PBKSಗೆ ಪಾಂಡ್ಯ.. MIಗೆ ಅರ್ಶದೀಪ್ – ₹18 ಕೋಟಿ ಡೀಲ್ ಇಂಪ್ಯಾಕ್ಟ್ ಏನು?
RCB ಕ್ಯಾಂಪ್ ನಲ್ಲಿ ಸೈಲೆನ್ಸ್ ಯಾಕೆ?

2027ರ ಐಪಿಎಲ್‌ಗೆ ಸಿದ್ಧವಾಗ್ತಿರೋ ಫ್ರಾಂಚೈಸಿಗಳಲ್ಲಿ ಈಗ ಹೈಪ್ರೊಫೈಲ್ ಸ್ವ್ಯಾಪ್ ಡೀಲ್ ಆಗಿದೆ. ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಇಬ್ಬರು ಬಿಗ್ ಸ್ಟಾರ್ಗಳು ಎಕ್ಸ್ಚೇಂಜ್ ಆಗಿದ್ದಾರೆ. ಇಬ್ಬರೂ ಕೂಡ ಟೀಂ ಇಂಡಿಯಾ ಪ್ಲೇಯರ್ಗಳೇ ಆಗಿದ್ದು ಈ ಡೀಲ್ನಿಂದ ಎರಡೂ ತಂಡಗಳಲ್ಲಿ ಮೇಜರ್ ಚೇಂಜಸ್ ಆಗಲಿದೆ. ಌಂಡ್ ಇನ್ಮುಂದೆ ಹತ್ತಲ್ಲ 12 ತಂಡಗಳ ನಡುವೆ ಟ್ರೋಫಿ ಕದನ ನಡೆಯಲಿದೆ.
ಇದನ್ನೂ ಓದಿ : ಶ್ರೇಯಸ್ ಗೆ ಶುರು ಅಸಲಿ TASK – ಗಿಲ್, ಕೆಎಲ್ ಇಲ್ಲದೆ ಗೆಲ್ಲಿಸಿಕೊಡ್ತಾರಾ?
2027ರ ಐಪಿಎಲ್ಗಾಗಿ ಡಿಸೆಂಬರ್ 16ರಂದು ಮಿನಿ ಆಕ್ಷನ್ ನಡೆಯಲಿದೆ. ಇದಕ್ಕಾಗಿ ಫ್ರಾಂಚೈಸಿಗಳು ರಿಲೀಸ್ ಮತ್ತು ರಿಟೇನ್ ಲಿಸ್ಟ್ ಅನೌನ್ಸ್ ಮಾಡಲು ನವೆಂಬರ್ 17ರ ಡೆಡ್ಲೈನ್ ನೀಡಲಾಗಿದೆ. ಸೋ ಮಿನಿ ಹರಾಜಿಗೆ ಹೋಗೋ ಮೊದಲೇ ತಂಡಗಳಲ್ಲಿ ಕೆಲ ಆಟಗಾರರ ಸ್ವ್ಯಾಪ್ ಡೀಲ್ ಆಗ್ತಿದೆ. ಪಂಜಾಬ್ ಮತ್ತು ಮುಂಬೈ ನಡುವೆ ಐಪಿಎಲ್ ಇತಿಹಾಸದ ಅತ್ಯಂತ ದೊಡ್ಡ ಟ್ರೇಡ್‌ಗಳು ನಡೆದಿವೆ.
ಪಂಜಾಬ್ ಗೆ ಪಾಂಡ್ಯ.. ಮುಂಬೈಗೆ ಅರ್ಶದೀಪ್ ಸಿಂಗ್!
2027ರ ಐಪಿಎಲ್ಗೂ ಮುನ್ನ ಹಾರ್ದಿಕ್ ಪಾಂಡ್ಯ ಮುಂಬೈ ಕ್ಯಾಂಪ್ನಿಂದ ಹೊರಬರ್ತಾರೆ ಅನ್ನೋದೇ ಹಾಟ್ ಟಾಪಿಕ್ ಆಗಿತ್ತು. ಌಂಡ್ ಈಗ ಅದು ಕನ್ಫರ್ಮ್ ಕೂಡ ಆಗಿದೆ. ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ಗೆ ಟ್ರೇಡ್ ಡೀಲ್ ಆಗಿದ್ರೆ ಅರ್ಶದೀಪ್ ಸಿಂಗ್ ಪಂಜಾಬ್ನಿಂದ ಮುಂಬೈಗೆ ಬಂದಿದ್ದಾರೆ. ಪಾಂಡ್ಯ ಅವರ ಹಿಂದಿನ ಸಂಭಾವನೆ 16.35 ಕೋಟಿ ರೂಪಾಯಿಗಳಾಗಿದ್ದು, ಈಗ ಅದು 18 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಇತ್ತ, ಅರ್ಷದೀಪ್ ಸಿಂಗ್ ಅವರು 18 ಕೋಟಿ ರೂಪಾಯಿಗಳ ಅದೇ ಮೌಲ್ಯದೊಂದಿಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿದ್ದಾರೆ. ಸೋ ಅಲ್ಲಿಗೆ ಇಬ್ಬರೂ ಕೂಡ ತಲಾ 18 ಕೋಟಿ ಸಂಭಾವನೆ ಪಡೆಯಲಿದ್ದಾರೆ. 2015ರಲ್ಲಿ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ಸೇರಿದ ಪಾಂಡ್ಯ, 2015, 2017, 2019 ಮತ್ತು 2020ರಲ್ಲಿ ತಂಡವು ಪ್ರಶಸ್ತಿ ಗೆಲ್ಲುವಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. 2024ರಲ್ಲಿ ಮತ್ತೆ ಮುಂಬೈಗೆ ಮರಳಿದ ಪಾಂಡ್ಯ ಕಳೆದ ಮೂರು ಆವೃತ್ತಿಗಳಲ್ಲಿ ಕ್ಯಾಪ್ಟನ್ ಆಗಿದ್ರು. ಮತ್ತೊಂದೆಡೆ, ಅರ್ಷದೀಪ್ ಸಿಂಗ್ ಎಂಟು ಸೀಸನ್‌ಗಳ ಕಾಲ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದರು. 2019ರಲ್ಲಿ ಪಂಜಾಬ್ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಅರ್ಶದೀಪ್ 96 ಐಪಿಎಲ್ ಪಂದ್ಯಗಳಲ್ಲಿ 111 ವಿಕೆಟ್‌ಗಳನ್ನು ಪಡೆದಿದ್ದಾರೆ. ಌಂಡ್ ಪಂಜಾಬ್ ಕಿಂಗ್ಸ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ರು. ಬಟ್ ಈಗ ಇಬ್ಬರೂ ಕೂರ ತಮ್ಮ ಲೆಗೆಸಿ ತಂಡಗಳಿಗೆ ಗುಡ್ ಬೈ ಹೇಳಿ ಹೊಸ ಜೆರ್ಸಿ ತೊಡಲು ರೆಡಿಯಾಗಿದ್ದಾರೆ. ಇಬ್ರಿಬ್ಬರ ಅದಲು ಬದಲು ಆಟದಿಂದ ಆಯಾ ತಂಡಗಳ ಸ್ಟ್ರೆಂಥ್ ಕೂಡ ಹೆಚ್ಚಾಗಲಿದೆ. ಜಸ್ಪ್ರೀತ್ ಬುಮ್ರಾ ಜೊತೆ ಅರ್ಶದೀಪ್ ಸೇರಿದ್ರೆ ಮುಂಬೈ ಬೌಲಿಂಗ್ ಮತ್ತಷ್ಟು ಡೇಂಜರಸ್ ಆಗಲಿದೆ. ಹಾಗೇ ಪಂಜಾಬ್ನಲ್ಲಿ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿ ಇಲ್ಲದೆ ಫ್ರೀಯಾಗಿ ಆಡೋದ್ರಿಂದ ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡ್ರಲ್ಲೂ ಬಿಗ್ ಇಂಪ್ಯಾಕ್ಟ್ ಮಾಡಬಹುದು.
ಅದಲು-ಬದಲು ಆಟ!
ರಿಷಭ್ ಪಂತ್ (₹15 ಕೋಟಿ) ಲಕ್ನೋ ತಂಡದಿಂದ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್
ಕುಲ್ದೀಪ್ ಯಾದವ್ (₹13.5 ಕೋಟಿ) ಡೆಲ್ಲಿ ಕ್ಯಾಪಿಟಲ್ಸ್ ನಿಂದ ಲಕ್ನೋ
ಟಿ. ನಟರಾಜನ್ (₹5 ಕೋಟಿ ) ಡೆಲ್ಲಿ ತಂಡದಿಂದ ಹೈದರಾಬಾದ್ ಗೆ ವಾಪಸ್
ಜೀಶಾನ್ ಅನ್ಸಾರಿ (₹40 ಲಕ್ಷ) ಹೈದರಾಬಾದ್ ತಂಡದಿಂದ ಡೆಲ್ಲಿ ಕ್ಯಾಪಿಟಲ್ಸ್
ಸಿಎಸ್ ಕೆಗೆ ಲಿಯಾಮ್ ಲಿವಿಂಗ್‌ಸ್ಟೋನ್ (₹6 ಕೋಟಿ), ಜ್ಯಾಕ್ ಎಡ್ವರ್ಡ್ಸ್ (₹3 ಕೋಟಿ)
ಹೈದ್ರಾಬಾದ್ ಗೆ ಖಲೀಲ್ ಅಹ್ಮದ್ (₹4.8 ಕೋಟಿ), ನಾಥನ್ ಎಲ್ಲಿಸ್ (₹2 ಕೋಟಿ)
ಸೋ ಇಷ್ಟು ಆಟಗಾರರು ಮಿನಿ ಆಕ್ಷನ್ಗೂ ಮೊದಲೇ ಫ್ರಾಂಚೈಸಿಗಳಿಂದ ಟ್ರೇಡ್ ಡೀಲ್ ಆಗಿದ್ದಾರೆ. ಸೋ 8 ಫ್ರಾಂಚೈಸಿಗಳಲ್ಲಿ ಕೆಲವೊಂದು ಬದಲಾವಣೆಗಳನ್ನ ಮಾಡಿದ್ದಾರೆ. ಆದ್ರೆ 2026ರ ಐಪಿಎಲ್ನ ಫೈನಲಿಸ್ಟ್ಗಳಾದ ಆರ್ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಲ್ಲಿ ಇದುವರೆಗೆ ಯಾರನ್ನೂ ಟ್ರೇಡ್ ಮಾಡಿಲ್ಲ. ರಾಜಸ್ಥಾನ ತಂಡದಲ್ಲಿ ಕೆಲವೊಂದು ಬದಲಾವಣೆ ಮಾತುಗಳು ಕೇಳಿ ಬರ್ತಿದ್ರೂ ಇನ್ನೂ ಫೈನಲ್ ಆಗಿದೆ. ಈ ಮೂರು ತಂಡಗಳು ಡೈರೆಕ್ಟ್ ಮಿನಿ ಆಕ್ಷನ್ಗೆ ಆಟಗಾರರನ್ನ ರಿಲೀಸ್ ಮಾಡಿ ಅಲ್ಲಿಂದಲೇ ತಂಡಕ್ಕೆ ಬೇಕಾದ ಪ್ಲೇಯರ್ಗಳನ್ನ ಪಿಕ್ ಮಾಡೋಕೆ ಮುಂದಾಗಿದ್ದಾರೆ. ಇದೆಲ್ಲದ್ರ ನಡುವೆ ಐಪಿಎಲ್ ಇನ್ನಷ್ಟು ದೊಡ್ಡ ಲೀಗ್ ಆಗೋಕೆ ಹೊರಟಿದೆ.
ಐಪಿಎಲ್ ಗೆ ಇನ್ನೂ ಎರಡು ಹೊಸ ತಂಡಗಳ ಸೇರ್ಪಡೆಗೆ ಸಿದ್ಧತೆ!
ಪ್ರಸ್ತುತ ವಿಶ್ವದ ಶ್ರೀಮಂತ ಲೀಗ್ ಆಗಿರೋ ಐಪಿಎಲ್‌ನಲ್ಲಿ 10 ತಂಡಗಳು ಟ್ರೋಫಿಗಾಗಿ ಫೈಟ್ ಮಾಡ್ತಿವೆ. ಆದ್ರೆ ಈಗ ಇನ್ನೂ ಎರಡು ಹೊಸ ತಂಡಗಳ ಸೇರ್ಪಡೆಗೆ ಪ್ಲ್ಯಾನ್ ನಡೀತಿದೆ. 2028ರ ಸೀಸನ್ ವೇಳೆಗೆ ಐಪಿಎಲ್ ತಂಡಗಳ ಸಂಖ್ಯೆಯನ್ನು 10 ರಿಂದ 12 ಕ್ಕೆ ಏರಿಸಲು ಬಿಸಿಸಿಐ ಯೋಜನೆ ಸಿದ್ಧಪಡಿಸಿದೆ. 2022 ರಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ಸೇರ್ಪಡೆಯಿಂದ ಬಿಸಿಸಿಐಗೆ ಕೋಟ್ಯಂತರ ರೂಪಾಯಿ ಆದಾಯ ಹರಿದುಬರುತ್ತಿದೆ. ಈಗ ಸೇರ್ಪಡೆಯಾಗಲಿರುವ ಎರಡು ಹೊಸ ತಂಡಗಳ ಮೌಲ್ಯವು ತಲಾ 1 ಬಿಲಿಯನ್ ಡಾಲರ್ ಅಂದಾಜು ₹8,400 ಕೋಟಿಗೂ ಜಾಸ್ತಿ ಎನ್ನಲಾಗಿದೆ. ಹೀಗಾಗಿ ಎರಡು ನಗರಗಳು ರೇಸ್ನಲ್ಲಿವೆ. ಒಂದು ಪುಣೆ ಇನ್ನೊಂದು ವಡೋದರಾ. ಪುಣೆ ನಗರವು ಈಗಾಗಲೇ ಈ ಹಿಂದೆ ಐಪಿಎಲ್‌ನಲ್ಲಿ ‘ಪುಣೆ ವಾರಿಯರ್ಸ್ ಇಂಡಿಯಾ’ ಮತ್ತು ‘ರೈಸಿಂಗ್ ಪುಣೆ ಸೂಪರ್‌ಜೈಂಟ್’ ತಂಡಗಳ ಮೂಲಕ ಭಾಗವಹಿಸಿದ ಅನುಭವ ಇದೆ. ಗುಜರಾತ್ನ ವಡೋದರಾ ದೊಡ್ಡ ಕ್ರೀಡಾ ಹಬ್ ಆಗಿ ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ ವಡೋದರಾ ರೇಸ್‌ನಲ್ಲಿದೆ. ಇಲ್ಲಿ ಸದ್ಯದಲ್ಲೇ ಅತ್ಯಾಧುನಿಕ ಅಂತರರಾಷ್ಟ್ರೀಯ ಕ್ರೀಡಾಂಗಣವು ಸಿದ್ಧಗೊಳ್ಳುತ್ತಿದೆ. ಹೀಗಾಗಿ ಈ ಎರಡು ನಗರಗಳು 2028ರ ಐಪಿಎಲ್‌ಗೆ ಸೇರ್ಪಡೆಯಾಗೋ ಸಾಧ್ಯತೆಗಳಿವೆ. ಒಟ್ನಲ್ಲಿ 20ನೇ ಆವೃತ್ತಿಯ ಐಪಿಎಲ್ ಹಬ್ಬಕ್ಕೆ ಸಿದ್ಧತೆಗಳು ಜೋರಾಗಿದೆ. ಟ್ರೇಡ್ ಡೀಲ್ಗಳ ನಡುವೆ ರಿಲೀಸ್ ಮತ್ತು ರಿಟೆನ್ಷನ್ ಪಟ್ಟಿಗಳೂ ಫೈನಲ್ ಆಗ್ತಿವೆ.

ನೋಡಿರಿ

