ಕ್ರಿಕೆಟ್ ದೇವರು ಸಚಿನ್ ಗಿಂದು 50ನೇ ಜನ್ಮದಿನ – ಮಾಸ್ಟರ್ ಬ್ಲಾಸ್ಟರ್ ಬರೆದ ದಾಖಲೆಗಳೆಷ್ಟು ಗೊತ್ತಾ?

ಕ್ರಿಕೆಟ್ ದೇವರು ಸಚಿನ್ ಗಿಂದು 50ನೇ ಜನ್ಮದಿನ – ಮಾಸ್ಟರ್ ಬ್ಲಾಸ್ಟರ್ ಬರೆದ ದಾಖಲೆಗಳೆಷ್ಟು ಗೊತ್ತಾ?

ಮಾಸ್ಟರ್ ಬ್ಲಾಸ್ಟರ್.. ಕ್ರಿಕೆಟ್ ದೇವರು.. ಲಿಟಲ್ ಮಾಸ್ಟರ್.. ಕ್ರಿಕೆಟ್ ದಂತಕಥೆ.. ಸೆಂಚುರಿಗಳ ಸೆಂಚುರಿ ಸ್ಟಾರ್, ಕ್ರಿಕೆಟ್ ಪ್ರೇಮಿಗಳ ಆರಾಧ್ಯದೈವ.. ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಸಚಿನ್ ತೆಂಡೂಲ್ಕರ್. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಅನೇಕರಿಗೆ ಕ್ರಿಕೆಟ್ ಬಗ್ಗೆ  ಸ್ಫೂರ್ತಿ ನೀಡುತ್ತಿದೆ. ವಿಶ್ವಮಟ್ಟದಲ್ಲಿ ಅಭಿಮಾನಿಗಳನ್ನ ಹೊಂದಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ರವರ 50ನೇ ಹುಟ್ಟುಹಬ್ಬ ಇವತ್ತು. ಇವರ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರಲಾರಂಭಿಸಿದೆ. ಕ್ರಿಕೆಟರ್ಸ್, ಸ್ಟಾರ್ಸ್, ರಾಜಕೀಯ ನಾಯಕರು, ಅಭಿಮಾನಿಗಳು ಸೇರಿದಂತೆ ಕೋಟ್ಯಂತರ ಜನ ವಿಶ್ ಮಾಡ್ತಿದ್ದಾರೆ.

ಏಪ್ರಿಲ್ 24, 1973 ರಂದು ಜನಿಸಿದ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಲೋಕದಲ್ಲಿ ದೇವರಾಗಿ ಮೆರೆದಾಡಿದ್ದಾರೆ.  1989ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. 16 ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ ಸಚಿನ್ ಬಳಿಕ 24 ವರ್ಷಗಳ ಕಾಲ ಕ್ರಿಕೆಟ್ ನ ಕಿರೀಟವಿಲ್ಲದ ಮಹಾರಾಜರಾಗಿ ಮೆರೆದಾಡಿದ್ರು.

ಮಹಾರಾಷ್ಟ್ರದ ಮುಂಬಯಿನಲ್ಲಿ 1973ರಂದು ಜನಿಸಿದ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ಶತಕದ ಶತಕಗಳ ಸರದಾರ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಗಳನ್ನು ಬಾರಿಸಿ ದಾಖಲೆ ಮಾಡಿದ ಕ್ರಿಕೆಟ್‌ ದಂತಕತೆ. 24 ವರ್ಷಗಳ ಕಾಲ ಕ್ರಿಕೆಟ್ ಆಡಿ ಬ್ಯಾಟಿಂಗ್​​ನಲ್ಲಿ ನೂರಾರು ದಾಖಲೆ ಬರೆದ ಸಚಿನ್, ಭಾರತ ರತ್ನ ಪುರಸ್ಕೃತರೂ ಹೌದು. ಇಂದಿಗೂ ಸಚಿನ್ ಅವರು ಯುವ ಆಟಗಾರರಿಗೆ ಮಾದರಿಯಾಗಿದ್ದಾರೆ. ಖೇಲ್‌ರತ್ನ, ಅರ್ಜುನ, ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿಗಳನ್ನೆಲ್ಲ ಪಡೆದ ಏಕೈಕ ಕ್ರಿಕೆಟಿಗ ಎಂದರೆ ಅದು ಸಚಿನ್.

ತೆಂಡುಲ್ಕರ್ 1989ರಲ್ಲಿ ಪಾಕಿಸ್ತಾನ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 16 ವರ್ಷದ ಹಾಲುಗಲ್ಲದ ಹುಡುಗ ಮುಂದೊಂದು ದಿನ 22 ಗಜಗಳ ಕ್ರಿಕೆಟ್ ಪಿಚ್ ಆಳುತ್ತಾನೆ ಎಂದು ಬಹುಶಃ ಯಾರೂ ಊಹಿಸಿರಲಿಕ್ಕೆ ಸಾಧ್ಯವಿಲ್ಲ. 2013ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದಾಗ ಬರೋಬ್ಬರಿ 34,357 ರನ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದರು. ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಅಜೇಯ 200 ರನ್​ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ 2010ರಲ್ಲೇ ಸಚಿನ್ ಅವರು ಪಾತ್ರರಾಗಿದ್ದಾರೆ. ದ. ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 147 ಎಸೆತಗಳಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದರು. ಏಕದಿನ ಕ್ರಿಕೆಟ್​​ನಲ್ಲಿ ಒಟ್ಟು 463 ಪಂದ್ಯಗಳನ್ನು ಆಡಿರುವ ಇವರು 18, 426 ರನ್ ಕಲೆಹಾಕಿದ್ದಾರೆ. 49 ಶತಕ ಹಾಗೂ 96 ಅರ್ಧಶತಕ ಸಿಡಿಸಿದ್ದಾರೆ. ಬೌಲಿಂಗ್​​ನಲ್ಲೂ 154 ವಿಕೆಟ್ ಪಡೆದುಕೊಂಡಿದ್ದಾರೆ. ಟೆಸ್ಟ್​​ನಲ್ಲಿ 200 ಪಂದ್ಯಗಳನ್ನಾಡಿದ್ದು, 15,921 ರನ್ ಗಳಿಸಿದ್ದಾರೆ. ಇದರಲ್ಲಿ 51 ಶತಕ ಹಾಗೂ 68 ಅರ್ಧಶತಕ ಬಾರಿಸಿದ್ದಾರೆ.

ಸಚಿನ್ ತೆಂಡುಲ್ಕರ್ ಭಾರತ ಪರ 6 ಬಾರಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ 2011ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಸಚಿನ್ ತೆಂಡುಲ್ಕರ್ ಕೂಡಾ ಮಹತ್ವದ ಪಾತ್ರ ವಹಿಸಿದ್ದರು. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಮೊದಲ ಬ್ಯಾಟರ್ ಎನ್ನುವ ಶ್ರೇಯ ಕೂಡಾ ತೆಂಡೂಲ್ಕರ್ ಹೆಸರಿನಲ್ಲಿದೆ.

24 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ಸಚಿನ್ ತೆಂಡುಲ್ಕರ್  ಒಟ್ಟಾರೆ 664 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 34,357 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 201 ವಿಕೆಟ್ ಪಡೆದಿದ್ದಾರೆ. ಇದಷ್ಟೇ ಅಲ್ಲದೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಪರ 2,334 ರನ್ ಬಾರಿಸಿದ್ದಾರೆ. ಸಚಿನ್ ತೆಂಡುಲ್ಕರ್ 2013ರಲ್ಲಿ ತಮ್ಮ ತವರು ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಕೊನೆಯ ಟೆಸ್ಟ್ ಪಂದ್ಯವನ್ನಾಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದರು. ಅದೇ ವರ್ಷವೇ ಐಪಿಎಲ್​ಗೂ ಸಚಿನ್​ ನಿವೃತ್ತಿ ಹೇಳಿದ್ದರು.

ಸ್ವತಃ ಸಚಿನ್ ಅವರೇ ಬರೆದಿರುವ ‘Playing It My Way: My Autobiography’ ಪುಸ್ತಕದಲ್ಲಿ ವಿಸ್ತಾರವಾಗಿ ಕ್ರಿಕೆಟ್ ದೇವರ ಬಗ್ಗೆ ನೀವು ತಿಳಿದುಕೊಳ್ಳಬಹುದು. ಹಾಗೆಯೆ ವೈಭವ್ ಪುರಂದರ್ ಬರೆದಿರುವ ‘Sachin Tendulkar: A Definitive Biography’ ಕೂಡ ಚೆನ್ನಾಗಿದೆ. ESPNcricinfo ಪ್ರಕಟಿಸಿರುವ ‘Sachin Tendulkar: The Man Cricket Loved Back’ ನಲ್ಲಿ ಅನೇಕ ಮಾಹಿತಿಗಳಿವೆ. ಖಲೀಲ್ ಎಹೆಚ್ ಅನ್ಸಾರಿ ಅವರ ‘Sachin, Born to Bat: The Journey of Cricket’s Ultimate Centurion’ ಕೂಡ ಉತ್ತಮವಾಗಿದೆ. ಎಲ್ಲರಿಗೂ ತಿಳಿದಿರುವಂತೆ ಜೇಮ್ಸ್ ಎರ್ಸಿಕ್ಕಿನ್ ನಿರ್ದೇಶನದ ‘Sachin: A Billion Dreams’ ಎಂಬ ಡಾಕ್ಯುಮೆಂಟರಿಯಲ್ಲೂ ಸಚಿನ್ ಕುರಿತ ಅನೇಕ ವಿಶೇಷತೆಗಳಿವೆ.

suddiyaana