯೂ ಆಗುತ್ತೆ. ಗುಜರಾತ್​ ಟೈಟಾನ್ಸ್​ಗೂ ಒಬ್ಬ ಒಳ್ಳೆಯ ಕ್ಯಾಪ್ಟನ್​​ ಸಿಕ್ಕಿದ್ರೂ ಸಿಗಬಹುದು.

Sulekha