ಚೇಸ್ ಮಾಸ್ಟರ್.. ಕ್ರಿಕೆಟ್ G.O.A.T – ಮರೆಯಲಾಗದ ಕಿಂಗ್ ಕೊಹ್ಲಿ ರೆಕಾರ್ಡ್ಸ್
ವಿಶ್ವಶ್ರೇಷ್ಠ ವಿರಾಟ್ ಗೆ ಹ್ಯಾಪಿ ಬರ್ತಡೇ

ಕ್ರಿಕೆಟ್ ಈಗ ಬರೀ ಕ್ರೀಡೆಯಾಗಿ ಉಳಿದಿಲ್ಲ.. ಸಾವಿರಾರು ಪ್ರತಿಭಾವಂತರಿಗೆ ಭವಿಷ್ಯದ ಬೆಳಕಾಗಿದೆ. ಲಕ್ಷಾಂತರ ಯುವಮನಸುಗಳಿಗೆ ಕನಸಿನ ಕೂಸಾಗಿದೆ. ಕೋಟ್ಯಂತರ ಜನರ ಭಾವನೆಗಳಲ್ಲಿ ಬೆರೆತು ಹೋಗಿದೆ. ಒಂದು ಕಾಲದಲ್ಲಿ ಕ್ರಿಕೆಟ್ ಅಂದ್ರೆ ಮೂಗು ಮುರೀತಿದ್ದ ಅದೆಷ್ಟೋ ಮಂದಿ ಈಗ ನಿದ್ದೆಗೆಟ್ಟು ಪಂದ್ಯಗಳನ್ನ ನೋಡ್ತಾರೆ. ಸಪೋರ್ಟ್ ಮಾಡ್ತಾರೆ. ಅದಕ್ಕೆಲ್ಲಾ ಕಾರಣ ಕಿಂಗ್ ವಿರಾಟ್ ಕೊಹ್ಲಿ ಅಂದ್ರೆ ಅತಿಶಯೋಕ್ತಿಯಲ್ಲ. ಎಷ್ಟೋ ಆಟಗಾರರು ಕ್ರಿಕೆಟ್ನಿಂದಾಗಿ ಬೆಳೆದ್ರೆ ಅದೇ ಕ್ರಿಕೆಟ್ ಬಗ್ಗೆ ಜಗತ್ತೇ ಮಾತಾಡುವಂತೆ ಮಾಡಿದ್ದು ವಿರಾಟ್ ಕೊಹ್ಲಿ. ಚೇಸ್ ಮಾಸ್ಟರ್, ರನ್ ಮಷಿನ್, ಕಿಂಗ್, ಕ್ಲಚ್ ಗಾಡ್, ದಿ ಗೋಟ್ ಅಂತಾನೇ ಕರೆಸಿಕೊಳ್ಳೋ ವಿರಾಟ್ ಕೊಹ್ಲಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.
ಇದನ್ನೂ ಓದಿ : ಕಿಂಗ್ ಕೊಹ್ಲಿಗೆ ಬರ್ತ್‌ಡೇ ಸಂಭ್ರಮ – 37ನೇ ವಸಂತಕ್ಕೆ ಕಾಲಿಟ್ಟ ವಿರಾಟ್‌ಗೆ ಶುಭಾಶಯಗಳ ಮಹಾಪೂರ
ಟೀಂ ಇಂಡಿಯಾ ಸಾಕಷ್ಟು ಲೆಜೆಂಡರಿ ಪ್ಲೇಯರ್ಗಳನ್ನ ಕಂಡಿದೆ. ಅದ್ರಲ್ಲೂ ಸಚಿನ್ ತೆಂಡೂಲ್ಕರ್ರನ್ನ ದೇವರೆಂದೇ ಪೂಜಿಸಿದ್ದಾರೆ. ಆದ್ರೆ ಸಚಿನ್ ಬಳಿಕ ಭಾರತದಲ್ಲಿ ಬಹಳ ಪ್ರೀತಿಯಿಂದ ಒಪ್ಪಿಕೊಂಡ, ಅಪ್ಪಿಕೊಂಡ, ಆರಾಧಿಸುವ ಮತ್ತೊಬ್ಬ ಆಟಗಾರ ವಿರಾಟ್ ಕೊಹ್ಲಿ. ವಿರಾಟ್ ಆಡ್ತಾರೇ ಅಂದ್ರೇನೇ ಆ ಪಂದ್ಯದ ವೇಯ್ಟೇಜ್ ಜಾಸ್ತಿಯಾಗಿ ಬಿಡುತ್ತೆ. ಯಾಕಂದ್ರೆ ಅದು ವಿರಾಟ್ ಪರ್ಸನಾಲಿಟಿಗೆ ಇರುವಂಥ ತಾಕತ್ತು. ಅದೇ ವಿರಾಟ್ ಇವತ್ತು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಒಂದೂವರೆ ದಶಕದಿಂದ ಟೀಂ ಇಂಡಿಯಾದ ಬೆನ್ನೆಲುಬಾಗಿರೋ ಕೊಹ್ಲಿ ಹೆಜ್ಜೆಹೆಜ್ಜೆಗೂ ಚರಿತ್ರೆಯನ್ನೇ ಸೃಷ್ಟಿಸುತ್ತಾ ಬಂದವರು.
ವಿರಾಟ್ ವೈಭವದ ರೆಕಾರ್ಡ್ಸ್!
- 51 ಶತಕಗಳೊಂದಿಗೆ ಏಕದಿನ ಸಾರ್ವಕಾಲಿಕ ಪಟ್ಟಿಯಲ್ಲಿ ನಂ.1
- ಏಕದಿನದಲ್ಲಿ 10,000 ಕ್ಕೂ ಹೆಚ್ಚು ರನ್ಸ್, ಅತ್ಯುತ್ತಮ ಸರಾಸರಿ
- ಟೆಸ್ಟ್ ಕ್ರಿಕೆಟ್ ನಲ್ಲಿ ಏಳು ದ್ವಿಶತಕಗಳನ್ನು ಗಳಿಸಿದ ಏಕೈಕ ಭಾರತೀಯ
- ಒಂದೇ ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ರನ್, 2016 ರಲ್ಲಿ 973
- ಭಾರತೀಯನೊಬ್ಬ ಗಳಿಸಿದ ಅತ್ಯಧಿಕ 937 ಐಸಿಸಿ ಟೆಸ್ಟ್ ರೇಟಿಂಗ್
- ವಿದೇಶಿ ಟೆಸ್ಟ್ ಸರಣಿಯಲ್ಲಿ ಅತೀ ಹೆಚ್ಚು ಶತಕ, 2014ರಲ್ಲಿ 4 ಶತಕ
- ನಾಯಕನಾಗಿ ಸತತ ಅತಿ ಹೆಚ್ಚು ಟೆಸ್ಟ್ ಸರಣಿ ಗೆಲುವುಗಳು 9
- 10,000 ಏಕದಿನ ರನ್ ವೇಗವಾಗಿ ಕಂಪ್ಲೀಟ್, 205 ಇನ್ನಿಂಗ್ಸ್
- 27,000 ಅಂತರರಾಷ್ಟ್ರೀಯ ರನ್ ವೇಗ, 594 ಇನ್ನಿಂಗ್ಸ್ ದಾಖಲೆ
- ವಿದೇಶಗಳಲ್ಲಿ ಅತ್ಯಂತ ಯಶಸ್ವಿ ಭಾರತೀಯ ಟೆಸ್ಟ್ ನಾಯಕ
ಇನ್ನು ವಿರಾಟ್ ಕೊಹ್ಲಿ ಒಟ್ಟಾರೆಯಾಗಿ 553 ಅಂತಾರಾಷ್ಟ್ರೀಯ ಪಂದ್ಯಗಳನ್ನ ಆಡಿದ್ದಾರೆ. 620 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದು 90 ಬಾರಿ ನಾಟೌಟ್ ಆಗಿ ಉಳಿದಿದ್ದಾರೆ. ಹಾಗೇ 52.21 ಸರಾಸರಿಯಲ್ಲಿ 27,673 ರನ್‌ಗಳನ್ನು ಗಳಿಸಿದ್ದು 254 ರನ್ ಗಳಿಸಿ ಆನೌಟ್ ಆಗಿ ಉಳಿದಿರೋದೇ ಹೈಯೆಸ್ಟ್ ಇಂಡಿವಿಶ್ಯೂಯಲ್ ಸ್ಕೋರ್ ಆಗಿದೆ. ಇನ್ನು ಟೋಟಲ್ಲಾಗಿ 34,949 ಬಾಲ್ಗಳನ್ನ ಫೇಸ್ ಮಾಡಿದ್ದು 2,728 ಬೌಂಡರಿಗಳು ಮತ್ತು 306 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದ್ರಲ್ಲಿ 82 ಶತಕಗಳು, 144 ಅರ್ಧಶತಕಗಳು, 16 ಬಾರಿ 150+ ರನ್ಸ್, 7 ಡಬಲ್ ಸೆಂಚುರಿಗಳು ಅವ್ರ ಹೆಸರಲ್ಲಿವೆ. ಹಾಗೇ 69 ಪಂದ್ಯಶ್ರೇಷ್ಠ ಮತ್ತು 21 ಸರಣಿಶ್ರೇಷ್ಠ ಪ್ರಶಸ್ತಿಗಳು ಅವರ ಟಾಲೆಂಟ್ ಎಂಥಾದ್ದು ಅನ್ನೋದಕ್ಕೆ ಕೈಗನ್ನಡಿಯಾಗಿದೆ. ಇನ್ನು ಐಸಿಸಿ ಟೂರ್ನಿಗಳಲ್ಲೂ ಕೊಹ್ಲಿಯೇ ಕಿಂಗ್. 15 ಬಾರಿ ಐಸಿಸಿ ಪಂದ್ಯ ಪುರುಷೋತ್ತಮ ಮತ್ತು 3 ಐಸಿಸಿ ಟೂರ್ನಮೆಂಟ್ ಆಫ್ ದಿ ಪ್ಲೇಯರ್ ಪ್ರಶಸ್ತಿಗಳು ಸಿಕ್ಕಿದೆ. ಹಾಗೇ ನಾಯಕನಾಗಿ ಕಪ್ ಗೆಲ್ಲೋಕೆ ಆಗದೇ ಇದ್ರೂ ಆಟಗಾರನಾಗಿ ಸಾಲು ಸಾಲು ಟ್ರೋಫಿಗಳನ್ನ ಎತ್ತಿ ಹಿಡಿದಿದ್ದಾರೆ.
ಕೊಹ್ಲಿ ಗೆದ್ದ ಟ್ರೋಫಿಗಳು!
2008 ರ ಅಂಡರ್ -19 ವಿಶ್ವಕಪ್
2010, 2016, 2023 ಏಷ್ಯಾ ಕಪ್
2011 ಏಕದಿನ ವಿಶ್ವಕಪ್
2013, 2025 ಚಾಂಪಿಯನ್ಸ್ ಟ್ರೋಫಿ
2024 ಟಿ-20 ವಿಶ್ವಕಪ್
ಕ್ರಿಕೆಟ್ ನಲ್ಲಿ ಸ್ಥಿರತೆ, ದೃಢತೆ ಮತ್ತು ಬದ್ಧತೆಗಳಿಗೆ ಹೆಸರಾದ ಕೊಹ್ಲಿ ಅವ್ರೇ ಒಂದು ಬ್ರ್ಯಾಂಡ್ ಆಗಿ ಬೆಳೆದಿದ್ದಾರೆ. ಮೂರೂ ಫಾರ್ಮೆಟ್ನಲ್ಲೂ ವರ್ಷಗಳ ಕಾಲ ನಂಬರ್ ಒನ್ ಪ್ಲೇಯರ್ ಆಗಿಯೂ ದಾಖಲೆಗಳನ್ನ ಸೃಷ್ಟಿಸಿದ್ದಾರೆ. ಐಸಿಸಿ ಮಟ್ಟದಲ್ಲಿ ಅವ್ರ ಜರ್ನಿ ಹೇಗಿತ್ತು ಅನ್ನೋದನ್ನೂ ನೋಡ್ತಾ ಹೋಗೋಣ.
ವಿರಾಟ್ ಆಲ್ವೇಸ್ ಬೆಸ್ಟ್!
ನಂ. 1 ಏಕದಿನ ಬ್ಯಾಟ್ಸ್ ಮನ್ – 1493 ದಿನಗಳು
ಟಿ20ಐನಲ್ಲಿ ನಂ.1 ಬ್ಯಾಟ್ಸ್ ಮನ್ – 1012 ದಿನಗಳು
ಟೆಸ್ಟ್ ನಲ್ಲಿ ನಂ.1 ಬ್ಯಾಟ್ಸ್ ಮನ್ – 469 ದಿನಗಳು
937 ಟೆಸ್ಟ್ ರೇಟಿಂಗ್ ಅಂಕಗಳು
909 ಏಕದಿನ ರೇಟಿಂಗ್ ಪಾಯಿಂಟ್ಸ್
909 ಟಿ20ಐ ರೇಟಿಂಗ್ ಪಾಯಿಂಟ್ಸ್
ಐಸಿಸಿ ದಶಕದ ಕ್ರಿಕೆಟಿಗ (2011-2020)
ಐಸಿಸಿ ದಶಕದ ಏಕದಿನ ಕ್ರಿಕೆಟಿಗ (2011-2020)
ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ (2019)
ಐಸಿಸಿ ವರ್ಷದ ಕ್ರಿಕೆಟಿಗ (2017, 2018)
ಐಸಿಸಿ ವರ್ಷದ ಏಕದಿನ ಆಟಗಾರ (2012, 2017, 2018, 2023)
ಐಸಿಸಿ ವರ್ಷದ ಟೆಸ್ಟ್ ಆಟಗಾರ (2018)
ದಶಕದ ಐಸಿಸಿ ಟೆಸ್ಟ್ ತಂಡದ ನಾಯಕ (2011-2020)
ಐಸಿಸಿ ಟೆಸ್ಟ್ ತಂಡದ ನಾಯಕ (2017, 2018, 2019)
ಐಸಿಸಿ ಏಕದಿನ ತಂಡದ ನಾಯಕ (2016-2019)
ಐಸಿಸಿ ತಿಂಗಳ ಕ್ರಿಕೆಟಿಗ (ಅಕ್ಟೋಬರ್ 2022)
ವಿಸ್ಡನ್ ಲೀಡಿಂಗ್ ಕ್ರಿಕೆಟರ್ ಇನ್ ದಿ ವರ್ಲ್ಡ್ (2016, 2017, 2018)
ಹೀಗೆ ವಿರಾಟ್ ತಮ್ಮ ಜರ್ನಿಯುದ್ದಕ್ಕೂ ಇತಿಹಾಸ ಸೃಷ್ಟಿಸುತ್ತಲೇ ಬಂದವರು. ಅವ್ರ ಸಾಮರ್ಥ್ಯಕ್ಕೆ ಅರ್ಜುನ ಪ್ರಶಸ್ತಿ, ಪದ್ಮಶ್ರೀ, ಖೇಲ್ ರತ್ನ ಪ್ರಶಸ್ತಿಗಳೂ ಲಭಿಸಿದವೆ. 37 ವರ್ಷದ ವಿರಾಟ್ ಈಗಲೂ ಕೂಡ ಅಷ್ಟೇ ಫಿಟ್ ಌಂಡ್ ಫೈನ್ ಆಗಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಎರಡು ಪಂದ್ಯಗಳಲ್ಲಿ ಡಕ್ ಔಟ್ ಆಗಿದ್ದ ವಿರಾಟ್ ಮೂರನೇ ಪಂದ್ಯದಲ್ಲಿ ಥೂಫಾನ್ನಂತೆ ಕಮ್ ಬ್ಯಾಕ್ ಮಾಡಿದ್ರು. ರೋಹಿತ್ ಶರ್ಮಾ ಅವರೊಂದಿಗೆ ಅಜೇಯ 74* ಮತ್ತು 150 ರನ್‌ಗಳ ಪಾಲುದಾರಿಕೆಯೊಂದಿಗೆ ಪಂದ್ಯ ಗೆಲ್ಲಿಸಿದ್ರು. ಹಾಗಂತ ವಿರಾಟ್ ತಮ್ಮ ಬ್ಯಾಟಿಂಗ್ನಿಂದ ಮಾತ್ರವೇ ಇಷ್ಟೊಂದು ಫೇಮಸ್ ಆದ್ರಾ ಅಂದ್ರೆ ಖಂಡಿತಾ ಇಲ್ಲ. ಕನ್ಸಿಸ್ಟೆನ್ಸಿ ಬ್ಯಾಟಿಂಗ್, ಡಿಟರ್ಮಿನೇಷನ್, ಹಾಗೇ ಬ್ರ್ಯಾಂಡ್ ಬಿಲ್ಟ್ ಜೊತೆ ಅದೇ ಇಂಟೆನ್ಸಿಟಿಯನ್ನ ಕಾಪಾಡಿಕೊಂಡು ಬಂದಿದ್ದಾರೆ. ಕವರ್ಡ್ರೈವ್ಗಳ ಟ್ರೇಡ್ಮಾರ್ಕ್ ಮತ್ತು ಡಿಸಿಪ್ಲೀನ್ ಕೂಡ ಹಾಗೇ ಕಂಟಿನ್ಯೂ ಆಗಿದೆ. ಈ ಎಲ್ಲಾ ಕಾರಣಗಳಿಂದ ವಿರಾಟ್ ಈಗ ಜಸ್ಟ್ ಪ್ಲೇಯರ್ ಅಷ್ಟೇ ಅಲ್ಲ ಕೋಟ್ಯಂತರ ಜನರ ಪಾಲಿಗೆ ರೋಲ್ ಮಾಡೆಲ್ ಆಗಿದ್ದಾರೆ.

ನೋಡಿರಿ

