ಮೂವರು ಕ್ರಿಕೆಟಿಗರಿಗೆ ಜನ್ಮದಿನದ ಸಂಭ್ರಮ – ರವೀಂದ್ರ ಜಡೇಜಾ, ಬುಮ್ರಾ, ಶ್ರೇಯಸ್ ಅಯ್ಯರ್‌ಗೆ ಶುಭಾಶಯ ಕೋರಿದ ಫ್ಯಾನ್ಸ್

ಮೂವರು ಕ್ರಿಕೆಟಿಗರಿಗೆ ಜನ್ಮದಿನದ ಸಂಭ್ರಮ – ರವೀಂದ್ರ ಜಡೇಜಾ, ಬುಮ್ರಾ, ಶ್ರೇಯಸ್ ಅಯ್ಯರ್‌ಗೆ ಶುಭಾಶಯ ಕೋರಿದ ಫ್ಯಾನ್ಸ್

ಟೀಮ್ ಇಂಡಿಯಾ ಆಟಗಾರರು ಮುಂದಿನ ಸರಣಿಗಾಗಿ ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸಿದ್ದಾರೆ. ಮುಂದಿನ ಪಂದ್ಯಗಳಿಗಾಗಿ ಎದುರು ನೋಡುತ್ತಿರುವ ಆಟಗಾರರಲ್ಲಿ ಡಿಸೆಂಬರ್ 6ರಂದು ಮೂವರು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರವೀಂದ್ರ ಜಡೇಜಾ, ಜಸ್ಪ್ರೀತ್ ಬಮ್ಮರ್ ಮತ್ತು ಶ್ರೇಯಸ್ ಅಯ್ಯರ್ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇವರಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

ಇದನ್ನೂ ಓದಿ:ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರಲ್ಲಿ ಬೆಸ್ಟ್ ಕ್ಯಾಪ್ಟನ್ ಯಾರು?

ಭಾರತ ತಂಡದ ಸ್ಟಾರ್ ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜಾಗೆ ಡಿಸೆಂಬರ್ 6ರಂದು ಜನ್ಮದಿನದ ಸಂಭ್ರಮ. ರವೀಂದ್ರ ಜಡೇಜಾ ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲೂ ಟೀಮ್ ಇಂಡಿಯಾದ ಬಲ ಹೆಚ್ಚಿಸುವ ಆಟಗಾರ ರವೀಂದ್ರ ಜಡೇಜಾಗೆ ಅಭಿಮಾನಿಗಳು ಕೂಡಾ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.

ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡಾ ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ. ಬುಮ್ರಾ ತಮ್ಮ 30 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಬುಮ್ರಾ ಈಗ ದಕ್ಷಿಣ ಆಫ್ರಿಕಾ ವಿರುದ್ಧವೂ ಆಡಲಿದ್ದಾರೆ. ಗಾಯದಿಂದ ಚೇತರಿಸಿಕೊಂಡ ನಂತರ ತಂಡಕ್ಕೆ ಭರ್ಜರಿ ಪುನರಾಗಮನ ಮಾಡಿರುವ ಬುಮ್ರಾಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಟೀಂ ಇಂಡಿಯಾದ ಸ್ಟೈಲಿಶ್ ಬ್ಯಾಟರ್ ಶ್ರೇಯಸ್ ಅಯ್ಯರ್ ಬರ್ತ್‌ಡೇ ಸಂಭ್ರಮದಲ್ಲಿದ್ದಾರೆ. ಶ್ರೇಯಸ್ ಅಯ್ಯರ್, ತಮ್ಮ 29ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಯ್ಯರ್ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ನಲ್ಲೂ ಸೈ ಅನಿಸಿಕೊಂಡ ಆಟಗಾರ. ಶ್ರೇಯಸ್ ಅಯ್ಯರ್ ಕೂಡ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಂಡದೊಂದಿಗೆ ತೆರಳಿದ್ದಾರೆ.

Sulekha