ಹಾರ್ದಿಕ್ ಪಾಂಡ್ಯ ಬೇಡವಾಗಿದ್ದೇಕೆ? – ನತಾಶಾ ಸುತ್ತಾಟ ಮೊದಲೇ ಗೊತ್ತಿತ್ತಾ?
ಸೆಲೆಬ್ರಿಟಿ ಜಗಳ ಮುದ್ದು ಕಂದ ಏಕಾಂಗಿ..!
ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಾ ಜೀವನದಲ್ಲಿ ಎಲ್ಲವೂ ಫಟಾಫಟ್ ಅಂತಾ ಸಿಕ್ಕಿಬಿಟ್ಟಿತ್ತು. ಒಂದು ವರ್ಷ ಡೇಟಿಂಗ್.. ಏಳು ತಿಂಗಳಲ್ಲಿ ಎಂಗೇಟ್ಮೆಂಟ್. ಇದರ ಮಧ್ಯೆ ಪ್ರೇಯಸಿಯ ಪ್ರೆಗ್ನೆಂಟ್, ನಂತರ ಮಗು. ಎಷ್ಟು ಬೇಗ ಪಾಂಡ್ಯ ಎಲ್ಲವನ್ನೂ ಪಡ್ಕೊಂಡ್ರೋ ಅಷ್ಟೇ ಬೇಗ ಜೀವನದಿಂದ ಎಲ್ಲವನ್ನೂ ಕಳೆದುಕೊಳ್ತಿದ್ದಾರೆ. ಇದನ್ನ ಬ್ಯಾಡ್ ಲಕ್ ಅನ್ಬೇಕಾ, ಇಲ್ಲಾ ಪಾಂಡ್ಯಾಗೆ ಟೈಮೇ ಕೈ ಕೊಡ್ತಾ ಅನ್ಬೇಕೋ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಅಂತಾ ಹೇಳ್ತಾರಲ್ಲ. ಹಾಗೇ ಇದೀಗ ಹಾರ್ದಿಕ್ ಪಾಂಡ್ಯಾ ನತಾಶಾ ಇಬ್ಬರು ಕೂಡಾ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದರೆ, ಪುಟ್ಟ ಕಂದ ಏಕಾಂಗಿಯಾಗಿ ಕೊರಗುತ್ತಿದ್ದಾನೆ. ಸ್ನೇಹಿತರೇ, ಈ ಸೆಲೆಬ್ರಿಟಿ ದಂಪತಿ ಮಗನ ಪಾಡೇನು?, ನತಾಶಾನ ಪ್ರೀತಿಯ ಕಥೆಯೇನು? ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಹಾಜರಿ ಎಷ್ಟು ಇಂಪಾರ್ಟೆಂಟ್ ಅನ್ನೋ ಮಾಹಿತಿ ಇಲ್ಲಿದೆ.
ಅದು 2022ರ ಟಿ20 ವಿಶ್ವಕಪ್. ಆವತ್ತು ಟೀಮ್ ಇಂಡಿಯಾಗೆ ಗಟ್ಟಿಯಾಗಿ ನೆಲೆಯೂರಲು ಒಬ್ಬ ಆಲ್‌ರೌಂಡರ್ ಸಿಕ್ಕಿದ್ದ. ಆತನೇ ಹಾರ್ದಿಕ್ ಪಾಂಡ್ಯ. ಪಾಕಿಸ್ತಾನ ವಿರುದ್ಧ ಆಡಿದ್ದ ಆ ಇನ್ನಿಂಗ್ಸ್ ಫ್ಯಾನ್ಸ್ ಮರೆಯಲು ಸಾಧ್ಯವೇ ಇಲ್ಲ. ಅವತ್ತು ವಿರಾಟ್ ಕೊಹ್ಲಿ ಜೊತೆ ಹಾರ್ದಿಕ್ ಪಾಂಡ್ಯ ನೆಲಕಚ್ಚಿ ನಿಲ್ಲದೇ ಹೋಗಿದ್ದಿದ್ರೆ, ಪಾಕಿಸ್ತಾನದ ಮುಂದೆ ಭಾರತ ಸೋಲ್ತಾ ಇತ್ತು. ಅದ್ಭುತ ಕ್ರಿಕೆಟಿಗ, ಅಸಾಮಾನ್ಯ ಪ್ರತಿಭಾವಂತ ಈ ಪಾಂಡ್ಯ. ಆದ್ರೆ, ಹಾರ್ದಿಕ್ ಪಾಂಡ್ಯಾಗೆ ಇರೋದು ಅದೊಂದೇ ಸಮಸ್ಯೆ. ಕಾಲು ನೆಲದ ಮೇಲೆ ನಿಲ್ಲೋದೇ ಇಲ್ಲ. ಅಲ್ಪನಿಗೆ ಐಶ್ವರ್ಯ ಬಂದ್ರೆ ಮಧ್ಯರಾತ್ರಿಯಲ್ಲಿ ಕೊಡೆ ಹಿಡಿದ್ರು ಅನ್ನೋ ಗಾದೆ ಇದ್ಯಲ್ಲಾ.. ಈ ಪಾಂಡ್ಯ ಕೂಡಾ ಅಂಥಾ ಕೆಟಗರಿಗೆ ಸೇರಿದ ಮನುಷ್ಯ. ಒಂದ್ವೇಳೆ ತನ್ನಿಂದಲೇ ಟೀಮ್ ಗೆಲ್ಲೋದು ಅಂತಾ ಗೊತ್ತಾಗ್ತಿದ್ದಂಗೆ ಅದೆಲ್ಲಿರುತ್ತೋ ಆ ಅಹಂಕಾರ. ಸೀದಾ ನೆತ್ತಿ ಏರಿ, ಕಾಲು ನೆಲದಲ್ಲಿ ನಿಲ್ಲೋಕೂ ಆ ಅಹಂಕಾರ ಬಿಡಲ್ಲ. ಇನ್ನು ಸೀದಾ ಹಾರ್ದಿಕ್ ಪರ್ಸನಲ್ ವಿಚಾರಕ್ಕೆ ಬರೋಣ. ಹಾರ್ದಿಕ್ ಪಾಂಡ್ಯನ ವೈಯಕ್ತಿಕ ಜೀವನದಲ್ಲಿ ಈಗ ದೊಡ್ಡ ಬಿರುಗಾಳಿಯೇ ಎದ್ದು ಬಿಟ್ಟಿದೆ. ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಆಡೋದಕ್ಕೆ ಎರಡು ದಿನಗಳ ಹಿಂದೆಯೇ ಅಮೆರಿಕಕ್ಕೆ ಹೋಗಿದೆ. ಆದ್ರೆ ತಂಡದ ಜೊತೆ ಹೋಗಬೇಕಿದ್ದ ಉಪನಾಯಕ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಕ್ಯಾಂಪ್ ಗೆ ಮೊದಲ ಮೂರು ದಿನ ಬರಲೇ ಇಲ್ಲ. ಏಕಾಂಗಿಯಾಗಿ ಫಾರಿನ್ ಟೂರ್ ಗೆ ಹೋಗಿದ್ದಾನೆ. ಯಾಕಂದ್ರೆ, ಇಂಡಿಯಾದಲ್ಲೇ ಇದ್ರೆ ಪತ್ನಿ ಎಬ್ಬಿಸಿದ ರಾಡಿ ತನ್ನ ಮೇಲೆ ರಾಚಿದ್ರೆ ಎಂಬ ಭಯ. ತನ್ನ ಜೀವನದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಬಗ್ಗೆ ಗೊತ್ತಿದ್ರೂ ಕೂಡಾ ಹಾರ್ದಿಕ್ ಫಾರಿನ್ ಟ್ರಿಪ್ ನಲ್ಲಿ ಎಂಜಾಯ್ ಮಾಡಿದ್ರು.. ಅದು ಕೂಡಾ ಪತ್ನಿ ಇನ್ನೊಬ್ಬನ ಜೊತೆ ಸುತ್ತಾಡೋ ಸಾಕ್ಷಿ ಸಿಕ್ಕಿದ್ರೂ ಕೂಡಾ ಈ ರೀತಿ ಇರಲು ಹಾರ್ದಿಕ್ ಪಾಂಡ್ಯಾಗೆ ಮಾತ್ರ ಸಾಧ್ಯ.
ಇನ್ನು ನತಾಶಾ ಯಾರು ಅಂದ್ರೆ ಸರ್ಬಿಯಾ ಮೂಲದವರು. ಮಾಡಲಿಂಗ್ ಕ್ಷೇತ್ರದಲ್ಲಿ ಅನೇಕ ಸೆಲೆಬ್ರಿಟಿ ಸುಂದರಿಯರನ್ನ ಮೀರಿಸಿದ್ದ ಚೆಲುವೆ. ಬಾಲಿವುಡ್ ಸ್ಯಾಂಡಲ್‌ವುಡ್‌ನಲ್ಲೂ ನಟಿಸಿದ ಬ್ಯೂಟಿಕ್ವೀನ್. ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ನೈಟ್‌ಕ್ಲಬ್‌ವೊಂದರಲ್ಲಿ ಭೇಟಿಯಾಗಿದ್ದರು. ಅಲ್ಲಿ ಇಬ್ಬರಿಗೂ ಪರಿಚಯವಾಗಿದೆ. ಪರಿಚಯ ಕೆಲವೇ ದಿನಗಳಲ್ಲಿ ಪ್ರೇಮವಾಗಿ ಬದಲಾಗಿತ್ತು. 2019ರಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ನಾನು ಬೆಸ್ಟ್ ಫ್ರೆಂಡ್ ಎಂದು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಬರೆದುಕೊಳ್ಳುವ ಮೂಲಕ ಪ್ರೀತಿಯ ಸುಳಿವನ್ನು ಅಭಿಮಾನಿಗಳಿಗೆ ನೀಡಿದ್ದರು. ಇದಾಗಿ ಒಂದು ವರ್ಷದ ಕಳೆದ ನಂತರ ಹೊಸ ವರ್ಷದ ಮೊದಲ ದಿನ ಅಂದ್ರೆ 2020 ಜನವರಿ 1ರಂದು ನ್ಯೂ ಇಯರ್ ಪಾರ್ಟಿಯಲ್ಲಿ ಗೆಳತಿಯ ಮುಂದೆ ಮೊಳಕಾಲೂರಿ ಪ್ರಪೋಸ್ ಮಾಡಿದ್ದರು. ರೊಮ್ಯಾಂಟಿಕ್ ಸಾಲು ಮೂಲಕ ಪ್ರಪೋಸ್ ಮಾಡಿದ್ದ ಕ್ಷಣಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು ಹಾರ್ದಿಕ್ ಪಾಂಡ್ಯ. “ಮೇ ತೇರಾ, ತು ಮೇರಿ, ಜಾನೇ ಸಾರಾ ಹಿಂದೂಸ್ತಾನ್” ನಾನು ನಿನ್ನವ, ನೀನು ನನ್ನವಳು, ಈ ವಿಷಯ ಹಿಂದೂಸ್ತಾನಕ್ಕೆ ಗೊತ್ತಾಗಲಿ ಎಂಬ ಸಾಲು ಬರೆದುಕೊಂಡಿದ್ದರು. ಈ ಮೂಲಕ ನತಾಶಾ ಜೊತೆಗಿನ ಪ್ರೇಮ ಕಥನವನ್ನು ಜಗಜ್ಜಾಹೀರು ಮಾಡಿದ್ದರು. ಮದುವೆಗೂ ಮುನ್ನ ಅಂದ್ರೆ ಪ್ರಪೋಸ್ ಮಾಡಿದ ವರ್ಷ ಮೇ 31ರಂದು ನತಾಶಾ ಗರ್ಭಿಣಿ ಎಂಬ ವಿಷಯವನ್ನು ಪಾಂಡ್ಯ ಹೇಳಿಕೊಂಡಿದ್ದರು. ಜುಲೈ 30, 2020ರಂದು ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಜೀವನಕ್ಕೆ ಮುದ್ದಾದ ಗಂಡು ಮಗುವಿನ ಆಗಮನವಾಗಿತ್ತು. ಮಗನ ಆಗಮನವನ್ನು ಸಂತೋಷದಿಂದ ಹಾರ್ದಿಕ್ ಪಾಂಡ್ಯ ಎಲ್ಲರ ಜೊತೆ ಹಂಚಿಕೊಂಡಿದ್ದರು. ನಾಲ್ಕು ವರ್ಷ ಜೊತೆಯಾಗಿ ಜೀವನ ನಡೆಸಿದ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಎರಡು ವರ್ಷದ ಮಗ ಆಗಸ್ತ್ಯನ ಸಮ್ಮುಖದಲ್ಲಿ 14 ಫೆಬ್ರವರಿ 2023ರಂದು ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಉದಯಪುರದಲ್ಲಿ ಮದುವೆಯಾಗಿದ್ದರು. ಈ ಮದುವೆಗೆ ಎರಡು ಕುಟುಂಬಸ್ಥರು ಮತ್ತು ಆಪ್ತ ಬಳಗವನ್ನು ಮಾತ್ರ ಆಹ್ವಾನಿಸಲಾಗಿತ್ತು. ಪ್ರಮುಖ ಗಣ್ಯರಿಗೂ ಮದುವೆಗೆ ಆಹ್ವಾನ ನೀಡಲಾಗಿತ್ತು.
ಮದುವೆ ದಿನ ಹಾರ್ದಿಕ್ ಪಾಂಡ್ಯ ನಗುವೇ ಹೈಲೆಟ್ ಆಗಿತ್ತು. ನಗು, ಕುಣಿತ, ಸಂಭ್ರಮ ಫ್ಯಾನ್ಸ್ ಗೂ ಇಷ್ಟವಾಗಿತ್ತು. ಅಹಂಕಾರಿ ಪಾಂಡ್ಯ ಅಂತಾ ಕರೆಸಿಕೊಂಡಿದ್ದ ಹಾರ್ದಿಕ್, ಫ್ಯಾಮಿಲಿ ಮ್ಯಾನ್ ಪಾಂಡ್ಯ ಅಂತಾ ಕರೆಸಿಕೊಳ್ಳಲು ಇದೇ ನಗುವೇ ಮೂಲವಾಗಿತ್ತು. ಜೊತೆಗೆ ಪ್ರೀತಿಯನ್ನು ಗೆದ್ದೆ ಎಂಬ ಸಂತೋಷ ಮುಖದಲ್ಲಿ ಕುಣಿದಾಡುತ್ತಿತ್ತು. ಆದರೆ, ಈಗ ಪಾಂಡ್ಯ ಸಂಸಾರದಲ್ಲಿ ಬಿರುಗಾಳಿಯೆದ್ದಿದೆ. ಪಾಂಡ್ಯ ಮತ್ತು ನತಾಶಾ ನಾನೊಂದು ತೀರ ನೀನೊಂದು ತೀರ ಅಂತಾ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದಾರೆ. ಯಾಕೆಂದ್ರೆ, ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಹೊರಬಿದ್ದ ಬೆನ್ನಲ್ಲೇ ಹಾರ್ದಿಕ್ ಏಕಾಂಗಿಯಾಗಿ ವಿದೇಶಿ ಪ್ರವಾಸ ಮಾಡಿದ್ರು.. ಇದೀಗ ಟಿ 20 ವಿಶ್ವಕಪ್ ಗೂ ಪಾಂಡ್ಯ ಅಭ್ಯಾಸ ಮಾಡ್ತಾ ಇದ್ದಾರೆ. ಆದ್ರೆ ಇತ್ತ ನತಾಶ ಬಾಯ್ಫ್ರೆಂಡ್ ಅಲೆಕ್ಸಾಂಡರ್ ಅಲೆಕ್ಸ್ಲಿಕ್ ಜೊತೆ ಸುತ್ತುತ್ತಿದ್ದಾರೆ. ನತಾಶಾ, ಅಲೆಕ್ಸಾಂಡರ್ ಜೊತೆ ಫುಲ್ ಸ್ಟೈಲಾಗಿ ಹೊರಗಡೆ ಡೇಟ್ ಎಂಜಾಯ್ ಮಾಡುತ್ತಿರುವ ವಿಡಿಯೋ ಕೂಡಾ ವೈರಲ್ ಆಗ್ತಿದೆ. ಈಗ ವಿಷಯ ಇರೋದು ಗಂಡ ಹೆಂಡತಿ ಜಗಳದಲ್ಲಿ ಮಗುವಿನ ಪಾಡೇನು ಅನ್ನೋದು. ಇವರಿಬ್ಬರ ಜಗಳಕ್ಕೆ ಪುತ್ರ ಅಗಸ್ತ್ಯ ಏಕಾಂಗಿಯಾಗಿದ್ದಾನೆ. ಆದರೆ ಅಗಸ್ತ್ಯನಿಗೆ ಪಾಂಡ್ಯ ಸಹೋದರ ಕ್ರುನಾಲ್ ಪಾಂಡ್ಯ ದಂಪತಿ ಸಾಥ್ ನೀಡಿದ್ದಾರೆ. ಕ್ರುನಾಲ್ ಪಾಂಡ್ಯ ಹಾಗೂ ಪತ್ನಿ ಪಂಕುರಿ ಶರ್ಮಾ ಇದೀಗ ಹಾರ್ದಿಕ್ ಪುತ್ರನ ಜೊತೆ ಕಾಲ ಕಳೆಯುತ್ತಿದ್ದಾರೆ. ಈ ಮೂಲಕ ಹಾರ್ದಿಕ್ ಪುತ್ರನನ್ನು ಏಕಾಂಗಿತನದಿಂದ ದೂರವಿಡುವ ಪ್ರಯತ್ನ ಮಾಡಿದ್ದಾರೆ.
ಒಂದೆಡೆ ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ತನ್ನ ಫಾರ್ಮ್ ಸಾಬೀತು ಪಡಿಸಲೇಬೇಕಾದ ಅನಿವಾರ್ಯತೆಯಿದೆ. ಇದ್ರ ಮಧ್ಯೆ ಐಪಿಎಲ್ ನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಜೊತೆ ಮೂಡಿದ ಮುನಿಸನ್ನು ಸರಿ ಮಾಡಿಕೊಳ್ಳಬೇಕಿದೆ. ಆಟ ಆಡುವುದರ ಜೊತೆಗೆ ಕ್ಯಾಪ್ಟನ್ ಜೊತೆ ಹೊಂದಿಕೊಳ್ಳಲೇಬೇಕಿದೆ. ಇದ್ರ ಮಧ್ಯೆ ಸಂಸಾರ ಕೂಡಾ ಹಳಿ ತಪ್ಪುತ್ತಿದೆ. ಇವೆಲ್ಲವನ್ನೂ ಹಾರ್ದಿಕ್ ಪಾಂಡ್ಯ ಹೇಗೆ ನಿಭಾಯಿಸ್ತಾರೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.