HAPPY RETIREMET ರಾಹುಲ್ – ಸರ್ಫರಾಜ್, ಪಂತ್ ಓಕೆ.. KL ಡ್ರಾಪ್?
ಕನ್ನಡಿಗನ ಮೇಲೆ ಕನ್ನಡಿಗರೇ ಸಿಟ್ಟಾಗಿದ್ದೇಕೆ?

HAPPY RETIREMET ರಾಹುಲ್ – ಸರ್ಫರಾಜ್, ಪಂತ್ ಓಕೆ.. KL ಡ್ರಾಪ್?ಕನ್ನಡಿಗನ ಮೇಲೆ ಕನ್ನಡಿಗರೇ ಸಿಟ್ಟಾಗಿದ್ದೇಕೆ?

ಟೀಂ ಇಂಡಿಯಾದಲ್ಲಿ ಪ್ರತಿಭಾವಂತ ಆಟಗಾರರಿಗೇನು ಕಮ್ಮಿ ಇಲ್ಲ. ಒಂದೊಂದು ಸ್ಲಾಟ್​ಗೂ ಮೂರ್ನಾಲ್ಕು ಪ್ಲೇಯರ್ಸ್ ರೇಸ್​ನಲ್ಲಿದ್ದಾರೆ. ಹೀಗಿದ್ರೂ ಎಕ್ಸ್​ಪೀರಿಯನ್ಸ್, ಸೀನಿಯಾರಿಟಿ ಹಾಗೇ ಹಿಂದಿನ ಪರ್ಫಾಮೆನ್ಸ್ ಪರಿಗಣಿಸಿ ಕೆಲವ್ರಿಗೆ ಮತ್ತೆ ಮತ್ತೆ ತಂಡದಲ್ಲಿ ಚಾನ್ಸ್ ಕೊಡ್ತಿದೆ ಬಿಸಿಸಿಐ. ಬಟ್ ಅದನ್ನ ಸದುಪಯೋಗ ಪಡಿಸಿಕೊಳ್ಳುವಲ್ಲಿ ಎಡವುತ್ತಾ ಇರೋದು ನಮ್ಮ ಕನ್ನಡಿಗ ಕೆಎಲ್ ರಾಹುಲ್. ರಾಹುಲ್ ನಮ್ಮ ಕನ್ನಡಿಗ ಅನ್ನೋ ಅಭಿಮಾನ ಇದ್ರೂ ಕೂಡ ತಂಡ ಅಂತಾ ಬಂದಾಗ ಅವ್ರ ಪ್ರದರ್ಶನ ನಿಜಕ್ಕೂ ಬೇಸರ ಮೂಡಿಸ್ತಿದೆ. ವಿದೇಶಿ ಅಂಗಳದಲ್ಲಿ, ಅಥವಾ ದೇಶದ ಮತ್ತಿನ್ಯಾವುದೋ ಮೈದಾನದಲ್ಲಿ ಫೇಲ್ಯೂರ್ ಆಗಿದ್ರೂ ಇಟ್ಸ್ ಓಕೆ. ಆದ್ರೆ ರಾಹುಲ್ ತವರಿನ ಅಂಗಳದಲ್ಲೇ ಬ್ಯಾಟ್ ಬೀಸೋಕೆ ಒದ್ದಾಡಿದ್ದಾರೆ. ಕ್ರೂಷಿಯಲ್ ಟೈಮಲ್ಲೂ ತಂಡಕ್ಕೆ ಸ್ಟ್ರೆಂಥ್ ಆಗೋದನ್ನ ಬಿಟ್ಟು ಬಂದ ಪುಟ್ಟ ಹೋದ ಪುಟ್ಟ ಅನ್ನುವಂತೆ ಪರ್ಫಾರ್ಮ್ ಮಾಡ್ತಿದ್ದಾರೆ. ರಾಹುಲ್​ರ ಇದೇ ನೆಗ್ಲಿಜೆನ್ಸ್ ಈಗ ತಂಡದಿಂದಲೇ ಹೊರಬೀಳೋ ಸಿಚುಯೇಷನ್ ತಂದಿಟ್ಟಿದೆ. ಹ್ಯಾಪಿ ರಿಟೈರ್ನ್​ಮೆಂಟ್ ಕೆಎಲ್ ರಾಹುಲ್ ಅಂತಾ ಸೋಶಿಯಲ್ ಮೀಡಿಯಾದಲ್ಲಿ ನಿವೃತ್ತಿ ಕೊಡಿಸ್ತಿದ್ದಾರೆ. ಅಷ್ಟಕ್ಕೂ ರಾಹುಲ್ ಯಾಕೆ ಬ್ಯಾಟ್ ಬೀಸ್ತಿಲ್ಲ.? ಪ್ರೆಸ್ಟ್ರೇಷನ್​ನಲ್ಲಿ ಇದ್ದಾರಾ? ತುಂಬಾ ರಕ್ಷಣಾತ್ಮಕ ಆಟವೇ ಮುಳುವಾಗ್ತಿದ್ಯಾ? ನೆಕ್ಸ್​ಟ್ ಮ್ಯಾಚ್​ನಿಂದ ಡ್ರಾಪ್ ಮಾಡಿ ಅಂತಾ ಮಾಜಿ ಕ್ರಿಕೆಟಿಗರೇ ಧ್ವನಿ ಎತ್ತಿದ್ದೇಕೆ..? ಹೀಗೆ ರಾಹುಲ್ ಗೆ ಎದುರಾಗಿರೋ ಸಂಕಷ್ಟಗಳ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಒಂದೇ ದಿನದಲ್ಲೇ ಕಣ್ಣೀರಿಟ್ಟ ಹನುಮಂತ – ಮುಗ್ಧನ ಮೇಲೆ ಮೃಗಗಳ ದಾಳಿ

ಟೆಸ್ಟ್ ಕ್ರಿಕೆಟ್​ನಲ್ಲಿ ತವರಿನಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿದ್ದ ಭಾರತಕ್ಕೆ ನ್ಯೂಜಿಲೆಂಡ್ ಬಳಗ ಸೋಲಿನ ಆಘಾತ ನೀಡಿದೆ. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತವನ್ನ 8 ವಿಕೆಟ್​ಗಳಿಂದ ಮಣಿಸಿ ಇತಿಹಾಸ ನಿರ್ಮಿಸಿದೆ. 107 ರನ್ ಗಳ ಸಾಧಾರಣ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡ ಐದನೇ ದಿನ 2 ವಿಕೆಟ್ ನಷ್ಟಕ್ಕೆ ಟಾರ್ಗೆಟ್ ರೀಚ್ ಆಗಿದೆ. ಈ ಮೂಲಕ ಭರ್ತಿ 36 ವರ್ಷಗಳ ನಂತರ ಭಾರತದಲ್ಲಿ ಮೊದಲ ಟೆಸ್ಟ್ ಪಂದ್ಯ ಗೆದ್ದು ಕಿವೀಸ್ ಪಡೆ ದಾಖಲೆ ಬರೆದಿದೆ. ನ್ಯೂಜಿಲೆಂಡ್ ಕಳೆದ ಮೂರು ದಶಕಗಳಿಂದ ಭಾರತದ ನೆಲದಲ್ಲಿ ಟೆಸ್ಟ್​ ಪಂದ್ಯವನ್ನೇ ಗೆದ್ದಿರಲಿಲ್ಲ. 1989ರಲ್ಲಿ ಕೊನೆಯ ಬಾರಿ ಟೆಸ್ಟ್ ಪಂದ್ಯವನ್ನ ಗೆದ್ದಿತ್ತು. ವಿಶೇಷ ಎಂದರೆ ಕಿವೀಸ್ ಕೊನೆಯ ಬಾರಿ ಭಾರತದಲ್ಲಿ ಟೆಸ್ಟ್ ಪಂದ್ಯ ಗೆದ್ದಾಗ ಅಜಾಜ್ ಪಟೇಲ್ ಹೊರತು ಪಡಿಸಿ ಇಡೀ ತಂಡದಲ್ಲಿರುವ ಯಾವೊಬ್ಬ ಆಟಗಾರ ಕೂಡ ಇನ್ನೂ ಹುಟ್ಟಿರಲಿಲ್ಲ. ಇದೀಗ 36 ವರ್ಷಗಳ ಗೆಲುವಿನ ಬರವನ್ನು ನೀಗಿಸಿಕೊಂಡಿದೆ. ಹೀಗೆ ಒಂದು ಗೆಲುವಿನೊಂದಿಗೆ ನ್ಯೂಜಿಲೆಂಡ್ ಚರಿತ್ರೆ ಸೃಷ್ಟಿಸಿದ್ರೆ ಇತ್ತ ನಮ್ಮ ಕನ್ನಡಿಗ ಕೆಎಲ್ ರಾಹುಲ್ ತಂಡದಿಂದಲೇ ಹೊರಬೀಳೋ ಆತಂಕದಲ್ಲಿದ್ದಾರೆ.

ಕ್ರೂಷಿಯಲ್ ಟೈಮಲ್ಲೂ ಜವಾಬ್ದಾರಿ ಮರೆತ ಕೆಎಲ್ ರಾಹುಲ್!

ಕೆಎಲ್ ರಾಹುಲ್ ಒಬ್ಬ ಕೂಲ್ & ಕ್ಲಾಸಿಕ್ ಪ್ಲೇಯರ್. ಟೀಂ ಇಂಡಿಯಾಗೆ ಮಿಡಲ್ ಆರ್ಡರ್​ನಲ್ಲಿ ಸ್ಟ್ರೆಂಥ್ ಆಗಿರುವಂಥ ಪ್ಲೇಯರ್. ಬಟ್ ಇತ್ತೀಚೆಗೆ ರಾಹುಲ್ ಆಟ ನೋಡಿದ್ರೆ ಅವ್ರ ಸ್ಥಾನಕ್ಕೆ ಬೇರೆಯವ್ರನ್ನ ರಿಪ್ಲೇಸ್ ಮಾಡೋದು ಬೆಸ್ಟ್ ಅನ್ನುವಂತಿದೆ. ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧ ಟೆಸ್ಟ್​ ಸೀರೀಸ್​ನಲ್ಲಿ ಎರಡನೇ ಪಂದ್ಯದಲ್ಲಿ ರಾಹುಲ್ ಅದ್ಭುತ ಪ್ರದರ್ಶನ ನೀಡಿದ್ರು. ಹಾಗಾಗಿ ನ್ಯೂಜಿಲೆಂಡ್​ ತಂಡದ ವಿರುದ್ಧದ ಟೆಸ್ಟ್​ ಸರಣಿಗೂ ಬಿಸಿಸಿಐ ಆಯ್ಕೆ ಮಾಡಿತ್ತು. ಆದ್ರೆ ಮೊದಲ ಟೆಸ್ಟ್​ನಲ್ಲೇ ಸಂಕಷ್ಟದಲ್ಲಿದ್ದ ಟೀಮ್​ ಇಂಡಿಯಾಗೆ ರಾಹುಲ್​ ಕೈ ಕೊಟ್ಟಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದ ರಾಹುಲ್ 2ನೇ ಇನ್ನಿಂಗ್ಸ್​ನಲ್ಲಿ ಕೇವಲ 12 ರನ್​ಗೆ ವಿಕೆಟ್​ ಒಪ್ಪಿಸಿದ್ರು. ಌಕ್ಚುಲಿ ಫಸ್ಟ್ ಇನ್ನಿಂಗ್ಸ್​ನಲ್ಲಿ 46 ರನ್​ಗೆ ಆಲೌಟ್ ಆಗಿದ್ದ ಭಾರತ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಸ್ಟಾರ್ಟಿಂಗ್ ಆರ್ಡರ್​ನಲ್ಲಿ ಚೆನ್ನಾಗಿ ಆಡಿದ್ರು. ರೋಹಿತ್ ಮತ್ತು ವಿರಾಟ್ ಕೊಹ್ಲಿ ಹಾಫ್ ಸೆಂಚುರಿ ಬಾರಿಸಿದ್ರು. ನಾಲ್ಕನೇ ಆರ್ಡರ್​ನಲ್ಲಿ ಬಂದ ಸರ್ಫರಾಜ್ ಖಾನ್ 150 ರನ್ ಬಾರಿಸಿ ಆರ್ಭಟಿಸಿದ್ರು. ಹಾಗೇ ರಿಷಭ್ ಪಂತ್ ಕೂಡ 99 ರನ್ ಗಳಿಸಿ ಒಂದೇ ರನ್​ನಿಂದ ನರ್ವಸ್ 90ಗೆ ಒಳಗಾಗಿ ಔಟ್ ಆದ್ರು. ಆದ್ರೆ ಆ ನಂತರ ಕ್ರೀಸ್​ನಲ್ಲಿ ನಿಂತು ರಾಹುಲ್ ಸ್ವಲ್ಪ ಚೆನ್ನಾಗಿ ಆಡಿದ್ರೂ ಭಾರತಕ್ಕೆ ಗೆಲುವಿನ ಅವಕಾಶ ಇತ್ತು. ಹೀಗಿದ್ರೂ ಜವಾಬ್ದಾರಿಯುತವಾಗಿ ಆಡದ ರಾಹುಲ್ ವಿರುದ್ಧ ತೀವ್ರ ಅಸಮಾಧಾನ ಭುಗಿಲೆದ್ದಿದೆ.

2ನೇ ಟೆಸ್ಟ್ ಮ್ಯಾಚ್ ನಿಂದ ಕೆಎಲ್ ರಾಹುಲ್ ಗೆ ಗೇಟ್ ಪಾಸ್?

ಬೆಂಗಳೂರಿನ ಪಂದ್ಯದಲ್ಲಿ ಫೇಲ್ಯೂರ್ ಆಗಿರೋ ಕೆಎಲ್ ರಾಹುಲ್ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬರ್ತಿವೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಎರಡನೇ ಪಂದ್ಯದಿಂದ ಕೈ ಬಿಡುವಂತೆ ಟ್ರೋಲ್ ಮಾಡ್ತಿದ್ದಾರೆ. 2ನೇ ಟೆಸ್ಟ್​​ ಪಂದ್ಯವೂ ಪುಣೆಯಲ್ಲಿರೋ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​​ ಸ್ಟೇಡಿಯಮ್​ನಲ್ಲಿ ನಡೆಯಲಿದೆ. ಅಕ್ಟೋಬರ್​​ 24ನೇ ತಾರೀಕಿನಿಂದ ಶುರುವಾಗೋ ಈ ಟೆಸ್ಟ್​ ಪಂದ್ಯ 28ರ ವರೆಗೆ ನಡೆಯಲಿದೆ. ಈ ಪಂದ್ಯಕ್ಕೆ ಟೀಮ್​ ಇಂಡಿಯಾದ ಪ್ಲೇಯಿಂಗ್​ ಎಲೆವೆನ್​​ನಲ್ಲಿ ಮೇಜರ್​ ಸರ್ಜರಿ ಮಾಡೋಕೆ ಬಿಸಿಸಿಐ ಮುಂದಾಗಿದೆ. ಎರಡನೇ ಟೆಸ್ಟ್ ಪಂದ್ಯದಿಂದ ಕೆಎಲ್ ರಾಹುಲ್​ರನ್ನ ಕೈ ಬಿಡೋ ಸಾಧ್ಯತೆ ಇದೆ. ಮಾಜಿ ಕ್ರಿಕೆಟಿಗರೂ ಕೂಡ ಇದನ್ನೇ ಸಜೆಸ್ಟ್ ಮಾಡ್ತಿದ್ದಾರೆ. ಹಾಗೇ ನ್ಯೂಜಿಲೆಂಡ್​ ವಿರುದ್ಧ ಟೆಸ್ಟ್​ ಸೀರೀಸ್​ ಬೆನ್ನಲ್ಲೇ ಟೀಮ್​ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ವರ್ಷದ ಕೊನೆಗೆ ಆಸ್ಟ್ರೇಲಿಯಾದಲ್ಲಿ ಆಸೀಸ್​ ತಂಡದ ವಿರುದ್ಧ ಟೀಮ್​ ಇಂಡಿಯಾ 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಈ ಸರಣಿಗೆ ರಾಹುಲ್ ಆಯ್ಕೆ ಆಗೋದು ಡೌಟ್​ ಎನ್ನಲಾಗುತ್ತಿದೆ.

ಒಟ್ನಲ್ಲಿ ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿ ಸೋಲು ಕಂಡಿದ್ದ ನ್ಯೂಜಿಲ್ಯಾಂಡ್ ತಂಡ ಬಲಿಷ್ಠ ಭಾರತವನ್ನ ಮೊದಲ ಪಂದ್ಯದಲ್ಲಿ ಮಣಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಬೆಂಗಳೂರಿನ ಮೈದಾನದಲ್ಲಿ ಮೊದಲ ದಿನ ಮಳೆಗೆ ಆಹುತಿಯಾದರೂ, ಉಳಿದ 4 ದಿನಗಳಲ್ಲೇ ಟೆಸ್ಟ್ ಪಂದ್ಯವನ್ನ ಗೆಲ್ಲುವಲ್ಲಿ ಬ್ಲಾಕ್​ ಕ್ಯಾಪ್ಸ್ ಯಶಸ್ವಿಯಾಗಿದೆ. 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್​ ತಂಡ 1-0 ಅಂತರದ ಮುನ್ನಡೆ ಸಾಧಿಸಿದೆ. ಸೋ ಮುಂದಿನ ಪಂದ್ಯ ಗೆಲ್ಲೋಕೆ ಭಾರತ ಕೂಡ ಒಂದಷ್ಟು ಬದಲಾವಣೆಗಳೊಂದಿಗೆ ಮೈದಾನಕ್ಕಿಳಿಯೋಕೆ ಮುಂದಾಗಿದೆ. ಆದ್ರೆ ತಂಡದ ಸೋಲು, ಮತ್ತು ನೀರಸ ಪ್ರದರ್ಶನದಿಂದ ಬೇಸರ ಮೂಡಿಸಿರೋ ಕನ್ನಡಿಗ ಕೆಎಲ್ ರಾಹುಲ್ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಒಂದು ವೇಳೆ ಮುಂದಿನ ಪಂದ್ಯಕ್ಕೆ ಅವಕಾಶ ಸಿಕ್ಕಿ ಅಲ್ಲಿಯೂ ಕೂಡ ಫೇಲ್ಯೂರ್ ಆದ್ರೆ ಅವ್ರನ್ನ ಕಾಪಾಡೋಕೆ ಯಾರಿಂದಲೂ ಕೂಡ ಸಾಧ್ಯ ಇಲ್ಲ.

Shwetha M

Leave a Reply

Your email address will not be published. Required fields are marked *